Dwarakish Family: ದಿವಂಗತ ದ್ವಾರಕೀಶ್‌ಗೆ ಐವರು ಮಕ್ಕಳು; ಸಿನಿಕ್ಷೇತ್ರದಲ್ಲಿರುವ ಯೋಗಿ, ಗಿರಿ ಗೊತ್ತು, ಉಳಿದ ಮೂವರು ಯಾರು?
- ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ನಿಧನರಾಗಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ದ್ವಾರಕೀಶ್ ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಮಾಹಿತಿ ಬಯಸುತ್ತಿದ್ದಾರೆ. ದ್ವಾರಕೀಶ್ ಮಕ್ಕಳು ಯಾರು? ಅವರೆಲ್ಲರೂ ಸಿನಿಮಾದಲ್ಲಿದ್ದಾರ? ಇತ್ಯಾದಿ ವಿವರ ಇಲ್ಲಿದೆ.
- ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ನಿಧನರಾಗಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ದ್ವಾರಕೀಶ್ ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಮಾಹಿತಿ ಬಯಸುತ್ತಿದ್ದಾರೆ. ದ್ವಾರಕೀಶ್ ಮಕ್ಕಳು ಯಾರು? ಅವರೆಲ್ಲರೂ ಸಿನಿಮಾದಲ್ಲಿದ್ದಾರ? ಇತ್ಯಾದಿ ವಿವರ ಇಲ್ಲಿದೆ.
(1 / 9)
ನಟ ದ್ವಾರಕೀಶ್‌ಗೆ ಐವರು ಮಕ್ಕಳು. ಅವರ ಹೆಸರು ಸಂತೋಷ್, ಯೋಗೀಶ್, ಗಿರೀಶ್, ಸುಕೀಶ್, ಅಭಿಲಾಷ್. ಇವರಲ್ಲಿ ಇಬ್ಬರು ಚಿತ್ರರಂಗದ ನಂಟು ಹೊಂದಿದ್ದಾರೆ. ಉಳಿದವರು ಬೇರೆಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
(dwarakishchitra.)(3 / 9)
ಇವರಲ್ಲಿ ಯೋಗೇಶ್ ದ್ವಾರಕೀಶ್ ಅವರು ಬಹುತೇಕರಿಗೆ ಚಿರಪರಿಚಿತ ಹೆಸರು. ಚಾರುಲತಾ ಎಂಬ ಸಿನಿಮಾದ ನಿರ್ಮಾಪಕರಾಗಿದ್ದರು. ಆಯುಷ್ಮಾನ್ ಭವ, ಅಮ್ಮ ಐ ಲವ್ ಯು ಮುಂತಾದ ಸಿನಿಮಾಗಳಿಂದಾಗಿ ಯೋಗೇಶ್ ಬಹುತೇಕರಿಗೆ ಪರಿಚಯ ಇರುವ ಹೆಸರಾಗಿದೆ.
(4 / 9)
ದ್ವಾರಕೀಶ್ ಇನ್ನೊಬ್ಬ ಪುತ್ರ ಗಿರೀಶ್‌ಗೂ ಸಿನಿಮಾ ಕ್ಷೇತ್ರದ ನಂಟಿದೆ. ಮಜ್ನು ಎಂಬ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಗಿರೀಶ್ ಚೆನ್ನೈನಲ್ಲಿದ್ದು, ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
(5 / 9)
ದ್ವಾರಕೀಶ್ ಮತ್ತೊಬ್ಬ ಪುತ್ರ ಅಭಿಲಾಷ್ ಕೂಡ ಹೃದಯ ಕಳ್ಳರು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಯೋಗಿ ಅವರು ತಮ್ಮ ತಂದೆಯ ಪ್ರೊಡಕ್ಷನ್ ಹೌಸ್ ದ್ವಾರಕೀಶ್ ಚಿತ್ರವನ್ನು ನೋಡಿಕೊಳ್ಳುತ್ತಿದ್ದಾರೆ.
(6 / 9)
ಇನ್ನುಳಿದ ಇಬ್ಬರು ಪುತ್ರರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಸಂತೋಷ್ ವಿದೇಶದಲ್ಲಿ ಸೆಟಲ್ ಆಗಿದ್ದಾರೆ.
(8 / 9)
ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು (ಏಪ್ರಿಲ್ 16) ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಇತರ ಗ್ಯಾಲರಿಗಳು