ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vipreet Rajyoga: ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗದಿಂದ ರಾಜಯೋಗ, ಈ 6 ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯುವ ಕಾಲ

Vipreet Rajyoga: ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗದಿಂದ ರಾಜಯೋಗ, ಈ 6 ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯುವ ಕಾಲ

Vipreet Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದೇ ರಾಶಿಯಲ್ಲಿ ಗ್ರಹಗಳು ಸಂಯೋಗವಾಗುವುದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸದ್ಯ ಮೀನ ರಾಶಿಯಲ್ಲಿ ರಾಹು ಮತ್ತು ಶುಕ್ರ ಒಂದಾಗಿದ್ದಾರೆ. ಇದರಿಂದ ವಿಪರೀತ ರಾಜಯೋಗ ಉಂಟಾಗಿದ್ದು, ಇದು ಕೆಲವು ರಾಶಿಯವರ ಬದುಕಿಗೆ ಶುಭವನ್ನುಂಟು ಮಾಡಲಿದೆ. ಆ ರಾಶಿಯವರು ಯಾರು ನೋಡಿ.

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಯೋಗಕ್ಕೆ ವಿಶೇಷ ಮಹತ್ವವಿದೆ. ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಧಿಸಿದಾಗ ಅಪರೂಪ ರಾಜಯೋಗಗಳು ಸಂಭವಿಸುತ್ತವೆ. ಇದು ದ್ವಾದಶ ರಾಶಿಗಳಲ್ಲಿ ಕೆಲವರಿಗೆ ಸಾಕಷ್ಟು ಒಳಿತು ಉಂಟು ಮಾಡುತ್ತದೆ. ಸದ್ಯ ಮೀನರಾಶಿಯಲ್ಲಿ ವಿಪರೀತ ರಾಜಯೋಗ ಉಂಟಾಗಲಿದೆ.
icon

(1 / 10)

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಯೋಗಕ್ಕೆ ವಿಶೇಷ ಮಹತ್ವವಿದೆ. ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಸಂಧಿಸಿದಾಗ ಅಪರೂಪ ರಾಜಯೋಗಗಳು ಸಂಭವಿಸುತ್ತವೆ. ಇದು ದ್ವಾದಶ ರಾಶಿಗಳಲ್ಲಿ ಕೆಲವರಿಗೆ ಸಾಕಷ್ಟು ಒಳಿತು ಉಂಟು ಮಾಡುತ್ತದೆ. ಸದ್ಯ ಮೀನರಾಶಿಯಲ್ಲಿ ವಿಪರೀತ ರಾಜಯೋಗ ಉಂಟಾಗಲಿದೆ.(Photo: Pixabay)

ಮೀನ ರಾಶಿಯಲ್ಲಿ ಈಗಾಗಲೇ ರಾಹು ಇದ್ದಾನೆ. ಈಗ ಶುಕ್ರನೂ ಮೀನ ರಾಶಿಗೆ ಸೇರಿಕೊಂಡಿದ್ದಾನೆ. ಏಪ್ರಿಲ್‌ 23ರವರೆಗೆ ಶುಕ್ರ ಹಾಗೂ ರಾಹುವಿನ ಸಂಯೋಗವಿದೆ. ಇದರಿಂದ ವಿಪರೀತ ರಾಜಯೋಗ ಉಂಟಾಗುತ್ತದೆ. ಇದು 6 ರಾಶಿಯವರ ಬದುಕಿನಲ್ಲಿ ಹಣದ ಮಳೆ ಸುರಿಯುವಂತೆ ಮಾಡಲಿದೆ. 
icon

(2 / 10)

ಮೀನ ರಾಶಿಯಲ್ಲಿ ಈಗಾಗಲೇ ರಾಹು ಇದ್ದಾನೆ. ಈಗ ಶುಕ್ರನೂ ಮೀನ ರಾಶಿಗೆ ಸೇರಿಕೊಂಡಿದ್ದಾನೆ. ಏಪ್ರಿಲ್‌ 23ರವರೆಗೆ ಶುಕ್ರ ಹಾಗೂ ರಾಹುವಿನ ಸಂಯೋಗವಿದೆ. ಇದರಿಂದ ವಿಪರೀತ ರಾಜಯೋಗ ಉಂಟಾಗುತ್ತದೆ. ಇದು 6 ರಾಶಿಯವರ ಬದುಕಿನಲ್ಲಿ ಹಣದ ಮಳೆ ಸುರಿಯುವಂತೆ ಮಾಡಲಿದೆ. (Freepik)

ಮೇಷ ರಾಶಿ: ವಿಪರೀತ ರಾಜಯೋಗದ ಸಂದರ್ಭದಲ್ಲಿ ಮೀನರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಸಿಗಲಿದೆ. ಹಳೆಯ ಹೂಡಿಕೆಯ ಲಾಭ ಈಗ ನಿಮ್ಮದಾಗಲಿದೆ. ಆರೋಗ್ಯ ಸ್ಥಿತಿಯು ಸುಧಾರಿಸುತ್ತದೆ. ಉದ್ಯೋಗ ರಂಗದಲ್ಲೂ ಶುಭವಾಗಲಿದೆ. 
icon

(3 / 10)

ಮೇಷ ರಾಶಿ: ವಿಪರೀತ ರಾಜಯೋಗದ ಸಂದರ್ಭದಲ್ಲಿ ಮೀನರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಸಿಗಲಿದೆ. ಹಳೆಯ ಹೂಡಿಕೆಯ ಲಾಭ ಈಗ ನಿಮ್ಮದಾಗಲಿದೆ. ಆರೋಗ್ಯ ಸ್ಥಿತಿಯು ಸುಧಾರಿಸುತ್ತದೆ. ಉದ್ಯೋಗ ರಂಗದಲ್ಲೂ ಶುಭವಾಗಲಿದೆ. 

ವೃಷಭ ರಾಶಿ: ಈ ರಾಶಿಯವರಿಗೂ ಈ ಕಾಲ ಒಳ್ಳೆಯದು. ಇವರ ಆದಾಯ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಸಂಗಾತಿಯೊಂದಿಗಿನ ಬಾಂಧವ್ಯ ಬಲಗೊಳ್ಳುತ್ತದೆ. 
icon

(4 / 10)

ವೃಷಭ ರಾಶಿ: ಈ ರಾಶಿಯವರಿಗೂ ಈ ಕಾಲ ಒಳ್ಳೆಯದು. ಇವರ ಆದಾಯ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಸಂಗಾತಿಯೊಂದಿಗಿನ ಬಾಂಧವ್ಯ ಬಲಗೊಳ್ಳುತ್ತದೆ. 

ಸಿಂಹರಾಶಿ: ವಿಪರೀತ ರಾಜಯೋಗದ ಸಮಯದಲ್ಲಿ ಸಿಂಹ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭ ಗಳಿಸುವ ಅವಕಾಶಗಳಿವೆ. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಕಚೇರಿಯಲ್ಲಿ ನಿಮ್ಮ ಖ್ಯಾತಿ ವೃದ್ಧಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಸಲಿದ್ದೀರಿ. 
icon

(5 / 10)

ಸಿಂಹರಾಶಿ: ವಿಪರೀತ ರಾಜಯೋಗದ ಸಮಯದಲ್ಲಿ ಸಿಂಹ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭ ಗಳಿಸುವ ಅವಕಾಶಗಳಿವೆ. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಕಚೇರಿಯಲ್ಲಿ ನಿಮ್ಮ ಖ್ಯಾತಿ ವೃದ್ಧಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಸಲಿದ್ದೀರಿ. (Freepik)

ವೃಶ್ಚಿಕ ರಾಶಿ: ವಿಪರೀತ ರಾಜಯೋಗದಿಂದ ವೃಶ್ಚಿಕ ರಾಶಿಯವರಿಗೆ ಶುಭವಾಗಲಿದೆ. ವೃತ್ತಿರಂಗದಲ್ಲಿ ಪ್ರಗತಿ ಕಾಣಲಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸುವ ಸಾಧ್ಯತೆ ಕಾಣುತ್ತಿದೆ. ವ್ಯಾಪಾರ ಮಾಡುವವರಿಗೆ ಸಾಕಷ್ಟು ಲಾಭವಾಗಲಿದೆ. ನೀವು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲಿದ್ದೀರಿ. 
icon

(6 / 10)

ಧನು ರಾಶಿ: ವಿಪರೀತ ರಾಜಯೋಗವು ಧನುರಾಶಿಯವರಿಗೆ ವಾಹನ ಮತ್ತು ಆಸ್ತಿ ಖರೀದಿ ವಿಚಾರದಲ್ಲಿ ಅನುಕೂಲಕರವಾಗಿದೆ. ಸ್ಥಿರಾಸ್ತಿಗಳ ಖರೀದಿ ಮತ್ತು ಪೂರ್ವಜರ ಆಸ್ತಿಯ ಉತ್ತರಾಧಿಕಾರ ಸಿಗಬಹುದು. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಲಿದೆ. 
icon

(7 / 10)

ಧನು ರಾಶಿ: ವಿಪರೀತ ರಾಜಯೋಗವು ಧನುರಾಶಿಯವರಿಗೆ ವಾಹನ ಮತ್ತು ಆಸ್ತಿ ಖರೀದಿ ವಿಚಾರದಲ್ಲಿ ಅನುಕೂಲಕರವಾಗಿದೆ. ಸ್ಥಿರಾಸ್ತಿಗಳ ಖರೀದಿ ಮತ್ತು ಪೂರ್ವಜರ ಆಸ್ತಿಯ ಉತ್ತರಾಧಿಕಾರ ಸಿಗಬಹುದು. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಲಿದೆ. (Freepik)

ಮೀನ ರಾಶಿ: ಈ ರಾಶಿಯಲ್ಲೇ ವಿಪರೀತ ರಾಜಯೋಗ ಉಂಟಾಗುವ ಕಾರಣ ಇವರಿಗೆ ಶುಭವಾಗಲಿದೆ. ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ಹೊಸ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಆಸ್ತಿ ಸಂಪಾದಿಸುವ ಅವಕಾಶವೂ ಇದೆ. 
icon

(8 / 10)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(9 / 10)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(10 / 10)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

IPL_Entry_Point

ಇತರ ಗ್ಯಾಲರಿಗಳು