logo
ಕನ್ನಡ ಸುದ್ದಿ  /  ಮನರಂಜನೆ  /  ಅಯೋಧ್ಯೆಯಲ್ಲಿ 14.5 ಕೋಟಿ ದರದ ನಿವೇಶನ ಖರೀದಿಸಿದ ಅಮಿತಾಬ್‌ ಬಚ್ಚನ್‌; ರಾಮ ಪ್ರಾಣ ಪ್ರತಿಷ್ಠಾಪನೆಯಂದೇ ಸರಾಯುಗೆ ಚಾಲನೆ

ಅಯೋಧ್ಯೆಯಲ್ಲಿ 14.5 ಕೋಟಿ ದರದ ನಿವೇಶನ ಖರೀದಿಸಿದ ಅಮಿತಾಬ್‌ ಬಚ್ಚನ್‌; ರಾಮ ಪ್ರಾಣ ಪ್ರತಿಷ್ಠಾಪನೆಯಂದೇ ಸರಾಯುಗೆ ಚಾಲನೆ

Praveen Chandra B HT Kannada

Jan 15, 2024 03:21 PM IST

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌

  • ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರು ಅಯೋಧ್ಯೆ ರಾಮಮಂದಿರದ ಹತ್ತಿರದಲ್ಲಿರುವ ಸರಾಯುನಲ್ಲಿ ಹೊಸ ನಿವೇಶನ ಖರೀದಿಸಿದ್ದಾರೆ. ಸರಾಯು ಎನ್ನುವುದು ಅಯೋಧ್ಯೆಯಲ್ಲಿರುವ 7 ಸ್ಟಾರ್‌ ಎನ್‌ಕ್ಲೇವ್‌ (ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌). ಈ ಸೈಟ್‌ನಲ್ಲಿ ಅಮಿತಾಬ್‌ ಸುಮಾರು 10 ಸಾವಿರ ಚದರಡಿಯ ಮನೆ ನಿರ್ಮಿಸಲು ಉದ್ದೇಶಿಸಿದ್ದಾರೆ. ಈ ಸೈಟ್‌ ದರ 14.5 ಕೋಟಿ ರೂಪಾಯಿ.

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌
ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ (PTI)

ಬಾಲಿವುಡ್‌ನ ಬಿಗ್‌ಬಿ ಎಂದೇ ಖ್ಯಾತಿ ಪಡೆದ ಅಮಿತಾಬ್‌ ಬಚ್ಚನ್‌ ಅವರು ಅಯೋಧ್ಯೆಯಲ್ಲಿ ಮನೆ ನಿರ್ಮಿಸಲು ಸಲುವಾಗಿ ಸುಮಾರು 14.5 ಕೋಟಿ ರೂಪಾಯಿಯ ನಿವೇಶನ ಖರೀದಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿಯೇ ಬಿಗ್‌ಬಿ ಈ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಅಲಹಾಬಾದ್‌ನಲ್ಲಿ (ಈಗಿನ ಪ್ರಯಾಗರಾಜ್‌) ಜನಿಸಿದ ಬಾಲಿವುಡ್‌ ನಟ ಅವರು 7 ಸ್ಟಾರ್‌ ಮಿಕ್ಸಡ್‌ ಯೂಸ್‌ ಎನ್‌ಕ್ಲೇವ್‌ ಸರಾಯುನಿಂದ ಈ ನಿವೇಶನ ಖರೀದಿಸಿದ್ದಾರೆ. ಸರಾಯು ಎನ್ನುವುದು ಮುಂಬೈ ಮೂಲದ "ದ ಡೆವಲಪರ್‌ ದಿ ಹೌಸ್‌ ಆಫ್‌ ಅಭಿನಂದನ್‌ ಲೋಧಾ (ಎಚ್‌ಒಎಬಿಎಲ್‌)" ಪ್ರಾಜೆಕ್ಟ್‌ .

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಈ ನಿವೇಶನದಲ್ಲಿ 10 ಸಾವಿರ ಚದರಡಿಯ ಮನೆಯನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ. ಈ ಸರಾಯು ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌ ಕೂಡ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಅಂದರೆ, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ದೇಗುಲಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನದಂದೇ ಈ ಪ್ರಾಜೆಕ್ಟ್‌ಗೂ ಚಾಲನೆ ದೊರಕಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ಎಚ್‌ಒಎಬಿಎಲ್‌ ಮತ್ತು ಅಮಿತಾಬ್‌ ಬಚ್ಚನ್‌ ಅವರ ನಿಕಟ ಮೂಲಗಳು ತಿಳಿಸಿವೆ.

51 ಎಕರೆ ವ್ಯಾಪಿಸಿರುವ ಸರಾಯು ಪ್ರಾಜೆಕ್ಟ್‌

"ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಅಯೋಧ್ಯೆಯಲ್ಲಿ ಅಭಿನಂದನ್ ಲೋಧಾ ಅವರ ಸರಾಯು ಪ್ರಾಜೆಕ್ಟ್‌ನಲ್ಲಿ ಮನೆ ಕಟ್ಟಲು ಎದಿರು ನೋಡುತ್ತಿದ್‌ಏನೆ. ಅಯೋಧ್ಯೆಯ ಪುರಾತನ ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕೆ ಗಡಿಗಳನ್ನು ಮೀರಿದ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ. ಅಯೋಧ್ಯೆಯಲ್ಲಿ ನೆಲೆಸುವ ಪ್ರಯಾಣದ ಪ್ರಾರಂಭ ಇದಾಗಿದೆ. ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಇದೆ. ನನ್ನ ಆಳದಲ್ಲಿ ಪ್ರತಿನಿಧಿಸುವ ಭಾವನಾತ್ಮಕ ಅಂಶಗಳೂ ಇವೆ. ಜಾಗತಿಕ ಆಧ್ಯಾತ್ಮ ರಾಜಧಾನಿಯಲ್ಲಿ ಮನೆಯನ್ನು ನಿರ್ಮಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಅಮಿತಾಬ್‌ ಬಚ್ಚನ್‌ ತಿಳಿಸಿದ್ದಾರೆ.

ಇದು ನಮ್ಮ ಕಂಪನಿಗೆ ಪ್ರಮುಖ ಮೈಲಿಗಲ್ಲು ಎಂದು ರಿಯಲ್‌ ಎಸ್ಟೇಟ್‌ ಕಂಪನಿ ಎಚ್‌ಒಎಬಿಎಲ್‌ನ ಅಧ್ಯಕ್ಷ ಅಭಿನಂದನ್ ಲೋಧಾ ಹೇಳಿದ್ದಾರೆ. ಸರಾಯು ಎನ್ನುವುದು ರಾಮಮಂದಿರದಿಂದ ಸುಮಾರು 15 ನಿಮಿಷಗಳ ದೂರದಲ್ಲಿರುವ ಪ್ರಾಜೆಕ್ಟ್‌. ಇದು ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ನಿಮಿಷಗಳಷ್ಟು ದೂರದಲ್ಲಿದೆ. ಈ ಸರಾಯುಗೆ ಪ್ರಥಮ ಪ್ರಜೆಯಾಗಿ ಅಮಿತಾಬ್‌ ಬಚ್ಚನ್‌ ಅವರನ್ನು ಸ್ವಾಗತಿಸಲು ರೋಮಾಂಚನಗೊಂಡಿದ್ದೇನೆ ಎಂದು ಅಭಿನಂದನ್‌ ಹೇಳಿದ್ದಾರೆ.

ಅಮಿತಾಬ್‌ ಬಚ್ಚನ್‌ ಅವರು ಈಗಾಗಲೇ ಈ ಎನ್‌ಕ್ಲೇವ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಬ್ರೂಕ್‌ಫೀಲ್ಡ್ ಗ್ರೂಪ್‌ ಮಾಲೀಕತ್ವದ ಲೀಲಾ ಪ್ಯಾಲೇಸ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಸಹಭಾಗಿತ್ವದಲ್ಲಿ ಪಂಚತಾರಾ ಅರಮನೆಯ ಹೋಟೆಲ್‌ಗಳನ್ನೂ ಇದು ಒಳಗೊಂಡಿದೆ. 2028ರ ಮಾರ್ಚ್‌ ವೇಳೆಗೆ ಪ್ರಾಜೆಕ್ಟ್‌ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅಯೋಧ್ಯೆಯಲ್ಲಿ ಕಳೆದ ಕೆಲವು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಗರಿಗೆದರಿವೆ. 2019ರ ಬಳಿಕ ಸುಪ್ರೀಂಕೋರ್ಟ್‌ ತೀರ್ಪು ಬಳಿಕ ಇಲ್ಲಿ ಭೂಮಿಯ ದರ ಗಮನಾರ್ಹವಾಗಿ ಏರಿಕೆ ಕಂಡಿದೆ. ಅಯೋಧ್ಯೆ ನಗರದಲ್ಲಿ ಮಾತ್ರವಲ್ಲದೆ ಹೊರವಲಯದಲ್ಲಿರುವ ಲಖನೌ ಮತ್ತು ಗೋರಖ್‌ಪುರದಲ್ಲೂ ಭೂಮಿಯ ದರ ಏರಿಕೆ ಕಂಡಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ