ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಪ್ರತಿ ಪಂದ್ಯಕ್ಕೆ ಚಿಯರ್ ಗರ್ಲ್ಸ್​ಗೆ ಸಿಗುವ ವೇತನ ಎಷ್ಟು? ಹೆಚ್ಚು ಸಂಬಳ ನೀಡುವ ತಂಡ ಯಾವುದು? ಅವರ ಆಯ್ಕೆ ಹೇಗೆ?

IPL 2023: ಪ್ರತಿ ಪಂದ್ಯಕ್ಕೆ ಚಿಯರ್ ಗರ್ಲ್ಸ್​ಗೆ ಸಿಗುವ ವೇತನ ಎಷ್ಟು? ಹೆಚ್ಚು ಸಂಬಳ ನೀಡುವ ತಂಡ ಯಾವುದು? ಅವರ ಆಯ್ಕೆ ಹೇಗೆ?

IPL 2023: ಕ್ಯಾಶ್​ ರಿಚ್​ ಲೀಗ್​​​ನಲ್ಲಿ ಚಿಯರ್​ ಗರ್ಲ್ಸ್ (Cheer Girls)​​​ ಪ್ರತಿ ಪಂದ್ಯಕ್ಕೆ ಪಡೆಯುವ ಸಂಬಳ ಎಷ್ಟು ಗೊತ್ತಾ? ಯಾವ ತಂಡವು ಹೆಚ್ಚಿನ ಸಂಭಾವನೆ ನೀಡುತ್ತವೆ? ಅವರಿಗೆ ಸಿಗುವ ಲಾಭಗಳೇನು.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚಿಯರ್​ ಗರ್ಲ್ಸ್
ಚಿಯರ್​ ಗರ್ಲ್ಸ್ (Twitter)

3 ವರ್ಷಗಳ ಬಳಿಕ ಇಂಡಿಯನ್​ ಪ್ರೀಮಿಯರ್ ಲೀಗ್ (Indian Premier League)​ ಅದ್ಧೂರಿ ಆರಂಭ ಪಡೆದುಕೊಂಡಿದೆ. ವಿಶ್ವದ ಬಹು ನಿರೀಕ್ಷಿತ ಮಿಲಿಯನ್​​ ಡಾಲರ್​ ಟೂರ್ನಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಅಭಿಮಾನಿಗಳಲ್ಲೂ ಸಂಭ್ರಮ ಹೆಚ್ಚಾಗುತ್ತಿದೆ. ಪ್ರತಿಯೊಂದು ಪಂದ್ಯದಲ್ಲೂ ಆಟಗಾರರು ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಚರಿತ್ರೆ ಬರೆಯುತ್ತಿದ್ದಾರೆ.

ಹಸಿರು ಅಖಾಡದಲ್ಲಿ ಬ್ಯಾಟ್ಸ್​​​ಮನ್​​ಗಳು ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸುತ್ತಿದ್ದರೆ, ಬೌಲರ್​ಗಳು ವಿಕೆಟ್​​ ಬೇಟೆಯ ಮೂಲಕ ಪಂದ್ಯದ ರೋಚಕತೆಯನ್ನು ಹೆಚ್ಚಿಸುತ್ತಿದ್ದಾರೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಈ ಸಂದರ್ಭದಲ್ಲಿ ಚಿಯರ್​ ಗರ್ಲ್ಸ್ (Cheer Girls) ​​​ಬೌಂಡರಿ, ಸಿಕ್ಸರ್​​, ವಿಕೆಟ್​​​ ಪಡೆಯುವಾಗ ಮಿರಿ ಮಿರಿ ಮಿಂಚುವ ಉಡುಗೆಯಲ್ಲಿ ಆಯಾ ತಂಡಕ್ಕೆ ಚಿಯರ್​​ ಮಾಡುತ್ತಾರೆ.

ಆದರೆ, ಮೈದಾನದಲ್ಲಿ ನರೆದಿರುವ ಸಾವಿರಾರು ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ಮೈಮಾಟವನ್ನು ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸುವ ಈ ಚಿಯರ್ ಗರ್ಲ್ಸ್​​​, ಐಪಿಎಲ್​​ನಲ್ಲಿ ಎಷ್ಟು ಸಂಬಳ ಪಡೆಯುತ್ತಾರೆ ಗೊತ್ತಾ? ಕ್ಯಾಶ್​ ರಿಚ್​ ಲೀಗ್​​​ನಲ್ಲಿ ಚಿಯರ್​ ಗರ್ಲ್ಸ್​​​ ಪ್ರತಿ ಪಂದ್ಯಕ್ಕೆ ಪಡೆಯುವ ಸಂಬಳ ಎಷ್ಟು ಗೊತ್ತಾ? ಯಾವ ತಂಡವು ಹೆಚ್ಚಿನ ಸಂಭಾವನೆ ನೀಡುತ್ತವೆ. ಅವರಿಗೆ ಸಿಗುವ ಲಾಭಗಳೇನು.? ಅದರ ವರದಿ ಇಲ್ಲಿದೆ ನೋಡಿ.

3 ವರ್ಷಗಳಿಂದ ಚಿಯರ್​ ಗರ್ಲ್ಸ್​ಗೆ ಬಿದ್ದಿತ್ತು ಬ್ರೇಕ್​

ಮೂರು ವರ್ಷಗಳಿಂದ ಕೊರೊನಾ ಮಹಾಮಾರಿ ವಕ್ಕರಿಸಿದ್ದ ಕಾರಣ ಬಿಸಿಸಿಐ, ಐಪಿಎಲ್​​​ನ ಎಲ್ಲಾ ಅದ್ಧೂರಿಗಳಿಗೂ ತಡೆ ಹಾಕಿತ್ತು. ಅದರಂತೆ ಅಭಿಮಾನಿಗಳನ್ನು ಹುಚ್ಚೆದ್ದು, ಕುಣಿಯುವಂತೆ ಮಾಡುವ ಚಿಯರ್​​ ಗರ್ಲ್ಸ್​​ ತಂಡಕ್ಕೆ ಬ್ರೇಕ್​ ಹಾಕಿತ್ತು. ಸದ್ಯ ಕೋವಿಡ್​ನಿಂದ ಪ್ರಪಂಚ, ಸಹಜ ಸ್ಥಿತಿಗೆ ತಲುಪಿದೆ. ಅದರಂತೆ, ಶ್ರೀಮಂತ ಲೀಗ್​​ ಅದ್ಧೂರಿಯಾಗಿ ನಡೆಯುತ್ತಿದ್ದು, ತುಂಡುಡುಗೆ ತೊಟ್ಟು ಕುಣಿಯುವ ಚಿಯರ್​ ಗರ್ಲ್ಸ್​ ಜೋಷ್​​​ ಜೋರಾಗಿದೆ. ಸಾವಿರಾರು ಕ್ರೀಡಾ ಪ್ರೇಮಿಗಳನ್ನು ಸೆಳೆಯುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಚಿಯರ್​​ ಗರ್ಲ್ಸ್​​ ನೋಡಲೆಂದೇ ಮೈದಾನಕ್ಕೆ ಬರುತ್ತಾರೆ.

ಮೊದಲು ಪಡೆಯುತ್ತಿದ್ದದ್ದು 3000

ಮಿಲಿಯನ್ ಡಾಲರ್​​​ ಟೂರ್ನಿಯ ವ್ಯವಹಾರ ಜೋರಾಗಿದೆ. ಪ್ರತಿ ಸೀಸನ್​​​ಗೂ ಸಾವಿರಾರು ಕೋಟಿ ದುಡಿಯುತ್ತಿದೆ. ಆದರೆ ಈ ಹಿಂದೆ ಇಷ್ಟೆ ವ್ಯವಹಾರ ನಡೆಯುತ್ತಿರಲಿಲ್ಲ. ಹಾಗಂತ ಲಾಭ ಇರಲಿಲ್ಲ ಎಂದಲ್ಲ. ಅಂದಿನ ಖರ್ಚು ವೆಚ್ಚಗಳಿಗೆ ತಕ್ಕಂತೆ ಆದಾಯ ಬರುತ್ತಿತ್ತು. ಅದರಂತೆ ಚಿಯರ್​ ಗರ್ಲ್ಸ್​​ ತಂಡಕ್ಕೂ, ಕಡಿಮೆ ಮೊತ್ತದ ಸಂಭಾವನೆ ಸಿಗುತ್ತಿತ್ತು. ಆರಂಭದಲ್ಲಿ ಚಿಯರ್​ ಗರ್ಲ್ಸ್​​​ ಪ್ರತಿ ಪಂದ್ಯಕ್ಕೆ ವೇತನ 3 ಸಾವಿರ ಪಡೆಯುತ್ತಿದ್ದರು. ಅಂದು ಮೈದಾನದಲ್ಲಿ ಚಿಯರ್​ ಮಾಡುತ್ತಿದ್ದರು. ಈಗ ಭಾರತೀಯರು ಕಾಣಿಸಿಕೊಳ್ಳುತ್ತಿದ್ದಾರೆ.

ಚಿಯರ್‌ ಗರ್ಲ್ಸ್‌ ವೇತನ ಎಷ್ಟು?

ಕಲರ್​​ಫುಲ್​​ ಲೀಗ್​​​ಗೆ ಚಿಯರ್​​ ಗರ್ಲ್ಸ್​​​ ತಮ್ಮ ನೃತ್ಯದ ಮೂಲಕ ಮತ್ತಷ್ಟು ರಂಗು ತುಂಬುತ್ತಾರೆ. ಪ್ರಸ್ತುತ ನಡೆಯುತ್ತಿರುವ ಅಂದರೆ 16ನೇ ಆವೃತ್ತಿಯ ನಗದು ಸಮೃದ್ಧ ಲೀಗ್​​ನಲ್ಲಿ ಚಿಯರ್​ ಗರ್ಲ್ಸ್​​​​ ಪ್ರತಿ ಪಂದ್ಯಕ್ಕೆ 14 ರಿಂದ 17 ಸಾವಿರ ವೇತನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ತಂಡಗಳು ಹೆಚ್ಚಿನ ಸಂಭಾವನೆಯನ್ನೂ ನೀಡುತ್ತಿವೆ. ಹೆಚ್ಚು ವೇತನ ನೀಡುವ ವಿಚಾರದಲ್ಲಿ ಕೋಲ್ಕತಾ ನೈಟ್​ ರೈಡರ್ಸ್​​, ಮುಂಬೈ ಇಂಡಿಯನ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಗ್ರಸ್ಥಾನದಲ್ಲಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಪಂಜಾಬ್​ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ ರೈಸರ್ಸ್‌ ಹೈದರಾಬಾದ್‌ ತಮ್ಮ ತಂಡಗಳಿಗೆ ಚಿಯರ್‌ ಮಾಡುವ ಗರ್ಲ್ಸ್‌ಗೆ ಪ್ರತಿ ಪಂದ್ಯಕ್ಕೆ 12 ಸಾವಿರ ಸಂಬಳ ನೀಡುತ್ತಿವೆ. ಅದೇ ಕೆಕೆಆರ್​​​​​​​​​ ಪಂದ್ಯಕ್ಕೆ 25 ಸಾವಿರ ವೇತನ ನೀಡುವ ಮೂಲಕ ಹೆಚ್ಚು ಸಂಭಾವನೆ ಪಾವತಿಸುವ ತಂಡವಾಗಿದೆ. ಮುಂಬೈ ಮತ್ತು ಆರ್‌ಸಿಬಿ ತಂಡಗಳು ಪಂದ್ಯಕ್ಕೆ 20 ಸಾವಿರ ನೀಡುತ್ತಿದ್ದಾರೆ.

ಬೋನಸ್​ ಭಾಗ್ಯವೂ ಇದೆ

ಅಷ್ಟೇ ಅಲ್ಲ, ಅದ್ಭುತ, ಬೊಂಬಾಟ್​ ಡ್ಯಾನ್ಸ್‌ ಮೂಲಕ ಗಮನ ಸೆಳೆದರೆ ಅಂತಹವರಿಗೆ ಬೋನಸ್‌ ಭಾಗ್ಯವೂ ಸಿಗಲಿದೆ. ಜೊತೆಗೆ ಗೆದ್ದ ಬಳಿಕ ತಂಡಗಳಿಂದ ಐಷಾರಾಮಿ ಉಡುಗೊರೆಗಳು ಸಹ ಸಿಗಲಿವೆಯಂತೆ. ಲೀಗ್‌ನಲ್ಲಿ ಪ್ರತಿ ತಂಡವೂ 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಚಿಯರ್‌ ಗರ್ಲ್ಸ್‌ ಒಬ್ಬರಿಗೇ ಸುಮಾರು 2 ರಿಂದ 5 ಲಕ್ಷದಷ್ಟು ಸಿಗಲಿದೆ ಎನ್ನಲಾಗಿದೆ. ಸಂಬಳದ ಹೊರತಾಗಿ, ಅವರು ಐಷಾರಾಮಿ ವಸತಿ, ಪ್ರತಿ ದಿನ ಆಹಾರ, ಇತರ ಸೌಲಭ್ಯಗಳಂತಹ ಪ್ರಯೋಜನ ಪಡೆಯುತ್ತಾರೆ.

ಚಿಯರ್​ ಗರ್ಲ್ಸ್​ ನೇಮಕ ಹೇಗೆ?

ಚಿಯರ್​ ಗರ್ಲ್ಸ್​ ಆಗಿ ದುಡ್ಡು ದುಡಿಯುವ ಆಸೆ ಎಷ್ಟೋ ಮಂದಿಗಿದೆ. ಆದರೆ ಅವರ ಆಯ್ಕೆ ಅಷ್ಟು ಸುಲಭವಲ್ಲ. ಅದಕ್ಕೆಂದೇ ಪ್ರತ್ಯೇಕ ಸಂದರ್ಶನಗಳನ್ನೂ ನಡೆಸಲಾಗುತ್ತದೆ. ಅವರ ಸಂಪೂರ್ಣ ಮಾಹಿತಿ ಪರಿಶೀಲಿಸಿದ ನಂತರವೇ ನೇಮಕ ಮಾಡುತ್ತಾರೆ. ನೃತ್ಯ, ಮಾಡೆಲಿಂಗ್​​​​​, ಸಾವಿರು ಜನರ ಮುಂದೆ ಡ್ಯಾನ್ಸ್​ ಮಾಡಿರುವ ಅನುಭವ ಹೊಂದಿರಬೇಕು. ಆಗ ಮಾತ್ರ ಚಿಯರ್ ಗರ್ಲ್ಸ್​ ಆಗಲು ಸಾಧ್ಯ. ಇದಕ್ಕೆ ಆಡಿಷನ್​ ಕೂಡ ಮಾಡಲಾಗುತ್ತದೆ.