ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sleeping Problem: ನಿದ್ದೆ ಬರ್ತಿಲ್ವಾ? ನಿಮ್ಮನೆಲೇ ಇದೆ ಔಷಧ; ಉತ್ತಮ ನಿದ್ದೆಗೆ ಸಹಾಯ ಮಾಡುವ 5 ಗಿಡಮೂಲಿಕೆಗಳಿವು

Sleeping Problem: ನಿದ್ದೆ ಬರ್ತಿಲ್ವಾ? ನಿಮ್ಮನೆಲೇ ಇದೆ ಔಷಧ; ಉತ್ತಮ ನಿದ್ದೆಗೆ ಸಹಾಯ ಮಾಡುವ 5 ಗಿಡಮೂಲಿಕೆಗಳಿವು

ನಿದ್ದೆ ಬಾರದೇ ಒದ್ದಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅಂತಹವರು ಯಾವುದೇ ಅಡಚಣೆಯಿಲ್ಲದೇ, ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುತ್ತಾರೆ. ನೀವು ಆ ಗುಂಪಿನಲ್ಲಿ ಇದ್ರೆ, ತಪ್ಪದೇ ಈ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಬೇಕು. ಇವುಗಳು ನೆಮ್ಮದಿಯ ನಿದ್ದೆಗೆ ಸಹಕರಿಸುವ ಆಯುರ್ವೇದ ಔಷಧಿಗಳಾಗಿವೆ. 

ಆಯುರ್ವೇದದಲ್ಲಿ ಆಹಾರ ಮತ್ತು ಬ್ರಹ್ಮಚರ್ಯದ ಜೊತೆಗೆ ಉತ್ತಮ ನಿದ್ದೆ ಕೂಡ ಮಹತ್ವ ಪಡೆದಿದೆ. ದೇಹ, ಮನಸ್ಸು ಹಾಗೂ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ನಿದ್ದೆಯು ಮೂಲಭೂತ ಅಂಶವಾಗಿದೆ. ಈ ಎಲ್ಲದರ ನಡುವೆ ಸಮತೋಲನ ಸಾಧಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಆಯುರ್ವೇದ ಮತ್ತು ಗಟ್ ಹೆಲ್ತ್ ಕೋಚ್ ಡಾ. ಡಿಂಪಲ್ ಜಂಗ್ಡಾ ಹೇಳುತ್ತಾರೆ. ಇವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮನಸ್ಸನ್ನು ಶಾಂತಗೊಳಿಸಿ, ಉತ್ತಮ ನಿದ್ದೆಗೆ ಸಹಕರಿಸುವ ಗಿಡಮೂಲಿಕೆಗಳ ಬಗ್ಗೆ ಬರೆದುಕೊಂಡಿದ್ದಾರೆ.  ಅಂತಹ ಗಿಡಮೂಲಿಕೆಗಳು ಯಾವುವು, ಅವುಗಳ ವೈಶಿಷ್ಟ್ಯವೇನು ತಿಳಿಯಿರಿ. 
icon

(1 / 7)

ಆಯುರ್ವೇದದಲ್ಲಿ ಆಹಾರ ಮತ್ತು ಬ್ರಹ್ಮಚರ್ಯದ ಜೊತೆಗೆ ಉತ್ತಮ ನಿದ್ದೆ ಕೂಡ ಮಹತ್ವ ಪಡೆದಿದೆ. ದೇಹ, ಮನಸ್ಸು ಹಾಗೂ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ನಿದ್ದೆಯು ಮೂಲಭೂತ ಅಂಶವಾಗಿದೆ. ಈ ಎಲ್ಲದರ ನಡುವೆ ಸಮತೋಲನ ಸಾಧಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಆಯುರ್ವೇದ ಮತ್ತು ಗಟ್ ಹೆಲ್ತ್ ಕೋಚ್ ಡಾ. ಡಿಂಪಲ್ ಜಂಗ್ಡಾ ಹೇಳುತ್ತಾರೆ. ಇವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮನಸ್ಸನ್ನು ಶಾಂತಗೊಳಿಸಿ, ಉತ್ತಮ ನಿದ್ದೆಗೆ ಸಹಕರಿಸುವ ಗಿಡಮೂಲಿಕೆಗಳ ಬಗ್ಗೆ ಬರೆದುಕೊಂಡಿದ್ದಾರೆ.  ಅಂತಹ ಗಿಡಮೂಲಿಕೆಗಳು ಯಾವುವು, ಅವುಗಳ ವೈಶಿಷ್ಟ್ಯವೇನು ತಿಳಿಯಿರಿ. (Pexels)

ಬ್ರಾಹ್ಮಿ: ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಹಾಗೂ ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸಲು ಬ್ರಾಹ್ಮಿ ಹೆಸರುವಾಸಿಯಾಗಿದೆ. ಬ್ರಾಹ್ಮಿ ಉತ್ತಮ ನಿದ್ದೆಗೆ ಹೇಳಿ ಮಾಡಿಸಿದ್ದು. ಬ್ರಾಹ್ಮಿ ಎಲೆಯಿಂದ ಚಹಾ ತಯಾರಿಸಿ ಕುಡಿಯುವುದರಿಂದ ಉತ್ತಮ ನಿದ್ದೆ ಖಚಿತ. 
icon

(2 / 7)

ಬ್ರಾಹ್ಮಿ: ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಹಾಗೂ ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸಲು ಬ್ರಾಹ್ಮಿ ಹೆಸರುವಾಸಿಯಾಗಿದೆ. ಬ್ರಾಹ್ಮಿ ಉತ್ತಮ ನಿದ್ದೆಗೆ ಹೇಳಿ ಮಾಡಿಸಿದ್ದು. ಬ್ರಾಹ್ಮಿ ಎಲೆಯಿಂದ ಚಹಾ ತಯಾರಿಸಿ ಕುಡಿಯುವುದರಿಂದ ಉತ್ತಮ ನಿದ್ದೆ ಖಚಿತ. (Unsplash)

ತುಳಸಿ: ಅಡಾಪ್ಟೋಜೆನಿಕ್‌ ಗುಣಲಕ್ಷಣಗಳಿಂದ ಕೂಡಿರುವ ತುಳಸಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಜೊತೆಗೆ ಉತ್ತಮ ನಿದ್ದೆಗೂ ಸಹಕರಿಸುತ್ತದೆ. ಪ್ರತಿದಿನ ಕೆಲವು ತಾಜಾ ತುಳಸಿ ಎಲೆಗಳನ್ನು ಅಗಿಯುವ ಅಭ್ಯಾಸ ಮಾಡಿಕೊಳ್ಳಿ. 
icon

(3 / 7)

ತುಳಸಿ: ಅಡಾಪ್ಟೋಜೆನಿಕ್‌ ಗುಣಲಕ್ಷಣಗಳಿಂದ ಕೂಡಿರುವ ತುಳಸಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಜೊತೆಗೆ ಉತ್ತಮ ನಿದ್ದೆಗೂ ಸಹಕರಿಸುತ್ತದೆ. ಪ್ರತಿದಿನ ಕೆಲವು ತಾಜಾ ತುಳಸಿ ಎಲೆಗಳನ್ನು ಅಗಿಯುವ ಅಭ್ಯಾಸ ಮಾಡಿಕೊಳ್ಳಿ. (Pixabay)

ಜಟಮಾನ್ಸಿ: ಸಾಂಪ್ರದಾಯಿಕವಾಗಿ ಆಯುರ್ವೇದದಲ್ಲಿ ಉತ್ತಮ ನಿದ್ದೆಯನ್ನು ಉತ್ತೇಜಿಸಲು ಮತ್ತು ನಿದ್ರಾಹೀನತೆಯನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಜಟಮಾನ್ಸಿ ನಿದ್ರಾಜನಕ ಗುಣಗಳನ್ನು ಹೊಂದಿದೆ. ತಜ್ಞರ ಸಲಹೆಯಂತೆ ಜಟಮಾನ್ಸಿ ಪುಡಿ ಸೇವಿಸಬಹುದು.
icon

(4 / 7)

ಜಟಮಾನ್ಸಿ: ಸಾಂಪ್ರದಾಯಿಕವಾಗಿ ಆಯುರ್ವೇದದಲ್ಲಿ ಉತ್ತಮ ನಿದ್ದೆಯನ್ನು ಉತ್ತೇಜಿಸಲು ಮತ್ತು ನಿದ್ರಾಹೀನತೆಯನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಜಟಮಾನ್ಸಿ ನಿದ್ರಾಜನಕ ಗುಣಗಳನ್ನು ಹೊಂದಿದೆ. ತಜ್ಞರ ಸಲಹೆಯಂತೆ ಜಟಮಾನ್ಸಿ ಪುಡಿ ಸೇವಿಸಬಹುದು.(Pinterest)

ಕ್ಯಾಮೊಮೈಲ್: ಇದು ನಿದ್ರಾಜನಕ ಗುಣಲಕ್ಷಣಗಳಿಂದ ಹೆಸರುವಾಸಿಯಾಗಿದೆ. ಕ್ಯಾಮೊಮೈಲ್‌ ಚಹಾ ಕುಡಿಯುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಇದು ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಒಂದು ಕಪ್‌ ಕ್ಯಾಮೊಮೈಲ್‌ ಚಹಾ ಕುಡಿದು ಮಲಗಿ. 
icon

(5 / 7)

ಕ್ಯಾಮೊಮೈಲ್: ಇದು ನಿದ್ರಾಜನಕ ಗುಣಲಕ್ಷಣಗಳಿಂದ ಹೆಸರುವಾಸಿಯಾಗಿದೆ. ಕ್ಯಾಮೊಮೈಲ್‌ ಚಹಾ ಕುಡಿಯುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಇದು ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಒಂದು ಕಪ್‌ ಕ್ಯಾಮೊಮೈಲ್‌ ಚಹಾ ಕುಡಿದು ಮಲಗಿ. (Shutterstock)

ಆಯುರ್ವೇದ ಚಿಕಿತ್ಸೆಗಳು ಸಮಗ್ರ ಪರಿಹಾರ ನೀಡುತ್ತವೆಯಾದರೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಪರಿಣಾಮ ಬೀರಬಹುದು. ಹಾಗಾಗಿ ಈ ವಿಚಾರವಾಗಿ ತಜ್ಞರನ್ನು ಸಂಪರ್ಕಿಸಿ, ನಿಮ್ಮ ದೇಹಕ್ಕೆ ಹೊಂದುವುದೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವುದು ಬಹಳ ಮುಖ್ಯವಾಗುತ್ತದೆ. 
icon

(6 / 7)

ಆಯುರ್ವೇದ ಚಿಕಿತ್ಸೆಗಳು ಸಮಗ್ರ ಪರಿಹಾರ ನೀಡುತ್ತವೆಯಾದರೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಪರಿಣಾಮ ಬೀರಬಹುದು. ಹಾಗಾಗಿ ಈ ವಿಚಾರವಾಗಿ ತಜ್ಞರನ್ನು ಸಂಪರ್ಕಿಸಿ, ನಿಮ್ಮ ದೇಹಕ್ಕೆ ಹೊಂದುವುದೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವುದು ಬಹಳ ಮುಖ್ಯವಾಗುತ್ತದೆ. (Pexels)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


IPL_Entry_Point

ಇತರ ಗ್ಯಾಲರಿಗಳು