ಕನ್ನಡ ಸುದ್ದಿ  /  ಕ್ರೀಡೆ  /  Cwg: 22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತ ವಿದಾಯ..

CWG: 22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತ ವಿದಾಯ..

ಕಳೆದ 11 ದಿನಗಳ ಹಿಂದೆ ಆರಂಭಗೊಂಡಿದ್ದ ಕಾಮನ್​​ವೆಲ್ತ್​ ಗೇಮ್ಸ್​​​​ ಇಂದು ಅಂತ್ಯಗೊಂಡಿತು. ಭಾರತ 22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ವಿದಾಯ ಹೇಳಿದೆ.

22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತ ಗುಡ್‌ಬೈ
22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತ ಗುಡ್‌ಬೈ

ಬರ್ಮಿಂಗ್​ಹ್ಯಾಮ್​​: ಜುಲೈ 29 ರಿಂದ ಆರಂಭಗೊಂಡಿದ್ದ ಕಾಮನ್​​ವೆಲ್ತ್​ ಗೇಮ್ಸ್​​​​ ಇಂದು ಅಂತ್ಯಗೊಂಡಿತು. ಕಳೆದ 11 ದಿನಗಳ ಕ್ರೀಡಾ ಕೂಡದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೀಡಾಕೂಟದ ಕೊನೆಯ ದಿನ ಭಾರತದ ಅಥ್ಲೀಟ್ಸ್ ನಾಲ್ಕು ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಇಂಗ್ಲೆಂಡ್​ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಶುರುವಾದ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 61 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತು. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್​ ಮೊದಲ ಬೆಳ್ಳಿ ಪದಕ ಗೆಲ್ಲುವ ಮೂಲಕ ಪದಕಗಳ ಖಾತೆ ತೆರೆದಿದ್ದರು.

55 ಕೆಜಿ ವೇಟ್​ ಲಿಫ್ಟಿಂಗ್​​ನಲ್ಲಿ ಇವರು ಬೆಳ್ಳಿ ಸಾಧನೆ ಮಾಡಿದ್ದರು. ಇದಾದ ಬಳಿಕ ದೇಶದ ಅನೇಕ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರಿ, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಪದಕ ವಿಜೇತರ ಪಟ್ಟಿ ಹೀಗಿದೆ..

ಸಂಕೇತ್​ ಸರ್ಗರ್​: ಬೆಳ್ಳಿ (ವೇಟ್​​ ಲಿಪ್ಟಿಂಗ್​)

ಮೀರಾಬಾಯಿ ಚಾನು: ಚಿನ್ನ(ವೇಟ್‌ ಲಿಫ್ಟಿಂಗ್)

ಜೆರೆಮಿ ಲಾಲ್ರಿನ್ನುಂಗ: ಚಿನ್ನ (ಪುರುಷರ ವೇಟ್‌ಲಿಫ್ಟಿಂಗ್)

ಅಚಿಂತ ಶೆಯುಲಿ: ಚಿನ್ನ(ಪುರುಷರ ವೇಟ್‌ ಲಿಫ್ಟಿಂಗ್)

ಸುಧೀರ್: ಚಿನ್ನ(ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್)

ಪಿ.ವಿ.ಸಿಂಧು: ಚಿನ್ನ(ಬ್ಯಾಡ್ಮಿಂಟನ್​)

ಲಕ್ಷ್ಯಸೇನ್​: ಚಿನ್ನ(ಬ್ಯಾಡ್ಮಿಂಟನ್​)

ಸಾತ್ವಿಕ್​​-ಚಿರಾಗ್: ಚಿನ್ನ ​(ಬ್ಯಾಡ್ಮಿಂಟನ್​​ ಡಬಲ್ಸ್​)

ಬಿಂದ್ಯಾರಾಣಿ: ಬೆಳ್ಳಿ(ಮಹಿಳೆಯರ ವೇಟ್‌ಲಿಫ್ಟಿಂಗ್)

ಸುಶೀಲಾ ಲಿಕ್ಮಾಬಮ್: ಬೆಳ್ಳಿ(ಮಹಿಳೆಯರ ಜುಡೋ)

ಬ್ಯಾಡ್ಮಿಂಟನ್ ಮಿಶ್ರ ತಂಡ: ಬೆಳ್ಳಿ

ತುಲಿಕಾ ಮಾನ್: ಬೆಳ್ಳಿ(ಮಹಿಳೆಯರ ಜೂಡೋ)

ಮುರಳಿ ಶ್ರೀಶಂಕರ್: ಬೆಳ್ಳಿ(ಪುರುಷರ ಲಾಂಗ್ ಜಂಪ್)

ಗುರುರಾಜ ಪೂಜಾರಿ: ಕಂಚು(ಪುರುಷರ ವೇಟ್‌ಲಿಫ್ಟಿಂಗ್)

ವಿಜಯ್ ಕುಮಾರ್ ಯಾದವ್: ಕಂಚು(ಪುರುಷರ ಜೂಡೋ)

ಹರ್ಜಿಂದರ್ ಕೌರ್: ಕಂಚು(ಮಹಿಳೆಯರ ವೇಟ್ ಲಿಫ್ಟಿಂಗ್)

ಲವ್ಪ್ರೀತ್ ಸಿಂಗ್: ಕಂಚು (ಪುರುಷರ ವೇಟ್‌ಲಿಫ್ಟಿಂಗ್)

ಸೌರವ್ ಘೋಸಲ್: ಕಂಚು(ಪುರುಷರ ಸಿಂಗಲ್ಸ್ ಸ್ಕ್ವಾಷ್)

ಗುರುದೀಪ್ ಸಿಂಗ್: ಕಂಚು(ವೇಟ್‌ಲಿಫ್ಟಿಂಗ್)

ತೇಜಸ್ವಿನ್ ಶಂಕರ್: ಕಂಚು(ಪುರುಷರ ಹೈ ಜಂಪ್)

ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಮತ್ತು ದೀಪಕ್ ಪುನಿಯಾ: ಚಿನ್ನ(ಕುಸ್ತಿ)

ಅಂಶು ಮಲಿಕ್: ಬೆಳ್ಳಿ (ಮಹಿಳೆಯರ ಕುಸ್ತಿ)

ದಿವ್ಯಾ ಕಕ್ರಾನ್: ಕಂಚು(ಮಹಿಳೆಯರ ಕುಸ್ತಿ)

ಮೋಹಿತ್ ಗ್ರೆವಾಲ್: ಕಂಚು(ಕುಸ್ತಿ)

ಮಹಿಳಾ ಕ್ರಿಕೆಟ್​​: (ಬೆಳ್ಳಿ ಪದಕ)

ಮಹಿಳೆಯರ ಹಾಕಿ( ಕಂಚಿನ ಪದಕ)

ಪುರುಷರ ಹಾಕಿ( ಬೆಳ್ಳಿ ಪದಕ)

ಲಾನ್ ಬಾಲ್ಸ್​​ ಮಹಿಳಾ ತಂಡ( ಚಿನ್ನದ ಪದಕ)

ಭಾರತವು 12 ಪದಕಗಳನ್ನು ಕುಸ್ತಿಯಲ್ಲಿ ಗೆದ್ದಿದ್ದು, 10 ಪದಕ ವೇಟ್​ ಲಿಫ್ಟಿಂಗ್​ನಲ್ಲಿ ದಕ್ಕಿಸಿಕೊಂಡಿದೆ. ಉಳಿದಂತೆ 7 ಪದಕ ಬಾಕ್ಸಿಂಗ್​ನಲ್ಲಿ ಬಂದಿವೆ. ಟೆಬಲ್​ ಟೆನಿಸ್ ಹಾಗೂ ಬ್ಯಾಡ್ಮಿಂಟನ್​​ನಲ್ಲೂ ದೇಶದ ಅಥ್ಲೀಟ್ಸ್ ಕಮಾಲ್ ಮಾಡಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್ ಹಾಕಿ ಗೆಲ್ಲಬೇಕು ಎಂದುಕೊಂಡಿದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಸೋಲು ಕಂಡಿತ್ತು. ಆಸ್ಟ್ರೇಲಿಯಾ ವಿರುದ್ಧ 7-0 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು.

ಪಂದ್ಯದುದ್ದಕ್ಕೂ ಆಸೀಸ್ ಪ್ರಾಬಲ್ಯ ಮೆರೆದಿತ್ತು. ಭಾರತ ಒಂದೇ ಒಂದು ಗೋಲು ಗಳಿಸದಿರುವುದು ನಿರಾಸೆ ಮೂಡಿಸಿತು. ಆಸ್ಟ್ರೇಲಿಯಾ ಚಿನ್ನ ಗೆದ್ದರೆ, ಭಾರತ ಬೆಳ್ಳಿಗೆ ಸೀಮಿತವಾಯಿತು.

ಇದರೊಂದಿಗೆ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 61 ಪದಕಗಳನ್ನು ಗೆದ್ದಿದೆ. 22 ಚಿನ್ನದ ಪದಕಗಳು, 16 ಬೆಳ್ಳಿ ಪದಕಗಳು ಮತ್ತು 23 ಕಂಚಿನ ಪದಕಗಳಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವರು ಸೇರಿದಂತೆ ಹೀಗೆ ದೇಶದ ಗಣ್ಯರು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತದ ಆಟಗಾರರ ಸಾಧನೆಯನ್ನು ಶ್ಲಾಘಿಸುತ್ತಾ ಭಾರಿ ಬೆಂಬಲ ವ್ಯಕ್ತಪಡಿಸಿದರು.