ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dr Bro: ಅಂತೂ ಸಿನಿಮಾ ಕ್ಷೇತ್ರಕ್ಕೆ ಬಂದೇ ಬಿಟ್ರು ಡಾಕ್ಟರ್ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌; ಯಾವುದಾ ಸಿನಿಮಾ? ಇಲ್ಲಿದೆ ಮಾಹಿತಿ

Dr Bro: ಅಂತೂ ಸಿನಿಮಾ ಕ್ಷೇತ್ರಕ್ಕೆ ಬಂದೇ ಬಿಟ್ರು ಡಾಕ್ಟರ್ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌; ಯಾವುದಾ ಸಿನಿಮಾ? ಇಲ್ಲಿದೆ ಮಾಹಿತಿ

  • Dr Bro: ಯೂಟ್ಯೂಬ್‌ನಲ್ಲಿ ತಮ್ಮದೇ ಆದ ವಿಡಿಯೋಗಳ ಮೂಲಕವೇ ರಂಜಿಸುತ್ತ ಮಾಹಿತಿಯ ಹೂರಣವನ್ನೇ ಉಣಬಡಿಸುವ ಡಾ. ಬ್ರೋ (Dr Bro) ಅಲಿಯಾಸ್‌ ಗಗನ್‌ ಶ್ರೀನಿವಾಸ್‌ (Gagan Srinivas), ಇದೀಗ ಸಿನಿಮಾದಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಯಾವುದಾ ಸಿನಿಮಾ ಅಂದ್ರಾ ಇಲ್ಲಿದೆ ನೋಡಿ ಮಾಹಿತಿ.

ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಕನ್ನಡದ ವ್ಲಾಗರ್‌ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್.‌ (Instagram/ Dr Bro)
icon

(1 / 11)

ಗಗನ್‌ ಶ್ರೀನಿವಾಸ್ (Dr Bro). ವಯಸ್ಸು ಈಗಿನ್ನೂ 23. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ ಈ ಡಾಕ್ಟರ್! (Instagram/ Dr Bro)
icon

(2 / 11)

ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಸರಣಿ ವಿಡಿಯೋ ಹಂಚಿಕೊಳ್ಳುತ್ತ, ವಿದೇಶದ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಸಣ್ಣ ಸಣ್ಣ ಕೌತುಕಗಳನ್ನೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. (Instagram/ Dr Bro)
icon

(3 / 11)

ಕರ್ನಾಟಕದ ಯಾವೊಬ್ಬ ವ್ಲಾಗರ್‌ ಹೋಗದ ಸ್ಥಳಗಳಿಗೂ ಹೋಗಿ ಅಲ್ಲಿನ ಅಚ್ಚರಿಗಳನ್ನು ಕರ್ನಾಟಕದ ಜನತೆಗೆ ಉಣಬಡಿಸುತ್ತಿದ್ದಾರೆ ಗಗನ್‌. (Instagram/ Dr Bro)
icon

(4 / 11)

ಆಫ್ರಿಕಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಇಂಡೋನೇಷ್ಯಾ, ಯೂರೋಪ್‌ ಹೀಗೆ 10ಕ್ಕೂ ಹೆಚ್ಚು ದೇಶ ಸುತ್ತಾಡಿದ ಡಾ ಬ್ರೋ ಇತ್ತೀಚೆಗಷ್ಟೇ ಈಜಿಪ್ಟ್‌ಗೂ ತೆರಳಿ ಪಿರಮಿಡ್‌ಗಳ ಬಗ್ಗೆ ನೋಡುಗರಿಗೆ ಮಾಹಿತಿ ನೀಡಿದ್ದರು. (Instagram/ Dr Bro)
icon

(5 / 11)

ಹೀಗೆ ದೇಶ ವಿದೇಶದ ಮಾಹಿತಿಯನ್ನು ಅಂಗೈನಲ್ಲಿಯೇ ಒದಗಿಸುವ ಈ ಹುಡುಗನನ್ನು ವೀಕೆಂಡ್‌ ವಿಥ್‌ ರಮೇಶ್‌ ಶೋನಲ್ಲಿಯೂ ನೋಡಬೇಕೆಂದು ಸಾಕಷ್ಟು ಮಂದಿ ಆಸೆಪಟ್ಟಿದ್ದರು. (Instagram/ Dr Bro)
icon

(6 / 11)

ಜೀ ಕನ್ನಡದ ಸೋಷಿಯಲ್‌ ಮೀಡಿಯಾದಲ್ಲಿಯೂ ಡಾ. ಬ್ರೋ ಅವರನ್ನು ಕರೆಸಿ ಎಂದು ಮನವಿ ಮಾಡಿದ್ದರು. ಸದ್ಯಕ್ಕಿಲ್ಲ, ಮುಂದಿನ ದಿನಗಳಲ್ಲಿ ಆ ಕೆಲಸ ಮಾಡಲಾಗುವುದು ಎಂದು ವಾಹಿನಿ ಹೇಳಿಕೆ ನೀಡಿತ್ತು. (Instagram/ Dr Bro)
icon

(7 / 11)

ಇದೀಗ ಸದ್ದಿಲ್ಲದೆ ಇದೇ ಡಾ ಬ್ರೋ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದಲ್ಲಿ ಡಾ. ಬ್ರೋ ವಿಶೇಷ ಪಾತ್ರದಲ್ಲಿದ್ದಾರೆ. (Instagram/ Dr Bro)
icon

(8 / 11)

ಹಾಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ಅವರು ಕಾಣಿಸುತ್ತಾರಾ? ಇಲ್ಲವಾ? ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ, ಬಿಡುಗಡೆ ಆಗಿರುವ ಟ್ರೇಲರ್‌ಗೆ ಡಾ. ಬ್ರೋ ಧ್ವನಿ ನೀಡಿದ್ದಾರೆ. (Instagram/ Dr Bro)
icon

(9 / 11)

3 ನಿಮಿಷದ ಟ್ರೇಲರ್‌ನಲ್ಲಿ ಆರಂಭದಿಂದ ಕೊನೇ ವರೆಗೂ ಡಾ. ಬ್ರೋ ತಮ್ಮದೇ ಶೈಲಿಯಲ್ಲಿ ಅಬಚೂರಿನ ಕಹಾನಿಯನ್ನು ಹೇಳುತ್ತ ಹೋಗಿದ್ದಾರೆ. (Instagram/ Dr Bro)
icon

(10 / 11)

ಶಶಾಂಕ್‌ ಸೊಗಲ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಡೇರ್‌ ಡೇವಿಲ್‌ ಮುಸ್ತಾಫಾ ಕಥೆಯನ್ನಾಧರಿಸಿದೆ. ಇದೇ ಮೇ 19ರಂದು ಸಿನಿಮಾ ರಿಲೀಸ್‌ ಆಗುತ್ತಿದೆ. (Instagram/ Dr Bro)
icon

(11 / 11)

IPL_Entry_Point

ಇತರ ಗ್ಯಾಲರಿಗಳು