ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Isro Gaganyaan: ಚಂದ್ರಯಾನ, ಆದಿತ್ಯ, ಗಗನಯಾನ, ಇಸ್ರೋದ ಈ ವರ್ಷದ ಅಂತರಿಕ್ಷ ಯಾನದಲ್ಲೊಂದು ಚಿತ್ರಪಯಣ

ISRO Gaganyaan: ಚಂದ್ರಯಾನ, ಆದಿತ್ಯ, ಗಗನಯಾನ, ಇಸ್ರೋದ ಈ ವರ್ಷದ ಅಂತರಿಕ್ಷ ಯಾನದಲ್ಲೊಂದು ಚಿತ್ರಪಯಣ

  • ಈ ವರ್ಷ ಹತ್ತು ಹಲವು ಬೃಹತ್‌ ಯೋಜನೆಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಹೊಂದಿದೆ. ಆದಿತ್ಯ ಎಲ್‌1 ಸನ್‌, ಚಂದ್ರಯಾನ 3 ಎಂಬ ಬೃಹತ್‌ ಯಾನ ಯೋಜನೆಗಳನ್ನು ಹೊಂದಿದೆ. ಜತೆಗೆ, ಗಗನಯಾನಿ ರಹಿತವಾಗಿ ಮೊದಲ ಬಾರಿಗೆ ಗಗನಯಾನ ಮಿಷನ್‌ ಕೈಗೊಳ್ಳುವ ಯೋಜನೆಯಿದೆ. ಇದಕ್ಕಾಗಿ ಕರ್ನಾಟಕದ ಚಿತ್ರದುರ್ಗದಲ್ಲಿರುವ ಗಗನಯಾನ ಟೆಸ್ಟ್‌ ಪ್ರದೇಶದಲ್ಲಿ ಗಗನನೌಕೆಯನ್ನು ಪರೀಕ್ಷಿಸಲಿದೆ.

ಗಗನಯಾನವು ಮಾನವಸಹಿತವಾಗಿ ಕೈಗೊಳ್ಳುವುದರಿಂದ ಅತ್ಯಧಿಕ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಅವಸರದಲ್ಲಿ ಲಾಂಚ್‌ ಮಾಡಲಾಗದು ಎಂದು ಇಸ್ರೊ ಚೇರ್ಮನ್‌ ಎಸ್‌ ಸೋಮನಾಥ್‌  ಹೇಳಿದ್ದಾರೆ. 
icon

(1 / 5)

ಗಗನಯಾನವು ಮಾನವಸಹಿತವಾಗಿ ಕೈಗೊಳ್ಳುವುದರಿಂದ ಅತ್ಯಧಿಕ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಅವಸರದಲ್ಲಿ ಲಾಂಚ್‌ ಮಾಡಲಾಗದು ಎಂದು ಇಸ್ರೊ ಚೇರ್ಮನ್‌ ಎಸ್‌ ಸೋಮನಾಥ್‌  ಹೇಳಿದ್ದಾರೆ. (ISRO)

ಈ ವರ್ಷದ ಆರಂಭದಲ್ಲಿಯೇ ಗಗನಯಾನಕ್ಕಾಗಿ ಆರಂಭಿಕ ಉಡಾವಣೆ ಮಾಡಲಿದೆ. ಆದರೆ, ಆರಂಭದಲ್ಲಿ ಮಾನವರಹಿತವಾಗಿ ಗಗನನೌಕೆ ಕಳುಹಿಸಲಿದೆ. ಮುಂದೆ ಇಂತಹ ಹಲವು ಪರೀಕ್ಷಾರ್ಥ ಉಡಾವಣಾ ಮೂಲಕ ಮಾನವಸಹಿತ ಗಗನಯಾನ ಕೈಗೊಳ್ಳಲಾಗುತ್ತದೆ. 
icon

(2 / 5)

ಈ ವರ್ಷದ ಆರಂಭದಲ್ಲಿಯೇ ಗಗನಯಾನಕ್ಕಾಗಿ ಆರಂಭಿಕ ಉಡಾವಣೆ ಮಾಡಲಿದೆ. ಆದರೆ, ಆರಂಭದಲ್ಲಿ ಮಾನವರಹಿತವಾಗಿ ಗಗನನೌಕೆ ಕಳುಹಿಸಲಿದೆ. ಮುಂದೆ ಇಂತಹ ಹಲವು ಪರೀಕ್ಷಾರ್ಥ ಉಡಾವಣಾ ಮೂಲಕ ಮಾನವಸಹಿತ ಗಗನಯಾನ ಕೈಗೊಳ್ಳಲಾಗುತ್ತದೆ. (AFP)

2023ರ ಕೊನೆಯ ತ್ರೈಮಾಸಿಕದಲ್ಲಿ ಗಗನಯಾನ್‌ ಪರೀಕ್ಷಾರ್ಥ ಉಡಾವಣೆ ಇರಲಿದೆ. ಈಗಾಗಲೇ ಆರ್ಬಿಟಲ್‌ ಮಾಡ್ಯುಲ್‌ ಪ್ರಪಲ್ಷನ್‌ ಸಿಸ್ಟಮ್‌, ರಿಕವರಿ ಆಪರೇಷನ್‌ ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಇಸ್ರೊ ಪರೀಕ್ಷಿಸುತ್ತಿದೆ. ಭಾರತದ ಗಗನಯಾತ್ರಿಗಳು ರಷ್ಯದ ಗಗಾರಿನ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆಯಲಿದ್ದಾರೆ. ಅವರಿಗೆ ಈಗ 'ಗಗಾನಾಟ್ಸ್‌' ಎಂಬ ಚಂದದ ಹೆಸರು ಇಡಲಾಗಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಸೇನೆಯ 12 ಪೈಲಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರಿಗೆ ಮೊದಲ ಸುತ್ತಿನಲ್ಲಿ ಹಲವಾರು ಕಠಿಣವಾದ ದೈಹಿಕ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ, ವಿಕಿರಣ ಪರೀಕ್ಷೆ, ಕ್ಲಿನಿಕಲ್‌ ಪರೀಕ್ಷೆಗಳು ಹಾಗೂ ಮನೋದಾಢ್ರ್ಯ ಪರೀಕ್ಷೆಗಳು ನಡೆದಿವೆ. ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
icon

(3 / 5)

2023ರ ಕೊನೆಯ ತ್ರೈಮಾಸಿಕದಲ್ಲಿ ಗಗನಯಾನ್‌ ಪರೀಕ್ಷಾರ್ಥ ಉಡಾವಣೆ ಇರಲಿದೆ. ಈಗಾಗಲೇ ಆರ್ಬಿಟಲ್‌ ಮಾಡ್ಯುಲ್‌ ಪ್ರಪಲ್ಷನ್‌ ಸಿಸ್ಟಮ್‌, ರಿಕವರಿ ಆಪರೇಷನ್‌ ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಇಸ್ರೊ ಪರೀಕ್ಷಿಸುತ್ತಿದೆ. ಭಾರತದ ಗಗನಯಾತ್ರಿಗಳು ರಷ್ಯದ ಗಗಾರಿನ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆಯಲಿದ್ದಾರೆ. ಅವರಿಗೆ ಈಗ 'ಗಗಾನಾಟ್ಸ್‌' ಎಂಬ ಚಂದದ ಹೆಸರು ಇಡಲಾಗಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಸೇನೆಯ 12 ಪೈಲಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರಿಗೆ ಮೊದಲ ಸುತ್ತಿನಲ್ಲಿ ಹಲವಾರು ಕಠಿಣವಾದ ದೈಹಿಕ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ, ವಿಕಿರಣ ಪರೀಕ್ಷೆ, ಕ್ಲಿನಿಕಲ್‌ ಪರೀಕ್ಷೆಗಳು ಹಾಗೂ ಮನೋದಾಢ್ರ್ಯ ಪರೀಕ್ಷೆಗಳು ನಡೆದಿವೆ. ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.(ISRO)

ಇಷ್ಟು ಮಾತ್ರವಲ್ಲದೆ ಮರುಬಳಕೆ ಮಾಡಬಹುದಾದ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಎಲೊನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ನಂತೆಯೇ ಇರುತ್ತದೆ. ಇದರ ಪ್ರಯೋಗಗಳು ಈ ವರ್ಷದ ಮೊದಲಾರ್ಧದಲ್ಲಿ ಆರಂಭವಾಗಲಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಅಂತರಿಕ್ಷದಂತಹ ಕೃತಕ ವಾತಾವರಣವೂ ಸೃಷ್ಟಿಸಲಾಗಿದ್ದು, ಇಲ್ಲಿ ಅನೇಕ ಅಂತರಿಕ್ಷ ಪ್ರಯೋಗಗಳು ನಡೆಯಲಿವೆ. 
icon

(4 / 5)

ಇಷ್ಟು ಮಾತ್ರವಲ್ಲದೆ ಮರುಬಳಕೆ ಮಾಡಬಹುದಾದ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಎಲೊನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ನಂತೆಯೇ ಇರುತ್ತದೆ. ಇದರ ಪ್ರಯೋಗಗಳು ಈ ವರ್ಷದ ಮೊದಲಾರ್ಧದಲ್ಲಿ ಆರಂಭವಾಗಲಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಅಂತರಿಕ್ಷದಂತಹ ಕೃತಕ ವಾತಾವರಣವೂ ಸೃಷ್ಟಿಸಲಾಗಿದ್ದು, ಇಲ್ಲಿ ಅನೇಕ ಅಂತರಿಕ್ಷ ಪ್ರಯೋಗಗಳು ನಡೆಯಲಿವೆ. (PTI)

ಇದರೊಂದಿಗೆ ಚಂದ್ರಯಾನ 3 ಯೋಜನೆಯು ಭಾರತದ ಮುಂದಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಯೋಜನೆಯನ್ನೂ ಇಸ್ರೊ ಹೊಂದಿದೆ. ಇಷ್ಟು ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಯಾನಕ್ಕೆ ಅವಕಾಶ ನೀಡಲಿದೆ. ಕಳೆದ ನವೆಂಬರ್‌ನಲ್ಲಿ ಖಾಸಗಿ ಕಂಪನಿಯೊಂದು ಭಾರತದ ಮೊದಲ ಖಾಸಗಿ ರಾಕೆಟ್‌ ಉಡಾವಣೆ ಮಾಡಿತ್ತು. ಈ ಕಂಪನಿಯು ಮುಂದಿನ ವರ್ಷ ತನ್ನ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಯೋಜನೆ ಹೊಂದಿದೆ. ಹೀಗೆ, ಈ ವರ್ಷ ಖಾಸಗಿ ವಲಯಗಳಿಗೂ ಅಂತರಿಕ್ಷ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರಕಲಿದೆ. 
icon

(5 / 5)

ಇದರೊಂದಿಗೆ ಚಂದ್ರಯಾನ 3 ಯೋಜನೆಯು ಭಾರತದ ಮುಂದಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಯೋಜನೆಯನ್ನೂ ಇಸ್ರೊ ಹೊಂದಿದೆ. ಇಷ್ಟು ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಯಾನಕ್ಕೆ ಅವಕಾಶ ನೀಡಲಿದೆ. ಕಳೆದ ನವೆಂಬರ್‌ನಲ್ಲಿ ಖಾಸಗಿ ಕಂಪನಿಯೊಂದು ಭಾರತದ ಮೊದಲ ಖಾಸಗಿ ರಾಕೆಟ್‌ ಉಡಾವಣೆ ಮಾಡಿತ್ತು. ಈ ಕಂಪನಿಯು ಮುಂದಿನ ವರ್ಷ ತನ್ನ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಯೋಜನೆ ಹೊಂದಿದೆ. ಹೀಗೆ, ಈ ವರ್ಷ ಖಾಸಗಿ ವಲಯಗಳಿಗೂ ಅಂತರಿಕ್ಷ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರಕಲಿದೆ. (PTI)


IPL_Entry_Point

ಇತರ ಗ್ಯಾಲರಿಗಳು