ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಕ್ಸರ್‌ಗಳ ಶತಕ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್; ಐಪಿಎಲ್ ಆವೃತ್ತಿಯಲ್ಲಿ ವಿಶೇಷ ದಾಖಲೆ ಬರೆದ ಎಸ್‌ಆರ್‌ಎಚ್

ಸಿಕ್ಸರ್‌ಗಳ ಶತಕ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್; ಐಪಿಎಲ್ ಆವೃತ್ತಿಯಲ್ಲಿ ವಿಶೇಷ ದಾಖಲೆ ಬರೆದ ಎಸ್‌ಆರ್‌ಎಚ್

  • ಐಪಿಎಲ್‌ 2024ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ರನ್‌ ಮಳೆ ಹರಿದು ಬಂದಿವೆ. ಇದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಎಸ್‌ಆರ್‌ಎಚ್‌ ಹಲವು ದಾಖಲೆಗಳನ್ನು ಮಾಡಿದೆ. ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಯನ್ನು ಕಮಿನ್ಸ್‌ ಪಡೆ ನಿರ್ಮಿಸಿದೆ.

ಸನ್‌ರೈಸರ್ಸ್ ತಂಡವು ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಸೋತಿತು. ಈ ಐಪಿಎಲ್ ಋತುವಿನಲ್ಲಿ ಕೇವಲ ಮೂರನೇ ಸೋಲನ್ನು ಅನುಭವಿಸಿದ ತಂಡ, ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆಯಿತು.
icon

(1 / 5)

ಸನ್‌ರೈಸರ್ಸ್ ತಂಡವು ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಸೋತಿತು. ಈ ಐಪಿಎಲ್ ಋತುವಿನಲ್ಲಿ ಕೇವಲ ಮೂರನೇ ಸೋಲನ್ನು ಅನುಭವಿಸಿದ ತಂಡ, ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆಯಿತು.(AFP)

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಅವರಂಥ ಸ್ಫೋಟಕ ಬ್ಯಾಟರ್‌ಗಳಿರುವ ತಂಡವು ಟೂರ್ನಿಯಲ್ಲಿ ಸಿಕ್ಸರ್‌ಗಳ ರಾಶಿಯನ್ನೇ ಸುರಿಸಿದೆ. ಹೀಗಾಗಿ 17ನೇ ಆವೃತಿಯ ಐಪಿಎಲ್‌ನಲ್ಲಿ ತಂಡವು ಸಿಕ್ಸರ್‌ಗಳ ಶತಕ ಸಿಡಿಸಿದೆ. 
icon

(2 / 5)

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಅವರಂಥ ಸ್ಫೋಟಕ ಬ್ಯಾಟರ್‌ಗಳಿರುವ ತಂಡವು ಟೂರ್ನಿಯಲ್ಲಿ ಸಿಕ್ಸರ್‌ಗಳ ರಾಶಿಯನ್ನೇ ಸುರಿಸಿದೆ. ಹೀಗಾಗಿ 17ನೇ ಆವೃತಿಯ ಐಪಿಎಲ್‌ನಲ್ಲಿ ತಂಡವು ಸಿಕ್ಸರ್‌ಗಳ ಶತಕ ಸಿಡಿಸಿದೆ. (AFP)

ಹೈದರಾಬಾದ್ ತಂಡವು ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕೇವಲ ಎಂಟೇ ಪಂದ್ಯಗಳನ್ನು ಆಡಿ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದೆ. ಇದು ಆವೃತ್ತಿಯೊಂದರಲ್ಲಿ ತಂಡವೊಂದು ಸಿಡಿಸಿದ ಅಧಿಕ ಸಿಕ್ಸರ್‌ಗಳ ದಾಖಲೆಯಾಗಿದೆ. ಈವರೆಗೂ ಯಾವುದೇ ತಂಡ ಆವೃತ್ತಿಯೊಂದರಲ್ಲಿ ಮೂರಂಕಿ ಸಿಕ್ಸರ್‌ಗಳನ್ನು ಗಳಿಸಿರಲಿಲ್ಲ.
icon

(3 / 5)

ಹೈದರಾಬಾದ್ ತಂಡವು ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕೇವಲ ಎಂಟೇ ಪಂದ್ಯಗಳನ್ನು ಆಡಿ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದೆ. ಇದು ಆವೃತ್ತಿಯೊಂದರಲ್ಲಿ ತಂಡವೊಂದು ಸಿಡಿಸಿದ ಅಧಿಕ ಸಿಕ್ಸರ್‌ಗಳ ದಾಖಲೆಯಾಗಿದೆ. ಈವರೆಗೂ ಯಾವುದೇ ತಂಡ ಆವೃತ್ತಿಯೊಂದರಲ್ಲಿ ಮೂರಂಕಿ ಸಿಕ್ಸರ್‌ಗಳನ್ನು ಗಳಿಸಿರಲಿಲ್ಲ.(AFP)

2022ರ ಋತುವಿನಲ್ಲಿಯೂ ಅಧಿಕ ಸಿಕ್ಸರ್‌ಗಳ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್‌  ನಿರ್ಮಿಸಿತ್ತು. ಆಗ 97 ಸಿಕ್ಸರ್‌ ಬಂದಿತ್ತು.
icon

(4 / 5)

2022ರ ಋತುವಿನಲ್ಲಿಯೂ ಅಧಿಕ ಸಿಕ್ಸರ್‌ಗಳ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್‌  ನಿರ್ಮಿಸಿತ್ತು. ಆಗ 97 ಸಿಕ್ಸರ್‌ ಬಂದಿತ್ತು.(AP)

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 206ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಎಸ್‌ಆರ್‌ಎಚ್ 171 ರನ್‌​ಗಳಿಗೆ ಆಟ ಮುಗಿಸಿತು. ಹೀಗಾಗಿ ಆರ್‌​ಸಿಬಿ 35 ರನ್ ಅಂತರದಿಂದ ಪಂದ್ಯ ಗೆದ್ದಿತು.
icon

(5 / 5)

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 206ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಎಸ್‌ಆರ್‌ಎಚ್ 171 ರನ್‌​ಗಳಿಗೆ ಆಟ ಮುಗಿಸಿತು. ಹೀಗಾಗಿ ಆರ್‌​ಸಿಬಿ 35 ರನ್ ಅಂತರದಿಂದ ಪಂದ್ಯ ಗೆದ್ದಿತು.(PTI)


IPL_Entry_Point

ಇತರ ಗ್ಯಾಲರಿಗಳು