logo
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್

Kichcha Sudeep: ‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್

Mar 03, 2023 08:17 AM IST

‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್‌

    • ಕಿಚ್ಚ ಸುದೀಪ್‌ ಅವರ ಹೊಸ ಸಿನಿಮಾ ಅಪ್‌ಡೇಟ್‌ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಅನೂಪ್‌ ಭಂಡಾರಿ ಸುಳಿವೊಂದನ್ನು ನೀಡಿ, ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ.  
‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್‌
‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್‌

Billa Ranga Baasha: ವಿಕ್ರಾಂತ್‌ ರೋಣ ಸಿನಿಮಾ ಬಿಡುಗಡೆ ಆಗಿ ಹತ್ರತ್ರ 8 ತಿಂಗಳಾಗುತ್ತ ಬಂತು. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವ ಸಿನಿಮಾದಲ್ಲಿ ಸುದೀಪ್‌ ನಟಿಸಲಿದ್ದಾರೆ? ಆ ಸಿನಿಮಾ ನಿರ್ದೇಶಕರು ಯಾರು? ನಿರ್ಮಾಣ ಸಂಸ್ಥೆ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಆದರೆ, ರೋಣನ ಸೂತ್ರಧಾರಿ ಅನೂಪ್‌ ಭಂಡಾರಿ ಜತೆಗೇ ಸುದೀಪ್‌ ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್‌ ಮಾತ್ರ ಗಾಂಧಿನಗರದಲ್ಲಿ ಜೋರಾಗಿತ್ತು. ಅದೀಗ ನಿಜವಾಗಿದೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೀಘ್ರದಲ್ಲಿ ಸೆಟ್ಟೇರಲಿದೆ!

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಅಂದಹಾಗೆ, ‘ಬಿಲ್ಲ ರಂಗ ಬಾಷಾ’ ಸಿನಿಮ ಐದು ವರ್ಷಗಳ ಹಿಂದೆಯೇ ಘೋಷಣೆ ಆದ ಚಿತ್ರ. 2018ರಲ್ಲಿಯೇ ಈ ಶೀರ್ಷಿಕೆ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾತ್ರ ಸೆಟ್ಟೇರಿರಲಿಲ್ಲ. ಇತ್ತ ಸುದೀಪ್‌ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾದರೆ, ಸಿನಿಮಾ ಮತ್ತು ಸ್ಕ್ರಿಪ್ಟಿಂಗ್‌ ಕೆಲಸಗಳಲ್ಲಿ ಅನೂಪ್‌ ತೊಡಗಿಸಿಕೊಂಡರು. ಇದೀಗ ಈ ಸಿನಿಮಾ ಸ್ಕ್ರಿಪ್ಟಿಂಗ್‌ ಕೆಲಸ ಮುಗಿಸಿ, ಶೂಟಿಂಗ್‌ಗೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆಯೇ ಸುದೀಪ್‌ ಅಭಿಮಾನಿಗಳಿಗೆ ನಿರ್ದೇಶಕ ಅನೂಪ್‌ ಸಣ್ಣ ಸುಳಿವು ನೀಡಿ ಸರ್ಪ್ರೈಸ್‌ ಕೊಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ‘ಬಿಲ್ಲ ರಂಗ ಬಾಷಾ’ ಸಿನಿಮಾ ಯಾವಾಗ ಎಂದವರಿಗೆ ಶೀಘ್ರದಲ್ಲಿ ಎಂಬ ಉತ್ತರ ನೀಡಿದ್ದಾರೆ. ತಮ್ಮ ಈ ಹಿಂದಿನ ಮೂರು ಸಿನಿಮಾಗಳಾದ ರಂಗಿತರಂಗ, ರಾಜರಥ, ವಿಕ್ರಾಂತ್‌ ರೋಣ ಪಾತ್ರಗಳ ಫೋಟೋ ಝಲಕ್ ಹಂಚಿಕೊಂಡ ಅವರು, ಶುಭಕೋರಿದ ಎಲ್ಲರಿಗೂ ಧನ್ಯವಾದಗಳು. ‘ಬಿ’ಗಿಯಾಗ್ ಕೂತ್ಕೋಳಿ. ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರ್ಲಿ" ಎಂದು ಟ್ವಿಟ್‌ ಮಾಡಿದ್ದಾರೆ.

ಇನ್ನು ಕಿಚ್ಚ ಸುದೀಪ್‌ ಕೆಸಿಸಿ ಮತ್ತು ಸಿಸಿಎಲ್‌ ಕ್ರಿಕೆಟ್‌ ಆಟದಲ್ಲಿ ಬಿಜಿಯಾಗಿದ್ದರು. ಇತ್ತ ಆರ್‌. ಚಂದ್ರು ಜತೆಗೆ ಕಬ್ಜ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೇನು ಮಾರ್ಚ್‌ 17ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈ ನಡುವೆ, ಯುಗಾದಿ ಹಬ್ಬದ ಪ್ರಯುಕ್ತ ಸುದೀಪ್‌ ಮತ್ತು ಅನೂಪ್‌ ಕಾಂಬಿನೇಷನ್‌ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ

Sushmita Sen: ಫಿಟ್ನೆಸ್ ಕಾಳಜಿ ಇದ್ದರೂ ಹೃದಯಾಘಾತ!; ಸುಶ್ಮಿತಾ ಹೊರತುಪಡಿಸಿ ಈ ಸೆಲೆಬ್ರಿಟಿಗಳಿಗೂ ಇತ್ತು ಹೃದ್ರೋಗ ಸಮಸ್ಯೆ

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಜಿಮ್‌ನಲ್ಲಿ ಬೆವರಿಳಿಸುವ 47ರ ಹರೆಯದ ಈ ನಟಿ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಇನ್ನೂ ಹಲವರು ಹೀಗೆ ಫಿಟ್‌ನೆಸ್‌ ಬಗ್ಗೆ ಕಾಳಜಿ ಇದ್ದವರೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ