logo
ಕನ್ನಡ ಸುದ್ದಿ  /  ಮನರಂಜನೆ  /  Diet Tips: ದೀಪಿಕಾ ಪಡುಕೋಣೆ ಸಪುರ ಮೈಕಟ್ಟು ರಹಸ್ಯ ಬಯಲು; ತೂಕ ಇಳಿಸಲು ಅನ್ನ ತಿನ್ನೋಲ್ವಂತೆ, ಹೀಗಿದೆ ಅವರ ಆಹಾರಕ್ರಮ- ವ್ಯಾಯಾಮ ದಿನಚರಿ

Diet Tips: ದೀಪಿಕಾ ಪಡುಕೋಣೆ ಸಪುರ ಮೈಕಟ್ಟು ರಹಸ್ಯ ಬಯಲು; ತೂಕ ಇಳಿಸಲು ಅನ್ನ ತಿನ್ನೋಲ್ವಂತೆ, ಹೀಗಿದೆ ಅವರ ಆಹಾರಕ್ರಮ- ವ್ಯಾಯಾಮ ದಿನಚರಿ

Praveen Chandra B HT Kannada

Nov 24, 2023 01:18 PM IST

google News

ದೀಪಿಕಾ ಪಡುಕೋಣೆ ಆಹಾರಕ್ರಮ- ವ್ಯಾಯಾಮ ದಿನಚರಿ

    • Deepkia Padukone Diet Plan: ದೀಪಿಕಾ ಪಡುಕೋಣೆ ಸೌಂದರ್ಯದ ರಹಸ್ಯವೇನು? ತೂಕ ಹೆಚ್ಚಳವಾಗದಂತೆ ಅವರು ನಿತ್ಯ ಏನು ತಿನ್ನುತ್ತಾರೆ. ಅವರ ವರ್ಕೌಟ್‌ ಪ್ಲ್ಯಾನ್‌ ಏನಿರುತ್ತದೆ ಎಂದೆಲ್ಲ ಸಂದೇಹ ನಿಮ್ಮಲ್ಲಿರಬಹುದು. ಅವರ ಡಯೆಟ್‌ ಮತ್ತು ವರ್ಕೌಟ್‌ ಕುರಿತು ಇಲ್ಲೊಂದಿಷ್ಟು ವಿವರಗಳಿವೆ.
ದೀಪಿಕಾ ಪಡುಕೋಣೆ ಆಹಾರಕ್ರಮ- ವ್ಯಾಯಾಮ ದಿನಚರಿ
ದೀಪಿಕಾ ಪಡುಕೋಣೆ ಆಹಾರಕ್ರಮ- ವ್ಯಾಯಾಮ ದಿನಚರಿ (Photos: google, instagram)

Deepika Padukone diet plan and workout: ಬಾಲಿವುಡ್‌ ನಟಿಯರ ಸಪುರ ಮೈಕಟ್ಟು, ಹೊಳೆಯುವ ಚರ್ಮ, ಸುಂದರ ಕೇಶರಾಶಿ ಇತ್ಯಾದಿಗಳನ್ನು ನೋಡುವಾಗ ಇವರು ಪ್ರತಿನಿತ್ಯ ಯಾವ ರೀತಿಯ ಡಯೆಟ್‌ ಮಾಡುತ್ತಾರೆ. ನಾವು ತಿನ್ನೋದು ಕಡಿಮೆ ಮಾಡಿದ್ರೂ ಹೊಟ್ಟೆ, ಸೊಂಟದ ಬೆಲ್ಟ್‌ ಕಡಿಮೆಯಾಗೋದಿಲ್ಲ ಎಂದು ಸಾಕಷ್ಟು ನಾರಿಯರು ತಲೆಕೆಡಿಸಿಕೊಳ್ಳುತ್ತಾರೆ. ಇವರ ಸೌಂದರ್ಯ ರಾಶಿಯ ಗುಟ್ಟೇನು ಎಂಬ ಸಂದೇಹ ಎಲ್ಲರಲ್ಲಿಯೂ ಇರುತ್ತದೆ. ತೆರೆ ಮೇಲೆ ಸುಂದರವಾಗಿ ಕಾಣುವ ಇವರೆಲ್ಲರೂ ಪ್ರತಿನಿತ್ಯ ಸಾಕಷ್ಟು ಕಠಿಣ ಆಹಾರ ಕ್ರಮ ಅನುಸರಿಸುತ್ತಾರೆ. ಸೂಕ್ತ ಮಾರ್ಗದರ್ಶನದೊಂದಿಗೆ ಸೆಲೆಬ್ರಿಟಿಗಳ ಲೈಫ್‌ಸ್ಟೈಲ್‌ ಪಾಲಿಸುವ ಮೂಲಕ ಸಾಮಾನ್ಯ ಮಹಿಳೆಯರೂ ತಮ್ಮ ಆರೋಗ್ಯ, ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಡಯೆಟ್‌ ಪ್ಲ್ಯಾನ್‌ ಏನು? ಅವರು ಪ್ರತಿನಿತ್ಯ ಏನು ಆಹಾರ ಸೇವಿಸ್ತಾರೆ. ಏನು ಆಹಾರ ಸೇವಿಸುವುದಿಲ್ಲ. ತೂಕ ಇಳಿಕೆಗೆ ಅವರು ನಡೆಸುವ ಕ್ರಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಹರ್‌ಝಿಂದಗಿ ವೆಬ್‌ಸೈಟ್‌ನಲ್ಲಿ ಒಂದಿಷ್ಟು ಮಾಹಿತಿ ದೊರಕಿದೆ. ಮೊದಲಿಗೆ ದೀಪಿಕಾ ಪಡುಕೋಣೆ ಅವರು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಏನು ಸೇವಿಸ್ತಾರೆ, ಅವರ ಆಹಾರ ಕ್ರಮ ಏನು ಎಂದು ತಿಳಿದುಕೊಳ್ಳೋಣ. ಇದನ್ನು ಓದಿ: ನಾನು ಹರೆಯದಲ್ಲಿದ್ದಾಗ ಹೊಸ ನಗರದಲ್ಲಿ ತುಂಬಾ ಕಷ್ಟಪಟ್ಟಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಡಯೆಟ್‌ ಪ್ಲ್ಯಾನ್‌

ಬಾಲಿವುಡ್‌ನ ಜನಪ್ರಿಯ ನಟಿ, ಕರ್ನಾಟಕದ ಕರಾವಳಿ ಮೂಲದ ಬೆಡಗಿ ದೀಪಿಕಾ ಪಡುಕೋಣೆ ಅವರು ಹೊಟ್ಟೆ ತುಂಬಾ ತಿನ್ನೋ ಜಾತಿಗೆ ಸೇರಿಲ್ಲ. ಅಂದರೆ, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದಿಲ್ಲ. ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತುಸು ತಿನ್ನುವ ಅಭ್ಯಾಸ ಅವರಿಗಿದೆ. ಅವರು ಚಾಕೋಲೇಟ್‌ ಕೂಡ ತಿನ್ನುತ್ತಾರೆ. ಆದರೆ, ಕೊಂಚ ಪ್ರಮಾಣದಲ್ಲಿ ಮಾತ್ರ ಚಾಕೋಲೇಟ್‌ ತಿನ್ನುತ್ತಾರೆ.

ಡಯೆಟ್‌ ಮತ್ತು ವರ್ಕೌಟ್‌ ನಡುವೆ ಸಮತೋಲನವೇ ಇವರ ಫಿಟ್‌ನೆಸ್‌ ಗುಟ್ಟು. ಜತೆಗೆ, ಡ್ಯಾನ್ಸ್‌ ಮಾಡುವುದು ಕೂಡ ಇವರ ಸಪುರ ಮೈಕಟ್ಟು ಕಾಪಾಡಿಕೊಳ್ಳಲು ಸಹಕಾರಿಯಾಗಿದೆಯಂತೆ ಎಂದು ಬಾಲಿವುಡ್‌ಶಾದೀಸ್‌ನ ವರದಿಯೊಂದರಲ್ಲಿ ತಿಳಿಸಲಾಗಿದೆ. ಇದನ್ನು ನೋಡಿ: ಕೆಂಪಾದ ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌, ಫೋಟೋಗಳನ್ನು ನೋಡಿ

ದೀಪಿಕಾ ಪಡುಕೋಣೆ ಬೆಳಗ್ಗೆ ಎದ್ದು ಬೆಚ್ಚಗಿನ ನೀರುಕುಡಿಯುತ್ತಾರೆ. ಡಯೆಟ್‌ ಎಂದು ನಮ್ಮ ಕರ್ನಾಟಕದ ಆಹಾರವನ್ನು ಇವರು ಮರೆತಿಲ್ಲ. ಕಡಿಮೆ ಫ್ಯಾಟ್‌ನ ಹಾಲಿನೊಂದಿಗೆ ಉಪಮಾ, ಇಡ್ಲಿ ದೋಸೆ ಅಥವಾ ಮೊಟ್ಟೆಯ ಬಿಳಿ ಇವರ ಬ್ರೇಕ್‌ಫಾಸ್ಟ್‌ನಲ್ಲಿ ಇರುತ್ತದೆಯಂತೆ. ಮಧ್ಯಾಹ್ನದ ಊಟಕ್ಕೆ ಇವರು ಒಣ ಹಣ್ಣುಗಳು ಮತ್ತು ಫಿಲ್ಟರ್‌ ಕಾಫಿ ಕುಡಿಯುತ್ತಾರೆ. ಇದರೊಂದಿಗೆ ಆಯಾ ಋತುಮಾನದ ಹಣ್ಣುಗಳು, ತಾಜಾ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯುತ್ತಾರೆ. ಊಟ ಮತ್ತು ಡಿನ್ನರ್‌ಗೆ ಇವರು ಸಾಮಾನ್ಯವಾಗಿ ಚಪಾತಿ, ತರಕಾರಿಗಳು, ಗ್ಲಿಲ್ಡ್‌ ಫಿಶ್‌ ಸೇವಿಸುತ್ತಾರೆ. ರಾತ್ರಿ ಊಟಕ್ಕೆ ಇವರು ಯಾವುದೇ ಕಾರಣಕ್ಕೆ ಅನ್ನ ತಿನ್ನೋದಿಲ್ವಂತೆ.

ಕನಿಷ್ಠ ಕಾರ್ಬೊಹೈಡ್ರೆಟ್‌ ಮತ್ತು ಫ್ಯಾಟ್‌ ಆಹಾರಗಳನ್ನು ಸೇವಿಸುತ್ತಾರೆ. ಅಂದರೆ, ಹಣ್ಣಿನ ಸಲಾಡ್‌ಗಳನ್ನು ಹೆಚ್ಚು ಸೇವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಇವರು ತಪ್ಪಿಸೋದಿಲ್ಲ. ವಿಟಮಿನ್‌, ಪ್ರೊಟಿನ್ಸ್‌ ಮತ್ತು ಫೈಬರ್‌ ಉತ್ತಮವಾಗಿರುವ ಆಹಾರಗಳನ್ನು ಬ್ರೇಕ್‌ಫಾಸ್ಟ್‌, ಲಂಚ್‌ ಮತ್ತು ಡಿನ್ನರ್‌ಗೆ ಸೇವಿಸುತ್ತಾರೆ.

ದೀಪಿಕಾ ಪಡುಕೋಣೆ ವರ್ಕೌಟ್‌ ಹೇಗಿರುತ್ತದೆ?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ವರ್ಕೌಟ್‌ ಕೂಡ ಅವರ ಸಪುರ ಮೈಕಟ್ಟು ಮತ್ತು ಸೌಂದರ್ಯದ ಗುಟ್ಟಾಗಿದೆ. ಇವರು ವಾರ್ಮ್‌ಅಪ್‌ ಎಕ್ಸರ್‌ಸೈಸ್‌ ಮಾಡೋದನ್ನು ತಪ್ಪಿಸೋದಿಲ್ಲ. ಇದರೊಂದಿಗೆ ಹೆವಿ ವರ್ಕೌಟ್‌ ಕೂಡ ಮಾಡುತ್ತಾರೆ. ತೂಕನಷ್ಟಕ್ಕೆ ಪೈಲಟ್ಸ್‌ ವ್ಯಾಯಾಮಗಳನ್ನೂ (Pilates workout for weight loss) ಮಾಡುತ್ತಾರೆ. ಎಲ್ಲಾ ವರ್ಕೌಟ್‌ ಮುಗಿಸಿದ ಬಳಿಕ ಇವರು ಸ್ಟ್ರೆಚ್ಚಿಂಗ್‌ ಮಾಡಲು ಮರೆಯೋದಿಲ್ವಂತೆ. ಅಂದಹಾಗೆ, ದೀಪಿಕಾ ಪಡುಕೋಣೆ ಅವರು ವಿವಿಧ ಬಗೆಯ ವ್ಯಾಯಾಮಗಳನ್ನು ಮಾಡುತ್ತಾರೆ. ತನ್ನ ಫಿಟ್‌ನೆಸ್‌ ರುಟಿನ್‌ನಲ್ಲಿ ಕಿಕ್‌ಬಾಕ್ಸಿಂಗ್‌ ಮೂಡುತ್ತಾರೆ. ವರ್ಕೌಟ್‌ ಮಾಡುವಾಗ ಮ್ಯೂಸಿಕ್‌ ಕೇಳುವುದು ಇವರಿಗೆ ಇಷ್ಟವಂತೆ. ಇದರೊಂದಿಗೆ ಡ್ಯಾನ್ಸ್‌, ಸ್ವಿಮ್ಮಿಂಗ್‌, ಬ್ಯಾಂಡ್ಮಿಟನ್‌ ಆಟ (ಅಪ್ಪ ಜನಪ್ರಿಯ ಬ್ಯಾಂಡ್ಮಿಟನ್‌ ಆಟಗಾರ ಅಲ್ವೇ) ಇವರ ಫಿಟ್‌ನೆಸ್‌ ಗುಟ್ಟಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ