ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಕೊಹ್ಲಿ-ಅನುಷ್ಕಾರದ್ದು ಬಿಟ್ಟಿರಲಾಗದ ಬಂಧ; ಶತಕ ಬಾರಿಸಿದ ಬಳಿಕ ಪತ್ನಿಗೆ ವಿಡಿಯೋ ಕಾಲ್​ ಮಾಡಿ ಖುಷಿ ಹಂಚಿಕೊಂಡ ವಿರಾಟ್

Virat Kohli: ಕೊಹ್ಲಿ-ಅನುಷ್ಕಾರದ್ದು ಬಿಟ್ಟಿರಲಾಗದ ಬಂಧ; ಶತಕ ಬಾರಿಸಿದ ಬಳಿಕ ಪತ್ನಿಗೆ ವಿಡಿಯೋ ಕಾಲ್​ ಮಾಡಿ ಖುಷಿ ಹಂಚಿಕೊಂಡ ವಿರಾಟ್

Virat Kohli: ಪಂದ್ಯ ಮುಕ್ತಾಯದ ಬೆನ್ನಲ್ಲೇ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮಾರಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್​ ಮಾಡಿ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್​ ಮಾಡಿ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ

16ನೇ ಆವೃತ್ತಿಯ ಐಪಿಎಲ್​ನ (IPL 2023) 65ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ಗೆದ್ದು ಬೀಗಿದೆ. ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ತಂಡವನ್ನು ಸೋಲಿಸುವುದರೊಂದಿಗೆ ಪ್ಲೇ ಆಫ್​ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಆದರೆ ಈ ಮಹತ್ವದ ಪಂದ್ಯದಲ್ಲಿ ಆರ್​​ಸಿಬಿ (RCB) ಗೆದ್ದಿದ್ದಕ್ಕಿಂತ ವಿರಾಟ್​ ಕೊಹ್ಲಿ (Virat Kohli) ಶತಕ ಸಿಡಿಸಿದ್ದೇ ಹೆಚ್ಚು ಸದ್ದು ಮಾಡುತ್ತಿದೆ.

ಗುರುವಾರ ರಾತ್ರಿ (ಮೇ 18) ವಿರಾಟ್​ ಕೊಹ್ಲಿ ಸೆಂಚುರಿ ಬಾರಿಸಿ ಮೆರೆದಾಡಿದ್ದಾರೆ. ಅವರ ಶತಕದ ಬಲದಿಂದ ಆರ್​ಸಿಬಿ, ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಸುಲಭ ಗೆಲುವು ಸಾಧಿಸಲು ಸಾಧ್ಯವಾಯಿತು. ಐಪಿಎಲ್​ನಲ್ಲಿ ವಿರಾಟ್​ ಅವರದ್ದು 6ನೇ ಶತಕ. ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಗೆದ್ದುಕೊಂಡರು. ಪಂದ್ಯ ಮುಕ್ತಾಯದ ಬೆನ್ನಲ್ಲೇ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮಾರಿಗೆ (Anushka Sharma) ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್​​ ಕ್ರಿಕೆಟ್​ ಮೈದಾನದಲ್ಲಿ (Rajiv Gandhi International Stadium, Hyderabad) ನಡೆದ ಈ ಪಂದ್ಯದಲ್ಲಿ ಎಸ್​ಆರ್​​ಎಚ್​ ತಂಡವು ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿತು. ಹೆನ್ರಿಚ್​ ಕ್ಲಾಸೆನ್ ಅವರ 104 ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಈ ಟಾರ್ಗೆಟ್​ ಬೆನ್ನತ್ತಿದ ಆರ್​ಸಿಬಿ​ ಕೊಹ್ಲಿಯ 100, ಡು ಪ್ಲೆಸಿಸ್​ ಅವರ 77 ರನ್​​ಗಳ ನೆರವಿನಿಂದ 19.2 ಓವರ್​ಗಳಲ್ಲಿ 187 ರನ್​ ಗಳಿಸಿ ಜಯಿಸಿತು.

ಟ್ರೆಂಡಿಂಗ್​ ಸುದ್ದಿ

ಪಂದ್ಯದ ಗೆಲುವಿನ ರೂವಾರಿಯಾದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದಕ್ಕಿತು. ಇದರ ಬೆನ್ನಲ್ಲೇ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್​ ಮೂಲಕ ತಮ್ಮ ಖುಷಿ ಹಂಚಿಕೊಂಡರು. ಪ್ರತಿ ಪಂದ್ಯಕ್ಕೂ ಅನುಷ್ಕಾ ಶರ್ಮಾ ಮೈದಾನಕ್ಕೆ ಹಾಜರಿ ಹಾಕುತ್ತಿದ್ದರು. ಆದರೆ, ಈ ಪಂದ್ಯಕ್ಕೆ ಅನಿವಾರ್ಯ ಕಾರಣದಿಂದ ಅವರಿಗೆ ಬರಲು ಹಾಜರಿ ಆಗಿರಲಿಲ್ಲ.

ಹಾಗಾಗಿ ಪಂದ್ಯ ಮುಕ್ತಾಯದ ನಂತರ ಕೊಹ್ಲಿ ವಿಡಿಯೊ ಕಾಲ್​ ಮಾಡಿ ಪಂದ್ಯದಲ್ಲಿ ನಡೆದ ವಿಷಯಗಳ ಕುರಿತು ಪತ್ನಿಯೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರೀತಿ ಎಂದರೆ ಇದು ಎಂದು ಬಗೆ ಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗಂಡನ ಮಹಾ ಸಾಧನೆಗೆ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಕೊಹ್ಲಿಯ ಶತಕದ ಫೋಟೊಗಳನ್ನು ಶೇರ್​ ಮಾಡಿದ್ದು, ಅದ್ಭುತ ಇನಿಂಗ್ಸ್​ ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಅನುಷ್ಕಾ ನನಗೆ ಪ್ರೇರಣೆ

ತಮ್ಮ ಕತ್ತಲೆಯ ಜೀವನದಲ್ಲಿ ಹೊಸ ಬೆಳಕು ಮೂಡಿಸಿದ್ದು ಅನುಷ್ಕಾ ಶರ್ಮಾ ಎಂದು ಕೊಹ್ಲಿ, ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದರು. ಆಕೆ ನನಗೆ ಪತ್ನಿಯಾಗಿ, ತಾಯಿಯಾಗಿ ಮಾಡಿರುವ ತ್ಯಾಗಗಳು ಅಪಾರ. ಆಕೆಯನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಎಷ್ಟೇ ಒತ್ತಡ ಇದ್ದರೂ ಎಲ್ಲವೂ ಮಾಯಾವಾಗುತ್ತದೆ ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು. ನನಗೆ ಆಕೆ ಸ್ಫೂರ್ತಿ, ಪ್ರೇರಣೆ ಎಂದು ಹೇಳಿದ್ದರು.