Amir on Kohli: ವಿರಾಟ್ ಕೊಹ್ಲಿ ಶತಕದಾಟಕ್ಕೆ ಸಿಕ್ತು ದಿಗ್ಗಜರಿಂದ ಪ್ರಶಂಸೆ; ಒನ್ ಅಂಡ್ ಓನ್ಲಿ ರಿಯಲ್ ಕಿಂಗ್ ಎಂದ ಪಾಕ್ ಮಾಜಿ ಕ್ರಿಕೆಟಿಗ
ಭಾರತದ ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. All rise for the King. ಎಂಥಹ ಅದ್ಭುತ ಇನ್ನಿಂಗ್ಸ್. ಪಂದ್ಯ ವೀಕ್ಷಿಸುವುದೇ ಖುಷಿ ಎಂದು ಯುವಿ ಟ್ವೀಟ್ ಮೂಲಕ ಹೇಳಿದ್ದಾರೆ.
ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಭರ್ಜರಿ ಗೆಲುವು ಸಾಧಿಸಿದೆ. ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಪ್ಲೇ ಆಫ್ (Play off) ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಅವರ ದಾಖಲೆಯ ಶತಕದ ನೆರವಿನಿಂದ ಗೆಲುವು ಸಾಧ್ಯವಾಯಿತು.
ಟ್ರೆಂಡಿಂಗ್ ಸುದ್ದಿ
ಶತಕ ಸಿಡಿಸಿ ಹಲವು ದಾಖಲೆಗಳನ್ನೂ ಮುರಿದಿದ್ದಾರೆ. ಕ್ರಿಸ್ಗೇಲ್ (Chris Gayle) ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾರೆ. 2019ರ ಬಳಿಕ ಸೆಂಚುರಿ ಬರ ನೀಗಿಸಿಕೊಂಡಿರುವ ಕೊಹ್ಲಿ ಮನಮೋಹಕ ಶತಕದಾಟಕ್ಕೆ ದಿಗ್ಗಜರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತ ಮಾತ್ರವಲ್ಲದೆ, ವಿದೇಶಿ ಕ್ರಿಕೆಟಿಗರು ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಂತೆ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಅಮೀರ್ (Mohammed Amir) ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸನ್ರೈಸರ್ಸ್ ಎದುರಿನ ಪಂದ್ಯವು ಆರ್ಸಿಬಿ (RCB) ಪಾಲಿಗೆ ಮಹತ್ವದ್ದಾಗಿತ್ತು. ಪ್ಲೇ ಆಫ್ ದೃಷ್ಟಿಯಿಂದ ಗೆಲ್ಲುವುದು ಕೂಡ ಅನಿವಾರ್ಯವಾಗಿತ್ತು. ಅಂತಹ ಪಂದ್ಯದಲ್ಲಿ ಅಬ್ಬರಿಸಿದ ಕೊಹ್ಲಿ, ಬೌಲರ್ಗಳ ಬೆವರಿಳಿಸಿದರು. 62 ಎಸೆತಗಳಲ್ಲಿ 100 ರ ಗಡಿ ದಾಟಿದರು. ಆ ಮೂಲಕ 4 ವರ್ಷಗಳ ನಂತರ ಬ್ಯಾಟ್ ಅನ್ನು ಮೇಲೆತ್ತಿ ಸಂಭ್ರಮಿಸಿದರು. ಈ ಶತದಾಟಕ್ಕೆ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಗುಣಗಾನ ಮಾಡಿದ್ದಾರೆ.
ಎಂತಹ ಅದ್ಭುತ ಇನ್ನಿಂಗ್ಸ್.. ಒನ್ ಅಂಡ್ ಓನ್ಲಿ ರಿಯಲ್ ಕಿಂಗ್. ವಿರಾಟ್ ಕೊಹ್ಲಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಪ್ರಮುಖ ಕೊಹ್ಲಿ ಆಟವನ್ನು ಗುಣಗಾನ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಇದೊಂದು ಅದ್ಭುತವಾದ ದಿನ. ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ನೈಪುಣ್ಯತೆ, ದೃಢತೆಯನ್ನು ಪ್ರದರ್ಶಿಸಿದ್ದಾರೆ. ಇದು ನಿಜವಾದ ಬ್ಯಾಟಿಂಗ್ ಪ್ರತಿಭೆ. ಹಾಗೆಯೇ ಫಾಫ್ ಡು ಪ್ಲೆಸಿಸ್ ಅವರ ಇನ್ನಿಂಗ್ಸ್ ಕೂಡ ಅಮೋಘವಾಗಿತ್ತು ಎಂದು ಸುರೇಶ್ ರೈನಾ ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.
ಭಾರತದ ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. All rise for the King. ಎಂಥಹ ಅದ್ಭುತ ಇನ್ನಿಂಗ್ಸ್. ಪಂದ್ಯ ವೀಕ್ಷಿಸುವುದೇ ಖುಷಿ ಎಂದು ಯುವಿ ಟ್ವೀಟ್ ಮೂಲಕ ಹೇಳಿದ್ದಾರೆ.
ಇನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕೊಹ್ಲಿಯನ್ನು ಕೊಂಡಾಡಿದ್ದಾರೆ. ಅವರು ಮೊದಲ ಬಾಲ್ನಿಂದಲೇ ಕವರ್ ಡ್ರೈವ್ ಮಾಡಿದಾಗಲೇ ಕೊಹ್ಲಿಗೆ ಇವತ್ತು ವಿಶೇಷ ದಿನ ಆಗಲಿದೆ ಎಂಬುದು ಸ್ಪಷ್ಟವಾಯಿತು. ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಪಂದ್ಯವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡರು. ಭರ್ಜರಿ ಹೊಡೆತ, ಸ್ಟ್ರೈಕ್ ರೊಟೇಟ್, ಜೊತೆಯಾಟದಿಂದ ಉತ್ತಮ ರನ್ ಗಳಿಸಿದರು. ಇಬ್ಬರೂ ಬ್ಯಾಟ್ ಮಾಡಿದ ರೀತಿಗೆ 186 ದೊಡ್ಡ ಮೊತ್ತವಾಗಿರಲಿಲ್ಲ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಹೆನ್ರಿಚ್ ಕ್ಲಾಸೆನ್ 104 ರನ್ ಸಿಡಿಸಿ ಮಿಂಚಿದ್ದರು. ಈ ಗುರಿ ಮಿಂಚಿದ ಆರ್ಸಿಬಿ 19.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಗೆಲುವು ಸಾಧಿಸಿತು. ಕೊಹ್ಲಿ ಶತಕ, ಡು ಪ್ಲೆಸಿಸ್ ಅರ್ಧಶತಕ ಬಾರಿಸಿದರು. ಕೊಹ್ಲಿ ಸೆಂಚುರಿ ಬಾರಿಸುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ.