ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಕೋಲ್ಕತ್ತಾ ನೈಟ್ ರೈಡರ್ಸ್ Vs ಪಂಜಾಬ್‌ ಕಿಂಗ್ಸ್ ಐಪಿಎಲ್‌ ಪಂದ್ಯದ ಲೇಟೆಸ್ಟ್ ಅಪ್ಡೇಟ್

IPL 2024 Latest Updates: ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್‌ ಕಿಂಗ್ಸ್ ಐಪಿಎಲ್‌ ಪಂದ್ಯದ ಲೇಟೆಸ್ಟ್ ಅಪ್ಡೇಟ್

Indian Premier League 2024 Updates: ಐಪಿಎಲ್‌ 17ರ ಆವೃತ್ತಿಯ 42ನೇ ಪಂದ್ಯದಲ್ಲಿ ಏಪ್ರಿಲ್ 26ರ ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಕೆಕೆಆರ್‌ ತವರು ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್‌ ಕಿಂಗ್ಸ್ ಐಪಿಎಲ್‌ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್‌ ಕಿಂಗ್ಸ್ ಐಪಿಎಲ್‌ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಇಂಡಿಯನ್ ಪ್ರೀಮಿಯರ್ ಲೀಗ್ 2024ರ (Indian Premier League 2024) ಆವೃತ್ತಿಯಲ್ಲಿ ಏಪ್ರಿಲ್ 26ರ ಶುಕ್ರವಾರ ಆತಿಥೇಯ ಕೆಕೆಆರ್‌ ತಂಡಕ್ಕೆ ಪಂಜಾಬ್‌ ಕಿಂಗ್ಸ್ (Kolkata Knight Riders vs Punjab Kings) ಸವಾಲೆಸೆಯುತ್ತಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ. ಐಪಿಎಲ್‌ 17ರ ಆವೃತ್ತಿಯ ಪಂದ್ಯಾವಳಿಯಲ್ಲಿ 42ನೇ ಪಂದ್ಯ ಇದಾಗಿದ್ದು, ಟೂರ್ನಿಯಲ್ಲಿ 6ನೇ ಗೆಲುವಿಗೆ ಶ್ರೇಯಸ್‌ ಅಯ್ಯರ್ ಪಡೆ ಎದುರು ನೋಡುತ್ತಿದೆ. ಅತ್ತ ಮೂರನೇ ಗೆಲುವಿಗೆ ಪಿಬಿಕೆಎಸ್‌ ತಂತ್ರ ರೂಪಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಹಾಗೂ ಏಕೈಕ ಮುಖಾಮುಖಿ ಇದಾಗಿದೆ. ಪಂಜಾಬ್‌ ತಂಡದ ಕಾಯಂ ನಾಯಕ ಶಿಖರ್‌ ಧವನ್‌ ಇಂದಿನ ಪಂದ್ಯದಿಂದಲೂ ಹೊರಗುಳಿಯಲಿದ್ದು, ಸ್ಯಾಮ್‌ ಕರನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಪಂದ್ಯದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಲಿವಿಂಗ್‌ಸ್ಟನ್ ಔಟ್, ಕೋಲ್ಕತ್ತಾ ತಂಡದಿಂದ ಹೊರಬಿದ್ದ ದುಬಾರಿ ಬೌಲರ್

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ನಾಯಕ ಸ್ಯಾಮ್‌ ಕರನ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯಕ್ಕೂ ತಂಡದ ಕಾಯಂ ನಾಯಕ ಶಿಖರ್‌ ಧವನ್‌ ಅಲಭ್ಯರಾಗಿದ್ದಾರೆ. ಉಭಯ ತಂಡಗಳಲ್ಲಿಯೂ ತಲಾ ಒಂದು ಬದಲಾವಣೆ ಮಾಡಲಾಗಿದೆ. ಸಂಪೂರ್ಣ ಆಡುವ ಬಳಗ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಕೆಕೆಆರ್​ ಪಂದ್ಯಕ್ಕೂ ಇಲ್ಲ ಶಿಖರ್ ಧವನ್; ಡು ಆರ್ ಡೈ ಕದನಕ್ಕೆ ಪಂಜಾಬ್ ಕಿಂಗ್ಸ್​ ಸಂ ಭಾವ್ಯ ಪ್ಲೇಯಿಂಗ್ XI

ಕೋಲ್ಕತ್ತಾದಲ್ಲಿ ಏಪ್ರಿಲ್‌ 26ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ ನೋಡಿ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಕೆಕೆಆರ್​ ಸಂಭಾವ್ಯ ತಂಡ

ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಪಿಬಿಕೆಎಸ್ ಸಂಭಾವ್ಯ ತಂಡ

ಪ್ರಭುಸಿಮ್ರಾನ್ ಸಿಂಗ್, ರಿಲೀ ರೊಸ್ಸೌ/ಜಾನಿ ಬೈರ್‌ಸ್ಟೋ, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಅರ್ಷದೀಪ್ ಸಿಂಗ್.

IPL_Entry_Point