ಕನ್ನಡ ಸುದ್ದಿ  /  ಕ್ರಿಕೆಟ್  /  Rcb Playoff Chances: ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಗೆದ್ದರೆ-ಸೋತರೆ ಏನಾಗಲಿದೆ? ಇಲ್ಲಿದೆ ವಿವರ

RCB Playoff Chances: ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಗೆದ್ದರೆ-ಸೋತರೆ ಏನಾಗಲಿದೆ? ಇಲ್ಲಿದೆ ವಿವರ

RCB Playoff Chances : ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ತಂಡಗಳು ಇಂದು (ಮೇ 9ರ ಗುರುವಾರ) ಮುಖಾಮುಖಿಯಾಗುತ್ತಿವೆ. ಆರ್​ಸಿಬಿ ಗೆದ್ದರೆ ಮತ್ತು ಸೋತರೆ ಮುಂದಿನ ನಡೆ ಏನಿರಲಿದೆ ಎಂಬುದರ ವಿವರ ಇಲ್ಲಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಗೆದ್ದರೆ-ಸೋತರೆ ಏನಾಗಲಿದೆ? ಇಲ್ಲಿದೆ ವಿವರ
ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಗೆದ್ದರೆ-ಸೋತರೆ ಏನಾಗಲಿದೆ? ಇಲ್ಲಿದೆ ವಿವರ

17ನೇ ಸೀಸನ್​ನ ಇಂಡಿಯನ್ ಪ್ರೀಮಿಯರ್ ಲೀಗ್​ (IPL 2024) ಅಂತಿಮ ಹಂತದತ್ತ ಸಾಗುತ್ತಿದೆ. ಎಲ್ಲಾ 10 ತಂಡಗಳು 11 ಅಥವಾ 12 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಮುಂಬೈ ಇಂಡಿಯನ್ಸ್ (Mumbai Indians) ಪ್ಲೇಆಫ್​ನಿಂದ ಅಧಿಕೃತ ಹೊರ ಬಿದ್ದಿದ್ದರೂ ಉಳಿದ 9 ತಂಡಗಳಿಂದ ಪ್ಲೇಆಫ್ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ಈಗಾಗಲೇ ಅಗ್ರ ಎರಡು ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಪ್ಲೇಆಫ್​ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಉಳಿದ ಎರಡು ಸ್ಥಾನಗಳಿಗೆ 7 ತಂಡಗಳ ಮಧ್ಯೆ ಪ್ರಬಲ ಪೈಪೋಟಿ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮೇ 8ರಂದು ನಡೆದ ಎಸ್​ಆರ್​ಹೆಚ್ vs ಎಲ್​ಎಸ್​ಜಿ ನಡುವಿನ ಪಂದ್ಯದ ನಂತರ ಮುಂಬೈ ಟೂರ್ನಿಯಿಂದ ಅಧಿಕೃತವಾಗಿ ಔಟ್ ಆಗಿದೆ. ಇದೀಗ ಇಂದು (ಮೇ 9) ಮತ್ತೊಂದು ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸೋತ ತಂಡವು ಪ್ಲೇಆಫ್​ ರೇಸ್​ನಿಂದ ಹೊರಗುಳಿಯಲಿದೆ. ಆರ್​ಸಿಬಿ ಗೆದ್ದರೆ, ಪ್ಲೇಆಫ್ ಪ್ರವೇಶಿಸಲು ಹೇಗೆಲ್ಲಾ ಅವಕಾಶ ಇದೆ ಎಂಬುದನ್ನು ನೋಡೋಣ.

ಆರ್​ಸಿಬಿ ಮತ್ತು ಪಿಬಿಕೆಎಸ್ ತಲಾ 11 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಅಲ್ಲದೆ, ಸಮಾನಾಗಿ 8 ಅಂಕಗಳನ್ನೂ ಪಡೆದಿದೆ. ಉಭಯ ತಂಡಗಳು ತಲಾ 7 ಸೋಲು, ತಲಾ 4 ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ. ಇಂದು (ಮೇ 9) ಯಾವುದೇ ತಂಡ ಸೋತರೂ 17ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಪಯಣ ಕೊನೆಗೊಳಿಸಲಿದೆ. ಆದರೆ, ಗೆದ್ದ ತಂಡವು ಪ್ಲೇಆಫ್​ ರೇಸ್​​ನಲ್ಲಿ ಉಳಿಯಲಿದೆ. ಆದರೆ ಸೋಲುವ ತಂಡದ ಬಾಗಿಲು ಮುಚ್ಚಲಿದೆ. ಈ ಎರಡು ತಂಡಗಳ ಪೈಕಿ ಒಂದು ತಂಡಕ್ಕೆ ಮಾತ್ರ 14 ಅಂಕ ಪಡೆಯುವ ಅವಕಾಶ ಇದೆ.

ಪ್ರಸ್ತುತ ಆರ್​ಸಿಬಿ ಅಮೋಘ ಲಯದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದಿದೆ. ಇನ್ನೊಂದು ಪಂದ್ಯದಲ್ಲಿ ಕೇವಲ 1 ರನ್ನಿಂದ ಸೋತಿತ್ತು. ಆ ಪಂದ್ಯದಲ್ಲೂ ಆರ್​ಸಿಬಿ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ ಅದಕ್ಕೂ ಹಿಂದಿನ 7 ಪಂದ್ಯಗಳಲ್ಲಿ 6ರಲ್ಲಿ ಸೋತು, 1ರಲ್ಲಿ ಮಾತ್ರ ಗೆದ್ದಿತ್ತು. ಪಂಜಾಬ್ ಕಿಂಗ್ಸ್ ಮತ್ತೆ ಲಯ ಕಳೆದುಕೊಂಡಿದೆ. ಕಳೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿತ್ತು. 8ನೇ ಸ್ಥಾನದಲ್ಲಿರುವ ಪಿಬಿಕೆಎಸ್​, ಲಯಕ್ಕೆ ಮರಳಲು ಸಜ್ಜಾಗಿದೆ. ಎರಡು ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೆ ಮಡಿಯಾಗಿದೆ.

ಮೂರರಷ್ಟಿದೆ ಆರ್​ಸಿಬಿಗೆ ಅವಕಾಶ

ಆರ್​ಸಿಬಿ ಗೆದ್ದರೆ ಪ್ಲೇಆಫ್ ಪ್ರವೇಶಿಸುವ ಶೇಕಡವಾರು ಕೇವಲ 3ರಷ್ಟಿದೆ. ಒಂದು ಇದು ಸಾಧ್ಯವಾಗಬೇಕೆಂದರೆ ಡೆಲ್ಲಿ, ಸಿಎಸ್​ಕೆ, ಲಕ್ನೋ, ಜಿಟಿ ತಂಡಗಳು ಎಲ್ಲಾ ತಂಡಗಳನ್ನು ಸೋಲಬೇಕು. ಆರ್​ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧದ ಜೊತೆಗೆ ಉಳಿದ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಬೇಕು. ಆಗ ಮಾತ್ರ ಇದು ಸಾಧ್ಯವಾಗಲಿದೆ. 

ಆರ್​​ಸಿಬಿ ಪ್ಲೇಯಿಂಗ್ XI

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್​), ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್, ಯಶ್ ದಯಾಳ್ (ಇಂಪ್ಯಾಕ್ಟ್ ಪ್ಲೇಯರ್)

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ರಿಲೀ ರೊಸೋ/ಲಿಯಾಮ್ ಲಿವಿಂಗ್​ಸ್ಟೋನ್, ಅಶುತೋಷ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್), ಸ್ಯಾಮ್ ಕರನ್ (ನಾಯಕ), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

IPL_Entry_Point