ಶಿಲ್ಪಾ ಶೆಟ್ಟಿ ಬದುಕಿನ ಕಥೆ: ಕಾರಣವೇ ಇಲ್ಲದೆ ಸಿನಿಮಾದಿಂದ ಹೊರಹಾಕಿದ್ರು, ಖಿನ್ನತೆ ಕಾಡಿತ್ತು; ಯಶಸ್ಸಿನ ಹಿಂದಿದೆ ಛಲದ ಬದುಕು
ಕನ್ನಡ ಸುದ್ದಿ  /  ಮನರಂಜನೆ  /  ಶಿಲ್ಪಾ ಶೆಟ್ಟಿ ಬದುಕಿನ ಕಥೆ: ಕಾರಣವೇ ಇಲ್ಲದೆ ಸಿನಿಮಾದಿಂದ ಹೊರಹಾಕಿದ್ರು, ಖಿನ್ನತೆ ಕಾಡಿತ್ತು; ಯಶಸ್ಸಿನ ಹಿಂದಿದೆ ಛಲದ ಬದುಕು

ಶಿಲ್ಪಾ ಶೆಟ್ಟಿ ಬದುಕಿನ ಕಥೆ: ಕಾರಣವೇ ಇಲ್ಲದೆ ಸಿನಿಮಾದಿಂದ ಹೊರಹಾಕಿದ್ರು, ಖಿನ್ನತೆ ಕಾಡಿತ್ತು; ಯಶಸ್ಸಿನ ಹಿಂದಿದೆ ಛಲದ ಬದುಕು

ಕರ್ನಾಟಕದ ಕರಾವಳಿಯ ಶಿಲ್ಪಾ ಶೆಟ್ಟಿ ಅವರ ಆರಂಭಿಕ ವೃತ್ತಿ ಜೀವನ ಈಗಿನಷ್ಟು ಸುಖಕರವಾಗಿರಲಿಲ್ಲ. ಆಕೆಯ ಆರಂಭದ ಬದುಕು ಸಾಕಷ್ಟು ಕಷ್ಟಕರವಾಗಿತ್ತು. ಬಾಲಿವುಡ್‌ ನಟಿ ಅಂದೊಮ್ಮೆ ಕಾರಣವೇ ಇಲ್ಲದೆ ಸಿನಿಮಾದಿಂದ ಹೊರದಬ್ಬಿಸಿಕೊಂಡಿದ್ರು. ಈಗ ಆಕೆಯ ಸಮುದ್ರದತ್ತ ಮುಖ ಮಾಡಿರುವ ಮನೆಯ ದರವೇ 100 ಕೋಟಿ ರೂಪಾಯಿಗೂ ಹೆಚ್ಚು.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ಬೆಂಗಳೂರು: ಈಗ ಬಾಲಿವುಡ್‌ನಲ್ಲಿ ನೂರಾರು ಕೋಟಿ ರೂಪಾಯಿಗೆ ಒಡೆಯರಾಗಿರುವ ಸಿನಿಮಾ ನಟನಟಿಯರು ಒಂದಾನೊಂದು ಕಾಲದಲ್ಲಿ ಸಾಕಷ್ಟು ಕಷ್ಟ, ಅವಮಾನ ಅನುಭವಿಸಿದ್ದರು. ಕರಾವಳಿ ಮೂಲದ ಬೆಡಗಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯೂ ಇದರಿಂದ ಹೊರತಾಗಿಲ್ಲ. 1993ರಲ್ಲಿ ಇವರು ಮೊದಲ ಬಾರಿಗೆ ಬಾಝಿಗರ್‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. ಈಕೆಯ ಕರಿಯರ್‌ನ ಆರಂಭಿಕ ಹಂತದಲ್ಲಿ ಸಿನಿಮಾದ ನಿರ್ಮಾಪಕರು ಶಿಲ್ಪಾ ಶೆಟ್ಟಿಯನ್ನು ಯಾವುದೇ ಕಾರಣವಿಲ್ಲದೆ ಹೊರಹಾಕಿದ್ರಂತೆ. ಆ ಸಮಯದಲ್ಲಿ ಈಕೆಗೆ ಸಾಕಷ್ಟು ಅವಮಾನವಾಗಿತ್ತು.

ಕಪ್ಪು, ತೆಳ್ಳಗಿನ ಹುಡುಗಿ

ಹಳೆಯ ಸಂದರ್ಶನವೊಂದರಲ್ಲಿ ಶಿಲ್ಪಾ ಶೆಟ್ಟಿ ಈ ಮಾಹಿತಿ ಹಂಚಿಕೊಂಡಿದ್ದರು. ಹ್ಯೂಮನ್ಸ್‌ ಆಪ್‌ ಬಾಂಬೆ ಜತೆಗಿನ ಸಂದರ್ಶನದಲ್ಲಿ ಸ್ವತಃ ಶಿಲ್ಪಾ ಶೆಟ್ಟಿ ಈ ವಿಷಯ ಹೇಳಿದ್ದರು. 1993ರಲ್ಲಿ ಇವರು ಬಾಝಿಗರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದರು. "ನಾನು ಕಪ್ಪಾದ, ಎತ್ತರ, ತೆಳ್ಳಗಿನ ಹುಡುಗಿಯಾಗಿದ್ದೆ. ನಾನು ಪದವಿ ಪಡೆದಿದ್ದೇನೆ. ತಂದೆಯೊಂದಿಗೆ ಕೆಲಸ ಮಾಡುವೆ. ವಿಭಿನ್ನವಾದ, ದೊಡ್ಡದಾದ, ಉತ್ತಮವಾದ ಕೆಲಸ ಮಾಡಬೇಕೆಂದು ನನ್ನ ಹೃದಯ ಬಯಸುತ್ತಿತ್ತು. ಅದನ್ನು ಸಾಧಿಸಬಲ್ಲೆ ಎಂದುಕೊಂಡಿರಲಿಲ್ಲ. ಆದರೆ, ನಾನು ಫ್ಯಾಷನ್‌ ಶೋನಲ್ಲಿ ಭಾಗವಹಿಸಿದೆ. ಅದು ಕೇವಲ ಫನ್‌ಗಾಗಿ ಭಾಗವಹಿಸಿದ್ದೆ. ನನ್ನ ಫೋಟೋ ತೆಗೆಯಲು ಫೋಟೋಗ್ರಾಫರ್‌ನನ್ನು ಭೇಟಿಯಾದೆ" ಎಂದು ಶಿಲ್ಪಾ ಶೆಟ್ಟಿಯ ಕಥೆಯನ್ನು ಡಿಎನ್‌ಎ ವರದಿ ಮಾಡಿದೆ.

ಆಗ 17 ವಯಸ್ಸು; ಜೀವನ ಗೊತ್ತಿರಲಿಲ್ಲ

"ಇದಾದ ಬಳಿಕ ನನಗೆ ನನ್ನ ಮೊದಲ ಸಿನಿಮಾಕ್ಕೆ ಆಹ್ವಾನ ಬಂತು. ಅಲ್ಲಿಂದ ನಾನು ಹಿಂತುರುಗಿ ನೋಡಲಿಲ್ಲ. ಮೇಲ್ಮುಖವಾಗಿ, ಎತ್ತರ ಎತ್ತರಕ್ಕೆ ಸಾಗಿದೆ. ಆದರೆ, ಅದೆಲ್ಲವೂ ಸಾಧನೆ ಮಾಡುವುದು ಸುಲಭವಾಗಿರಲಿಲ್ಲ. ಉದ್ಯಮ ಪ್ರವೇಶಿಸಿದಾಗ ನನಗೆ ಕೇವಲ 17 ವರ್ಷ ವಯಸ್ಸಾಗಿತ್ತು. ನಾನು ಜಗತ್ತನ್ನು ನೋಡಿರಲಿಲ್ಲ. ಜೀವನ ಎಂದರೆ ಏನು ಎಂದು ಅರ್ಥ ಮಾಡಿಕೊಂಡಿರಲಿಲ್ಲ. ಎಲ್ಲಾ ಯಶಸ್ಸು ಕಷ್ಟದಿಂದಲೇ ಆರಂಭವಾಗುತ್ತದೆ. ನಾನು ಅದಕ್ಕೆ ರೆಡಿಯಾಗಿರಲಿಲ್ಲ" ಎಂದು ಆ ಹಳೆಯ ಸಂದರ್ಶನದಲ್ಲಿ ಶಿಲ್ಪಾ ಶೆಟ್ಟಿ ಹೇಳಿದ್ದರು.

ಕೆಟ್ಟ ಕ್ಷಣಗಳೂ ಇವೆ

"ಆದರೆ, ನನಗೆ ಹಿಂದಿ ಹೇಗೆ ಮಾತನಾಡಬೇಕೆಂದು ತಿಳಿದಿರಲಿಲ್ಲ. ಕ್ಯಾಮೆರಾ ಮುಂದೆ ಕಷ್ಟಪಡುತ್ತಿದ್ದೆ. ನನ್ನ ಕರಿಯರ್‌ನಲ್ಲಿ ಹಲವು ಸಿನಿಮಾಗಳು ಯಶಸ್ಸು ಪಡೆದವು. ಆದರೆ, ಅವು ನನಗೆ ತೃಪ್ತಿ ನೀಡಲಿಲ್ಲ. ಒಂದು ಯಶಸ್ಸಿನ ಕ್ಷಣದಲ್ಲಿ ಇನ್ನೊಂದನ್ನು ಮರೆಯಲು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣವಿಲ್ಲದೆ ನನ್ನನ್ನು ತಮ್ಮ ಸಿನಿಮಾದಿಂದ ಹೊರಹಾಕಿದ ನಿರ್ದೇಶಕರು ನನ್ನ ಬದುಕಿನ ಕೆಟ್ಟ ಕ್ಷಣಗಳಲ್ಲಿ ದಾಖಲಾಗಿದ್ದಾರೆ" ಎಂದು ಅವರು ನೆನಪಿಸಿಕೊಂಡಿದ್ದರು.

ಬಿಗ್‌ಬ್ರದರ್‌ನಲ್ಲೂ (ಭಾರತದಲ್ಲಿ ಬಿಗ್‌ಬಾಸ್‌ ಇರುವಂತೆ) ಶಿಲ್ಪಾ ಶೆಟ್ಟಿ ಪಾಲ್ಗೊಂಡಿದ್ದರು. ಅಲ್ಲಿ ಇತರರು ಇವರನ್ನು ಕೀಳಾಗಿ ಕಂಡಿದ್ದರು. "ನನ್ನ ದೇಶದ ಕಾರಣದಿಂದ ಸಾರ್ವಜನಿಕವಾಗಿ ನನ್ನನ್ನು ಹಿಂಸಿಸಲಾಯಿತು. ತಾರತಮ್ಯ ಮಾಡಲಾಯಿತು. ಆ ಮನೆಯಲ್ಲಿ ನಾನೊಬ್ಬಳೇ ಇದ್ದೆ. ಅದನ್ನು ಸಹಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ, ನಾನು ಮುಂದುವರೆದೆ. ನನ್ನನ್ನು ನಾನು ಬಿಟ್ಟುಕೊಳ್ಳಲು ರೆಡಿಯಾಗಲಿಲ್ಲ. ನಾನು ಗೆದ್ದಾಗ ನೀವು ದೇಶಕ್ಕೆ ಹೆಮ್ಮೆ ತಂದಿರಿ ಎಂದರು. ಆಮೇಲೆ ಗೊತ್ತಾಯಿತು, ಆ ನನ್ನ ಹೋರಾಟಕ್ಕೆ ಬೆಲೆ ಇದೆ ಎಂದು" ಎಂದು ಅವರು ಹೇಳಿದ್ದರು.

"ನನಗಾಗಿ ಮಾತ್ರವಲ್ಲ. ವರ್ಣಭೇದ ಎದುರಿಸಿದ ಎಲ್ಲರ ಪರವಾಗಿ ನಿಂತಿದ್ದೇನೆ. ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳಿವೆ. ಭಯಾನಕ ಸಮಯಗಳಿವೆ. ಕೆಲವು ದೊಡ್ಡ ಸಾಧನೆಗಳೂ ಇವೆ. ನಾನು ಪ್ರತಿನಿಮಿಷವನ್ನೂ ಆನಂದಿಸಿದೆ. ಹೀಗಾಗಿ ನಾನು ಈಗ ಇಲ್ಲಿದ್ದೇನೆ" ಎಂದು ಅವರು ಹೇಳಿದ್ದಾರೆ.

ಖಿನ್ನತೆ ಆಗಿತ್ತು

ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಪೋಸ್ಟ್‌ಪಾರ್ಟಮ್‌ ಡಿಪ್ರೆಸನ್‌ಗೆ ತುತ್ತಾಗಿದ್ದರಂತೆ. ಎರಡು ವಾರದ ಬಳಿಕ ಈ ತೊಂದರೆಯಿಂದ ಹೊರಬಂದೆ ಎಂದು ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಬಿಸ್ನೆಸ್‌ಮ್ಯಾನ್‌ ರಾಜ್‌ ಕುಂದ್ರಾರನ್ನು ವಿವಾಹವಾಗಿದ್ದರು. ಅವರಿಗೆ ವಿಹಾನ್‌ ಮತ್ತು ಶಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಶ್ರೀಮಂತ ನಟಿ. ಇವರು ಮುಂಬೈನಲ್ಲಿ ಸಮುದ್ರದತ್ತ ಮುಖ ಮಾಡಿರುವ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 100 ಕೋಟಿ ರೂಪಾಯಿಗಿಂತಲೂ ಅಧಿಕ ಎನ್ನಲಾಗಿದೆ. (ಪೂರಕ ಮಾಹಿತಿ: ಡಿಎನ್‌ಎ)

Whats_app_banner