Nabha Natesh: ಮೂರು ವರ್ಷಗಳ ಬಳಿಕ ಚಿತ್ರರಂಗಕ್ಕೆ ರಾಜಕುಮಾರಿಯಾಗಿ ಮರಳಿದ ನಭಾ ನಟೇಶ್; ಎರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್
ಸುದೀರ್ಘ ಮೂರು ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ ನಟಿ ನಭಾ ನಟೇಶ್. ಅಪಘಾತದ ಬಳಿಕ ನಟನೆಯಿಂದ ದೂರವೇ ಉಳಿದಿದ್ದ ನಭಾ, ಇದೀಗ ಮತ್ತೆ ಎರಡು ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.
(1 / 5)
ಸುದೀರ್ಘ ಮೂರು ವರ್ಷಗಳ ಬಳಿಕ ಟಾಲಿವುಡ್‌ಗೆ ಆಗಮಿಸುತ್ತಿದ್ದಾರೆ ನಟಿ ನಭಾ ನಟೇಶ್. ಬ್ಯಾಕ್ ಟು ಬ್ಯಾಕ್ ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ನಭಾ.
(2 / 5)
ನಿಖಿಲ್ ಸ್ವಯಂಭು ಚಿತ್ರದಲ್ಲಿ ನಭಾ ನಟೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಐತಿಹಾಸಿಕ ಆಕ್ಷನ್ ಚಿತ್ರದಲ್ಲಿ ನಭಾ ನಟೇಶ್ ರಾಜಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
(3 / 5)
ತೆಲುಗಿನಲ್ಲಿ ಡಾರ್ಲಿಂಗ್ ಎಂಬ ರೊಮ್ಯಾಂಟಿಕ್ ಕಾಮಿಡಿ ಚಿತ್ರಕ್ಕೂ ನಭಾ ನಟೇಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ರಿಯದರ್ಶಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಶೀಘ್ರದಲ್ಲೇ ರಿಲೀಸ್ ಆಗಲಿದೆ.
(4 / 5)
ಅಪಘಾತದಲ್ಲಿ ಭುಜಕ್ಕೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ಹಿಂದೆ ಸರಿದಿದ್ದ ನಭಾ, ಇದೀಗ ಚೇತರಿಸಿಕೊಂಡು ಮರಳಿದ್ದಾರೆ.
ಇತರ ಗ್ಯಾಲರಿಗಳು