Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯ ಶ್ವೇತಾ ಪತಿ ಯಾರು, ಮಕ್ಕಳೆಷ್ಟು? ಹೀಗಿವೆ ಪುಟ್ಟ ಫ್ಯಾಮಿಲಿ ಫೋಟೋಸ್
- ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಗಮನ ಸೆಳೆದ ನಟಿ ಶ್ವೇತಾ, ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕನ್ನಡದ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈಗಾಗಲೇ ಶ್ವೇತಾ ಅವರ ರೀಲ್ ಫ್ಯಾಮಿಲಿ ನೋಡಿದ ನಿಮಗೆ, ಈಗ ಅವರ ರಿಯಲ್ ಫ್ಯಾಮಿಲಿ ಪರಿಚಯ ಮಾಡಿಕೊಡ್ತಿದ್ದೀವಿ ನೋಡಿ.

(1 / 5)
ತಮಿಳು ಮೂಲದವರಾದರೂ, ಕನ್ನಡದಲ್ಲೂ ಹೆಸರು ಮಾಡಿದ್ದಾರೆ ನಟಿ ಶ್ವೇತಾ. ಕರ್ನಾಟಕದಲ್ಲಿ ಶ್ವೇತಾ ಎಂದೇ ಕರೆಸಿಕೊಳ್ಳುವ ಈ ನಟಿಗೆ ವಿನೋದಿನಿ ಎಂದು ಪರಭಾಷೆಯಲ್ಲಿ ಕರೆಯುವುದುಂಟು.
(2 / 5)
1992ರಲ್ಲಿ ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ಶ್ವೇತಾ, ಅದಾದ ಮೇಲೆ ಗೆಜ್ಜೆ ನಾದ, ಹೆತ್ತವರು, ಕರ್ಪೂರ್ ಗೊಂಬೆ, ಮಿನುಗು ತಾರೆ, ಲಕ್ಷ್ಮೀ ಮಹಾಲಕ್ಷ್ಮೀ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
(3 / 5)
ತಮಿಳು ಸಿನಿಮಾರಂಗದಿಂದ ಆರಂಭವಾದ ಇವರ ಬಣ್ಣದ ಲೋಕದ ಪಯಣ, ಕನ್ನಡ, ಮಲಯಾಳಂನ ಸಾಕಷ್ಟು ಚಿತ್ರಗಳಲ್ಲೂ ಶ್ವೇತಾ ನಟಿಸಿದ್ದಾರೆ. ಸಿನಿಮಾಗಳ ಜತೆಗೆ ತಮಿಳಿನ ಕಿರುತೆರೆಯಲ್ಲೂ ಶ್ವೇತಾ ಹೆಸರು ಮಾಡಿದ್ದಾರೆ.
(4 / 5)
ಹೀಗೆ ಬಣ್ಣದ ಲೋಕದಲ್ಲಿಯೇ ಸಕ್ರಿಯರಿರುವ ಶ್ವೇತಾಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಶ್ರೀಧರ್ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಇದೀಗ ಚೇತರಿಸಿಕೊಂಡು ಮೊದಲಿನಂತಾಗಿದ್ದಾರೆ.
ಇತರ ಗ್ಯಾಲರಿಗಳು