ಮಗಳಿಗೆ ಬಂಗಲೆ ಗಿಫ್ಟ್ ನೀಡಿದ ಅಮಿತಾಬ್, ಮನೆ ಮಾರಿದ ಪ್ರಿಯಾಂಕಾ ಚೋಪ್ರಾ; ಈ ವರ್ಷದ ಬಾಲಿವುಡ್ ತಾರೆಯರ 10 ದುಬಾರಿ ಪ್ರಾಪರ್ಟಿ ಡೀಲ್
- Top 10 Bollywood actors property deals: ಬಾಲಿವುಡ್ ಸೆಲೆಬ್ರಿಟಿಗಳು ಹಲವು ಕೋಟಿ ಮೌಲ್ಯದ ಪ್ರಾಪರ್ಟಿಗಳನ್ನು ಖರೀದಿ ಅಥವಾ ಮಾರಾಟ ಮಾಡುತ್ತಿರುವುದು ಸಹಜ. ಈ ವರ್ಷ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಬಾಲಿವುಡ್ ನಟರು ಮತ್ತು ನಟಿಯರು ಹೊಸ ಮನೆ ಖರೀದಿಸಿದ್ದಾರೆ.
- Top 10 Bollywood actors property deals: ಬಾಲಿವುಡ್ ಸೆಲೆಬ್ರಿಟಿಗಳು ಹಲವು ಕೋಟಿ ಮೌಲ್ಯದ ಪ್ರಾಪರ್ಟಿಗಳನ್ನು ಖರೀದಿ ಅಥವಾ ಮಾರಾಟ ಮಾಡುತ್ತಿರುವುದು ಸಹಜ. ಈ ವರ್ಷ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಬಾಲಿವುಡ್ ನಟರು ಮತ್ತು ನಟಿಯರು ಹೊಸ ಮನೆ ಖರೀದಿಸಿದ್ದಾರೆ.
(1 / 9)
ಈ ವರ್ಷ ನವೆಂಬರ್ ತಿಂಗಳಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಜುಹುದಲ್ಲಿನ ತಮ್ಮ ಐದು ಕುಟುಂಬದ ಮನೆಗಳಲ್ಲಿ ಮೊದಲನೆಯ ಪ್ರತೀಕ್ಷಾ ಬಂಗಲೆಯನ್ನು ತಮ್ಮ 49 ವರ್ಷದ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜುಹು ವಿಲೆ ಪಾರ್ಲೆಯ 10 ನೇ ರಸ್ತೆಯಲ್ಲಿರುವ ಕಟ್ಟಡ ಇದಾಗಿದೆ. ಇದರ ಮೌಲ್ಯ ಸುಮಾರು ಸುಮಾರು 31.39 ಕೋಟಿ ರೂಪಾಯಿ.
(2 / 9)
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ರಿಯಲ್ ಎಸ್ಟೇಟ್ ಹೂಡಿಕೆ ಮಾಡುತ್ತ ಇರುತ್ತಾರೆ. ಇತ್ತೀಚೆಗೆ ಲೋಖಂಡವಾಲದಲ್ಲಿರುವ ತಮ್ಮ ಎರಡು ಪೆಂಟ್‌ಹೌಸ್‌ಗಳನ್ನು ಆರು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಇವು ಲೊಖಂಡವಾಲ ಕಾಂಪ್ಲೆಕ್ಸ್‌ನ 9ನೇ ಮಹಡಿಯಲ್ಲಿದ್ದ ಪೆಂಟ್‌ಹೌಸ್‌ಗಳು.
(3 / 9)
ಅನಿಮಲ್ ನಟ ರಣವೀರ್ ಸಿಂಗ್ ಈ ವರ್ಷ ಮುಂಬೈನ ಲಗ್ಷುರಿ ಟವರ್‌ನಲ್ಲಿದ್ದ ಎರಡು ಫ್ಲಾಟ್‌ಗಳನ್ನು 15.24 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇತ್ತೀಚೆಗೆ ಬಾಂದ್ರಾ ವೆಸ್ಟ್‌ನಲ್ಲಿ 119 ಕೋಟಿ ರೂಪಾಯಿ ಕೊಟ್ಟು ಕ್ವಾಡ್ರಾಪ್ಲೆಕ್ಸ್ ಮನೆ ಖರೀದಿಸಿದ್ದರು. (Photo by SUJIT JAISWAL / AFP)
(4 / 9)
ಕಮಲ್ ಹಾಸನ್ ಮಗಳು ಅಕ್ಷರ ಹಾಸನ್ ಅವರು ಖಾರ್‌ನಲ್ಲಿ 15.75 ಕೋಟಿ ರೂಪಾಯಿ ಕೊಟ್ಟು 2,354 ಚದರಡಿಯ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಹದಿನೈದು ಮಹಡಿಯ ಈ ಕಟ್ಟಡದಲ್ಲಿ ಇವರು ಹದಿಮೂರನೇ ಮಹಡಿಯಲ್ಲಿ ಮನೆ ಖರೀದಿಸಿದಾರೆ. ಈ ಮನೆ ಖರೀದಿಸಲು 94.50 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ.
(5 / 9)
ನಟ ಮನೋಜ್ ಬಾಜಪೇಯಿ ಮತ್ತು ಅವರ ಪತ್ನಿ ಶಬನಾ ರಾಝಾ ಬಾಜ್‌ಪೇಯಿ ಅವರು ಒಶಿವಾರದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 7,620 ಚದರಡಿಯ ನಾಲ್ಕು ಆಫೀಸ್ ಕಟ್ಟಡಗಳನ್ನು ಖರೀದಿಸಿದ್ದಾರೆ. ಇದಕ್ಕಾಗಿ 31.08 ಕೋಟಿ ರೂಪಾಯಿ ಪಾವತಿಸಿದ್ದಾರೆ. ಇವು ಅಂಧೇರಿಯ ವೀರ ದೇಸಾಯಿ ರಸ್ತೆಯಲ್ಲಿರುವ ಕಟ್ಟಡಗಳು.
(6 / 9)
ಅಜಯ್ ದೇವ್‌ಗನ್ ಅವರು ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ನಾಲ್ಕು ಆಫೀಸ್ ಕಟ್ಟಡಗಳಿಗೆ ಹೂಡಿಕೆ ಮಾಡಿದ್ದಾರೆ. ಇದು ಸುಮಾರು 45.09 ಕೋಟಿ ರೂಪಾಯಿ ಮೌಲ್ಯದ ಪ್ರಾಪರ್ಟಿ ಡೀಲ್.
(7 / 9)
ಕಾಜೋಲ್ ಅವರು ಈ ವರ್ಷ ಆಗಸ್ಟ್ ತಿಂಗಳಲ್ಲಿ 1,905 ಚದರಡಿಯ ಆಫೀಸ್ ಸ್ಥಳಾವಕಾಶ ಖರೀದಿಸಿದ್ದಾರೆ. ಒಶಿವಾರದ ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ಈ ಸ್ಪೇಸ್ ಅನ್ನು 7.64 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. (Instagram/@kajol)
(8 / 9)
ಈ ವರ್ಷ ಪೆಬ್ರವರಿ ತಿಂಗಳಲ್ಲಿ ರಾಜ್ ಕಪೂರ್ ಅವರ ಮುಂಬೈ ಲಗ್ಷುರಿ ಹೌಸಿಂಗ್ ಪ್ರಾಜೆಕ್ಟ್ ಅನ್ನು ಗಾಡ್ರೆಜ್ ಪ್ರಾಪರ್ಟಿ ಲಿಮಿಟೆಡ್ ಸ್ವಾಧೀನ ಪಡಿಸಿಕೊಂಡಿತ್ತು. ಇದು ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಡೀಲ್ ಎನ್ನಲಾಗಿದೆ.
ಇತರ ಗ್ಯಾಲರಿಗಳು