Kohli Records: ಒಂದು ಶತಕ ಸಿಡಿಸಿ, ದಾಖಲೆಗಳ ಜಾತ್ರೆ ನಡೆಸಿದ ವಿರಾಟ್​ ಕೊಹ್ಲಿ; ಕ್ರಿಸ್​ಗೇಲ್​ ಸೆಂಚುರಿ ರೆಕಾರ್ಡ್​ ಸರಿಗಟ್ಟಿದ ಕಿಂಗ್​
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kohli Records: ಒಂದು ಶತಕ ಸಿಡಿಸಿ, ದಾಖಲೆಗಳ ಜಾತ್ರೆ ನಡೆಸಿದ ವಿರಾಟ್​ ಕೊಹ್ಲಿ; ಕ್ರಿಸ್​ಗೇಲ್​ ಸೆಂಚುರಿ ರೆಕಾರ್ಡ್​ ಸರಿಗಟ್ಟಿದ ಕಿಂಗ್​

Kohli Records: ಒಂದು ಶತಕ ಸಿಡಿಸಿ, ದಾಖಲೆಗಳ ಜಾತ್ರೆ ನಡೆಸಿದ ವಿರಾಟ್​ ಕೊಹ್ಲಿ; ಕ್ರಿಸ್​ಗೇಲ್​ ಸೆಂಚುರಿ ರೆಕಾರ್ಡ್​ ಸರಿಗಟ್ಟಿದ ಕಿಂಗ್​

  • ಸನ್​ರೈಸರ್ಸ್​ ಹೈದರಾಬಾದ್​ ಎದುರು ವಿರಾಟ್​ ಕೊಹ್ಲಿ ಶತಕ ಸಿಡಿಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಗೆಲುವಿಗೆ ಕಾರಣರಾದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನೂ ಬರೆದಿದ್ದಾರೆ. ಅವುಗಳನ್ನು ಈ ಮುಂದೆ ನೋಡೋಣ.

ಸನ್​ರೈಸರ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಪ್ಲೇ ಆಫ್​ ಕನಸನ್ನೂ ಮತ್ತಷ್ಟು ಜೀವಂತ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಸಿಡಿಸಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.
icon

(1 / 9)

ಮೊದಲು ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​​, 20 ಓವರ್​​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಗಳಿಸಿತ್ತು. ಹೆನ್ರಿಚ್​ ಕ್ಲಾಸೆನ್​ ಶತಕ ಸಿಡಿಸಿ ಮಿಂಚಿದ್ದರು. ಆರ್​ಸಿಬಿ, 19.2 ಓವರ್​​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್​ ಗಳಿಸಿ ಗೆದ್ದು ಬೀಗಿತು. ಕೊಹ್ಲಿ 100 ರನ್​, ಡು ಪ್ಲೆಸಿಸ್​ 71 ರನ್​ ಬಾರಿಸಿದರು. 
icon

(2 / 9)

ಕಿಂಗ್​ ಕೊಹ್ಲಿ ನಾಲ್ಕು ವರ್ಷಗಳ ನಂತರ ಐಪಿಎಲ್​ ಶತಕ ಸಿಡಿಸಿದ್ದಾರೆ. 1490 ದಿನಗಳ ನಂತರ ಐಪಿಎಲ್​​ನಲ್ಲಿ 100ರ ಗಡಿ ದಾಟಿದ್ದಾರೆ. 2019ರ ಐಪಿಎಲ್​ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಕೊಹ್ಲಿ ಸೆಂಚುರಿ ಬಾರಿಸಿದ್ದರು.
icon

(3 / 9)

ಕೊಹ್ಲಿ ಸೆಂಚುರಿ ಬಾರಿಸುವ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಸ್​ ಗೇಲ್​​ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಪಾಲಿಗೆ ಇದು 6ನೇ ಶತಕ. ಕ್ರಿಸ್​​ ಗೇಲ್​ ಕೂಡ 6 ಶತಕ ಬಾರಿಸಿ ಗರಿಷ್ಠ ಶತಕ ಸಿಡಿಸಿದವರ ಪೈಕಿ ಅಗ್ರಸ್ಥಾನದಲ್ಲಿದ್ದರು. ಈಗವರ ದಾಖಲೆಯನ್ನು ಕೊಹ್ಲಿ ಸಮಗೊಳಿಸಿದ್ದಾರೆ.
icon

(4 / 9)

ವಿರಾಟ್ ಪ್ರಸಕ್ತ ಆವೃತ್ತಿಯಲ್ಲಿ 500 ರನ್​​ಗಳ ಗಡಿ ದಾಟಿದ್ದು, ಆ ಮೂಲಕ ಐಪಿಎಲ್​​​ನಲ್ಲಿ 6ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಜೊತೆಗೆ ಡೇವಿಡ್​ ವಾರ್ನರ್​ ದಾಖಲೆ ಸರಿಗಟ್ಟಿದ್ದು, ಆಸಿಸ್​ ಕ್ರಿಕೆಟಿಗ​ ಕೂಡ 6 ಬಾರಿ ಐಪಿಎಲ್​​​ನಲ್ಲಿ 500ಕ್ಕೂ ಹೆಚ್ಚು ರನ್​ ಸಿಡಿಸಿದ್ದಾರೆ.
icon

(5 / 9)

ಫಾಫ್​ ಡು ಪ್ಲೆಸಿಸ್​ ಮತ್ತು ವಿರಾಟ್​​ ಕೊಹ್ಲಿ ಅವರ ಜೊತೆಯಾಟವೂ ನೂತನ ದಾಖಲೆ ಬರೆದಿದೆ. ಮೊದಲ ವಿಕೆಟ್​ಗೆ 172 ರನ್​ ಗಳಿಸಿದ ಈ ಜೋಡಿ, ಆರ್​ಸಿಬಿ ಪರ 2ನೇ ಅತಿ ದೊಡ್ಡ ಜೊತೆಯಾಟವಾಡಿದೆ. ಚೇಸಿಂಗ್​​​ನಲ್ಲಿ ದಾಖಲಾದ 4ನೇ ಗರಿಷ್ಠ ಜೊತೆಯಾಟ ಎನಿಸಿದೆ.
icon

(6 / 9)

ಇನ್ನು ಕೊಹ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿದ ಕೊಹ್ಲಿ, ಐಪಿಎಲ್​​ನಲ್ಲಿ 7500 ರನ್​ ಬಾರಿಸಿ ದಾಖಲೆ ಬರೆದಿದ್ದಾರೆ. ಆ ಮೂಲಕ ಐಪಿಎಲ್​ನಲ್ಲಿ ಗರಿಷ್ಠ ರನ್​ ಸಿಡಿಸಿದ ಏಕೈಕ ಆಟಗಾರ ಎನಿಸಿದ್ದಾರೆ.
icon

(7 / 9)

ಕೊಹ್ಲಿ ಮತ್ತು ಪ್ಲೆಸಿಸ್ ಆರ್​ಸಿಬಿ ಪರ ಆವೃತ್ತಿಯೊಂದರಲ್ಲಿ 4 ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಆ ಮೂಲಕ ಈ ಹಿಂದೆ ಕ್ರಿಸ್​​ ಗೇಲ್​ ಜೊತೆ ಸೇರಿ ಕೊಹ್ಲಿ 4 ಬಾರಿ ಶತಕದ ಜೊತೆಯಾಟವಾಡಿದ್ದರು. ಈ ದಾಖಲೆ ಕೂಡ ಸರಿಗಟ್ಟಿದಂತಾಗಿದೆ.
icon

(8 / 9)

ಇದೇ ವೇಳೆ ವಿರಾಟ್​ ಮತ್ತು ಪ್ಲೆಸಿಸ್​ ಐಪಿಎಲ್ ತಂಡವೊಂದರ ಪರ ಒಂದು ಆವೃತ್ತಿಯಲ್ಲಿ ಅತ್ಯಧಿಕ ಬಾರಿ ಅರ್ಧಶತಕದ ಜೊತೆಯಾಟ ಆಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ-ಪ್ಲೆಸಿಸ್​​ಗೆ ಇದು 6 ಅರ್ಧಶತಕದ ಜೊತೆಯಾಟ. ಈ ಹಿಂದೆ ಎಸ್​ಆರ್​ಎಚ್​ ಪರ ಜಾನಿ ಬೈರ್​ಸ್ಟೋ ಮತ್ತು ಡೇವಿಡ್​ ವಾರ್ನರ್​ 7 ಬಾರಿ 50+ ರನ್​ ಬಾರಿಸಿದ್ದರು.
icon

(9 / 9)

ಇತರ ಗ್ಯಾಲರಿಗಳು