ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sushmita Sen: ಫಿಟ್ನೆಸ್ ಕಾಳಜಿ ಇದ್ದರೂ ಹೃದಯಾಘಾತ!; ಸುಶ್ಮಿತಾ ಹೊರತುಪಡಿಸಿ ಈ ಸೆಲೆಬ್ರಿಟಿಗಳಿಗೂ ಇತ್ತು ಹೃದ್ರೋಗ ಸಮಸ್ಯೆ

Sushmita Sen: ಫಿಟ್ನೆಸ್ ಕಾಳಜಿ ಇದ್ದರೂ ಹೃದಯಾಘಾತ!; ಸುಶ್ಮಿತಾ ಹೊರತುಪಡಿಸಿ ಈ ಸೆಲೆಬ್ರಿಟಿಗಳಿಗೂ ಇತ್ತು ಹೃದ್ರೋಗ ಸಮಸ್ಯೆ

  • ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಜಿಮ್‌ನಲ್ಲಿ ಬೆವರಿಳಿಸುವ 47ರ ಹರೆಯದ ಈ ನಟಿ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಇನ್ನೂ ಹಲವರು ಹೀಗೆ ಫಿಟ್‌ನೆಸ್‌ ಬಗ್ಗೆ ಕಾಳಜಿ ಇದ್ದವರೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಸುಶ್ಮಿತಾ ಸೇನ್ ಅವರು ಇತ್ತೀಚೆಗೆ ಹೃದಯಾಘಾತದ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿ ಎಲ್ಲರನ್ನೂ ಶಾಕ್‌ಗೆ ದೂಡಿದ್ದರು. ಹೃದಯಾಘಾತಕ್ಕೊಳಗಾದ ಬಗ್ಗೆ ಸುಶ್ಮಿತಾ ಹೇಳಿಕೊಂಡಿದ್ದರು. ಬಳಿಕ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಬೇಕಾಯಿತು. 47ರ ಹರೆಯದ ಸುಶ್ಮಿತಾ ಮೊದಲಿನಿಂದಲೂ ಫಿಟ್‌ನೆಸ್‌ ವಿಚಾರದಲ್ಲಿ ಕಟ್ಟುನಿಟ್ಟು. ಅವರು ಜಿಮ್‌ನಲ್ಲಿ ಬೆವರಿಳಿಸುವುದು ಹೊಸದೇನಲ್ಲ. ಫಿಟ್‌ನೆಸ್‌ ಪ್ರಜ್ಞೆಯ ಹೊರತಾಗಿಯೂ ಹೃದಯಾಘಾತದಿಂದ ಕಣ್ಮುಚ್ಚಿದ ಸೆಲೆಬ್ರಿಟಿಗಳ ಕಿರು ವಿವರ ಇಲ್ಲಿದೆ. 
icon

(1 / 6)

ಮೇ 2022 ರಲ್ಲಿ ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ಗಾಯಕ ಕೆಕೆ ಸಾವಿನಿಂದ ಅನೇಕರು ಆಘಾತಕ್ಕೊಳಗಾಗಿದ್ದಾರೆ. ಅವರ ನಿಧನದ ನಂತರ ಅವರ ಆರೋಗ್ಯದ ಬಗ್ಗೆ ವಿವಿಧ ಸುದ್ದಿಗಳು ಮುನ್ನೆಲೆಗೆ ಬಂದವು. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರು ಮತ್ತು ಡಯಟ್ ಕಾನ್ಷಿಯಸ್ ಅವರಿಗಿತ್ತು. 53 ವರ್ಷದ ಗಾಯಕನಿಗೆ ಯಾವುದೇ ದೊಡ್ಡ ಕಾಯಿಲೆ ಇರಲಿಲ್ಲ.
icon

(2 / 6)

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಅವರ ಸಾವು ಕೂಡ ನಟನಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಸಾಯುವಾಗ 'ಬಾಲಿಕಾ ವಧು' ತಾರೆಗೆ ಕೇವಲ 40 ವರ್ಷ. ಅವರು ಕಳೆದ ವರ್ಷದ ಸೆಪ್ಟೆಂಬರ್ 2ರಂದು ನಿಧನರಾದರು. ದೈಹಿಕವಾಗಿ ಸದೃಢರಾಗಿದ್ದರೂ ಧೂಮಪಾನದ ಸಮಸ್ಯೆ ಇತ್ತು. ಆದರೆ, ಅವರಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ.
icon

(3 / 6)

ರಾಜು ಶ್ರೀವಾಸ್ತವ ಅವರು ಸೆಪ್ಟೆಂಬರ್ 21 ರಂದು ಜಿಮ್‌ನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಹಾಸ್ಯನಟ ಹೃದ್ರೋಗ ಕಾಯಿಲೆಯಿಂದ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವರು ಫಿಟ್ನೆಸ್ ಪ್ರಜ್ಞೆಯನ್ನೂ ಹೊಂದಿದ್ದರು. ಆದರೆ, ಹಠಾತ್ ಹೃದಯಾಘಾತದಿಂದ ಕೆಲ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಬದುಕುಳಿಯಲಿಲ್ಲ.  
icon

(4 / 6)

ಕನ್ನಡದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29 ರಂದು ಹೃದಯಾಘಾತದಿಂದ ನಿಧನರಾದರು. ಸಾಯುವ ಸಮಯದಲ್ಲಿ ಅವರಿಗೆ 46 ವರ್ಷ. ಅವರ ಸಾವಿನಿಂದ ಕನ್ನಡ ಚಿತ್ರೋದ್ಯಮ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿತ್ತು.
icon

(5 / 6)

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಸಹ ತಮ್ಮ 39ನೇ ವಯಸ್ಸಿನಲ್ಲಿ ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನರಾದರು. 2020ರ ಜೂನ್‌ 7ರಂದು ಇಹಲೋಕ ತ್ಯಜಿಸಿದರು. ಜಿಮ್‌, ವರ್ಕೌಟ್‌ ಎಂದೆಲ್ಲ ಫಿಟ್‌ ಆಗಿದ್ದ ಚಿರು ಅವರ ಅಕಾಲಿಕ ನಿಧನ ಕರುನಾಡನ್ನು ಶಾಕ್‌ಗೆ ದೂಡಿತ್ತು.
icon

(6 / 6)

IPL_Entry_Point

ಇತರ ಗ್ಯಾಲರಿಗಳು