logo
ಕನ್ನಡ ಸುದ್ದಿ  /  ಮನರಂಜನೆ  /  ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಫೈಟರ್‌ಗೆ ಬರಪೂರ ಫಸಲು; 4 ದಿನಗಳಲ್ಲಿ ಗಳಿಕೆ 200 ಕೋಟಿಗೂ ಮಿಗಿಲು

ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಫೈಟರ್‌ಗೆ ಬರಪೂರ ಫಸಲು; 4 ದಿನಗಳಲ್ಲಿ ಗಳಿಕೆ 200 ಕೋಟಿಗೂ ಮಿಗಿಲು

Praveen Chandra B HT Kannada

Jan 29, 2024 05:17 PM IST

ಫೈಟರ್‌ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ

  • Fighter worldwide box office collection: ಫೈಟರ್‌ ಸಿನಿಮಾವು ಕಳೆದ ನಾಲ್ಕು ದಿನಗಳಲ್ಲಿ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 25 ದಶಲಕ್ಷ ಡಾಲರ್‌ (ಸುಮಾರು 207 ಕೋಟಿ ರೂಪಾಯಿ) ಗಳಿಕೆ ಮಾಡಿದೆ. ದೀಪಿಕಾ ಪಡುಕೋಣೆ ಮತ್ತು ಹೃತಿಕ್‌ ರೋಷಣ್‌ ಪ್ರಮು ಪಾತ್ರಗಗಳಲ್ಲಿ ನಟಿಸಿರುವ ಫೈಟರ್‌ ಸಿನಿಮಾದ ಗಳಿಕೆ ನಿಧಾನವಾಗಿ ಏರಿಕೆ ಕಾಣುತ್ತಿದೆ.

ಫೈಟರ್‌ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ
ಫೈಟರ್‌ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ

Fighter worldwide box office collection: ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಫೈಟರ್‌ ಸಿನಿಮಾ ತಂಡಕ್ಕೆ ಸಂಭ್ರಮಿಸಲು ಇನ್ನೊಂದು ಕಾರಣ ದೊರಕಿದೆ. ಕಳೆದ ನಾಲ್ಕು ದಿನಗಳಲ್ಲಿ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 25 ದಶಲಕ್ಷ ಡಾಲರ್‌ (ಸುಮಾರು 207 ಕೋಟಿ ರೂಪಾಯಿ) ಗಳಿಕೆ ಮಾಡಿದೆ. ದೀಪಿಕಾ ಪಡುಕೋಣೆ ಮತ್ತು ಹೃತಿಕ್‌ ರೋಷಣ್‌ ಪ್ರಮು ಪಾತ್ರಗಗಳಲ್ಲಿ ನಟಿಸಿರುವ ಫೈಟರ್‌ ಸಿನಿಮಾದ ಗಳಿಕೆ ನಿಧಾನವಾಗಿ ಏರಿಕೆ ಕಾಣುತ್ತಿದೆ ಎಂದು ಡೆಡ್‌ಲೈನ್‌.ಕಾಂನ ಬಾಕ್ಸ್‌ ಆಫೀಸ್‌ ವರದಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಜಾಗತಿಕ ಗಳಿಕೆಯ 251.1 ದಶಲಕ್ದಲ್ಲಿ 4.3 ದಶಲಕ್ಷ ಮೊತ್ತವು ಉತ್ತರ ಅಮೆರಿಕದಿದ ಕಲೆಕ್ಟ್‌ ಆಗಿದೆ ಎಂದು ಪರ್‌ಕಂಸ್ಕೋರ್‌ ತಾಣದ ವರದಿ ತಿಳಿಸಿದೆ. ಭಾರತದಲ್ಲಿ ಫೈಟರ್‌ ಸಿನಿಮಾವು ಸುಮಾರು 120 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜಾಗತಿಕವಾಗಿ ಸುಮಾರು 15 ದೇಶಗಳಲ್ಲಿ 150 ಸ್ಕ್ರೀನ್‌ಗಳಲ್ಲಿ ಐಮ್ಯಾಕ್ಸ್‌ನಲ್ಲಿ ಫೈಟರ್‌ ಪ್ರದರ್ಶನಗೊಳ್ಳುತ್ತಿದ್ದು ಸುಮಾರು 1.4 ದಶಲಕ್ಷ ಡಾಲರ್‌ ಗಳಿಕೆ ಮಾಡಿದೆ.

ಫೈಟರ್‌ ಸಿನಿಮಾವು ಬಿಡುಗಡೆಯಾದ ದಿನದಂದು 24.60 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಸುಮಾರು 41.20 ಕೋಟಿ ರೂಪಾಯಿ ಇದೆ. ಗಣರಾಜ್ಯೋತ್ಸವದ ಮರುದಿನ ಅಂದರೆ ಶನಿವಾರ 27.60 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಾಲ್ಕನೇ ದಿನ ಅಂದರೆ ಭಾನುವಾರ 30.20 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಫೈಟರ್‌ ಸಿನಿಮಾವು 123 ಕೋಟಿ ರೂ. ಗಳಿಕೆ ಮಾಡಿದೆ.

ಫೈಟರ್‌ ಸಿನಿಮಾದ ಬಗ್ಗೆ: ಇದೇ ಮೊದಲ ಬಾರಿಗೆ ಹೃತಿಕ್‌ ರೋಷಣ್‌ ಮತ್ತು ದೀಪಿಕಾ ಪಡುಕೋಣೆ ಜತೆಯಾಗಿ ನಟಿಸಿದ್ದಾರೆ. ಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಸಂಜೀವ್ ಜೈಸ್ವಾಲ್, ರಿಷಭ್ ಸಾಹ್ನಿ ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ. ಮಾರ್ಫ್ಲಿಕ್ಸ್‌ ಫಿಕ್ಚರ್ಸ್‌ ಜೆ ವಿಯಾಕಾಮ್‌18 ಸ್ಟುಡಿಯೋಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ. ಭಾರತೀಯ ವಾಯುಪಡೆಯ ಸಾಹಸ, ದೇಶಭಕ್ತಿ ಇತ್ಯಾದಿ ವಿಷಯಗಳು ಚಿತ್ರದಲ್ಲಿದೆ. ಫೈಟರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಆದರೆ, ಈ ಸಿನಿಮಾ ವಾಹ್‌ ಎನಿಸುವಂತಹ ಯಾವುದೇ ಕ್ರೇಜ್‌ ಹುಟ್ಟುಹಾಕಿಲ್ಲ. ತಕ್ಕಮಟ್ಟಿಗೆ ಉತ್ತಮ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್ ಚಿತ್ರದಲ್ಲಿ ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಲೀಡರ್‌ಗಳಾಗಿ ನಟಿಸಿದ್ದಾರೆ. ಇವರಿಬ್ಬರ ಜತೆಗೆ ಅನಿಲ್‌ ಕಪೂರ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೃತಿಕ್‌ ರೋಷನ್‌ ಅವರು ಸ್ಕ್ವಾಡ್ರಾನ್‌ ಲೀಡರ್‌ ಶಂಶೀರ್‌ ಪಠಾನಿಯಾ ಆಲಿಯಾಸ್‌ ಪಟ್ಟಿಯಾಗಿ, ದೀಪಿಕಾ ಪಡುಕೋಣೆ ಅವರು ಸ್ಕ್ವಾಡ್ರಾನ್‌ ಲೀಡರ್‌ ಮಿನಲ್‌ ರಾಥೋರ್‌ ಆಲಿಯಾಸ್‌ ಮಿನಿಯಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್‌ ಅವರು ಗ್ರೂಪ್‌ ಕ್ಯಾಪ್ಟನ್‌ ರಾಕೇಶ್‌ ಜೈ ಸಿಂಗ್‌ ಆಲಿಯಾಸ್‌ ರಾಕಿಯಾಗಿ ನಟಿಸಿದ್ದಾರೆ. ದೇಶಭಕ್ತಿ, ಭಾರತೀಯ ವಾಯುಪಡೆಯು ಯುದ್ಧವಿಮಾನಗಳಲ್ಲಿ ಸಾಹಸ, ಪ್ರೇಮಕಥೆ, ದೇಶಭಕ್ತಿ ಸೇರಿದಂತೆ ಹಲವು ವಿಷಯಗಳು ಫೈಟರ್‌ ಸಿನಿಮಾದೊಳಗೆ ಇವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ