ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾತ್ರಿ ಮಲಗುವ ಮುನ್ನ ಪಾದ ತೊಳೆಯುವ ರೂಢಿ ಇದ್ಯಾ, ಇಲ್ಲ ಅಂದ್ರೆ ಇಂದಿನಿಂದಲೇ ಅಭ್ಯಾಸ ಮಾಡಿ, ಇದ್ರಿಂದ ದೇಹಕ್ಕಿದೆ ಹಲವು ಪ್ರಯೋಜನ

ರಾತ್ರಿ ಮಲಗುವ ಮುನ್ನ ಪಾದ ತೊಳೆಯುವ ರೂಢಿ ಇದ್ಯಾ, ಇಲ್ಲ ಅಂದ್ರೆ ಇಂದಿನಿಂದಲೇ ಅಭ್ಯಾಸ ಮಾಡಿ, ಇದ್ರಿಂದ ದೇಹಕ್ಕಿದೆ ಹಲವು ಪ್ರಯೋಜನ

  • Washing Feet before Bed: ರಾತ್ರಿ ಮಲಗುವ ಮುನ್ನ ಕೈ-ಕಾಲು ಅದರಲ್ಲೂ ಪಾದಗಳನ್ನು ನೀಟಾಗಿ ತೊಳೆಯುವ ಅಭ್ಯಾಸ ನಿಮಗಿದ್ಯಾ, ಒಂದು ವೇಳೆ ಈ ಅಭ್ಯಾಸ ಇಲ್ಲ ಅಂದ್ರೆ ಇಂದಿನಿಂದಲೇ ರೂಢಿಸಿಕೊಳ್ಳಿ. ಯಾಕೆಂದರೆ ಇದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಇದರ ಉಪಯೋಗ ತಿಳಿಯಿರಿ.

ರಾತ್ರಿ ಮಲಗುವಾಗ ನೀರು ಕುಡಿಯೋದು, ಮಾತ್ರೆ ಸೇವಿಸುವುದು, ಮೊಬೈಲ್‌ ಫೋನ್‌ ಆಫ್‌ ಮಾಡೋದು, ಲೈಟ್‌ ಆಫ್‌ ಮಾಡೋದು ಈ ಎಲ್ಲಾ ದಿನಚರಿಯನ್ನು ನಾವು ತಪ್ಪದೇ ಪಾಲಿಸುತ್ತೇವೆ. ಆದರೆ ಕೆಲವರಿಗೆ ಇದರ ಜೊತೆ ಪಾದಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸವೂ ಇರುತ್ತದೆ. ನಮ್ಮಲ್ಲಿ ಸಾಕಷ್ಟು ಮಂದಿ ಈ ಅಭ್ಯಾಸವನ್ನು ಪಾಲಿಸುತ್ತಿಲ್ಲ. ಆದರೆ ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ಸುಳ್ಳಲ್ಲ. ರಾತ್ರಿ ಮಲಗುವಾಗ ಪಾದಗಳನ್ನು ಚೆನ್ನಾಗಿ ತೊಳೆದು ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ. 
icon

(1 / 11)

ದೇಹದಲ್ಲಿ ಅತಿ ಹೆಚ್ಚು ಕೊಳಕಾಗುವ ಭಾಗ ಎಂದರೆ ಅದು ಪಾದಗಳು. ಇದು ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಆವಾಸಸ್ಥಾನವಾಗಿದೆ. ಪಾದಗಳನ್ನು ನಿಯಮಿತವಾಗಿ ತೊಳೆಯದಿದ್ದರೆ, ರೋಗಾಣುಗಳು ದೇಹದಾದ್ಯಂತ ಹರಡಬಹುದು. ಇದರೊಂದಿಗೆ ಕಾಲುಗಳ ಊತ, ತುರಿಕೆ, ಹುಣ್ಣು, ದದ್ದುಗಳು, ಕಾಲ್ಬೆರಳುಗಳ ನಡುವೆ ಫಂಗಲ್ ಸೋಂಕಿನಂತಹ ಚರ್ಮ ರೋಗಗಳು ಕಾಣಿಸಬಹುದು. ರಾತ್ರಿ ಮಲಗುವ ಮುನ್ನ ಪಾದ ತೊಳೆಯುವುದರಿಂದ ಈ ಎಲ್ಲಾ ಸಮಸ್ಯೆಗಳ ನಿವಾರಣೆಯ ಜೊತೆಗೆ ಇನ್ನೂ ಉಪಯೋಗಗಳಿವೆ.   
icon

(2 / 11)

ವೈದ್ಯರ ಪ್ರಕಾರ, ಮಲಗುವ ಮುನ್ನ ಪಾದಗಳನ್ನು ತೊಳೆಯದಿರುವುದೇ ಇರುವುದರಿಂದ ವಿವಿಧ ರೋಗಗಳ ಅಪಾಯ ಹೆಚ್ಚುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಚೆನ್ನಾಗಿ ತೊಳೆಯಬೇಕು.  
icon

(3 / 11)

ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ: ನಮ್ಮ ಪಾದಗಳು ಇಡೀ ದೇಹದ ಭಾರವನ್ನು ಹೊರುತ್ತವೆ. ಜೊತೆಗೆ ಬಿಗಿಯಾದ ಅಥವಾ ಅಸಮರ್ಪಕ ಗಾತ್ರದ ಬೂಟುಗಳನ್ನು ಧರಿಸುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಲು ನೋವು, ಶಿಲೀಂಧ್ರಗಳ ಸೋಂಕು ಇತ್ಯಾದಿ ಸಮಸ್ಯೆ ಕಾಣಿಸಬಹುದು. ಆದ್ದರಿಂದ ನಿಮ್ಮ ಪಾದಗಳ ಬಗ್ಗೆ ಜಾಗರೂಕರಾಗಿರಿ. ರಾತ್ರಿ ಉಗುರುಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ತೊಳೆದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಗ ಪಾದಗಳ ಕೀಲುಗಳು ಮತ್ತು ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಇದು ನೋವನ್ನು ಸಹ ಕಡಿಮೆ ಮಾಡುತ್ತದೆ. 
icon

(4 / 11)

ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ: ಆಯುರ್ವೇದ ಶಾಸ್ತ್ರದ ಪ್ರಕಾರ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಪಾದಗಳನ್ನು ತೊಳೆಯಬೇಕು. ಬೂಟುಗಳನ್ನು ಧರಿಸುವುದರಿಂದ ಪಾದಗಳ ಉಷ್ಣತೆಯು ಹೆಚ್ಚಾಗುತ್ತದೆ. ಏಕೆಂದರೆ ಪಾದಗಳು ಇಡೀ ದಿನ ಮುಚ್ಚಿರುತ್ತವೆ. ಮಲಗುವ ಮುನ್ನ ನಿಮ್ಮ ಪಾದಗಳನ್ನು ತೊಳೆಯುವುದರಿಂದ ರಾತ್ರಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
icon

(5 / 11)

ಪಾದದ ಚರ್ಮಕ್ಕೆ ಉತ್ತಮ: ಪಾದಗಳು ಸದಾ ನೆಲದ ಮೇಲೆ ಅಥವಾ ಬೂಟ್‌ ಧರಿಸಿ ಇರುತ್ತವೆ. ಆದ್ದರಿಂದ ಪಾದಗಳ ಅಡಿಭಾಗವು ಎಂದಿಗೂ ಆರಾಮದಾಯಕವಾಗುವುದಿಲ್ಲ. ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳೂ ಪಾದದಲ್ಲಿ ಸೇರಿಕೊಳ್ಳುತ್ತವೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯುವುದು ಪಾದದ ಅಡಿಭಾಗದಲ್ಲಿರುವ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
icon

(6 / 11)

ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ: ಶೂಗಳನ್ನು ಧರಿಸುವುದರಿಂದ ಬೆವರಿನ ಕಾರಣದಿಂದ ಪಾದಗಳಲ್ಲಿ ಕೆಟ್ಟ ವಾಸನೆ ಬರಬಹುದು. ಇದನ್ನು ತೊಡೆದುಹಾಕಲು ರಾತ್ರಿಯೇ ಉತ್ತಮ ಸಮಯ. ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದರೆ ದುರ್ವಾಸನೆ ತಕ್ಷಣವೇ ಮಾಯವಾಗುತ್ತದೆ. ಈ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.
icon

(7 / 11)

ನಿಮ್ಮ ಪಾದಗಳನ್ನು ಹೇಗೆ ತೊಳೆಯುವುದು? ಒಂದು ಬಟ್ಟಲಿನಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಬಹುದು. ಈಗ ನಿಮ್ಮ ಪಾದಗಳನ್ನು ಈ ನೀರಿನಲ್ಲಿ 5 ರಿಂದ 10 ನಿಮಿಷಗಳ ಕಾಲ ನೆನೆಸಿಡಿ. ಪಾದಗಳನ್ನು ಸ್ವಚ್ಛಗೊಳಿಸಲು ಲೂಫಾ ಸ್ಪಾಂಜ್ ಬಳಸಿ. ನಿಮ್ಮ ಬೆರಳುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದರ ನಂತರ, ಒಣ ಟವೆಲ್‌ನಿಂದ ಒರೆಸಿ. ಬೆರಳಿನ ಅಂತರವನ್ನು ಚೆನ್ನಾಗಿ ಒರೆಸಿ. ಇಲ್ಲಿ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಅಡಗಿಕೊಳ್ಳುತ್ತವೆ ಎಂಬುದನ್ನ ಮರೆಯಬೇಡಿ. 
icon

(8 / 11)

ಅದರ ನಂತರ, ನೀವು ಬಯಸಿದರೆ, ತೆಂಗಿನೆಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಬಹುದು. ತೆಂಗಿನೆಣ್ಣೆಯು ಪಾದಗಳನ್ನು ತೇವಗೊಳಿಸುವುದಲ್ಲದೆ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಪಾದದ ಚರ್ಮಕ್ಕೂ ಪ್ರಯೋಜನವನ್ನು ನೀಡುತ್ತದೆ.
icon

(9 / 11)

ಆದರೆ ನೆನಪಿಡಿ, ಯಾವುದೇ ಸಮಸ್ಯೆಗೆ ಮನೆಮದ್ದುಗಳನ್ನು ಅನುಸರಿಸುವ ಮೊದಲು, ನೀವು ವೈದ್ಯರನ್ನು ಸಂಪರ್ಕಿಸಬೇಕು, ಸ್ವ-ಔಷಧಿಯಿಂದ ಒಳಿತಿಗಿಂತ ಕೆಡುಕೇ ಹೆಚ್ಚು. 
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

IPL_Entry_Point

ಇತರ ಗ್ಯಾಲರಿಗಳು