ಕನ್ನಡ ಸುದ್ದಿ  /  ಕ್ರೀಡೆ  /  Cwg: ಭಾರತಕ್ಕಿಂದು ಹಲವು ಪದಕ ಖಚಿತ; ಕ್ರಿಕೆಟ್‌ ಮೇಲೆ ಎಲ್ಲರ ಕಣ್ಣು

CWG: ಭಾರತಕ್ಕಿಂದು ಹಲವು ಪದಕ ಖಚಿತ; ಕ್ರಿಕೆಟ್‌ ಮೇಲೆ ಎಲ್ಲರ ಕಣ್ಣು

ಶನಿವಾರ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿದಂತೆ ಒಟ್ಟು ಒಂಬತ್ತು ಪದಕಗಳು ಸಿಕ್ಕಿವೆ. ಅದರಲ್ಲಿ ಐದು ಪದಕಗಳು ಕುಸ್ತಿಯಲ್ಲಿ ಬಂದಿವೆ.

ಪಿ ವಿ ಸಿಂಧು-ಮಹಿಳಾ ಕ್ರಿಕೆಟ್‌ ತಂಡ
ಪಿ ವಿ ಸಿಂಧು-ಮಹಿಳಾ ಕ್ರಿಕೆಟ್‌ ತಂಡ

ಇಂದು ಕಾಮನ್‌ವೆಲ್ತ್‌ ಕ್ರೀಡಾಕೂಟದ 10ನೇ ದಿನ. ಇಂದು ಕೂಡಾ ಭಾರತಕ್ಕೆ ಅಥ್ಲೆಟಿಕ್ಸ್ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ಹಲವು ಪದಕ ಗೆಲ್ಲುವ ಅವಕಾಶಗಳಿವೆ. ಆದರೆ ಹೆಚ್ಚಿನ ಗಮನವು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮೇಲೆ ಕೇಂದ್ರೀಕೃತವಾಗಿದೆ. ಇನ್ನೊಂದೆಡೆ ಸೆಮೀಸ್‌ನಲ್ಲಿ ಸೋತಿರುವ ಹಾಕಿ ಮಹಿಳಾ ತಂಡ, ಕಂಚಿನ ಪದಕಕ್ಕೆ ಕಾದಾಡಲಿದೆ.

10ನೇ ದಿನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್

ಮಧ್ಯಾಹ್ನ 2:45 -ಪುರುಷರ ಟ್ರಿಪಲ್ ಜಂಪ್ ಫೈನಲ್: ಅಬ್ದುಲ್ಲಾ ಅಬೂಬಕರ್, ಎಲ್ದೋಸ್ ಪಾಲ್, ಪ್ರವೀಣ್ ಚಿತ್ರವೆಲ್

ಮಧ್ಯಾಹ್ನ 3:50 -ಪುರುಷರ 10,000 ಮೀಟರ್ ಓಟದ ನಡಿಗೆ ಫೈನಲ್: ಅಮಿತ್, ಸಂದೀಪ್ ಕುಮಾರ್

ಸಂಜೆ 4:05 -ಮಹಿಳೆಯರ ಜಾವೆಲಿನ್ ಥ್ರೋ ಫೈನಲ್: ಶಿಲ್ಪಾ ರಾಣಿ, ಅಣ್ಣು ರಾಣಿ

ಸಂಜೆ 5:24 -ಮಹಿಳೆಯರ 4 x 100 ಮೀಟರ್ ರಿಲೇ ಫೈನಲ್

ಮಧ್ಯರಾತ್ರಿ 12:10 -ಪುರುಷರ ಜಾವೆಲಿನ್ ಥ್ರೋ ಫೈನಲ್: ರೋಹಿತ್ ಯಾದವ್, ಡಿಪಿ ಮನು

ಮಧ್ಯರಾತ್ರಿ 1 ಗಂಟೆ -ಪುರುಷರ 4 x 400 ಮೀಟರ್‌ ರಿಲೇ ಫೈನಲ್

ಬ್ಯಾಡ್ಮಿಂಟನ್

ಮಧ್ಯಾಹ್ನ 2:20 -ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ -ಪಿವಿ ಸಿಂಧು

ಮಧ್ಯಾಹ್ನ 3:10 -ಪುರುಷರ ಸಿಂಗಲ್ಸ್ ಸೆಮಿಫೈನಲ್ 1 -ಲಕ್ಷ್ಯ ಸೇನ್

ಮಧ್ಯಾಹ್ನ 3:10 -ಪುರುಷರ ಸಿಂಗಲ್ಸ್ ಸೆಮಿಫೈನಲ್ 2 -ಕಿಡಂಬಿ ಶ್ರೀಕಾಂತ್

ಬಾಕ್ಸಿಂಗ್

ಮಧ್ಯಾಹ್ನ 3 ಗಂಟೆಗೆ -ಮಹಿಳೆಯರ 48 ಕೆಜಿ ಫೈನಲ್ -ನಿತು

ಮಧ್ಯಾಹ್ನ 3:15 ಕ್ಕೆ -ಪುರುಷರ 51 ಕೆಜಿ ಫೈನಲ್ -ಅಮಿತ್ ಪಂಗಲ್

ರಾತ್ರಿ 7 ಗಂಟೆಗೆ -ಮಹಿಳೆಯರ 50 ಕೆಜಿ ಫೈನಲ್ -ನಿಖತ್ ಜರೀನ್

ಕ್ರಿಕೆಟ್

ರಾತ್ರಿ -9:30 ಮಹಿಳೆಯರ ಟಿ20 ಕ್ರಿಕೆಟ್ ಫೈನಲ್‌ -ಭಾರತ ಮತ್ತು ಆಸ್ಟ್ರೇಲಿಯಾ

ಹಾಕಿ

ಮಧ್ಯಾಹ್ನ 1:30 -ಮಹಿಳೆಯರ ಕಂಚಿನ ಪದಕ ಸ್ಪರ್ಧೆ -ಭಾರತ ಮತ್ತು ನ್ಯೂಜಿಲೆಂಡ್

ಸ್ಕ್ವ್ಯಾಷ್

ರಾತ್ರಿ 10:30 -ಮಿಶ್ರ ಡಬಲ್ಸ್ ಕಂಚಿನ ಪದಕ ಪಂದ್ಯ -ದೀಪಿಕಾ ಪಲ್ಲಿಕಲ್/ ಸೌರವ್ ಘೋಸಲ್

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್

ಮಧ್ಯಾಹ್ನ 3:35 -ಮಹಿಳೆಯರ ಸಿಂಗಲ್ಸ್ ಕಂಚಿನ ಪದಕ ಪಂದ್ಯ -ಶ್ರೀಜಾ ಅಕುಲಾ

ಸಂಜೆ 6:15 -ಪುರುಷರ ಡಬಲ್ಸ್ ಚಿನ್ನದ ಪದಕ ಪಂದ್ಯ ಅಚಂತ ಶರತ್ ಕಮಲ್/ಜಿ ಸತ್ಯನ್

ಪುರುಷರ ಸಿಂಗಲ್ಸ್ ಸೆಮಿಫೈನಲ್ 1 -ಅಚಂತ ಶರತ್ ಕಮಲ್

ಪುರುಷರ ಸಿಂಗಲ್ಸ್ ಸೆಮಿಫೈನಲ್ 2 -ಜಿ ಸತ್ಯನ್

ಮಧ್ಯರಾತ್ರಿ -12:15 ಮಿಶ್ರ ಡಬಲ್ಸ್ ಚಿನ್ನದ ಪದಕ ಪಂದ್ಯ -ಅಚಂತಾ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ

ಭಾರತಕ್ಕಿಂದು ಹಲವು ವಿಭಾಗಗಳಲ್ಲಿ ಕನಿಷ್ಠ ಬೆಳ್ಳಿ ಖಚಿತವಾಗಿದೆ. ಟೇಬಲ್‌ ಟೆನಿಸ್‌ನಲ್ಲಿ ಎರಡು ಪದಕ ಖಚಿತವಾಗಿದೆ. ಬಾಕ್ಸಿಂಗ್‌ನಲ್ಲಿ ಮೂರು ಚಿನ್ನದ ಪದಕ ಪಂದ್ಯ ನಡೆಯುತ್ತಿದೆ. ಮಹಿಳಾ ಕ್ರಿಕೆಟ್‌ ತಂಡ ಕೂಡಾ, ಇಂದು ಕನಿಷ್ಠ ಬೆಳ್ಳಿ ಗೆಲ್ಲಲಿದೆ.

ನಿನ್ನೆಯ ವಿಜೇತರ ವಿವರ

ಶನಿವಾರ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿದಂತೆ ಒಟ್ಟು ಒಂಬತ್ತು ಪದಕಗಳು ಸಿಕ್ಕಿವೆ. ಅದರಲ್ಲಿ ಐದು ಪದಕಗಳು ಕುಸ್ತಿಯಲ್ಲಿ ಬಂದಿದ್ದು, ವಿನೇಶ್ ಫೋಗಟ್, ರವಿಕುಮಾರ್ ದಹಿಯಾ ಮತ್ತು ನವೀನ್ ಚಿನ್ನದ ಪದಕ ಗೆದ್ದಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಅವಿನಾಶ್ ಸೇಬಲ್ ಎರಡನೇ ಸ್ಥಾನ ಗಳಿಸಿದರು. ಪ್ರಿಯಾಂಕಾ ಗೋಸ್ವಾಮಿ ಮಹಿಳೆಯರ 10,000 ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಗೆದ್ದರು. ನಾಲ್ವರು ಪುರುಷರ ಲಾನ್ ಬೌಲ್ಸ್‌ ತಂಡವು ಫೈನಲ್‌ನಲ್ಲಿ ಉತ್ತರ ಐರ್ಲೆಂಡ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು

ವಿಭಾಗ