logo
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಬಿಡುಗಡೆಯಾದ ಟೈಗರ್‌ 3; ಸಲ್ಮಾನ್‌ ಖಾನ್‌- ಕತ್ರಿನಾ ಕೈಫ್‌ ಜೋಡಿಯ ಸಿನಿಮಾವನ್ನು ಆನ್‌ಲೈನ್‌ನಲ್ಲಿ ನೋಡಿ

ಒಟಿಟಿಯಲ್ಲಿ ಬಿಡುಗಡೆಯಾದ ಟೈಗರ್‌ 3; ಸಲ್ಮಾನ್‌ ಖಾನ್‌- ಕತ್ರಿನಾ ಕೈಫ್‌ ಜೋಡಿಯ ಸಿನಿಮಾವನ್ನು ಆನ್‌ಲೈನ್‌ನಲ್ಲಿ ನೋಡಿ

Praveen Chandra B HT Kannada

Jan 07, 2024 11:41 AM IST

ಒಟಿಟಿಯಲ್ಲಿ ಬಿಡುಗಡೆಯಾದ ಟೈಗರ್‌ 3; ಸಲ್ಮಾನ್‌ ಖಾನ್‌- ಕತ್ರಿನಾ ಕೈಫ್‌ ಜೋಡಿಯ ಸಿನಿಮಾ

    • ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಟೈಗರ್‌ 3 ಸಿನಿಮಾವು ಇದೀಗ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 466.63 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಒಟಿಟಿಯಲ್ಲಿ ಬಿಡುಗಡೆಯಾದ ಟೈಗರ್‌ 3; ಸಲ್ಮಾನ್‌ ಖಾನ್‌- ಕತ್ರಿನಾ ಕೈಫ್‌ ಜೋಡಿಯ ಸಿನಿಮಾ
ಒಟಿಟಿಯಲ್ಲಿ ಬಿಡುಗಡೆಯಾದ ಟೈಗರ್‌ 3; ಸಲ್ಮಾನ್‌ ಖಾನ್‌- ಕತ್ರಿನಾ ಕೈಫ್‌ ಜೋಡಿಯ ಸಿನಿಮಾ

ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ನಟಿಸಿರುವ ಬಾಲಿವುಡ್‌ ಚಿತ್ರ ಟೈಗರ್‌ 3 ಇದೀಗ ಒಟಿಟಿಗೆ ಲಗ್ಗೆಯಿಟ್ಟಿದೆ. ಅಮೆಜಾನ್‌ ಪ್ರೈಮ್‌ ವಿಡಿಯದಲ್ಲಿ ಬಿಡುಗಡೆಯಾಗಿರುವ ಟೈಗರ್‌ 3 ಸಿನಿಮಾವನ್ನು ಈಗ ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು. ಮನೆಯಲ್ಲಿ ಮಾತ್ರವಲ್ಲದೆ ಮೊಬೈಲ್‌ ಮೂಲಕ ಎಲ್ಲೆಂದರಲ್ಲಿ ನೋಡಬಹುದು. ಕಳೆದ ವರ್ಷ ದೀಪಾವಳಿ ಹಬ್ಬದ ಅವಧಿಯಲ್ಲಿ ಬಿಡುಗಡೆಯಾಗಿರುವ ಟೈಗರ್‌ 3ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 466.63 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಟೈಗರ್‌ 3 ಬಿಡುಗಡೆ

ಈ ಕುರಿತು ಸಲ್ಮಾನ್‌ ಖಾನ್‌ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಅಪ್‌ಡೇಟ್‌ ನೀಡಿದ್ದಾರೆ. "ಲಾಕ್ಡ್‌, ಲೋಡೆಡ್‌ ಮತ್ತು ರೆಡಿ, ಟೈಗರ್‌ ಆಗಮಿಸಿದ್ದಾನೆ. ಅಮೆಜಾನ್‌ ಪ್ರೈಮ್‌ನಲ್ಲಿ ಮಾತ್ರ ವೀಕ್ಷಿಸಿ" ಎಂದು ಪೋಸ್ಟ್‌ ಮಾಡಿದ್ದಾರೆ. ಇವರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಜತೆಗೆ ಇಮ್ರಾನ್‌ ಹಶ್ಮಿಯೂ ಇದ್ದಾರೆ. ಇವರ ಪೋಸ್ಟ್‌ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಅಂತಿಮವಾಗಿ ವಿಸ್ತೃತ ಆವೃತ್ತಿ ಆಗಮಿಸಿದೆ" "ಬಹುದಿನಗಳಿಂದ ಕಾಯುತ್ತ ಇದ್ದೇವು" ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಟೈಗರ್‌ 3 ಒಂದಿಷ್ಟು ತಡವಾಗಿ ಒಟಿಟಿಗೆ ಆಗಮಿಸಿದೆ. ಕ್ರಿಸ್ಮಸ್‌ ಹಬ್ಬದ ವೇಳೆಗೆ ಈ ಸಿನಿಮಾ ಒಟಿಟಿಗೆ ಆಗಮಿಸುವ ನಿರೀಕ್ಷೆಯಿತ್ತು. ಹೊಸ ವರ್ಷದ ದಿನವಾದರೂ ಬಿಡುಗಡೆಯಾಗಬಹುದು ಎನ್ನಲಾಗಿತ್ತು. ಬಾಲಿವುಡ್‌ ಚಿತ್ರಗಳನ್ನು ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕನಿಷ್ಠ ಎಂಟು ವಾರಗಳ ಬಳಿಕ ಬಿಡುಗಡೆ ಮಾಡುವ ಸಂಪ್ರದಾಯವಿದೆ. ಈಗ ಟೈಗರ್‌ 3 ಒಟಿಟಿಗೆ ಆಗಮಿಸಿದ್ದು, ಕತ್ರಿನಾ ಕೈಫ್‌ ಸಲ್ಮಾನ್‌ ಖಾನ್‌ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಟೈಗರ್‌ 3 ಸಿನಿಮಾದ ಕುರಿತು

ಮನೀಷ್‌ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ಟೈಗರ್‌ 3 ಸಿನಿಮಾವನ್ನು ಯಶ್‌ ರಾಜ್‌ ಫಿಲಂಸ್‌ ನಿರ್ಮಾಣ ಮಾಡಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ, ರಿದ್ಧಿ ಡೋಗ್ರಾ, ಅಶುತೋಷ್ ರಾಣಾ, ರೇವತಿ, ಶಾರುಖ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಅನೇಕ ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟೈಗರ್‌ 3 ಸಿನಿಮಾದ ರಿವ್ಯೂ

ಕಳೆದ ಎರಡು ಟೈಗರ್‌ ಸಿನಿಮಾಗಳ ಕಥೆಯಂತೆ ಇದೂ ಸಹ ಸ್ಪೈ ಥ್ರಿಲ್ಲರ್‌ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಟೈಗರ್‌ (ಸಲ್ಮಾನ್‌ ಖಾನ್‌) ಒಬ್ಬ ರಾ ಏಜೆಂಟ್‌. ಆತನ ಪತ್ನಿ ಜೋಯಾ (ಕತ್ರಿನಾ ಕೈಫ್‌) ISI ನಲ್ಲಿ ಕೆಲಸ ಮಾಡುವವಳು. ಈ ದಂಪತಿ ಒಟ್ಟಿಗೆ ಸೇರಿ ಭಯೋತ್ಪಾದಕ ವಿಧ್ವಂಸಕ ಕೃತ್ಯಕ್ಕೆ ಮುಂದಾಗುವ ಅತೀಶ್‌ನನ್ನು (ಇಮ್ರಾನ್‌ ಹಶ್ಮಿ) ಸೆರೆ ಹಿಡಿದು, ಆತನ ನಿಜಬಣ್ಣವನ್ನು ಪಾಕಿಸ್ತಾನದ ಮುಂದೆ ಬಯಲು ಮಾಡಬೇಕೆಂಬುದು ಈ ಜೋಡಿಯ ಪಣ. ಆತನನ್ನು ಈ ಜೋಡಿ ಹೇಗೆ ಹಿಡಿಯುತ್ತದೆ? ಎಂಬುದೇ ಈ ಸಿನಿಮಾದ ಒಂದೆಳೆ. ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ