logo
ಕನ್ನಡ ಸುದ್ದಿ  /  ಮನರಂಜನೆ  /  ಸಣ್ಣ ತಪ್ಪಿಗೂ ಡಿವೋರ್ಸ್‌ ಕೊಡುವ ಈ ಕಾಲದಲ್ಲಿ ನಿಮ್ಮ ಜೋಡಿ ಮಾದರಿ; ಶಿಲ್ಪಾ ಶೆಟ್ಟಿ ರಾಜ್‌ ಕುಂದ್ರಾರಿಗೆ ಶುಭ ಹಾರೈಸಿದ ಫ್ಯಾನ್ಸ್‌

ಸಣ್ಣ ತಪ್ಪಿಗೂ ಡಿವೋರ್ಸ್‌ ಕೊಡುವ ಈ ಕಾಲದಲ್ಲಿ ನಿಮ್ಮ ಜೋಡಿ ಮಾದರಿ; ಶಿಲ್ಪಾ ಶೆಟ್ಟಿ ರಾಜ್‌ ಕುಂದ್ರಾರಿಗೆ ಶುಭ ಹಾರೈಸಿದ ಫ್ಯಾನ್ಸ್‌

Praveen Chandra B HT Kannada

Nov 22, 2023 10:05 AM IST

ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ ವಿವಾಹ ವಾರ್ಷಿಕೋತ್ಸವ

  • Shilpa Shetty and Raj Kundra: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಇಂದು ತಮ್ಮ 14ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಪ್ರೀತಿಯ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ ವಿವಾಹ ವಾರ್ಷಿಕೋತ್ಸವ
ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ ವಿವಾಹ ವಾರ್ಷಿಕೋತ್ಸವ

Shilpa Shetty - Raj Kundra: ಇಂದು ಬಾಲಿವುಡ್‌ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ ವಿವಾಹ ವಾರ್ಷಿಕೋತ್ಸವ. ಇದೇ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿಯವರು ತಮ್ಮ ವೈವಾಹಿಕ ಬಂಧ, ಪ್ರೀತಿ ಕುರಿತು ಹೃದಯ ಸ್ಪರ್ಶಿ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೀವು ನನ್ನ ಪ್ರೀತಿ, ನಿಮ್ಮನ್ನು ನಾನು ಪ್ರೀತಿಸುವೆ, ನೀವು ನನ್ನ ಕುಕ್ಕೀಸ್‌ ಎಂದು ಕ್ಯೂಟ್‌ ಆಗಿ ತನ್ನ ಪತಿಗೆ ವಿವಾಹ ವಾರ್ಷಿಕೋತ್ಸವದ ವಿಶ್‌ ಮಾಡಿದ್ದಾರೆ. ಇದನ್ನು ಓದಿ: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್‌; ಇದು ನಿಜಕ್ಕೂ ಮೇರುಕೃತಿ, ಕತ್ತೆ ಅಂದ್ರು ಅಭಿನಯ ಚಕ್ರವರ್ತಿ

ಟ್ರೆಂಡಿಂಗ್​ ಸುದ್ದಿ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಕುಂದ್ರಾ ಅವರ ಜತೆಗಿರುವ ಹಲವು ಫೋಟೋಗಳನ್ನು ಜೋಡಿಸಿ ಶಿಪಾ ಶೆಟ್ಟಿ ಅವರು ಒಂದು ಶಾರ್ಟ್‌ ವಿಡಿಯೋ ಮಾಡಿದ್ದಾರೆ. "ಹದಿನಾಲ್ಕು ವರ್ಷಗಳು, ಪ್ರೀತಿಸುವೆ, ನನ್ನ ಕುಕ್ಕಿ" ಎಂದು ಬರೆದಿದ್ದಾರೆ. ನೀವು ನನ್ನ ಸಂತೋಷದ ಸ್ಥಳ ಎಂದು ಅವರು ಬರೆದಿದ್ದಾರೆ. ಇದರೊಂದಿಗೆ ಗೌರವ, ಜತೆಯಾಗಿರೋಣ, ಪತಿಯ ಮೇಲಿನ ಪ್ರೀತಿ ಇತ್ಯಾದಿ ಹ್ಯಾಷ್‌ ಟ್ಯಾಗ್‌ ಸೆಲೆಕ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಬದುಕಿನ ಕಥೆ: ಕಾರಣವೇ ಇಲ್ಲದೆ ಸಿನಿಮಾದಿಂದ ಹೊರಹಾಕಿದ್ರು, ಖಿನ್ನತೆ ಕಾಡಿತ್ತು; ಯಶಸ್ಸಿನ ಹಿಂದಿದೆ ಛಲದ ಬದುಕು

ನಿಮ್ಮ ಜೋಡಿ ಮಾದರಿ ಎಂದ ಫ್ಯಾನ್ಸ್‌

ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಅವರಿಗೆ ಹಲವು ಅಭಿಮಾನಿಗಳು ಹ್ಯಾಪಿ ಅನಿವರ್ಸರಿ ಎಂದು ಶುಭ ಹಾರೈಸಿದ್ದಾರೆ. ಅವುಗಳಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು "ಸಣ್ಣ ತಪ್ಪಿಗೂ ಡೈವೋರ್ಸ್‌ ಕೊಡುವ ಈ ಕಾಲಘಟ್ಟದಲ್ಲಿ ನೀವು ನಿಮ್ಮ ವ್ಯಕ್ತಿಯ ಕೈಯನ್ನು ಆತನೆಡೆಗೆ ನಿಮ್ಮ ಪ್ರೀತಿಯೊಂದಿಗೆ ಜತೆಯಾಗಿ ಹಿಡಿದುಕೊಂಡಿರುವಿರಿ. ಈ ಹಿಂದೆ ಜೀವನದಲ್ಲಿ ಏನೇ ಕಷ್ಟ ಬಂದರೂ ಅದೆಲ್ಲವನ್ನೂ ಮರೆತು ಸಂತೋಷದಿಂದ ಇದ್ದೀರಿ. ಇದೇ ಕಾರಣಕ್ಕೆ ಶಿಲ್ಪಾ ಶೆಟ್ಟಿ ನೀವು ನಮಗೆಲ್ಲರಿಗೂ ಇಷ್ಟವಾಗುವಿರಿ. ನೀವು ನಿಜವಾದ ಸ್ಪೂರ್ತಿ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಶಿಲ್ಪಾ ಶೆಟ್ಟಿ

14ನೇ ವಿವಾಹ ವಾರ್ಷಿಕೋತ್ಸವ

ಶಿಲ್ಪಾ ಶೆಟ್ಟಿ ಅವರು ಬಿಸ್ನೆಸ್‌ಮ್ಯಾನ್‌ ರಾಜ್‌ಕುಂದ್ರ ಅವರನ್ನು ನವೆಂಬರ್‌ 22, 2009ರಂದು ವಿವಾಹವಾದರು. ಇವರಿಗೆ ವಿಹಾನ್‌ ಹೆಸರಿನ ಮಗನಿದ್ದಾನೆ. ಬಾಡಿಗೆ ತಾಯ್ತನದ ಮೂಲಕ ಇವರಿಬ್ಬರು ಫೆಬ್ರವರಿ 2020ರಲ್ಲಿ ಶಮಿಷಾ ಎಂಬ ಮಗಳನ್ನು ಪಡೆದರು. ಇದನ್ನು ನೋಡಿರುವಿರಾ?: ವೈರಲ್‌ ಆಯ್ತು ಶಿಲ್ಪಾ ಶೆಟ್ಟಿ ಹೊಸ ಫೋಟೋಗಳು, ಕರಾವಳಿ ಚೆಲುವೆಯ ಸೌಂದರ್ಯದ ಸವಾಲು

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸುಖಿ ಎಂಬ ಫ್ಯಾಮಿಲಿ ಮನರಂಜನೆ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ಚಿತ್ರವು ಸೆಪ್ಟೆಂಬರ್‌ 22ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಮಾತ್ರವಲ್ಲದೆ ಶಿಲ್ಪಾ ಶೆಟ್ಟಿ ಅವರು ರೋಹಿತ್‌ ಶೆಟ್ಟಿಯ ಒಟಿಟಿ ಸರಣಿ "ಇಂಡಿಯನ್‌ ಪೊಲೀಸ್‌ ಫೋರ್ಸ್‌"ನಲ್ಲೂ ನಟಿಸುತ್ತಿದ್ದಾರೆ. ಈ ಸೀರಿಸ್‌ನಲ್ಲಿ ಸಿದ್ಧಾರ್ಥ ಮಲ್ಹೋತ್ರ ಮತ್ತು ವಿವೇಕ್‌ ಓಬೇರಾಯ್‌ ಕೂಡ ಇದ್ದಾರೆ. ಈ ಸರಣಿಯು ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರಗೊಳ್ಳಲಿದೆ.

ಕನ್ನಡ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ

ಕನ್ನಡದ ಪ್ಯಾನ್‌ ಇಂಡಿಯಾ ಚಿತ್ರ ಕೆಡಿ- ದಿ ಡೆವಿಲ್‌ನಲ್ಲೂ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿ ರವಿಚಂದ್ರನ್‌ ಮತ್ತು ಸಂಜಯ್‌ ದತ್‌ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ಗೆ ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ಶಿಲ್ಪಾ ಶೆಟ್ಟಿ ಅವರು ಮೈಸೂರು ಪಾಕ್‌ ಸವಿದಿದ್ದರು. ಇದನ್ನು ಓದಿ: ಓ ಮೈ ಗಾಡ್‌ ಅನ್ತಾ ಶಿಲ್ಪಾ ಶೆಟ್ಟಿ ಮೈಸೂರು ಪಾಕ್‌ ತಿನ್ತಾ ಇದ್ರೆ ನೋಡುಗರ ಬಾಯಲ್ಲಿ ನೀರು; ಮೈಸೂರಿಗೆ ಬಂದ ಬಾಲಿವುಡ್‌ ನಟಿಗೆ ಸಿಹಿಸ್ವಾಗತ. ಕೆಡಿ-ದಿ ಡೆವಿಲ್‌ ಚಿತ್ರವು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ