ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

  • Goddess lakshmi devi: ಲಕ್ಷ್ಮೀದೇವಿಯು ಆಶೀರ್ವದಿಸಿ ಒಲಿಯಬೇಕೆಂದರೆ ನೀವು ಕೆಲವೊಂದು ಅಭ್ಯಾಸಗಳನ್ನು ಬಿಟ್ಟುಬಿಡಬೇಕು. ಮನುಷ್ಯನಲ್ಲಿ ಕೆಲವೊಂದು ಅಭ್ಯಾಸಗಳನ್ನು ಲಕ್ಷ್ಮೀ ಇಷ್ಟಪಡುವುದಿಲ್ಲ. ಅವುಗಳನ್ನು ತಕ್ಷಣವೇ ತ್ಯಜಿಸುವ ಮೂಲಕ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

ಧರ್ಮಗ್ರಂಥಗಳಲ್ಲಿ ಲಕ್ಷ್ಮೀದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ತಾಯಿಯ ಅನುಗ್ರಹದಿಂದಾಗಿ ಮನೆ ಹಾಗೂ ಜಗತ್ತಿನಲ್ಲಿ ಸಂತೋಷದ ಜೊತೆಗೆ ಸಮೃದ್ಧಿಯೂ ನೆಲೆಸುತ್ತದೆ. ಆದರೆ ಲಕ್ಷ್ಮೀದೇವಿ ಮುನಿಸಿಕೊಂಡಾಗ, ಪ್ರಗತಿ ಮತ್ತು ಆರ್ಥಿಕ ಬಿಕ್ಕಟ್ಟು ಎದುರಾಗುತ್ತವೆ.
icon

(1 / 6)

ಪ್ರತಿಯೊಬ್ಬ ಮನುಷ್ಯನು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಬಯಸುತ್ತಾನೆ. ತನ್ನ ಮನೆ ಸಂತೋಷ ಹಾಗೂ ಸಂಪತ್ತಿನಿಂದ ತುಂಬಿರಬೇಕು ಎಂದು ನಿರೀಕ್ಷಿಸುತ್ತಾನೆ. ಇದು ಸಾಧ್ಯವಾಗಬೇಕೆಂದರೆ, ಆ ಮನೆ ಲಕ್ಷ್ಮೀದೇವಿಗೆ ಇಷ್ಟವಾಗಬೇಕು. ಲಕ್ಷ್ಮೀದೇವಿಯು ಇಷ್ಟಪಡದ ಕೆಲವೊಂದು ಅಂಶಗಳಿವೆ. ನೀವು ಈ ಕೆಲಸಗಳನ್ನು ಮಾಡಿದರೆ, ಮನೆಗೆ ಬಂದ ಲಕ್ಷ್ಮೀ ಬಾಗಿಲ ಬಳಿಯಿಂದಲೇ ಹಿಂತಿರುಗುತ್ತಾಳೆ.
icon

(2 / 6)

ಲಕ್ಷ್ಮಿ ದೇವಿಯು ಸ್ವಚ್ಚತೆಯನ್ನು ಪ್ರೀತಿಸುತ್ತಾಳೆ. ಮನೆ ಕೊಳಕಾಗಿದ್ದರೆ ಆಕೆಗೆ ಇಷ್ಟವಾಗುವುದಿಲ್ಲ. ಆದ್ದರಿಂದ ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಮನೆ ಎಂದಿಗೂ ಕೊಳಕಾಗಿರದಂತೆ ನೋಡಿಕೊಳ್ಳಿ.
icon

(3 / 6)

ಹಣವನ್ನು ಸುಖಾಸುಮ್ಮನೆ ವ್ಯರ್ಥ ಮಾಡುವ ಅಭ್ಯಾಸವಿರುವವರು ಕೂಡಾ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯುವುದಿಲ್ಲ. ವಿಶೇಷವಾಗಿ ಜೂಜಾಟದಂಥ ದುರಾಭ್ಯಾಸದ ಮೂಲಕ ಹಣವನ್ನು ದುರುಪಯೋಗಪಡಿಸಿಕೊಳ್ಳುವವರು ಲಕ್ಷ್ಮೀದೇವಿಯ ಆಶೀರ್ವಾದ ಪಡೆಯುವುದಿಲ್ಲ. ಅದಕ್ಕಾಗಿಯೇ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೆಟ್ಟ ಅಭ್ಯಾಸಗಳ ಬದಲು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು.
icon

(4 / 6)

ಆಹಾರವನ್ನು ತಟ್ಟೆಯಲ್ಲಿ ಹಾಗೆಯೇ ಬಿಡುವವರ ಮೇಲೆ, ಆಹಾರವನ್ನು ಗೌರವಿಸದವರ ಮೇಲೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ. ಅಂಥಾ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ, ಮನೆಯಲ್ಲಿ ಬಡತನವಿದ್ದು, ಕುಟುಂಬಕ್ಕೆ ಆಶೀರ್ವಾದ ಬೇಕಾದರೆ, ನೀವು ತಿನ್ನುವ ಅನ್ನವನ್ನು ಗೌರವಿಸಬೇಕು. ಬೇಕಾದಷ್ಟೇ ತಿನ್ನಬೇಕು.
icon

(5 / 6)

ಸೂರ್ಯೋದಯದ ನಂತರವೂ ಹಾಸಿಗೆಯಿಂದ ಏಳದೆ, ತಡವಾಗಿ ಎಚ್ಚರಗೊಳ್ಳುವವರಿಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುವುದಿಲ್ಲ. ಅಂತೆಯೇ, ಸಂಜೆ ವೇಳೆ ಮಲಗುವವರ ಮನೆಯಲ್ಲಿಯೂ ಲಕ್ಷ್ಮೀದೇವಿಯು ನೆಲೆಸುವುದಿಲ್ಲ. ನಿಮ್ಮಲ್ಲಿ ಇಂಥಾ ದುರಾಭ್ಯಾಸ ಇದ್ದರೆ, ತಕ್ಷಣ ನಿಮ್ಮ ಅಭ್ಯಾಸವನ್ನು ಬದಲಾಯಿಸಿ.
icon

(6 / 6)

IPL_Entry_Point

ಇತರ ಗ್ಯಾಲರಿಗಳು