ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೌತುಕ ಹೆಚ್ಚಿಸಿದ ಐಪಿಎಲ್ ಪ್ಲೇಆಫ್ ರೇಸ್; ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ಇಲ್ಲಿದೆ 9 ತಂಡಗಳ ಪ್ಲೇಆಫ್​ ಲೆಕ್ಕಾಚಾರ

ಕೌತುಕ ಹೆಚ್ಚಿಸಿದ ಐಪಿಎಲ್ ಪ್ಲೇಆಫ್ ರೇಸ್; ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ಇಲ್ಲಿದೆ 9 ತಂಡಗಳ ಪ್ಲೇಆಫ್​ ಲೆಕ್ಕಾಚಾರ

  • IPL 2024: ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಸುತ್ತಿನ ರೇಸ್​ನಿಂದ ಅಧಿಕೃತವಾಗಿ ಹೊರಬಿತ್ತು. ಹಾಗಾದರೆ ಉಳಿದ 9 ತಂಡಗಳ ಪರಿಸ್ಥಿತಿ ಹೇಗಿದೆ? ಯಾರಿಗೆಷ್ಟು ಅವಕಾಶ ಇದೆ ಎಂಬುದರ ಚಿತ್ರಣ ಇಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ 8 ಗೆಲುವು ಸಾಧಿಸಿದ್ದು 16 ಅಂಕ ಪಡೆದಿದೆ. ಇದರೊಂದಿಗೆ ಪ್ಲೇಆಫ್ ಸನಿಹದಲ್ಲಿದೆ. ಈಗಾಗಲೇ 11 ಪಂದ್ಯಗಳನ್ನು ಆಡಿರುವ ಕೆಕೆಆರ್, ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇಆಫ್​ಗೆ ಲಗ್ಗೆ ಇಡಲಿದೆ. ಆದರೆ, ಎಲ್ಲೂ ಯಾಮಾರಬಾರದು. ಉಳಿದ ಮೂರು ಪಂದ್ಯಗಳಲ್ಲಿ ಸೋತರೆ ಕೊನೆಯಲ್ಲಿ ಎಡವುವ ಸಾಧ್ಯತೆ ಇದೆ. ಏಕೆಂದರೆ ಬೇರೆ ತಂಡಗಳು ಸಹ 16 ಅಂಕ ಪಡೆಯುವ ಅವಕಾಶ ಇನ್ನೂ ಇದೆ.
icon

(1 / 10)

8 ಗೆಲುವು, 16 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಸಹ ಪ್ಲೇಆಫ್ ಪ್ರವೇಶಿಸಲು ಇನ್ನೊಂದು ಗೆಲುವು ಅಗತ್ಯ ಇದೆ. ಆದರೆ, ಉಳಿದ ಮೂರು ಪಂದ್ಯಗಳಲ್ಲಿ ಸೋತರೆ, ಬೇರೆ ತಂಡಗಳಿಗೆ ದಾಟಿ ಮಾಡಿಕೊಟ್ಟಂತೂ ಆಗುತ್ತದೆ. ನಾಲ್ಕು ತಂಡಗಳು ಈ ಸ್ಥಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿವೆ.
icon

(2 / 10)

8 ಗೆಲುವು, 16 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಸಹ ಪ್ಲೇಆಫ್ ಪ್ರವೇಶಿಸಲು ಇನ್ನೊಂದು ಗೆಲುವು ಅಗತ್ಯ ಇದೆ. ಆದರೆ, ಉಳಿದ ಮೂರು ಪಂದ್ಯಗಳಲ್ಲಿ ಸೋತರೆ, ಬೇರೆ ತಂಡಗಳಿಗೆ ದಾಟಿ ಮಾಡಿಕೊಟ್ಟಂತೂ ಆಗುತ್ತದೆ. ನಾಲ್ಕು ತಂಡಗಳು ಈ ಸ್ಥಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿವೆ.(AFP)

ಸನ್‌ರೈಸರ್ಸ್ ಹೈದರಾಬಾದ್ 12 ಪಂದ್ಯಗಳಲ್ಲಿ 14 ಅಂಕ ಹೊಂದಿದೆ ಎಲ್‌ಎಸ್‌ಜಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತಲುಪಿದೆ. ಇನ್ನೊಂದು ಗೆಲುವು ಸಾಧಿಸಿದರೆ ತನ್ನ ಪ್ಲೇಆಫ್​ಗೆ ಬಹುತೇಕ ಅರ್ಹತೆ ಪಡೆಯಲಿದೆ. ಉಳಿದ 2 ಪಂದ್ಯಗಳನ್ನು ಸೋಲಬಾರದು. ಏಕೆಂದರೆ, ಚೆನ್ನೈ, ಲಕ್ನೋ, ಡೆಲ್ಲಿ ತಂಡಗಳಿಗೆ 16 ಅಂಕ ಪಡೆಯುವ ಅವಕಾಶ ಇದೆ.
icon

(3 / 10)

ಸನ್‌ರೈಸರ್ಸ್ ಹೈದರಾಬಾದ್ 12 ಪಂದ್ಯಗಳಲ್ಲಿ 14 ಅಂಕ ಹೊಂದಿದೆ ಎಲ್‌ಎಸ್‌ಜಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತಲುಪಿದೆ. ಇನ್ನೊಂದು ಗೆಲುವು ಸಾಧಿಸಿದರೆ ತನ್ನ ಪ್ಲೇಆಫ್​ಗೆ ಬಹುತೇಕ ಅರ್ಹತೆ ಪಡೆಯಲಿದೆ. ಉಳಿದ 2 ಪಂದ್ಯಗಳನ್ನು ಸೋಲಬಾರದು. ಏಕೆಂದರೆ, ಚೆನ್ನೈ, ಲಕ್ನೋ, ಡೆಲ್ಲಿ ತಂಡಗಳಿಗೆ 16 ಅಂಕ ಪಡೆಯುವ ಅವಕಾಶ ಇದೆ.(ANI)

ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ 12 ಅಂಕಗಳನ್ನು ಹೊಂದಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಿದ್ದು, ಪ್ಲೇಆಫ್​ಗೆ ಅರ್ಹತೆ ಪಡೆಯಲು ಬೂಸ್ಟ್ ನೀಡಿತು. ತನ್ನ ಮುಂದಿನ ಪಂದ್ಯಗಳಲ್ಲಿ ಜಿಟಿ, ಆರ್​ಸಿಬಿ, ಆರ್​ಆರ್​ ವಿರುದ್ಧ ಆಡಲಿದೆ. ಆದರೆ ಜಿಟಿ ವಿರುದ್ಧ ಚೆನ್ನೈ ಜಯ ಸಾಧಿಸಿದರೆ, ಕೆಕೆಆರ್ ಮತ್ತು ಎಲ್​ಎಸ್​ಜಿ ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಇದರ ಲಾಭ ಚೆನ್ನೈ ಸೂಪರ್​ ಕಿಂಗ್ಸ್​ಗೆ ಸಿಗಲಿದೆ. ಒಂದು ವೇಳೆ ಉಳಿದ 3 ಪಂದ್ಯಗಳಲ್ಲಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್​ಗೆ ಬರಲಿದೆ. 
icon

(4 / 10)

12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಪ್ಲೇಆಫ್​ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹುಡುಕಾಟ ನಡೆಸುತ್ತಿದೆ. ಡೆಲ್ಲಿಗೆ ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಎರಡರಲ್ಲೂ ಗೆದ್ದರೆ 16 ಅಂಕ ಪಡೆದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಇದೆ. ಹಾಗಂತ ಖಚಿತೆತೆಯೂ ಇಲ್ಲ. ಎಸ್​ಆರ್​ಹೆಚ್, ಲಕ್ನೋ, ಚೆನ್ನೈ ಎಲ್ಲಾ ಪಂದ್ಯಗಳು ಸೋತರೆ ಡೆಲ್ಲಿಗೆ ಲಾಭವಾಗಲಿದೆ.
icon

(5 / 10)

ಲಕ್ನೋ ಸೂಪರ್ ಜೈಂಟ್ಸ್ 12 ಪಂದ್ಯಗಳಲ್ಲಿ 12 ಅಂಕ ಪಡೆದಿದೆ. ಎಸ್​ಆರ್​ಹೆಚ್​ ವಿರುದ್ಧದ ಸೋಲು ಪ್ಲೇಆಫ್ ಹಾದಿ ದುರ್ಗಮಗೊಳಿಸಿತು. ಬಾಕಿ ಉಳಿದ ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲ್ಲಬೇಕು. ಜತೆಗೆ ಸಿಎಸ್​ಕೆ, ಎಸ್​ಆರ್​ಹೆಚ್ ತನ್ನ ಮುಂದಿನ ಪಂದ್ಯಗಳಲ್ಲಿ ಸೋಲಬೇಕಾಗುತ್ತೆ. ಆಗ ಮಾತ್ರ ಲಕ್ನೋ ಪ್ಲೇಆಫ್ ಪ್ರವೇಶಿಸಲಿದೆ.
icon

(6 / 10)

ಆರ್​ಸಿಬಿ ಅನಿಶ್ಚಿತ ಸ್ಥಿತಿಯಲ್ಲಿದ್ದರೂ ಪ್ಲೇಆಫ್ ಸ್ಥಾನಕ್ಕೆ ಇನ್ನೂ ಸ್ಪರ್ಧಿಯಾಗಿದೆ. ಪ್ರಸ್ತುತ 7ನೇ ಸ್ಥಾನದಲ್ಲಿರುವ ಬೆಂಗಳೂರು 7 ಸೋಲು, 4 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದೆ. ಉಳಿದ 3 ಪಂದ್ಯಗಳಲ್ಲಿ ಗೆದ್ದರೆ 14 ಅಂಕ ಪಡೆಯಲಿದೆ. ಆದರೆ, ಡೆಲ್ಲಿ, ಲಕ್ನೋ, ಸಿಎಸ್​ಕೆ, ಜಿಟಿ 14 ಅಂಕ ದಾಟಬಾರದು. ಒಂದು ವೇಳೆ ಅಷ್ಟೇ ಅಂಕ ಪಡೆದರೂ ನೆಟ್ ರನ್ ರೇಟ್​ ತನಗಿಂತ ಕಡಿಮೆ ಇರಬೇಕು. ಆಗ ಮಾತ್ರ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಸಾಧ್ಯ.
icon

(7 / 10)

11 ಪಂದ್ಯಗಳಲ್ಲಿ 8 ಅಂಕ ಪಡೆದಿರುವ ಪಂಜಾಬ್, ಒಂದು ಪಂದ್ಯ ಸೋತರೂ ಪ್ರಶಸ್ತಿ ರೇಸ್​​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಉಳಿದ ಮೂರು ಗೆಲುವು ಸಾಧಿಸಬೇಕು. ಆರ್​ಸಿಬಿ, ಆರ್​ಆರ್​, ಎಸ್​ಆರ್​ಹೆಚ್ ವಿರುದ್ಧ ಗೆಲ್ಲಲೇಬೇಕು. ಅಲ್ಲದೆ, ಸಿಎಸ್​ಕೆ, ಡೆಲ್ಲಿ, ಲಕ್ನೋ, ಜಿಟಿ 14 ಅಂಕ ದಾಟಬಾರದು. ಆಗ ಮಾತ್ರ ಪಿಬಿಕೆಎಸ್​ಗೆ ಪ್ಲೇಆಫ್​ಗೆ ಅವಕಾಶ ಸಿಗಲಿದೆ. ಆದರೆ ನೆಟ್​ ರನ್ ರೇಟ್ ಅನ್ನೂ ಹೆಚ್ಚಿಸಿಕೊಳ್ಳಬೇಕು.
icon

(8 / 10)

ಮುಂಬೈ ಇಂಡಿಯನ್ಸ್ ಪ್ರಸ್ತುತ 12 ಪಂದ್ಯಗಳಲ್ಲಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆದರೆ, ಎಲ್​ಎಸ್​​ಜಿ ವಿರುದ್ಧ ಎಸ್​​ಆರ್​ಹೆಚ್​ ಜಯ ಸಾಧಿಸಿದ ಕಾರಣ, ಎಂಐ ಪ್ರಶಸ್ತಿ ರೇಸ್​ನಿಂದ ಹೊರಬಿತ್ತು. ಹಾರ್ದಿಕ್ ಪಡೆ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೂ ಗರಿಷ್ಠ 12 ಅಂಕ ಪಡೆಯಬಹುದು. ಆದರೆ ಇದು ಅರ್ಹತೆ ಪಡೆಯಲು ಸಾಧ್ಯವಿಲ್ಲ.
icon

(9 / 10)

ಮುಂಬೈ ಇಂಡಿಯನ್ಸ್ ಪ್ರಸ್ತುತ 12 ಪಂದ್ಯಗಳಲ್ಲಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆದರೆ, ಎಲ್​ಎಸ್​​ಜಿ ವಿರುದ್ಧ ಎಸ್​​ಆರ್​ಹೆಚ್​ ಜಯ ಸಾಧಿಸಿದ ಕಾರಣ, ಎಂಐ ಪ್ರಶಸ್ತಿ ರೇಸ್​ನಿಂದ ಹೊರಬಿತ್ತು. ಹಾರ್ದಿಕ್ ಪಡೆ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೂ ಗರಿಷ್ಠ 12 ಅಂಕ ಪಡೆಯಬಹುದು. ಆದರೆ ಇದು ಅರ್ಹತೆ ಪಡೆಯಲು ಸಾಧ್ಯವಿಲ್ಲ.( AFP)

12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಪ್ಲೇಆಫ್​ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹುಡುಕಾಟ ನಡೆಸುತ್ತಿದೆ. ಡೆಲ್ಲಿಗೆ ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಎರಡರಲ್ಲೂ ಗೆದ್ದರೆ 16 ಅಂಕ ಪಡೆದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಇದೆ. ಹಾಗಂತ ಖಚಿತೆತೆಯೂ ಇಲ್ಲ. ಎಸ್​ಆರ್​ಹೆಚ್, ಲಕ್ನೋ, ಚೆನ್ನೈ ಎಲ್ಲಾ ಪಂದ್ಯಗಳು ಸೋತರೆ ಡೆಲ್ಲಿಗೆ ಲಾಭವಾಗಲಿದೆ.
icon

(10 / 10)

12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಪ್ಲೇಆಫ್​ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹುಡುಕಾಟ ನಡೆಸುತ್ತಿದೆ. ಡೆಲ್ಲಿಗೆ ಎರಡು ಪಂದ್ಯಗಳು ಮಾತ್ರ ಉಳಿದಿದ್ದು, ಎರಡರಲ್ಲೂ ಗೆದ್ದರೆ 16 ಅಂಕ ಪಡೆದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಇದೆ. ಹಾಗಂತ ಖಚಿತೆತೆಯೂ ಇಲ್ಲ. ಎಸ್​ಆರ್​ಹೆಚ್, ಲಕ್ನೋ, ಚೆನ್ನೈ ಎಲ್ಲಾ ಪಂದ್ಯಗಳು ಸೋತರೆ ಡೆಲ್ಲಿಗೆ ಲಾಭವಾಗಲಿದೆ.( ANI)

IPL_Entry_Point

ಇತರ ಗ್ಯಾಲರಿಗಳು