ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್​ ಪಂದ್ಯಕ್ಕೂ ಇಲ್ಲ ಶಿಖರ್ ಧವನ್; ಡು ಆರ್ ಡೈ ಕದನಕ್ಕೆ ಪಂಜಾಬ್ ಕಿಂಗ್ಸ್​ ಸಂಭಾವ್ಯ ಪ್ಲೇಯಿಂಗ್ Xi

ಕೆಕೆಆರ್​ ಪಂದ್ಯಕ್ಕೂ ಇಲ್ಲ ಶಿಖರ್ ಧವನ್; ಡು ಆರ್ ಡೈ ಕದನಕ್ಕೆ ಪಂಜಾಬ್ ಕಿಂಗ್ಸ್​ ಸಂಭಾವ್ಯ ಪ್ಲೇಯಿಂಗ್ XI

PBKS vs KKR Playing XI : 17ನೇ ಆವೃತ್ತಿಯ ಐಪಿಎಲ್​ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ ನೋಡಿ.

ಕೆಕೆಆರ್​ ಪಂದ್ಯಕ್ಕೂ ಇಲ್ಲ ಶಿಖರ್ ಧವನ್; ಡು ಆರ್ ಡೈ ಕದನಕ್ಕೆ ಪಂಜಾಬ್ ಕಿಂಗ್ಸ್​ ಸಂಭಾವ್ಯ ಪ್ಲೇಯಿಂಗ್ XI
ಕೆಕೆಆರ್​ ಪಂದ್ಯಕ್ಕೂ ಇಲ್ಲ ಶಿಖರ್ ಧವನ್; ಡು ಆರ್ ಡೈ ಕದನಕ್ಕೆ ಪಂಜಾಬ್ ಕಿಂಗ್ಸ್​ ಸಂಭಾವ್ಯ ಪ್ಲೇಯಿಂಗ್ XI

ಐಪಿಎಲ್ 2024ರ 42ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ (Kolkata Knight Riders vs Punjab Kings) ನಡುವೆ ಏಪ್ರಿಲ್ 26ರ ಶುಕ್ರವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪಂಜಾಬ್​​ಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಪ್ರೀತಿ ಜಿಂಟಾ ಮಾಲೀಕತ್ವದ ಪಿಬಿಕೆಎಸ್, ಆಡಿದ 8 ಪಂದ್ಯಗಳಲ್ಲಿ 2 ಗೆದ್ದು, 6 ಸೋಲಿನೊಂದಿಗೆ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಉಳಿದ 6 ಪಂದ್ಯಗಳು ಗೆದ್ದರಷ್ಟೆ ಪ್ಲೇಆಫ್ ಕನಸು ಜೀವಂತವಾಗಿರಲಿದೆ. ಒಂದು ಪಂದ್ಯ ಸೋತರೂ ಪ್ಲೇಆಫ್​​ ಕನಸು ಭಗ್ನಗೊಳ್ಳಲಿದೆ.

ಅದೇ ರೀತಿ ಈ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರದರ್ಶನ ಅದ್ಭುತವಾಗಿದೆ. ಐಪಿಎಲ್ ಅಂಕಪಟ್ಟಿಯಲ್ಲಿ ಕೆಕೆಆರ್ 2ನೇ ಸ್ಥಾನದಲ್ಲಿದೆ. ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಇನ್ನೂ 7 ಪಂದ್ಯಗಳು ಬಾಕಿ ಇದ್ದು, 4 ಗೆದ್ದರೆ ಪ್ಲೇಆಫ್ ಟಿಕೆಟ್ ಖಚಿತಗೊಳ್ಳಲಿದೆ. ಹಾಗಾಗಿ ಇದೇ ಉದ್ದೇಶದಿಂದ ಕೆಕೆಆರ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಪಂಜಾಬ್ ಕಿಂಗ್ಸ್ ಸೋಲಿಸಿ ತನ್ನ ಗೆಲುವಿನ ಸಂಖ್ಯೆಯನ್ನು ವಿಸ್ತರಿಸಿಕೊಳ್ಳಲು ಯೋಜನೆ ರೂಪಿಸಿದೆ. ಮಹತ್ವದ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ಮುಂದೆ ನೋಡೋಣ.

ಕೆಕೆಆರ್​ vs ಪಿಬಿಕೆಎಸ್ ಮುಖಾಮುಖಿ ದಾಖಲೆ

ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ಕೆಕೆಆರ್ ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 1 ರನ್ನಿಂದ ಸೋಲಿಸಿತ್ತು. ಪಿಬಿಕೆಎಸ್ ಮತ್ತು ಕೆಕೆಆರ್ ತಂಡಗಳು ಇದುವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್ 21 ಮತ್ತು ಪಂಜಾಬ್ 11 ಗೆದ್ದಿದೆ. ಕೆಕೆಆರ್​ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡ್ ಪ್ರದರ್ಶನ ನೀಡುತ್ತಿದೆ. ಪಂಜಾಬ್ ಪರ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಮಾತ್ರ ಮಿಂಚುತ್ತಿದ್ದಾರೆ.

ಕೆಕೆಆರ್​ ಬದಲಾವಣೆ ಸಾಧ್ಯತೆ ಕಡಿಮೆ

ಕೆಕೆಆರ್​​ ಪ್ರತಿ ಪಂದ್ಯದಲ್ಲೂ ಆಟ ಮತ್ತು ಪಿಚ್​​ ಪರಿಸ್ಥಿತಿಗೆ ಅಥವಾ ಟಾಸ್​ಗೆ ಅನುಗುಣವಾಗಿ ಒಂದು ಬದಲಾವಣೆ ಮಾಡುತ್ತಿದೆ. ಅಗತ್ಯ ಇದ್ದ ಸಂದರ್ಭದಲ್ಲಿ ವೇಗದ ಬೌಲರ್ ಅಥವಾ ಸ್ಪಿನ್ನರ್​ ಅನ್ನು ಹೊರಗಿಟ್ಟಿದೆ. ರಿಂಕು ಸಿಂಗ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​​ ಆಗಿ ಬಳಸಿಕೊಂಡು ಬೌಲಿಂಗ್ ವೇಳೆ ಒಬ್ಬ ಬೌಲರ್​ ಅನ್ನು ತಂಡಕ್ಕೆ ಸೇರಿಸಿಕೊಳ್ಳುತ್ತದೆ. ಆದರೆ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಮೆ.

ಕೆಕೆಆರ್​ ಸಂಭಾವ್ಯ ಪ್ಲೇಯಿಂಗ್ XI

ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಈ ಪಂದ್ಯಕ್ಕೂ ಇಲ್ಲ ಶಿಖರ್ ಧವನ್

ಸ್ಪಿನ್ ಬೌಲಿಂಗ್ ಕೋಚ್ ಸುನಿಲ್ ಜೋಶಿ ಅವರು ಹೇಳಿರುವ ಪ್ರಕಾರ ಶಿಖರ್ ಧವನ್ ಕೆಕೆಆರ್​ ವಿರುದ್ಧದ ಪಂದ್ಯಕ್ಕೂ ಅಲಭ್ಯ. ಮೇ 1ರಂದು ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ. ಸ್ಯಾಮ್ ಕರನ್ ಮತ್ತೆ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ, ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ರಿಲಿ ರೋಸೋ ಅಥವಾ ಜಾನಿ ಬೈರ್​ಸ್ಟೋ ಅವರಲ್ಲಿ ಒಬ್ಬರು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಪಿಬಿಕೆಎಸ್ ಸಂಭಾವ್ಯ ಪ್ಲೇಯಿಂಗ್ XI

ಪ್ರಭುಸಿಮ್ರಾನ್ ಸಿಂಗ್, ರಿಲೀ ರೊಸ್ಸೌ/ಜಾನಿ ಬೈರ್‌ಸ್ಟೋ, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಅರ್ಷದೀಪ್ ಸಿಂಗ್.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point