ಐಪಿಎಲ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಹೈದರಾಬಾದ್; ಟ್ರಾವಿಸ್ ಹೆಡ್-ಅಭಿಷೇಕ್ ಆರ್ಭಟಕ್ಕೆ ಹಲವು ರೆಕಾರ್ಡ್ಸ್ ಛಿದ್ರ
Sunrisers Hyderabad vs Lucknow Super Giants: 17ನೇ ಆವೃತ್ತಿಯ ಐಪಿಎಲ್ನ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋಲಿಗೆ ಕಾರಣರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್, ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.
(1 / 6)
ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ನಡೆಸಿ 9.4 ಓವರ್ಗಳಲ್ಲಿ 166 ರನ್ಗಳನ್ನು ಬೆನ್ನಟ್ಟಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದ್ದಾರೆ. ಕೇವಲ 10 ಎಸೆತಗಳಲ್ಲಿ 160+ ಸ್ಕೋರ್ ಮಾಡಿ ಐಪಿಎಲ್ನಲ್ಲಿ ಹೊಸ ಇತಿಹಾಸವನ್ನೂ ನಿರ್ಮಿಸಿದ್ದಾರೆ.
(2 / 6)
ಅಷ್ಟೆ ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ 10 ಓವರ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ತನ್ನ ದಾಖಲೆಯನ್ನು ತಾನೇ ಮುರಿದಿದೆ. 10 ಓವರ್ಗಳಲ್ಲಿ ಅತ್ಯಧಿಕ ರನ್ ಗಳಿಸಿದ ತಂಡಗಳ ಪೈಕಿ ಹೈದರಾಬಾದ್ ತಂಡವೇ ಅಗ್ರ-3 ಸ್ಥಾನಗಳಲ್ಲಲ್ಲಿದೆ. ಎಲ್ಎಸ್ಜಿ ವಿರುದ್ಧ 9.4 ಓವರ್ಗಳಲ್ಲಿ 167 ರನ್ ಗಳಿಸಿದ್ದ ಎಸ್ಆರ್ಹೆಚ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ಓವರ್ಗಳಲ್ಲಿ 158 ರನ್ ಬಾರಿಸಿತ್ತು.
(3 / 6)
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತ್ತು. ಈ ನಾಲ್ಕು ದಾಖಲೆಗಳು ಸಹ ಇದೇ ಐಪಿಎಲ್ನಲ್ಲಿ ದಾಖಲಾಗಿರುವುದು ವಿಶೇಷ.
(4 / 6)
ಅತ್ಯಧಿಕ ಎಸೆತಗಳನ್ನು ಬಾಕಿ ಉಳಿಸಿದ ದಾಖಲೆಯನ್ನೂ ಎಸ್ಆರ್ಹೆಚ್ ನಿರ್ಮಿಸಿದೆ. ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಇನ್ನೂ 62 ಎಸೆತಗಳನ್ನು ಬಾಕಿ ಉಳಿಸಿದೆ. ಇದಕ್ಕೂ ಮುನ್ನ 2022ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 57 ಎಸೆತಗಳು ಬಾಕಿ ಉಳಿಸಿ ಪಂದ್ಯ ಗೆದ್ದಿತ್ತು. ಈ ದಾಖಲೆಯನ್ನು ಹೈದರಾಬಾದ್ ಮುರಿದಿದೆ.
(5 / 6)
ಲಕ್ನೋ ಪಿಚ್ನಲ್ಲಿ ಸುನಾಮಿ ಸೃಷ್ಟಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ, ಅತಿ ಕಡಿಮೆ ಎಸೆತಗಳಲ್ಲಿ 100 ರನ್ಗಳ ಜೊತೆಯಾಟವಾಡಿದ ದಾಖಲೆಗೂ ಪಾತ್ರವಾದರು. ಕೇವಲ 34 ಎಸೆತಗಳಲ್ಲಿ 100 ರನ್ಗಳ ಪಾಲುದಾರಿಕೆ ನೀಡಿದರು. ಅಗ್ರಸ್ಥಾನದಲ್ಲೂ ಅಭಿಷೇಕ್ ಮತ್ತು ಹೆಡ್ ಜೋಡಿಯೇ ಇದೆ. ಡಿಸಿ ವಿರುದ್ಧ 30 ಎಸೆತಗಳಲ್ಲಿ 100 ರನ್ಗಳ ಜೊತೆಯಾಟವಾಡಿತ್ತು.
(6 / 6)
ಪಂದ್ಯದಲ್ಲಿ ಅಭಿಷೇಕ್ 28 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ 75 ರನ್, ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ ಸಹಾಯದಿಂದ 89 ರನ್ ಬಾರಿಸಿದರು. ಇವರಿಬ್ಬರ ಅಬ್ಬರಕ್ಕೆ ಲಕ್ನೋ ಶರಣಾಯಿತು. ಅಲ್ಲದೆ, ಅಂಕಪಟ್ಟಿಯಲ್ಲಿ ಮೈನಸ್ನಲ್ಲಿದ್ದ ಎಸ್ಆರ್ಹೆಚ್ ಪ್ಲಸ್ ಆಗಿ ಬದಲಾಯಿತು. ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿತು.
ಇತರ ಗ್ಯಾಲರಿಗಳು