ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mehooba Mufti: ಆರ್ಟಿಕಲ್ 370‌ ಕುರಿತು ಆಜಾದ್‌ ಹೇಳಿಕೆ ಖಂಡಿಸಿದ ಮೆಹಬೂಬಾ ಮುಫ್ತಿ!

Mehooba Mufti: ಆರ್ಟಿಕಲ್ 370‌ ಕುರಿತು ಆಜಾದ್‌ ಹೇಳಿಕೆ ಖಂಡಿಸಿದ ಮೆಹಬೂಬಾ ಮುಫ್ತಿ!

  • ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ಪರಿಚ್ಛೇದ 370ನ್ನು ಮತ್ತೆ ಜಾರಿ ಮಾಡುವುದು ಅಸಾಧ್ಯ ಎಂದು ಹೇಳಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರ ಹೇಳಿಕೆಯನ್ನು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ಶ್ರೀನಗರದಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ವಿಶೇಷ ಸ್ಥಾನಮಾನದ ಕುರಿತು ಆಜಾದ್‌ ಅವರು ನೀಡಿರುವ ಹೇಳಿಕೆ ಅವರ್‌ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ. ಹಾಗಾದರೆ ಆಜಾದ್‌ ಹೇಳಿಕೆ ಬಗ್ಗೆ ಮುಫ್ತಿ ಅವರ ಹೇಳಿಕೆಯನ್ನು ಗಮನಿಸುವುದಾದರೆ...

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕುರಿತು ಗುಲಾಂ ನಬಿ ಆಜಾದ್‌ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದಿರುವ ಮೆಹಬೂಬಾ ಮುಫ್ತಿ, ಆಜಾದ್‌ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
icon

(1 / 5)

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕುರಿತು ಗುಲಾಂ ನಬಿ ಆಜಾದ್‌ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದಿರುವ ಮೆಹಬೂಬಾ ಮುಫ್ತಿ, ಆಜಾದ್‌ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.(HT_PRINT)

ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಪಕ್ಷ. ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್‌ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿತ್ತು. ಅದೇ ರೀತಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ದೊರಕಿಸಿಕೊಡುವಲ್ಲಿ, ಇಲ್ಲಿನ ಸ್ಥಳೀಯ ಪಕ್ಷಗಳು ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಮೆಹಬೂಬಾ ಮುಫ್ತಿ ಸ್ಪಷ್ಟಪಡಿಸಿದ್ದಾರೆ.
icon

(2 / 5)

ಕಾಂಗ್ರೆಸ್ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಪಕ್ಷ. ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್‌ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿತ್ತು. ಅದೇ ರೀತಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ದೊರಕಿಸಿಕೊಡುವಲ್ಲಿ, ಇಲ್ಲಿನ ಸ್ಥಳೀಯ ಪಕ್ಷಗಳು ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಮೆಹಬೂಬಾ ಮುಫ್ತಿ ಸ್ಪಷ್ಟಪಡಿಸಿದ್ದಾರೆ.(HT_PRINT)

ಕಣಿವೆಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370‌ ಮರುಸ್ಥಾಪನೆ ಖಚಿತ ಎಂಬುದು ನನ್ನ ಭಾವನೆ. ಕಣಿವೆಗೆ ವಿಶೇಷ ಸ್ಥಾನಮಾನ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಈ ವಿಚಾರದಲ್ಲಿ ಕಣಿವೆಯ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಒಗ್ಗಟ್ಟಾಗಿವೆ ಎಂದು ಮೆಹಬೂಬಾ ಮುಫ್ತಿ ಹೇಳಿದರು.
icon

(3 / 5)

ಕಣಿವೆಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370‌ ಮರುಸ್ಥಾಪನೆ ಖಚಿತ ಎಂಬುದು ನನ್ನ ಭಾವನೆ. ಕಣಿವೆಗೆ ವಿಶೇಷ ಸ್ಥಾನಮಾನ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಈ ವಿಚಾರದಲ್ಲಿ ಕಣಿವೆಯ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಒಗ್ಗಟ್ಟಾಗಿವೆ ಎಂದು ಮೆಹಬೂಬಾ ಮುಫ್ತಿ ಹೇಳಿದರು.(HT_PRINT)

ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಹುಮ್ಮಸ್ಸಿನಲ್ಲಿರುವ ಗುಲಾಂ ನಬಿ ಆಜಾದ್‌ ಆರಂಭದಲ್ಲೇ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ. ತಮ್ಮ ಪಕ್ಷ ವಿಶೇಷ ಸ್ಥಾನಮಾನದ ಬೇಡಿಕೆ ಇಡಲಿದೆ ಎಂದು ಈ ಹಿಂದೆ ಆಜಾದ್‌ ಹೇಳಿದ್ದರು. ಆದರೆ ಈಗ ಅವರೇ ತಮ್ಮ ಹೇಳಿಕೆಯಿಂದ ವಿಮುಖರಾಗಿರುವುದು ಆಶ್ಚರ್ಯ ತಂದಿದೆ ಎಂದು ಮೆಹಬೂಬಾ ಮುಫ್ತಿ ಅಸಮಾಧಾನ ಹೊರಹಾಕಿದರು.
icon

(4 / 5)

ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಹುಮ್ಮಸ್ಸಿನಲ್ಲಿರುವ ಗುಲಾಂ ನಬಿ ಆಜಾದ್‌ ಆರಂಭದಲ್ಲೇ ಸೋಲೊಪ್ಪಿಕೊಂಡಂತೆ ಕಾಣುತ್ತಿದೆ. ತಮ್ಮ ಪಕ್ಷ ವಿಶೇಷ ಸ್ಥಾನಮಾನದ ಬೇಡಿಕೆ ಇಡಲಿದೆ ಎಂದು ಈ ಹಿಂದೆ ಆಜಾದ್‌ ಹೇಳಿದ್ದರು. ಆದರೆ ಈಗ ಅವರೇ ತಮ್ಮ ಹೇಳಿಕೆಯಿಂದ ವಿಮುಖರಾಗಿರುವುದು ಆಶ್ಚರ್ಯ ತಂದಿದೆ ಎಂದು ಮೆಹಬೂಬಾ ಮುಫ್ತಿ ಅಸಮಾಧಾನ ಹೊರಹಾಕಿದರು.(PTI)

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ದೊರಕಿಸಿಕೊಡುವ ಬಗ್ಗೆ ಮಾತನಾಡಿದ್ದ ಗುಲಾಂ ನಬಿ ಆಜಾದ್‌, ಇದು ಅಸಾಧ್ಯ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ನಿರ್ಧಾರ ಬದಲಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಆಜಾದ್‌ ಅಭಿಪ್ರಾಯಪಟ್ಟಿದ್ದರು. ಆಜಾದ್‌ ಅವರ ಈ ಹೇಳಿಕೆ ಕಣಿವೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
icon

(5 / 5)

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ದೊರಕಿಸಿಕೊಡುವ ಬಗ್ಗೆ ಮಾತನಾಡಿದ್ದ ಗುಲಾಂ ನಬಿ ಆಜಾದ್‌, ಇದು ಅಸಾಧ್ಯ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ನಿರ್ಧಾರ ಬದಲಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಆಜಾದ್‌ ಅಭಿಪ್ರಾಯಪಟ್ಟಿದ್ದರು. ಆಜಾದ್‌ ಅವರ ಈ ಹೇಳಿಕೆ ಕಣಿವೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.(HT)


IPL_Entry_Point

ಇತರ ಗ್ಯಾಲರಿಗಳು