logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Hindu Festival: ಮಾಸಿಕ ಶಿವರಾತ್ರಿ, ವೈಶಾಖ ಪೂರ್ಣಿಮೆ ಸೇರಿದಂತೆ ಮೇ ತಿಂಗಳಲ್ಲಿ ಬರುವ ವ್ರತ, ಹಬ್ಬಗಳ ಪಟ್ಟಿ ಇಲ್ಲಿದೆ

Hindu Festival: ಮಾಸಿಕ ಶಿವರಾತ್ರಿ, ವೈಶಾಖ ಪೂರ್ಣಿಮೆ ಸೇರಿದಂತೆ ಮೇ ತಿಂಗಳಲ್ಲಿ ಬರುವ ವ್ರತ, ಹಬ್ಬಗಳ ಪಟ್ಟಿ ಇಲ್ಲಿದೆ

Rakshitha Sowmya HT Kannada

Apr 25, 2024 12:49 PM IST

google News

ಮೇ ತಿಂಗಳಲ್ಲಿ ಬರುವ ಹಬ್ಬಗಳು, ವ್ರತಗಳ ಪಟ್ಟಿ

  • Indian Festival: ಹಿಂದೂ ಕ್ಯಾಲೆಂಡರ್‌ ಪ್ರಕಾರ ಪ್ರತಿ ತಿಂಗಳು ಒಂದಲ್ಲಾ ಒಂದು ಹಬ್ಬ ಇರುತ್ತದೆ. ಏಪ್ರಿಲ್‌ ತಿಂಗಳಲ್ಲಿ ಏಕಾದಶಿ ಜೊತೆಗೆ ಚೈತ್ರ ನವರಾತ್ರಿ, ಶ್ರೀರಾಮನವಮಿ , ಹನುಮ ಜಯಂತಿಯನ್ನು ಆಚರಿಸಲಾಯಿತು. ಮೇ ತಿಂಗಳಲ್ಲಿ ಕೂಡಾ ಕೆಲವೊಂದು ಹಬ್ಬ ಹಾಗೂ ವ್ರತಗಳನ್ನು ಆಚರಿಸಲಾಗುತ್ತದೆ.

ಮೇ ತಿಂಗಳಲ್ಲಿ ಬರುವ ಹಬ್ಬಗಳು, ವ್ರತಗಳ ಪಟ್ಟಿ
ಮೇ ತಿಂಗಳಲ್ಲಿ ಬರುವ ಹಬ್ಬಗಳು, ವ್ರತಗಳ ಪಟ್ಟಿ (PC: Canva)

ಈ ವರ್ಷ ಮೇ ತಿಂಗಳು ಬಹಳ ವಿಶೇಷವಾಗಿದೆೆ. ಈ ತಿಂಗಳಲ್ಲಿ ದೊಡ್ಡ ಮತ್ತು ಸಣ್ಣ ಎಲ್ಲಾ ರೀತಿಯ ಹಬ್ಬಗಳು ಬರಲಿವೆ. ಈ ಹಬ್ಬಗಳನ್ನು ನೀವೂ ಆಚರಿಸುತ್ತಿದ್ದೀರಿ ಎಂದಾದರೆ ಹಬ್ಬಗಳ ದಿನಾಂಕ, ಶುಭ ಮುಹೂರ್ತ ಹಾಗೂ ಇನ್ನಿತರ ಅಂಶಗಳ ಬಗ್ಗೆ ತಿಳಿದುಕೊಳ್ಳಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮೇ 2024ರ ಹಬ್ಬಗಳ ಪಟ್ಟಿ

ವರುತಿನಿ ಏಕಾದಶಿ- 4 ಮೇ ಶನಿವಾರ

ಪ್ರದೋಷ ವ್ರತ -5 ಮೇ ಭಾನುವಾರ

ಮಾಸಿಕ ಶಿವರಾತ್ರಿ - 6 ಮೇ ಸೋಮವಾರ

ವೈಶಾಖ ಅಮವಾಸ್ಯೆ - 8 ಮೇ ಬುಧವಾರ

ಅಕ್ಷಯ ತೃತೀಯ -10 ಮೇ ಶುಕ್ರವಾರ

ಮೋಹಿನಿ ಏಕಾದಶಿ -19 ಮೇ ಭಾನುವಾರ

ವೈಶಾಖ ಪೂರ್ಣಿಮಾ - 23 ಮೇ ಗುರುವಾರ

ವರುತಿನಿ ಏಕಾದಶಿ

ಈ ಹಬ್ಬವನ್ನು ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ವರ್ಷದಲ್ಲಿ ಬರುವ ಅನೇಕ ಏಕಾದಶಿಗಳಲ್ಲಿ ಇದೂ ಒಂದು. ಇದರ ಮಹತ್ವ ವಿಭಿನ್ನವಾಗಿದೆ. ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ. ಉಪವಾಸ ಮಾಡುವವರು ಬ್ರಹ್ಮಚರ್ಯದ ಉಪವಾಸವನ್ನು ಆಚರಿಸಬೇಕು. ಈ ದಿನ, ನೀವು ಒಂದು ಊಟವನ್ನು ಮಾಡಬಹುದು. ಎಣ್ಣೆಯಲ್ಲಿ ಕರಿದ ಆಹಾರ, ಯಾವುದೇ ರೀತಿಯ ಧಾನ್ಯ, ಬೇಳೆಕಾಳುಗಳಿಂದ ತಯಾರಿಸಿದ ಆಹಾರ ಸೇವಿಸಬಾರದು. ಈ ದಿನ ಬ್ರಾಹ್ಮಣನಿಗೆ ದಾನ ನೀಡಬೇಕು. ಈ ನಿಯಮಗಳನ್ನು ಅನುಸರಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಪೂಜೆಯ ಶುಭ ಸಮಯ; 4 ಮೇ ಬೆಳಗ್ಗೆ 05:36 ರಿಂದ 5 ಮೇ ಬೆಳಗ್ಗೆ 08:17 ರವರೆಗೆ

ಪ್ರದೋಷ ವ್ರತ

ತಿಂಗಳಿಗೆ 2 ಬಾರಿ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಶಿವ ಹಾಗೂ ಪಾರ್ವತಿಗೆ ಸಂಬಂಧಿಸಿದ ದಿನವಾಗಿದೆ. ಉಪವಾಸ ಮಾಡುವ ಮೂಲಕ ಶಿವನನ್ನು ಪ್ರಾರ್ಥಿಸಿ, ಪೂಜಿಸಿದರೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಕೈಲಾಸ ಪರ್ವತದಲ್ಲಿರುವ ರಜತ ಭವನದಲ್ಲಿ ಶಿವನು ನೃತ್ಯ ಮಾಡುತ್ತಾನೆ ಎಂಬ ನಂಬಿಕೆಯಿದೆ.

ಮಾಸಿಕ ಶಿವರಾತ್ರಿ

ಹಿಂದೂ ಧರ್ಮದಲ್ಲಿ ಮಾಸಿಕ ಶಿವರಾತ್ರಿಗೆ ತನ್ನದೇ ಪ್ರಾಮುಖ್ಯತೆ ಇದೆ. ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಕೂಡಾ ಶಿವನಿಗೆ ಮೀಸಲಾಗಿದೆ. ಉಪವಾಸವನ್ನು ಆಚರಿಸಿ ದಾನ ಧರ್ಮ ಮಾಡುವ ಭಕ್ತರಿಗೆ ಶಂಕರನು ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ವೈಶಾಖ ಅಮವಾಸ್ಯೆ

ವೈಶಾಖ ಮಾಸಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ತಿಂಗಳಿನಿಂದ ತ್ರೇತಾಯುಗ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ. ಕೆಲವೆಡೆ ಈ ದಿನ ಶನಿ ಜಯಂತಿಯನ್ನು ಆಚರಿಸುತ್ತಾರೆ. ಶನಿಯ ಭಕ್ತರು ಈ ದಿನ ಉಪವಾಸ ಇದ್ದು ಪೂಜೆ, ಪುನಸ್ಕಾರಗಳಲ್ಲಿ ಭಾಗಿಯಾಗುತ್ತಾರೆ. ಕಾಳಸರ್ಪದೋಷವನ್ನು ಹೋಗಲಾಡಿಸಲು ಈ ದಿನ ವಿಶೇಷ ಪೂಜೆ ಮಾಡಬಹುದು. ಈ ದಿನ ನದಿ, ಜಲಾಶಯ ಅಥವಾ ಕೊಳ ಇತ್ಯಾದಿಗಳಲ್ಲಿ ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಪೂರ್ವಜರ ಆತ್ಮಗಳ ಶಾಂತಿಗಾಗಿ, ಅಭಿಷೇಕದ ಮುಹೂರ್ತದ ಸಮಯದಲ್ಲಿ ನೀವು ಅವರಿಗೆ ತರ್ಪಣವನ್ನು ಅರ್ಪಿಸಬಹುದು. ಈ ದಿನ ದಾನ ಮಾಡಿದರೆ ಕೂಡಾ ಒಳ್ಳೆಯದು. ಬೆಳಗ್ಗೆ ಅರಳಿ ಮರಕ್ಕೆ ನೀರು ಅರ್ಪಿಸಿ ಸಂಜೆ ದೀಪ ಬೆಳಗಿಸಿದರೆ ಬಹಳ ಶುಭ.

ಪೂಜೆಯ ಶುಭ ಸಮಯ: 7 ಮೇ 2024 ರಂದು ಬೆಳಗ್ಗೆ 11:43 ಕ್ಕೆ ಅಮವಾಸ್ಯೆ ಪ್ರಾರಂಭವಾಗುತ್ತದೆ ಮತ್ತು ಮರುದಿನ, ಅಂದರೆ 8 ಮೇ ಬೆಳಗ್ಗೆ 08:53 ಕ್ಕೆ ಕೊನೆಗೊಳ್ಳುತ್ತದೆ.

ಅಕ್ಷಯ ತೃತೀಯ

ಶುಕ್ಲಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನ ಪರಶುರಾಮ ಜಯಂತಿ ಮತ್ತು ಮಾತಂಗಿ ಜಯಂತಿಗಳನ್ನು ಸಹ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಪರಶುರಾಮನನ್ನು ವಿಷ್ಣುವಿನ 6 ಅವತಾರವೆಂದು ಪರಿಗಣಿಸಲಾಗಿದೆ. ಅವರನ್ನು ಪೂಜಿಸುವುದರಿಂದ ನಿಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ. ಮಾತಂಗಿ ದೇವಿಯನ್ನು ತಾಯಿ ಗೌರಿಯ ರೂಪವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನ ವಿವಾಹಿತ ಮಹಿಳೆಯರು ಉಪವಾಸ ಆಚರಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಅಕ್ಷಯ ತೃತೀಯ ದಿನವನ್ನು ಬಹಳ ಮಂಗಳಕರವೆಂದು ವಿವರಿಸಲಾಗಿದೆ. ಈ ದಿನ ನೀವು ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದು. ಈ ಹಬ್ಬದಲ್ಲಿ ದಿನವಿಡೀ ಶುಭ ಮುಹೂರ್ತಗಳು ಇರುತ್ತವೆ. ನೀವು ಮನೆಯಲ್ಲಿ ಲಕ್ಷ್ಮೀ ನಾರಾಯಣನನ್ನು ಪೂಜಿಸಬಹುದು. ಚಿನ್ನವನ್ನು ಮನೆಗೆ ತರಬಹುದು.

ಮೋಹಿನಿ ಏಕಾದಶಿ

ಎಲ್ಲಾ ಏಕಾದಶಿ ತಿಥಿಗಳು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಮೋಹಿನಿ ಏಕಾದಶಿಯು ವಿಭಿನ್ನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ವಿಷ್ಣುವಿನ ಮೋಹಿನಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ನೀವು ಹಳದಿ ಹೂಗಳನ್ನು ವಿಷ್ಣುವಿಗೆ ಅರ್ಪಿಸಬೇಕು. ಏಕಾದಶಿಯಂದು ಉಪವಾಸ ಆಚರಿಸುವವರುಎಲ್ಲಾ ತೊಂದರೆಗಳು ಮತ್ತು ಪಾಪಗಳಿಂದ ಮುಕ್ತಿ ಹೊಂದುತ್ತಾರೆ. ಧಾರ್ಮಿಕ ದಂತಕಥೆಗಳ ಪ್ರಕಾರ, ಈ ದಿನ ಸಮುದ್ರ ಮಂಥನ ನಡೆದು ಕ್ಷೀರಸಾಗರದಿಂದ ವಿಷ ಮತ್ತು ಅಮೃತದ ಕಲಶವನ್ನು ಸಾಗರದಿಂದ ಹೊರ ತೆಗೆಯಲಾಯಿತು. ಆಗ ವಿಷ್ಣುವು ಅಮೃತವನ್ನು ರಾಕ್ಷಸರಿಂದ ರಕ್ಷಿಸಲು ಮೋಹಿನಿಯ ರೂಪವನ್ನು ತಾಳಿ, ಎಲ್ಲಾ ದೇವತೆಗಳಿಗೆ ಅಮೃತವನ್ನು ಕುಡಿಯುವಂತೆ ಮಾಡುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಪೂಜೆಯ ಶುಭ ಸಮಯ: 19 ಮೇ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಇರುತ್ತದೆ.

ವೈಶಾಖ ಪೂರ್ಣಿಮೆ

ಹಿಂದೂ ಧರ್ಮದಲ್ಲಿ ವೈಶಾಖ ಪೂರ್ಣಿಮೆಗೆ ಹೆಚ್ಚಿನ ಮಹತ್ವವಿದೆ. ಈ ದಿನ ಭಗವಾನ್ ವಿಷ್ಣುವಿನ ಮತ್ತೊಂದು ಅವತಾರವಾದ ಬುದ್ಧನು ಜನಿಸಿದ ದಿನ. ವೈಶಾಖ ಪೂರ್ಣಿಮೆಯಂದು ಬುದ್ಧನನ್ನು ಪೂಜಿಸಲಾಗುತ್ತದೆ. ಸೂರ್ಯೋದಯಕ್ಕೆ ಮುಂಚೆ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಧರ್ಮರಾಜನನ್ನು ಪೂಜಿಸಿದರೆ, ಸಾವಿನ ಭಯ ದೂರವಾಗುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ