Kannada News  /  Sports  /  Pakistan Pacer Sohail Khan Says Rohit Is Far Better Batsman Than Kohli
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (AP)

Pakistan pacer on Rohit: 'ಕೊಹ್ಲಿಗಿಂತ ರೋಹಿತ್ ಉತ್ತಮ ಬ್ಯಾಟ್ಸ್‌ಮನ್'; ಪಾಕ್‌ ವೇಗಿ ಹೇಳಹೊರಟಿದ್ದೇನು?

05 February 2023, 18:04 ISTHT Kannada Desk
05 February 2023, 18:04 IST

“ನಾನು ಕೊಹ್ಲಿಯನ್ನು ಗೌರವಿಸುತ್ತೇನೆ. ಏಕೆಂದರೆ ಅವರು ದೊಡ್ಡ ಬ್ಯಾಟ್ಸ್‌ಮನ್. ಆದರೆ ಒಬ್ಬ ಬೌಲರ್ ಆಗಿ ನೋಡುವುದಾದರೆ, ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ. ಅವರ ತಂತ್ರ ಅದ್ಭುತವಾಗಿದೆ,” ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಈಗಿನ ನಾಯಕ ರೋಹಿತ್ ಶರ್ಮಾ, ಆಧುನಿಕ ಯುಗದ ಕ್ರಿಕೆಟ್‌ನ ಇಬ್ಬರು ದಿಗ್ಗಜ ಆಟಗಾರರು. ಸುದೀರ್ಘ ಅವಧಿಯಿಂದ ಟೀಮ್‌ ಇಂಡಿಯಾದಲ್ಲಿ ಆಡುತ್ತಿರುವ ಇವರ ಬಗ್ಗೆ ತಜ್ಞರು ಮತ್ತು ಅನುಭವಿ ಕ್ರಿಕೆಟಿಗರು ಆಗಾಗ ಚರ್ಚೆ ನಡೆಸುತ್ತಾರೆ. ಅಲ್ಲದೆ ಅಭಿಮಾನಿಗಳ ನಡುವೆ ಹಾಗೂ ಇತರ ದಿಗ್ಗಜರ ನಡುವೆ ಈ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟರ್ ಎಂಬ ಬಗ್ಗೆ ಹಲವು ಬಾರಿ ಚರ್ಚೆಯಾಗಿದೆ. ದಾಖಲೆಗಳನ್ನು ನೋಡಿದರೆ, ಒಂದಲ್ಲಾ ಒಂದು ವಿಚಾರದಲ್ಲಿ ಇಬ್ಬರು ಕೂಡಾ ಶ್ರೇಷ್ಠರೇ. ಆದರೆ, ಈ ನಡುವೆ ಪಾಕಿಸ್ತಾನದ ಅನುಭವಿ ವೇಗದ ಬೌಲರ್ ಸೊಹೈಲ್ ಖಾನ್ ಅವರು ರೋಹಿತ್ ಪರವಹಿಸಿ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿನ 'ನಾದಿರ್ ಅಲಿ ಪಾಡ್‌ಕ್ಯಾಸ್ಟ್' ಶೋನಲ್ಲಿ ಮಾತನಾಡುತ್ತಾ, ಸೊಹೈಲ್ ತಮ್ಮ2015ರ ಭಾರತ ವಿರುದ್ಧದ ವಿಶ್ವಕಪ್ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ಇದು ಭಾರತ ಕ್ರಿಕೆಟ್‌ ತಂಡದ ವಿರುದ್ಧ ಅವರಾಡಿದ ಏಕೈಕ ಪಂದ್ಯ. ಆ ಪಂದ್ಯದಲ್ಲಿ ಅವರು 55 ರನ್‌ಗಳನ್ನು ಬಿಟ್ಟುಕೊಟ್ಟು ಭಾರತದ ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿದ್ದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವೂ ಹೌದು. ಇದೇ ವೇಳೆ ಅವರು ರೋಹಿತ್ ಮತ್ತು ಅವರ ಬ್ಯಾಟಿಂಗ್ ಬಗ್ಗೆ ಗಮನ ಹರಿಸಿ ಅಚ್ಚರಿಗೊಂಡರಂತೆ. ಹೀಗಾಗಿ ರೋಹಿತ್‌ ಶರ್ಮಾ ಶ್ರೇಷ್ಠ ಬ್ಯಾಟರ್‌ ಎಂದು ಅವರು ಪ್ರಶಂಸಿಸಿದ್ದಾರೆ.

ಅವರು ಕೊಹ್ಲಿಯನ್ನು ಕೂಡಾ “ದೊಡ್ಡ ಬ್ಯಾಟ್ಸ್‌ಮನ್” ಎಂದು ಶ್ಲಾಘಿಸಿದರು. ಒಬ್ಬ ಬೌಲರ್ ದೃಷ್ಟಿಕೋನದಿಂದ ರೋಹಿತ್ ಅವರ ಆಟದ ತಂತ್ರವನ್ನು ಮೆಚ್ಚುತ್ತಾರಂತೆ. ಆದ್ದರಿಂದ ಅವರನ್ನು ಉಳಿದವರಿಗಿಂತ ಉತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸುತ್ತಾರಂತೆ.

“ನಾನು ಕೊಹ್ಲಿಯನ್ನು ಗೌರವಿಸುತ್ತೇನೆ. ಏಕೆಂದರೆ ಅವರು ದೊಡ್ಡ ಬ್ಯಾಟ್ಸ್‌ಮನ್. ಆದರೆ ಒಬ್ಬ ಬೌಲರ್ ಆಗಿ ನೋಡುವುದಾದರೆ, ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ. ಅವರ ತಂತ್ರ ಅದ್ಭುತವಾಗಿದೆ. ಅವರು ಚೆಂಡನ್ನು ಬಹಳ ತಡವಾಗಿ ದಂಡಿಸುತ್ತಾರೆ,” ಎಂದು ಹೇಳಿದ್ದಾರೆ.

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್‌ ಇತ್ತೀಚಿಗೆ ಪರದಾಡಿದ ಬಗ್ಗೆ ನಿರೂಪಕ ಕೇಳಿದಾಗ, ಸೊಹೈಲ್‌ ನಿರೂಪಕನ ಬಾಯಿ ಮುಚ್ಚಿಸಿದ್ದಾರೆ. “ಕಳೆದ 10-12 ವರ್ಷಗಳಲ್ಲಿ ಅವರು ಜಾಗತಿಕ ಕ್ರಿಕೆಟ್‌ನಲ್ಲೇ ಪ್ರಾಬಲ್ಯ ಮೆರೆದಿದ್ದಾರೆ” ಎಂದು ಹೇಳಿದ್ದಾರೆ.

2016ರಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನದ ವೇಗದ ಬೌಲರ್ ಬಳಿ, ಕೊಹ್ಲಿಗಿಂತ ರೋಹಿತ್ ಯಾಕೆ ಉತ್ತಮ ಬ್ಯಾಟರ್ ಎಂದು ಕೇಳಲಾಯ್ತು. ಅದಕ್ಕೆ, “ಭಾರತದ ನಾಯಕ ತಮ್ಮ ಬ್ಯಾಟ್‌ನಿಂದ ಸಂಪೂರ್ಣವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ವಿವರಿಸಿದರು. ಇದೇ ವೇಳೆ ಮಾಜಿ ನಾಯಕ ಕೊಹ್ಲಿ ವಿಕೆಟ್‌ಗಳ ನಡುವೆ ಓಡುವ ಮೂಲಕವೂ ರನ್ ಗಳಿಸಲು, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಫಿಟ್‌ನೆಸ್ ಉಳಿಸಿಕೊಂಡಿದ್ದಾರೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

“ಕೊಹ್ಲಿ ತಮ್ಮ ಫಿಟ್ನೆಸ್ ಆಧಾರದ ಮೇಲೆ ರನ್ ಗಳಿಸುತ್ತಾರೆ. ಅವರು ಒಂದು ರನ್ ಗಳಿಸಿದರೆ, ತಕ್ಷಣವೇ ಮುಂದಿನ ರನ್‌ ಗಳಿಸಿಲು ಸಿದ್ಧರಾಗಿರುತ್ತಾರೆ. ಆದರೆ ರೋಹಿತ್ ಹಾಗೆ ಮಾಡುವುದಿಲ್ಲ. ಅವರು ಒಂದು ರನ್ ಗಳಿಸಿದ ಬಳಿಕ ಮುಂದಿನ ರನ್‌ಗೆ ತಕ್ಷಣವೇ ಪ್ರಯತ್ನಿಸುವುದಿಲ್ಲ. ರೋಹಿತ್ ತಮ್ಮ ಬ್ಯಾಟ್‌ನಿಂದ ರನ್‌ ಗಳಿಸುತ್ತಾರೆ. ಆದರೆ ಕೊಹ್ಲಿ ತಮ್ಮ ಬ್ಯಾಟ್‌ನಿಂದ ರನ್‌ ಗಳಿಸುವುದರ ಜೊತೆಗೆ ವಿಕೆಟ್‌ಗಳ ನಡುವೆ ಓಡುವ ಮೂಲಕವೂ ಸ್ಕೋರ್ ಮಾಡುತ್ತಾರೆ. ಅವರ ಫಿಟ್‌ನೆಸ್‌ ಆಟದಲ್ಲಿ ನಿಖರವಾಗಿ ಪ್ರತಿಬಿಂಬಿಸುತ್ತದೆ,” ಎಂದು ಹೇಳಿದ್ದಾರೆ.