CWG 2022: ಕಾಮನ್‌ವೆಲ್ತ್‌ನಲ್ಲಿ "ಬಿರುಸಾಗಿ ನಡೆದು" ಬೆಳ್ಳಿ ಪದಕ ತಂದ ಪ್ರಿಯಾಂಕ ಗೋಸ್ವಾಮಿ, ಏನಿದು ರೇಸ್ ವಾಕ್?
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (CWG 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಕ್ರೀಡಾಪಟು ಪ್ರಿಯಾಂಕಾ ಗೋಸ್ವಾಮಿ ಅವರು ಹತ್ತು ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶೇಷವೆಂದರೆ ಕಾಮನ್ವೆಲ್ತ್‌ನಲ್ಲಿ ರೇಸ್ ವಾಕ್ (race walk)ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಇವರು ಪಾತ್ರರಾಗಿದ್ದಾರೆ.
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (CWG 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಕ್ರೀಡಾಪಟು ಪ್ರಿಯಾಂಕಾ ಗೋಸ್ವಾಮಿ ಅವರು ಹತ್ತು ಸಾವಿರ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶೇಷವೆಂದರೆ ಕಾಮನ್ವೆಲ್ತ್‌ನಲ್ಲಿ ರೇಸ್ ವಾಕ್ (race walk)ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಇವರು ಪಾತ್ರರಾಗಿದ್ದಾರೆ. ಪ್ರಿಯಾಂಕ ಗೋಸ್ವಾಮಿ ಅವರು 43:38:82 ಸಮಯದಲ್ಲಿ ತನ್ನ ನಡಿಗೆ ಓಟವನ್ನು ಪೂರ್ಣಗೊಳಿಸಿದ್ದಾರೆ. ಇಂದು ಮುರುಳಿ ಶ್ರೀಶಂಕರ್ (ಲಾಂಗ್ ಜಂಪ್‌ನಲ್ಲಿ ಬೆಳ್ಳಿ) ಮತ್ತು ತೇಜಶ್ವರ ಶಂಕರ್ (ಹೈಜಂಪ್‌ನಲ್ಲಿ ಕಂಚು) ಪದಕ ಗೆದ್ದುಕೊಟ್ಟಿದ್ದಾರೆ.
ರೇಸ್ ವಾಕ್‌ಗೆ ವಿಷಿಲ್ ಒಡೆದ ತಕ್ಷಣ ನಡಿಗೆ ಓಟ ಆರಂಭಿಸಿದ ಪ್ರಿಯಾಂಕ ಬಿರುಸಾಗಿ ಸಾಗಿ ಮೊದಲು ಸುಮಾರು 4 ಕಿ.ಮೀ. ದೂರವನ್ನು ಸಾಗಿದರು. ಇದೇ ರೀತಿ ಇನ್ನೂ ಇಂತಹ ಆರು ರೌಂಡ್‌ಗಳಿದ್ದವು. ಈ ಸಮಯದಲ್ಲಿ ಈಕೆಯನ್ನು ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಮತ್ತು ಕೀನ್ಯಾದ ಇಮಿಲಿ ವಾಮ್ಸಿ ಹಿಂದಿಕಿದ್ದರು. ಎಂಟು ಕಿಲೋಮೀಟರ್ ಮುಗಿಯುತ್ತಿದ್ದಂತೆ ಪ್ರಿಯಾಂಕ ಕಣ್ಣಲ್ಲಿ ಪದಕದ ಕನಸು ಕಾಣತೊಡಗಿತು. ಈ ಸಮಯದಲ್ಲಿ ಬಿರಬಿರನೆ ನಡೆದ ಇವರು ಮೂರನೇ ಸ್ಥಾನಕ್ಕೆ ತಲುಪಿದರು.
ಇನ್ನೇನೂ ಪಂದ್ಯ ಮುಗಿಯಲು ಎರಡು ಕಿ.ಮೀ. ಇದೆ ಎಂದಾದಗ ಪ್ರಿಯಾಂಗ ನಡಿಗೆಯ ವೇಗ ಹೆಚ್ಚಾಗಿ ಎರಡನೇ ಸ್ಥಾನಕ್ಕೆ ತಲುಪಿದರು. ಈ ಮೂಲಕ ಮೊಂಟಾಗ್ ಅವರಿಗೆ ಚಿನ್ನದ ಪದಕ ಸಿಕ್ಕರೆ ಪ್ರಿಯಾಂಕಗೆ ಬೆಳ್ಳಿಯ ಪದಕ ದೊರಕಿದೆ. ಭಾರತಕ್ಕೆ ಕಾಮನ್ ವೆಲ್ತ್‌ನಲ್ಲಿ ರೇಸ್ ವಾಕಿಂಗ್‌ನಲ್ಲಿ ಬೆಳ್ಳಿ ಪದಕ ತಂದುಕೊಟ್ಟ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಇವರು ಪಾತ್ರರಾದರು. ಇದಕ್ಕೂ ಮೊದಲು 2019ರಲ್ಲಿ ರೇಸ್‌ವಾಕ್‌ನಲ್ಲಿ ಹರ್ಮಿಂದರ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದರು.
ಏನಿದು ರೇಸ್ ವಾಕಿಂಗ್? (what is Race Walking?)
ರೇಸ್ ವಾಕಿಂಗ್ ಎಂದರೆ ಸಾಮಾನ್ಯ ಓಟದಂತಲ್ಲ. ಹೇಗೆ ಬೇಕಾದರೆ ಓಡಿದರೂ, ನಡೆದರೂ ಆಗದು. ರೇಸ್ ವಾಕಿಂಗ್‌ಗೆ ತನ್ನದೇ ಆದ ನಿಯಮಗಳಿವೆ. ಒಂದು ನಿರ್ದಿಷ್ಟ ದೂರಕ್ಕೆ ಕ್ರೀಡಾಳುಗಳು ರೇಸ್ ವಾಕ್ ಮಾಡುತ್ತಾರೆ. ಓಟದ ಸಮಯದಲ್ಲಿ ಕೆಲವೊಮ್ಮೆ ಎರಡೂ ಕಾಲು ಗಾಳಿಯಲ್ಲಿ ಇರಬಹುದು. ಆದರೆ, ರೇಸ್ ವಾಕಿಂಗ್‌ನಲ್ಲಿ ಒಂದು ಕಾಲು ಸದಾ ನೆಲದಲ್ಲಿ ಇರಲೇಬೇಕು. ಇದನ್ನು ಬಿರುಸಿನ ನಡಿಗೆ ಎನ್ನಬಹುದು. ರೇಸ್ ಜಡ್ಜ್‌ಗಳು ಪ್ರತಿಯೊಬ್ಬ ಆಟಗಾರರನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತ ಇರುತ್ತಾರೆ. ರೇಸ್ ವಾಕಿಂಗ್ ಸಮಯದಲ್ಲಿ ಯಾವುದೇ ಸಮಯದಲ್ಲಿಯೂ ಆಟಗಾರರ ಎರಡೂ ಕಾಲು ನೆಲದಿಂದ ಮೇಲಕ್ಕೆ ಇರಬಾರದು.
ಕಾಮನ್‌ವೆಲ್ತ್ ಕ್ರೀಡಾಕೂಟದ 8ನೇ ದಿನ ಭಾರತ ಮೇಲುಗೈ ಸಾಧಿಸಿದೆ. ಒಟ್ಟು ಆರು ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ನೆಗೆದಿದೆ. ಇಂದು ಕೂಡಾ ಭಾರತ ಹಲವು ಕ್ರೀಡೆಗಳಲ್ಲಿ ಕಣಕ್ಕಿಳಿಯುತ್ತಿದ್ದು, ಮತ್ತಷ್ಟು ಪದಕಗಳನ್ನು ನಿರೀಕ್ಷಿಸಲಾಗಿದೆ.
ವಿಭಾಗ