logo
ಕನ್ನಡ ಸುದ್ದಿ  /  ಮನರಂಜನೆ  /  ಬಾಲಿವುಡ್‌ನ 10 ದುಬಾರಿ ವಿವಾಹ ವಿಚ್ಛೇದನ; ಕೋಟ್ಯಾಂತರ ಪರಿಹಾರ ನೀಡಿ ಸಂಗಾತಿಯಿಂದ ದೂರ ಸರಿದ ಸೆಲೆಬ್ರಿಟಿಗಳಿವರು

ಬಾಲಿವುಡ್‌ನ 10 ದುಬಾರಿ ವಿವಾಹ ವಿಚ್ಛೇದನ; ಕೋಟ್ಯಾಂತರ ಪರಿಹಾರ ನೀಡಿ ಸಂಗಾತಿಯಿಂದ ದೂರ ಸರಿದ ಸೆಲೆಬ್ರಿಟಿಗಳಿವರು

Praveen Chandra B HT Kannada

Dec 06, 2023 05:09 PM IST

ಬಾಲಿವುಡ್‌ನ 10 ದುಬಾರಿ ವಿವಾಹ ವಿಚ್ಛೇದನ

    • Most Expensive Divorces in Bollywood: ಅಮಿರ್‌ ಖಾನ್‌- ರೀನಾ ದತ್ತಾ, ಅಮೃತ ಸಿಂಗ್‌ ಮತ್ತು ಸೈಫ್‌ ಆಲಿ ಖಾನ್‌, ಹೃತಿಕ್‌ ರೋಷನ್‌- ಸುಸ್ಸಾನೆ ಖಾನ್‌, ಆದಿತ್ಯ ಛೋಪ್ರಾ- ಪಾಯಲ್‌ ಖನ್ನಾ ಸೇರಿದಂತೆ ಬಾಲಿವುಡ್‌ನ ಪ್ರಮುಖ ಡಿವೋರ್ಸ್‌ ಜೋಡಿಯ ವಿವರ ಇಲ್ಲಿದೆ.
ಬಾಲಿವುಡ್‌ನ 10 ದುಬಾರಿ ವಿವಾಹ ವಿಚ್ಛೇದನ
ಬಾಲಿವುಡ್‌ನ 10 ದುಬಾರಿ ವಿವಾಹ ವಿಚ್ಛೇದನ

Most Expensive Divorces in Bollywood: ಬಾಲಿವುಡ್‌ನ ಒಂದೆಡೆ ಅಪರೂಪದ ಪ್ರೇಮಕಥೆಗಳಂತೆ ಸಂಗಾತಿ ಜತೆ ಜೀವನ ಸಾಗಿಸುವ ಸೆಲೆಬ್ರೆಟಿಗಳಿದ್ದಾರೆ. ಇನ್ನೊಂದೆಡೆ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿವಾಹ ವಿಚ್ಛೇದನ ನೀಡಿದವರು ಇದ್ದಾರೆ. ಈ ರೀತಿ ವಿವಾಹ ವಿಚ್ಛೇದನ ನೀಡಿದವರಲ್ಲಿ ಯಾರಿಗೆ ಹಣಕಾಸು ವಿಷಯದಲ್ಲಿ ಡಿವೋರ್ಸ್‌ ದುಬಾರಿಯಾಗಿತ್ತು ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: ವಿಚ್ಛೇದನ ಪಡೆದ ಕನ್ನಡ ಕಿರುತೆರೆ ನಟನಟಿಯರು: ಪದ್ಮಜಾ ರಾವ್‌, ಕಿರಿಕ್‌ ಕೀರ್ತಿ ಸೇರಿದಂತೆ ಇಲ್ಲಿದೆ ಡಿವೋರ್ಸ್‌ ಪಡೆದವರ ವಿವರ

ಟ್ರೆಂಡಿಂಗ್​ ಸುದ್ದಿ

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಅಮಿರ್‌ ಖಾನ್‌- ರೀನಾ ದತ್ತಾ

ಮಿಸ್ಟರ್‌ ಫರ್ಮೆಕ್ಷನಿಸ್ಟ್‌ ಎಂದೇ ಖ್ಯಾತಿ ಪಡೆದ ಅಮಿರ್‌ ಖಾನ್‌ ಅವರ ಮೊದಲ ಪತ್ನಿ ಹೆಸರು ರೀನಾ ದತ್ತ. ಈಕೆಯ ಪ್ರೀತಿಗಾಗಿ ಅಮಿರ್‌ ಖಾನ್‌ ಸಾಕಷ್ಟು ಪ್ರಯತ್ನಿಸಿದ್ದರು. ರಕ್ತದಲ್ಲಿ ಲವ್‌ ಲೆಟರ್‌ ಎಲ್ಲಾ ಬರೆದಿದ್ರಂತೆ. 1986ರ ಏಪ್ರಿಲ್‌ 18ರಂದು ಅಮಿರ್‌ ಖಾನ್‌ ಮತ್ತು ರೀನಾ ದತ್ತರಿಗೆ ವಿವಾಹವಾಗಿತ್ತು. ಇವರಿಗೆ ಜುನೈದ್‌ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು ಹದಿನಾರು ವರ್ಷ ಜತೆಯಾಗಿ ಬಾಳಿದ ಈ ದಂಪತಿ ಆಮೇಲೆ ಡಿವೋರ್ಸ್‌ ನೀಡಿದ್ದಾರೆ. ಇಬ್ಬರು 2002ರಲ್ಲಿ ವಿವಾಹ ವಿಚ್ಛೇದನ ನೀಡಿದ್ದರು. ಈ ಡಿವೋರ್ಸ್‌ಗಾಗಿ ಅಮಿರ್‌ ಖಾನ್‌ ಅವರು 50 ಕೋಟಿ ರೂಪಾಯಿ ಪರಿಹಾರವನ್ನು ಪತ್ನಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಡಿವೋರ್ಸ್‌ ನೀಡಿದ್ದರೂ ಇವರಿಬ್ಬರೂ ಈಗಲೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.

ಅಮೃತ ಸಿಂಗ್‌ ಮತ್ತು ಸೈಫ್‌ ಆಲಿ ಖಾನ್‌

ಇವರಿಬ್ಬರದ್ದು ಪ್ರೇಮ ವಿವಾಹ. ಮದುವೆಯಾಗಿ ಸುಮಾರು ಹನ್ನೆರಡು ವರ್ಷ ಎಲ್ಲವೂ ಚೆನ್ನಾಗಿತ್ತು. ಇಬ್ಬರ ಜಗಳ ಜೋರಾಗಿ ಕೊನೆಗೆ ಬೇರೆಯಾಗುವ ನಿರ್ಧಾರ ತಳೆದರು. ಅಮೃತಾಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮುಕ್ಕಳಿದ್ದರು. ಸೈಫ್‌ ಆಲಿಖಾನ್‌ ಅವರು ವಿವಾಹ ವಿಚ್ಚೇದನ ಪರಿಹಾರವಾಗಿ ಐದು ಕೋಟಿ ರೂಪಾಯಿ ನೀಡಿದ್ರಂತೆ.

ಹೃತಿಕ್‌ ರೋಷನ್‌- ಸುಸ್ಸಾನೆ ಖಾನ್‌

ತನ್ನ ಬಹುಕಾಲದ ಗೆಳತಿ ಸುಸ್ಸಾನೆ ಖಾನ್‌ರನ್ನು ಹೃತಿಕ್‌ ರೋಷನ್‌ 2000ರಲ್ಲಿ ವಿವಾಹವಾಗಿದ್ದರು. ಟ್ರಾಫಿಕ್‌ ಸಿಗ್ನಲ್‌ ಒಂದಾದ ಇಬ್ಬರ ಕಣ್ಣುಗಳು, ಬಳಿಕ ಲವ್‌ ಆಗಿ ವಿವಾಹವೂ ಆಗಿತ್ತು. ಡಿಸೆಂಬರ್‌ 13ರಂದು ತನ್ನ 13ನೇ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನ ಹೃತಿಕ್‌ ರೋಷನ್‌ ಅವರು ಅಧಿಕೃತವಾಗಿ ನಾವಿಬ್ಬರು ದೂರ ಆಗುತ್ತಿದ್ದೇವೆ ಎಂದು ಘೋಷಿಸಿದ್ದರು. ಪರಿಹಾರವಾಗಿ ಸುಸ್ಸಾನೆ ಅವರು 400 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

ಫರ್ಹಾನ್‌ ಅಕ್ತರ್‌- ಅಧುನಾ ಭಾಬಾನಿ

ಬಾಲಿವುಡ್‌ ನಟ, ನಿರ್ದೇಶಕ ಫರ್ಹಾನ್‌ ಅಕ್ತರ್‌ ಅವರು ತನ್ನ ಪತ್ನಿ ಅಧುನಾ ಭಾಬಾನಿ ಅವರ ವಿವಾಹ ಸಂಬಂಧವೂ ಸುಮಾರು 16 ವರ್ಷಗಳ ಬಳಿಕ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಇವರ ವಿವಾಹ ಪರಿಹಾರವೂ ಕೋಟ್ಯಾಂತರ ಲೆಕ್ಕದಲ್ಲಿದೆ ಎಂದು ವರದಿಗಳು ಹೇಳಿವೆ.

ಆದಿತ್ಯ ಛೋಪ್ರಾ- ಪಾಯಲ್‌ ಖನ್ನಾ

2001ರಲ್ಲಿ ಇವರ ವಿವಾಹವಾಗಿತ್ತು. ಈ ಸಂದರ್ಭದಲ್ಲಿ ರಾಣಿ ಮುಖರ್ಜಿ ಮತ್ತು ಆದಿತ್ಯ ಛೋಪ್ರಾರಿಗೆ ಪರಿಚಯವಾಗಿತ್ತು. ಇದು ಲವ್‌ಗೆ ತಿರುಗಿತ್ತು. ಇದೇ ಕಾರಣಕ್ಕೆ ಆದಿತ್ಯಾ ಚೋಪ್ರಾ ಅವರು ಪಾಯಲ್‌ ಖನ್ನಾಗಿ ಡಿವೋರ್ಸ್‌ ನೀಡಿದ್ದರು. ಈ ಸಂದರ್ಭದಲ್ಲಿ ಸುಮಾರು 50 ಕೋಟಿ ರೂಪಾಯಿ ಪರಿಹಾರ ನೀಡಿದ್ದರು.

ಕರೀಷ್ಮಾ ಕಪೂರ್‌- ಸಂಜಯ್‌ ಕಪೂರ್:‌ ವಿವಾಹ ವಿಚ್ಛೇದನದ ಬಳಿಕ ಮಕ್ಕಳಿಗೆ ಪ್ರತಿತಿಂಗಳು 10 ಲಕ್ಷ ರೂಪಾಯಿ ಬಡ್ಡಿದರ ದೊರಕುವಂತೆ ಸುಮಾರು 14 ಕೋಟಿ ರೂಪಾಯಿ ಬಾಂಡ್‌ ಖರೀದಿಸಿದ್ದರು. ಈ ಮೂಲಕ ವಿವಾಹ ವಿಚ್ಛೇದನ ಪರಿಹಾರವನ್ನು ನೀಡಿದ್ದರು.

ಪ್ರಭುದೇವ-ರಮಲತಾ: 20-25 ಕೋಟಿ ರೂಪಾಯಿ ಮೌಲ್ಯದ ಪ್ರಾಪರ್ಟಿಯನ್ನು ವಿವಾಹ ವಿಚ್ಛೇದನದ ಸಮಯದಲ್ಲಿ ತನ್ನ ಪತ್ನಿಗೆ ಪ್ರಭುದೇವ ನೀಡಿದ್ದರು. ಅಂದರೆ, ಎರಡು ಕಾರುಗಳು, ಎರಡು ಮನೆಗಳು, ಎರಡು ಫ್ಲಾಟ್‌ಗಳನ್ನು ನೀಡಿದ್ದರು.

ಮಲ್ಲಿಕಾ ಅರೋರ- ಅರ್ಬಾಝ್‌ ಖಾನ್‌: ವಿವಾಹ ವಿಚ್ಛೇದನದ ಸಂದರ್ಭದಲ್ಲಿ ಮಲ್ಲಿಕಾ ಅವರು 10-15 ಕೋಟಿ ರೂಪಾಯಿ ಪರಿಹಾರ ಕೇಳಿದ್ದರು.

ಸೊಹೈಲ್‌ ಖಾನ್‌- ಸೀಮಾ ಖಾನ್‌: ಸುಮಾರು 24 ವರ್ಷ ಸಂಸಾರ ನಡೆಸಿದ ಬಳಿ ಡಿವೋರ್ಸ್‌ ನೀಡಿದ್ದರು. ಇವರ ವಿವಾಹ ವಿಚ್ಚೇದನವೂ ಕೋಟ್ಯಾಂತರ ಪರಿಹಾರವನ್ನು ಒಳಗೊಂಡಿತ್ತು ಎಂದು ವರದಿಗಳು ತಿಳಿಸಿವೆ.

ಸಂಜಯ್‌ ದತ್‌- ರಿಯಾ ಪಿಳೈ: 2005ರಲ್ಲಿ ಡಿವೋರ್ಸ್‌ ನೀಡಿದ್ದರು. ವಿವಾಹ ಪರಿಹಾರವಾಗಿ ಸುಮಾರು 8 ಕೋಟಿ ರೂಪಾಯಿ, ಒಂದು ಲಗ್ಷುರಿ ಕಾರ್‌ ನೀಡಿದ್ದರು. ಡಿವೋರ್ಸ್‌ ಬಳಿಕ ರಿಯಾ ಅವರು ಟೆನ್ನಿಸ್‌ ಆಟಗಾರ ಲಿಯಾಂಡರ್ ಪೇಸ್ ಮತ್ತು ಸಂಜಯ್‌ ದತ್‌ ಅವರು ಮಾನ್ಯತರನ್ನು ವಿವಾಹವಾದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ