health-tips News, health-tips News in kannada, health-tips ಕನ್ನಡದಲ್ಲಿ ಸುದ್ದಿ, health-tips Kannada News – HT Kannada

Latest health tips Photos

ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲದಿದ್ದರೆ ಇದು ಭಾವನಾತ್ಮಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ಋಣಾತ್ಮಕವಾಗಿ ಸ್ಮರಣೆ, ​​ಏಕಾಗ್ರತೆ ಮತ್ತು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಸಮಸ್ಯೆಯು ಖಿನ್ನತೆ, ಬೊಜ್ಜು, ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಸಂತೋಷಕರವಾಗಿ, ಆರಾಮವಾಗಿ ನಿದ್ರಿಸಲು ನೈಸರ್ಗಿಕ ಪರಿಹಾರಗಳಿವೆ. ಇಲ್ಲಿವೆ ನಿಮಗಾಗಿ ಟಿಪ್ಸ್.

ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದೀರಾ: ನಿದ್ರಾಹೀನತೆ ತಡೆಗಟ್ಟಲು ಈ ಟಿಪ್ಸ್ ಫಾಲೋ ಮಾಡಿ

Wednesday, October 9, 2024

ಗಮನಿಸಿ: ಇದು ಕೆಲವು ಮಾಧ್ಯಮಗಳ ವರದಿಯನ್ನು ಆಧರಿಸಿದ ಮಾಹಿತಿಯಾಗಿದ್ದು, ಅಗತ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.

ಪ್ರತಿದಿನ ಈ ಹಣ್ಣುಗಳನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ; ನಿತ್ಯ ಉತ್ಸಾಹ, ರೋಗಗಳಿಂದ ಮುಕ್ತಿ ಪಡೆಯಿರಿ

Sunday, October 6, 2024

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಹಣ್ಣುಗಳು ಮತ್ತು ತರಕಾರಿಗಳನ್ನು ಸಮಾನ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಬೇಕು. ಹಸಿ ಹಣ್ಣುಗಳಂತೆಯೇ ತರಕಾರಿಗಳನ್ನು ತಿನ್ನಬಾರದು. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಅಡುಗೆಯಲ್ಲಿ ಹಾಗೂ ಹಸಿಯಾಗಿ ತಿನ್ನುವ ಮೂಲಕ ಪಡೆಯಬಹುದು. ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಹುದು. ಆದರೆ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Health Tips: ಈ ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ; ಕಾರಣ ಹೀಗಿದೆ

Saturday, October 5, 2024

ಇನ್ನು ಕೆಲವು ಹುಳಿಯಾದ ರಸ ಹೊಂದಿರುವ ಆಹಾರ, ಉದಾಹರಣೆಗೆ ಟೊಮೆಟೊ ಬಾತ್‌, ಚಿತ್ರಾನ್ನ ಅಥವಾ ಹುಣಸೆ ಹಣ್ಣು ಉಪಯೋಗಿಸಿದ ಪದಾರ್ಥ ಇವುಗಳನ್ನು ಅಲ್ಯೂಮಿನಿಯಂ ಪೇಪರ್‌ನಿಂದ ಪ್ಯಾಕ್ ಮಾಡಬೇಡಿ. ಇದರಲ್ಲಿರುವ ಹುಳಿ ಅಂಶ ಅಲ್ಯೂಮಿನಿಯಂ ಪೇಪರ್‌ನೊಂದಿಗೆ ಸೇರಿ ವಿಷಕಾರಿಯಾಗಬಹುದು.

ಅಡುಗೆ ಮನೆಯಲ್ಲಿ ಚಪಾತಿ ರೋಲ್ ಮಾಡಲು ಅಥವಾ ಇನ್ಯಾವುದಕ್ಕಾದರೂ ಅಲ್ಯೂಮಿನಿಯಂ ಪೇಪರ್ ಯೂಸ್‌ ಮಾಡ್ತೀರಾ? ಮೊದಲು ಇದನ್ನು ತಿಳಿದುಕೊಳ್ಳಿ

Wednesday, October 2, 2024

ಮನೆ, ಕಚೇರಿ ಅಥವಾ ಸಾರ್ವಜನಿಕ ಸ್ಥಳ ಎಲ್ಲೇ ಆಗಿರಲಿ ಕೆಲವು ಸಂದರ್ಭಗಳಲ್ಲಿ ನಾವು ಮಲ, ಮೂತ್ರ ವಿಸರ್ಜನೆ ಮಾಡದೇ ತಡೆದಿಟ್ಟುಕೊಳ್ಳುತ್ತೇವೆ. ನೀವೂ ಈ ಸಾಲಿಗೆ ಸೇರುವವರಾದ್ರೆ ನಿಮಗೆ ತಿಳಿಯದಂತೆ ನೀವು ಹಲವಾರು ರೋಗಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವವರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ದೀರ್ಘಕಾಲದವರೆಗೆ ಮಲ ವಿಸರ್ಜನೆ ಮಾಡದೇ ತಡೆದುಕೊಂಡಿರುತ್ತೀರಾ, ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ

Tuesday, October 1, 2024

ಭಕ್ಷ್ಯಗಳನ್ನು ಅದರ ಸುವಾಸನೆಯ ರುಚಿಯೊಂದಿಗೆ ಹೆಚ್ಚಿಸುವುದರಿಂದ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವವರೆಗೆ, ಕೊತ್ತಂಬರಿಯು ಬಹುಮುಖ, ಪೌಷ್ಟಿಕಾಂಶಭರಿತವಾಗಿದೆ. ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ.

ಕೊತ್ತಂಬರಿ ಸೊಪ್ಪು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ: ಏನೆಲ್ಲಾ ಉಪಯೋಗ ಇದೆ- ಇಲ್ಲಿದೆ ಮಾಹಿತಿ

Tuesday, October 1, 2024

ಬ್ರೊಮಿಡ್ರಾಸಿಸ್ ಎಂಬುದು ದುರ್ವಾಸನೆಯಿಂದ ಕೂಡಿದ ರೋಗವಾಗಿದೆ. ಬೆವರುವಿಕೆಯು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಇದರೊಂದಿಗೆ ಬ್ಯಾಕ್ಟೀರಿಯಾಗಳು ಸೇರಿದಾಗ ದೇಹದ ದುರ್ಗಂಧ ಹೆಚ್ಚುತ್ತದೆ.

Sweating Problem: ವಿಪರೀತವಾಗಿ ಬೆವರುವುದು ಹೈಪರ್ ಹೈಡ್ರೋಸಿಸ್ ಲಕ್ಷಣ ಇರಬಹುದು... ವೈದ್ಯರ ಸಲಹೆ ಪಡೆಯಲೇಬೇಕು...!

Monday, September 30, 2024

ಎಲ್ಲವೂ ಬೇಗ ಆಗಬೇಕು ಎನ್ನುವಂತಹ ವೇಗದ ದುನಿಯಾದಲ್ಲಿ ಶರೀರಕ್ಕೆ ಅಗತ್ಯ ಪೌಷ್ಟಿಕಾಂಶ ಒದಗಿಸುವುದೇ ದೊಡ್ಡ ಸವಾಲು. ಇದಕ್ಕೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳ ಪ್ರೋಟೀನ್ ಪೌಡರ್‌ಗಳು ಲಭ್ಯ ಇವೆ. ಆದರೆ ಮನೆಯಲ್ಲೇ ಇದನ್ನು ತಯಾರಿಸಿ ಉಪಯೋಗಿಸಿದರೆ ಜೇಬಿಗಷ್ಟೇ ಅಲ್ಲ ಆರೋಗ್ಯಕ್ಕೂ ಕ್ಷೇಮ. ನಿಮಗೆ ಬೇಕಾದಂತೆ ನಿಮ್ಮ ಜೀವನಶೈಲಿಗೆ ಅನುಗುಣವಾದ ಸುವಾಸನೆಯುಕ್ತ ಪೌಷ್ಟಿಕಾಂಶದ ಪುಡಿ (ಪ್ರೋಟೀನ್‌ ಪೌಡರ್) ನೀವೇ ತಯಾರಿಸಿ. ಇಲ್ಲಿದೆ ಸುಲಭ ರೆಸಿಪಿ.

ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ

Monday, September 30, 2024

ಕಾಯಿಸಿದ ಹಾಲು ಚೆನ್ನಾಗಿ ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಮೊಸರು ಸೇರಿಸಬೇಕು. ಸಾಮಾನ್ಯವಾಗಿ 1 ಲೀಟರ್ ಹಾಲಿಗೆ ಒಂದು ಚಟಮ ಮೊಸರನ್ನು ಸೇರಿಸಲಾಗುತ್ತೆ

ಮನೆಯಲ್ಲಿ ಸವಿರುಚಿ ಮೊಸರು ಮಾಡೋಕೆ ಆಗುತ್ತಿಲ್ವಾ? ನಿಮಗೆ ಸಹಾಯ ಮಾಡಬಹುದಾದ 6 ಟಿಪ್ಸ್ ಇಲ್ಲಿವೆ

Sunday, September 29, 2024

ಹದಗೆಟ್ಟ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಸಮಸ್ಯೆಗಳಲ್ಲಿ ಒಂದು ಹಾರ್ಮೋನ್ ಅಸಮತೋಲನ. ಹಾರ್ಮೋನುಗಳು ಅಸಮತೋಲನಗೊಂಡಾಗ, ದೇಹದ ಕಾರ್ಯಚಟುವಟಿಕೆಯು ಪ್ರತಿಕೂಲ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹಾರ್ಮೋನ್ ಅಸಮತೋಲನ ಎಂದರೇನು, ಅದರ ಲಕ್ಷಣಗಳು ಮತ್ತು ಅದನ್ನು ನಿಯಂತ್ರಿಸಲು ಯಾವ ಆಹಾರ ಆಹಾರಗಳನ್ನು ಸೇವಿಸಬಾರದು ಎಂಬ ವಿವರ ಇಲ್ಲಿದೆ.

ಹಾರ್ಮೋನ್‌ ಅಸಮತೋಲನಕ್ಕೆ ಕಾರಣವಾಗುವ 5 ಆಹಾರಗಳಿವು, ಇವುಗಳ ಸೇವನೆಗೆ ಇಂದೇ ಗುಡ್‌ಬೈ ಹೇಳಿ

Sunday, September 29, 2024

ಕರಿಬೇವಿನ ಎಲೆಗಳು ಕೇವಲ ಸುವಾಸನೆ ಹಾಗೂ ರುಚಿಯಷ್ಟೇ ಅಲ್ಲ ಹಲವು ಆರೋಗ್ಯ ಪ್ರಯೋಜನಗಳಿವೆ. ಹಸಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ

ಕರಿಬೇವಿನ ಆರೋಗ್ಯ ಗುಟ್ಟು ತಿಳಿದರೆ ನೀವು ತಿನ್ನುವುದನ್ನು ನಿಲ್ಲಿಸೋದಿಲ್ಲ; ಇಷ್ಟೊಂದು ಲಾಭಗಳಿವೆ

Sunday, September 29, 2024

ಒತ್ತಡದ ಬದುಕಿನಲ್ಲಿ ಕಳೆದು ಹೋಗುವುದರ ಜೊತೆಗೆ ನಿಮ್ಮ ಹೃದಯದ ಕಾಳಜಿಗೂ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ಒಮ್ಮೆ ಪರೀಕ್ಷೆ ಮಾಡಿಸಿ.

World Heart Day: ಹೃದಯದ ಬಗ್ಗೆ ಕಾಳಜಿ ಇರಲಿ, ನನಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸದ ಜೊತೆಗೆ ಹೃದಯದ ಪರೀಕ್ಷೆಯನ್ನೂ ಮಾಡಿಸಿ

Friday, September 27, 2024

ಮಧುಮೇಹವು ಜೀವನಶೈಲಿಗೆ ಸಂಬಂಧಿತ ಕಾಯಿಲೆಯಾಗಿದ್ದು, ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಕೊರತೆಯಿಂದ ಅಥವಾ ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ದೇಹವು ಅಸಮರ್ಥವಾದಾಗ ಉಂಟಾಗುತ್ತದೆ. ಮಧುಮೇಹಿಗಳಲ್ಲಿ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯು ಹೃದಯಾಘಾತ, ಪಾರ್ಶ್ವವಾಯು ಮತ್ತು ಕಾಲುಗಳಲ್ಲಿ ರಕ್ತದ ಹರಿವು ಕಡಿಮೆಯಾಗುವಂತಹ ಸಮಸ್ಯೆಗಳನ್ನು ಎದುರಿಸಬಹುದು.

ಈ 5 ಆಹಾರಗಳು ಮಧುಮೇಹಿಗಳಿಗೆ ವರದಾನ, ಸಕ್ಕರೆ ಕಾಯಿಲೆ ಇರುವವರು ಭಯವಿಲ್ಲದೇ ತಿನ್ನಬಹುದು

Thursday, September 26, 2024

ಮಧುಮೇಹ ಅಥವಾ ಸಕ್ಕರೆಕಾಯಿಲೆ ಅಧಿಕವಾಗಿರುವವರಿಗೆ ಅನೇಕ ಸಮಸ್ಯೆಗಳು ಜತೆಯಾಗುತ್ತವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳನ್ನೂ ಮಧುಮೇಹ ಉಂಟುಮಾಡುತ್ತದೆ. ಅತ್ಯಧಿಕ ಮಧುಮೇಹವು ರಕ್ತನಾಳಗಳಿಗೆ, ದೇಹದ ನರವ್ಯವಸ್ಥೆಗಳಿಗೆ ಮಾತ್ರವಲ್ಲದೆ ಗುಪ್ತಾಂಗಗಳಿಗೂ ತೊಂದರೆ ಉಂಟುಮಾಡುತ್ತದೆ. ಸುಮಧುರ ದಾಂಪತ್ಯಕ್ಕೆ ಮಧುಮೇಹದಿಂದ ಆಗುವ ತೊಂದರೆಗಳ ವಿವರ ಇಲ್ಲಿದೆ.

ಮಧುಮೇಹದಿಂದ ಸುಮಧುರ ದಾಂಪತ್ಯಕ್ಕೂ ಕಂಟಕ: ನಿಮಿರು ದೌರ್ಬಲ್ಯದಿಂದ ಯೋನಿ ಶುಷ್ಕತೆಯವರೆಗೆ ಸಕ್ಕರೆ ಕಾಯಿಲೆ ತಂದೊಡ್ಡುವ 6 ಲೈಂಗಿಕ ಸಮಸ್ಯೆಗಳಿವು

Tuesday, September 24, 2024

ಬಾಲಿವುಡ್ ಬೆಡಗಿಯರಲ್ಲಿ ತನ್ನ ವಿಚಿತ್ರ ವೇಷಭೂಷಣಗಳ ಮೂಲಕ ಹೆಸರು ಗಳಿಸಿದವರು ನಟಿ ಉರ್ಫಿ ಜಾವೆದ್. ಆದರೆ ಉರ್ಫಿ ಸೌಂದರ್ಯವತಿ ಎನ್ನುವುದು ಸುಳ್ಳಲ್ಲ. ಹಾಲು ಬಿಳುಪಿನ ನೀಳಕಾಯದ ಉರ್ಫಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ಆಹಾರ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲಿ ಅವರು ತಾನು ಪ್ರತಿದಿನ ಫೆನ್ನೆಲ್ ವಾಟರ್ ಕುಡಿಯವುದಾಗಿ ಹೇಳಿದ್ದಾರೆ

ಮಲಬದ್ಧತೆ ನಿವಾರಣೆಯಿಂದ ತ್ವಚೆಯ ಅಂದ ಹೆಚ್ಚುವವರೆಗೆ, ಪ್ರತಿದಿನ ಸೋಂಪು ನೀರು ಕುಡಿದ್ರೆ ಇಷ್ಟೆಲ್ಲಾ ಪ್ರಯೋಜನ

Monday, September 23, 2024

ಇತ್ತೀಚಿನ ದಿನಗಳಲ್ಲಿ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದ ಏರಿಕೆಯಿಂದ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಅನಾರೋಗ್ಯಕರ ಕೊಬ್ಬಿನ ಪದಾರ್ಥಗಳು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಜನರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗಲು ಕಾರಣವಾಗುತ್ತಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವುದೇ ರೋಗಲಕ್ಷಣಗಳು ನೇರವಾಗಿ ಗೋಚರಿಸುವುದಿಲ್ಲ, ಆದರೆ ದೇಹದಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಗಮನಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಸ್ಟ್ರಾಲ್ ಏರಿಕೆಯಿಂದ ಹೃದಯಾಘಾತವಾಗುವ ಅಪಾಯವೂ ಇದೆ. ಹಾಗಾಗಿ ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಮುಖ–ಕೈಯಲ್ಲಿ ಆಗುವ ಬದಲಾವಣೆಗಳಿವು, ಈ ಲಕ್ಷಣಗಳನ್ನು ಗಮನಿಸಿ

Monday, September 23, 2024

ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇದನ್ನು ಸೈಲೆಂಟ್ ಕಿಲ್ಲರ್ ಎಂದು ಸಹ ಕರೆಯುತ್ತಾರೆ. ಅಧಿಕ ರಕ್ತದೊತ್ತಡ ಸಂಕೇತಗಳನ್ನು ನಾವು ಮುಖದಿಂದಲೇ ತಿಳಿಯಬಹುದು.

High BP Symptoms: ನಿಮ್ಮ ಚರ್ಮದಲ್ಲೂ ಈ ರೀತಿಯ ಲಕ್ಷಣಗಳು ಗೋಚರಿಸ್ತಾ ಇದ್ಯಾ, ಹೈ ಬಿಪಿ ಇರಬಹುದು ಗಮನಿಸಿ

Saturday, September 21, 2024

ಕರಿಬೇವಿನ ಎಲೆಯು ನಾ‌ವು ತಯಾರಿಸುವ ಸಾಂಬಾರ್‌, ರಸಂ, ಚಟ್ನಿಗೆ ವಿಶೇಷ ರುಚಿ ಹಾಗೂ ಪರಿಮಳ ನೀಡುತ್ತದೆ. ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಕರಿಬೇವಿನ ಎಲೆಯಲ್ಲಿ ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ತೂಕ ಇಳಿಯುವುದರಿಂದ ಮಧುಮೇಹಿ ನಿಯಂತ್ರಣದವರೆಗೆ ಕರಿಬೇವಿನ ಎಲೆ ನೆನೆಸಿದ ನೀರು ಆರೋಗ್ಯದ ಮೇಲೆ ಹೇಗೆಲ್ಲಾ ಮ್ಯಾಜಿಕ್ ಮಾಡಲಿದೆ ನೋಡಿ.

ತೂಕ ಇಳಿಕೆಯಿಂದ ಮಧುಮೇಹ ನಿಯಂತ್ರಣದವರೆಗೆ, ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ ಕರಿಬೇವಿನ ನೀರು, ಇದರ ಇನ್ನಿತರ ಪ್ರಯೋಜನಗಳು ಹೀಗಿವೆ

Friday, September 20, 2024

ವೈವಾಹಿಕ ಬದುಕಿಗೆ ಕಾಲಿಟ್ಟ ಬಹುತೇಕರ ವಯಸ್ಸು ಇನ್ನೂ 30 ದಾಟಿರುವುದಿಲ್ಲ. ಆದರೂ ಅವರಿಗೆ ಮಗು ಬೇಕೆಂಬ ಆಸೆ ಫಲಿಸುತ್ತಿಲ್ಲ. ಅವರನ್ನು ಕಾಡುತ್ತಿದೆ ಫಲವಂತಿಕೆಯ ಸಮಸ್ಯೆ. ಹೀಗಾಗಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಫಲವಂತಿಕೆಯ ಸಮಸ್ಯೆ ಕಾಡಲು ಹಲವು ಕಾರಣ. ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅವುಗಳ ಕಡೆಗೊಂದು ನೋಟ ಬೀರೋಣ.

ಇದ್ಯಾಕೆ ಹೀಗೆ? ಇನ್ನೂ 30 ದಾಟದ ಯುವಜನರಿಗೆ ಮಗು ಆಸೆ ಏಕೆ ಫಲಿಸುತ್ತಿಲ್ಲ? ಕಾಡುತ್ತಿದೆ ಫಲವಂತಿಕೆ ಸಮಸ್ಯೆ

Friday, September 20, 2024

ಆರೋಗ್ಯವಾಗಿರಲು 6 ಯೋಗಾಸನಗಳು: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಯೋಗ ಮಾಡುವುದು ಬಹಳ ಮುಖ್ಯ. ಯೋಗಾಸನ ಅಭ್ಯಾಸ ಮಾಡುವುದರಿಂದ ದಿನವಿಡೀ ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ. ಈ ಏಳು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿ.

ಮಾನಸಿಕ, ದೇಹದ ಆರೋಗ್ಯಕ್ಕಾಗಿ ಈ 6 ಸರಳ ಯೋಗಾಸನಗಳು ಪರಿಣಾಮಕಾರಿ: ನೀವೂ ಪ್ರಯತ್ನಿಸಿ

Thursday, September 19, 2024