ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಬಾಕ್ಸಿಂಗ್ ನಲ್ಲಿ ದೇಶಕ್ಕೆ ಮತ್ತೊಂದು ಚಿನ್ನ ತಂದ ನಿಖತ್ ಜರೀನ್‌

CWG 2022: ಬಾಕ್ಸಿಂಗ್ ನಲ್ಲಿ ದೇಶಕ್ಕೆ ಮತ್ತೊಂದು ಚಿನ್ನ ತಂದ ನಿಖತ್ ಜರೀನ್‌

CWG 2022: ತೆಲಂಗಾಣ ಹುಡುಗಿ, ವಿಶ್ವ ಚಾಂಪಿಯನ್‌ ಬಾಕ್ಸರ್ ನಿಖತ್ ಜರೀನ್ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್​ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ನಿಖತ್ ಜರೀನ್
ಕಾಮನ್‌ವೆಲ್ತ್ ಗೇಮ್ಸ್​ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ನಿಖತ್ ಜರೀನ್

ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಲೈಟ್ ಫ್ಲೈವೇಟ್ 48-50 ಕೆಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ನಿಖತ್ ಜರೀನ್, ಐರ್ಲೆಂಡ್‌ ನ ಕಾರ್ಲಿ ನೌಲ್ ಅವರನ್ನು ಮಣಿಸುವ ಮೂಲಕ ಸ್ವರ್ಣ ಪದಕ ಗಳಿಸಿದ್ದಾರೆ. ಇದರೊಂದಿಗೆ ಭಾರತದ ಖಾತೆಗೆ ಜಮೆಯಾದ ಚಿನ್ನದ ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಒಟ್ಟು ಪದಕಗಳ ಸಂಖ್ಯೆ 48ಕ್ಕೆ ತಲುಪಿದೆ.

ಜರೀನ್ ಅವರು ಪದಕ ಗೆಲ್ಲುತ್ತಿದ್ದಂತೆ ತೆಲಂಗಾಣದಲ್ಲಿರುವ ಇವರು ಕುಟುಂಬಸ್ಥರು ಸಂಭ್ರಮಾಚರಣೆ ಮಾಡಿದ್ದಾರೆ.

ನಿಖತ್ ಜರೀನ್ ಈವರೆಗಿನ ಸಾಧನೆ

ಟರ್ಕಿಯಲ್ಲಿ ನಡೆದ 2011 ವಿಶ್ವ ಜೂನಿಯರ್, ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ

2014 ನೇಷನ್ಸ್ ಕಪ್‌ನಲ್ಲಿ ಚಿನ್ನ

2015 ರಾಷ್ಟ್ರೀಯ ಹಿರಿಯ, ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

2018 ಸೆರ್ಬಿಯಾದಲ್ಲಿನ ಬೆಲ್‌ನಲ್ಲಿ ನಡೆದ ಕೂಟದಲ್ಲಿ ಚಿನ್ನ

2019 ಥಾಯ್‌ಲ್ಯಾಂಡ್‌ ಓಪನ್ ನಲ್ಲಿ ರಜತ

2019, 2022ರಲ್ಲಿ ಸ್ಟ್ರಾಂಜಾ ಮೆಮೋರಿಯಲ್‌ನಲ್ಲಿ ಬೆಳ್ಳಿ

2022 ಮೇ ತಿಂಗಳಲ್ಲಿ ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಪದಕ

ಕಾಮನ್‌ವೆಲ್ತ್ ಗೇಮ್ಸ್​ನ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಬಾಕ್ಸಿಂಗ್​ನ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಭಾರತಕ್ಕೆ ಬಾಕ್ಸಿಂಗ್​ನಲ್ಲಿ ಮೂರು ಚಿನ್ನದ ಪದಕಗಳು ಬಂದಿವೆ.

ಈ ಮೊದಲು ಮಹಿಳೆಯರ (45-48 ಕೆಜಿ ವಿಭಾಗ) ಫೈನಲ್ ಪಂದ್ಯದಲ್ಲಿ ನೀತು ಗಂಗಾಸ್ ಚಿನ್ನದ ಗೆದ್ದಿದ್ದರು. ಅಲ್ಲದೇ, ಪುರುಷರ (48-51 ಕೆಜಿ ವಿಭಾಗ) ಬಾಕ್ಸಿಂಗ್​ನಲ್ಲಿ ಅಮಿತ್ ಪಂಗಲ್ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈಗ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಟೇಬಲ್ ಟೆನಿಸ್​ನಲ್ಲಿ ಬೆಳ್ಳಿ: ಟೇಬಲ್‌ ಟೆನಿಸ್​ನ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಬಂದಿದೆ. ಇಂಗ್ಲೆಂಡ್​ನ ಪಾಲ್ ಡ್ರಿಂಕ್ಹಾಲ್ ಮತ್ತು ಲಿಯಾಮ್ ಪಿಚ್​ಫೋರ್ಡ್ ವಿರುದ್ಧ ಭಾರತದ ಎ.ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ 2-3 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್​ನ ಟೇಬಲ್‌ ಟೆನಿಸ್​ನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ.

ವಿಭಾಗ