ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ಭಾರತಕ್ಕೆ ಮತ್ತೆರಡು ಚಿನ್ನ; ಬಾಕ್ಸಿಂಗ್ ನಲ್ಲಿ ಬಂಗಾರ ಗೆದ್ದ ನಿತು, ಅಮಿತ್ ಪಂಗಲ್

CWG 2022: ಭಾರತಕ್ಕೆ ಮತ್ತೆರಡು ಚಿನ್ನ; ಬಾಕ್ಸಿಂಗ್ ನಲ್ಲಿ ಬಂಗಾರ ಗೆದ್ದ ನಿತು, ಅಮಿತ್ ಪಂಗಲ್

ಕಾಮನ್‌ವೆಲ್ತ್ ಗೇಮ್ಸ್2022ರಲ್ಲಿ ಭಾರತಕ್ಕಿಂದು ಮತ್ತೆರಡು ಚಿನ್ನದ ಪದಕಗಳು ಬಂದಿವೆ.

ಕಾಮನ್‌ವೆಲ್ತ್ ಗೇಮ್ಸ್2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ
ಕಾಮನ್‌ವೆಲ್ತ್ ಗೇಮ್ಸ್2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ.

ದೇಶದ ಮತ್ತೊಬ್ಬ ಬಾಕ್ಸರ್ ಅಮಿತ್ ಪಂಗಲ್ ಅವರು 48-51 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್ಡೊನಾಲ್ಡ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನೀತು ಗಂಗಾಸ್ ಚಿನ್ನವನ್ನು ಗೆದ್ದಿದ್ದಾರೆ. ಮಹಿಳೆಯರ ಕನಿಷ್ಠ ತೂಕದ ಫೈನಲ್‌ನಲ್ಲಿ ಡೆಮಿ-ಜೇಡ್ ರೆಸ್ಟನ್ (ಇಎನ್‌ಜಿ) ಅವರನ್ನು ಸೋಲಿಸಿದ್ದಾರೆ.

ಹರಿಯಾಣದ ಬಾಕ್ಸರ್ ನೀತು ಗಂಗಾಸ್​​ ಬಾಕ್ಸರ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಪದಕವನ್ನು ಭಾರತದ ಮುಡಿಗೆ ಹಾಕಿದ್ದಾರೆ. ಮಹಿಳೆಯರ ಕನಿಷ್ಠ ತೂಕ ವಿಭಾಗದ (45-48 ಕೆಜಿ) ಫೈನಲ್ ಪಂದ್ಯದಲ್ಲಿ ನೀತು ಬಾಕ್ಸರ್ ಡೆಮಿ ಜೇಡ್ ರೆಸ್ಟನ್ ಅವರನ್ನು ಸೋಲಿಸಿದ್ದಾರೆ.ಈ ಪಂದ್ಯವನ್ನು ನೀತು ಏಕಪಕ್ಷೀಯವಾಗಿ ಗೆದ್ದಿದ್ದಾರೆ. ಐವರು ತೀರ್ಪುಗಾರರು ಅವಿರೋಧವಾಗಿ ನೀತುಗೆ 5-0 ಅಂತರದ ಜಯವನ್ನು ಘೋಷಿಸಿದ್ದಾರೆ. ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ತೋರಿದ ಅದೇ ಆಕ್ರಮಣಕಾರಿ ಆಟವನ್ನು ಫೈನಲ್ ಪಂದ್ಯದಲ್ಲಿ ಪ್ರದರ್ಶಿಸಿ ಚಿನ್ನ ಮುಡುಗೇರಿಸಿಕೊಂಡರು. ಈ ವೇಳೆ ಇಂಗ್ಲೆಂಡಿನ ಬಾಕ್ಸರ್ ಮೇಲೆ ಪಂಚ್​ಗಳ ಸುರಿಮಳೆಗೈದಿದ್ದಾರೆ.

ಬಾಕ್ಸರ್ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಫ್ಲೈವೇಟ್ (48-51 ಕೆಜಿ) ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮೆಕ್‌ಡೊನಾಲ್ಡ್ ಕೀರನ್ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಪಂಗಲ್ ಅವರು ಈ ಸಾಧನೆ ಮಾಡಿದ್ದಾರೆ.

2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಪಂಗಲ್, ಅಂತಿಮವಾಗಿ ಈ ಬಾರಿ 51 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಪಂಗಲ್​ ಅವರು ಈ ಪದಕ ಪಡೆದ ನಂತರ ಭಾರತಕ್ಕೆ 15ನೇ ಚಿನ್ನವಾಗಿದೆ.ಎಲ್ಲಾ ಮೂರು ಸುತ್ತುಗಳಲ್ಲಿ ಪಂಗಲ್ ಅವರು ಪ್ರತಿರೋಧ ತೋರುವ ಬಾಕ್ಸರ್‌ಗೆ ಮತ್ತೆ ಮರಳುವ ಅವಕಾಶವನ್ನೇ ನೀಡಲಿಲ್ಲ.

ಮೊದಲ ಸುತ್ತಿನಲ್ಲಿ ಐವರು ತೀರ್ಪುಗಾರರು ಪಂಗಲ್‌ಗೆ 10-10 ಅಂಕಗಳನ್ನು ನೀಡಿದರು. ಎರಡನೇ ಸುತ್ತಿನಲ್ಲಿ ಪಂಗಲ್ 5 ರಲ್ಲಿ ನಾಲ್ವರು ತೀರ್ಪುಗಾರರಿಂದ 10 ಅಂಕಗಳನ್ನು ಪಡೆದರೆ, ಮೂರನೇ ಸುತ್ತಿನಲ್ಲಿಯೂ ಪಂಗಲ್ ಅವರಿಗೆ ನಾಲ್ವರು ತೀರ್ಪುಗಾರರು 10 ಅಂಕಗಳನ್ನು ನೀಡಿದರು ಮತ್ತು ಈ ಮೂಲಕ ಭಾರತದ ಬಾಕ್ಸರ್ 5-0 ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ವಿಭಾಗ