ಮುಂದಿನ ವಾರವೇ ಕೆಂಡಸಂಪಿಗೆ ನಟಿ ಮಾನ್ವಿತಾ ಕಾಮತ್ ಮದುವೆ; ಹೊಸ ಫೋಟೋಗಳನ್ನು ಹಂಚಿಕೊಂಡ್ರು ನೋಡಿ ಟಗರು ಪುಟ್ಟಿ
- ಕನ್ನಡ ನಟಿ ಮಾನ್ವಿತಾ ಕಾಮತ್ ಶುಭವಿವಾಹವು ಇದೇ ಮೇ 1ರಂದು ಮಂಗಳೂರಿನಲ್ಲಿ ನಡೆಯಲಿದೆ. ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಜತೆ ಮಾನ್ವಿತಾ ಮದುವೆ ನಡೆಯಲಿದೆ. ಇದಕ್ಕೂ ಮುನ್ನ ವಿವಿಧ ಬ್ರಾಂಡ್‌ಗಳಿಗಾಗಿ ಮಾನ್ವಿತಾ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.

(1 / 11)
ಟಗರು ಸಿನಿಮಾದ ನಟಿ ಮಾನ್ವಿತಾ ಕಾಮತ್ ಇನ್‌ಸ್ಟಾಗ್ರಾಂನಲ್ಲಿ ಹಲವು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬ್ರಾಂಡ್‌ಗಳಿಗಾಗಿ ಮಾಡೆಲ್ ಆಗಿ ತೆಗೆಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(3 / 11)
ಮ್ಯೂಸಿಕ್ ಪ್ರೊಡ್ಯುಸರ್ ಅರುಣ್ ಕುಮಾರ್ ಜತೆ ಮದುವೆ ನಡೆಯಲಿದೆ. ಇದು ಮಾನ್ವಿತ ಅಮ್ಮ ನೋಡಿದ ಹುಡುಗ. ಕಳೆದ ವರ್ಷ ಮಾನ್ವಿತಾರಿಗೆ ಮಾತೃ ವಿಯೋಗವಾಗಿತ್ತು. ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗುತ್ತಿದ್ದಾರೆ.
(5 / 11)
ಏಪ್ರಿಲ್ 29ರ ಸೋಮವಾರ ಅರಿಶಿನ ಶಾಸ್ತ್ರ ನಡೆಯಲಿದೆ. ಏಪ್ರಿಲ್ 30ರಂದು ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮ ನಡೆಯಲಿದೆ.
(9 / 11)
2018ರಲ್ಲಿ ಟಗರು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಟನೆಯ ಬಳಿಕ ಟಗರು ಪುಟ್ಟಿಯೆಂದು ಫೇಮಸ್ ಆಗಿದ್ದರು.
(10 / 11)
ಇದಾದ ಬಳಿಕ ತಾರಕಾಸುರ ಸಿನಿಮಾದಲ್ಲಿ ಮುತ್ತಮ್ಮ ಆಗಿ ಕಾಣಿಸಿಕೊಂಡರು. ರಿಲಾಕ್ಸ್ ಸತ್ಯ ಸಿನಿಮದಲ್ಲಿ 2019ರಲ್ಲಿ ನಟಿಸಿದರು. 2020ರಲ್ಲಿ ಇಂಡಿಯ ವರ್ಸಸ್ ಇಂಗ್ಲೆಂಡ್ ಮತ್ತು 2022ರಲ್ಲಿ ಶಿವ 143 ಸಿನಿಮಾದಲ್ಲಿ ನಟಿಸಿದರು. ಮಾನ್ವಿತಾ ನಟನೆಯ ರಾಜಸ್ಥಾನ್ ಡೈರೀಸ್ ಮತ್ತು ಹ್ಯಾಪಿಲಿ ಮ್ಯಾರಿಡ್ ಎಂಬ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ.
ಇತರ ಗ್ಯಾಲರಿಗಳು