logo
ಕನ್ನಡ ಸುದ್ದಿ  /  ಮನರಂಜನೆ  /  Bala Murugan Passes Away: ಚಿತ್ರರಂಗದಲ್ಲಿ ಮತ್ತೊಂದು ವಿಷಾದ...ಖ್ಯಾತ ಚಿತ್ರ ಬರಹಗಾರ ವಿಧಿವಶ

Bala Murugan Passes away: ಚಿತ್ರರಂಗದಲ್ಲಿ ಮತ್ತೊಂದು ವಿಷಾದ...ಖ್ಯಾತ ಚಿತ್ರ ಬರಹಗಾರ ವಿಧಿವಶ

HT Kannada Desk HT Kannada

Jan 16, 2023 09:59 AM IST

ಚಿತ್ರ ಬರಹಗಾರ ಬಾಲಮುರುಗನ್‌ ವಿಧಿವಶ

    • ಅನೇಕ ಚಿತ್ರಗಳಿಗೆ ಕಥೆಗಳನ್ನು ಕೊಡುಗೆಯಾಗಿ ನೀಡಿದ ಹಿರಿಯ ಬರಹಗಾರ ಬಾಲ ಮುರುಗನ್ ಭಾನುವಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬಾಲ ಮುರುಗನ್ ನಿಧನರಾದ ವಿಚಾರವನ್ನು ಅವರ ಪುತ್ರ ಭೂಪತಿ ರಾಜ ಬಹಿರಂಗಪಡಿಸಿದ್ದಾರೆ.
ಚಿತ್ರ ಬರಹಗಾರ ಬಾಲಮುರುಗನ್‌ ವಿಧಿವಶ
ಚಿತ್ರ ಬರಹಗಾರ ಬಾಲಮುರುಗನ್‌ ವಿಧಿವಶ (PC: Twitter)

ಟಾಲಿವುಡ್‌ನಲ್ಲಿ ಒಂದರ ಹಿಂದೊಂದರಂತೆ ಆಘಾತಕಾರಿ ಘಟನೆಗಳು ಜರುಗುತ್ತಲೇ ಇದೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗ ಹಿರಿಯ ನಟ ಕೃಷ್ಣ, ಕೈಕಲಾ ಸತ್ಯನಾರಾಯಣ್‌, ಚಲಪತಿ ರಾವ್‌ ನಿಧನರಾಗಿದ್ದರು. ಈ ಬೇಸರ ಕಳೆಯುವ ಮುನ್ನವೇ ಭಾನುವಾರ ತೆಲುಗು, ತಮಿಳು ಚಿತ್ರರಂಗದ ಬರಹಗಾರ ಬಾಲ ಮುರುಗನ್ ವಿಧಿವಶರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಅನೇಕ ಯಶಸ್ವಿ ತೆಲುಗು ಮತ್ತು ತಮಿಳು ಚಿತ್ರಗಳಿಗೆ ಕಥೆಗಳನ್ನು ಕೊಡುಗೆಯಾಗಿ ನೀಡಿದ ಹಿರಿಯ ಬರಹಗಾರ ಬಾಲ ಮುರುಗನ್ ಭಾನುವಾರ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಬಾಲ ಮುರುಗನ್ ನಿಧನರಾದ ವಿಚಾರವನ್ನು ಅವರ ಪುತ್ರ ಭೂಪತಿ ರಾಜ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಾಲ ಮುರುಗನ್ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ತೆಲುಗಿನಲ್ಲಿ ಬಾಲಮುರುಗನ್, ಧರ್ಮದಾತ, ಆಲುಮಗಲು, ಸೊಗ್ಗಾಡು, ಸಾವಾಸಗಾಳ್ಳು, ಜೀವನ ತರಂಗಾಲು ಸೇರಿದಂತೆ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ಗೀತಾ ಆರ್ಟ್ಸ್‌ನ ಮೊದಲ ಚಿತ್ರ ಬಂಟ್ರೋತು ಭಾರ್ಯ ಚಿತ್ರಕ್ಕೆ ಇವರೇ ಕಥೆ ಬರೆದಿದ್ದರು. ಶೋಭನ್ ಬಾಬು ಅಭಿನಯದ ಸೊಗ್ಗಾಡು ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿತ್ತು. ತಮಿಳಿನಲ್ಲಿ ಒಂದು ಕಾಲದಲ್ಲಿ ಸ್ಟಾರ್ ಹೀರೋ ಆಗಿ ಶಿವಾಜಿ ಗಣೇಶನ್ ಅವರ ಸುಮಾರು 40 ಚಿತ್ರಗಳಿಗೆ ಬಾಲ ಮುರುಗನ್‌ ಕಥೆಗಳನ್ನು ಬರೆದಿದ್ದಾರೆ.

ಬಾಲಮುರುಗನ್ ನಿಧನರಾದ ಸುದ್ದಿ ತಿಳಿದ ತಮಿಳು ಮತ್ತು ತೆಲುಗು ಚಿತ್ರರಂಗದ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಾಲ ಮುರುಗನ್ ಅವರ ಪುತ್ರಿ ಭೂಪತಿ ರಾಜ ಕೂಡಾ ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ಬರಹಗಾರರಾಗಿ ಮನ್ನಣೆ ಗಳಿಸಿದ್ದಾರೆ. ಅವರು ಕೂಡಾ ಅನೇಕ ಯಶಸ್ವಿ ಚಿತ್ರಗಳಿಗೆ ಕಥೆ ಬರೆದಿದ್ದಾರೆ.

ಇನ್ನಿತರ ಮನರಂಜನೆ ಸುದ್ದಿಗಳು

'ಜನುಮದ ಜೋಡಿ' ಚಿತ್ರದ ಶಿಲ್ಪ ಅಲಿಯಾಸ್‌ ಚಿಪ್ಪಿ ನೆನಪಿದ್ದಾರಾ..ಇಲ್ಲಿವೆ ನೋಡಿ ಅವರ ಫ್ಯಾಮಿಲಿ ಫೋಟೋಗಳು

1993ರಲ್ಲಿ ಮಲಯಾಳಂ ಸೂಪರ್‌ ಸ್ಟಾರ್‌ ಮುಮುಟ್ಟಿ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ಶಿಲ್ಪ ತಮ್ಮ ಮಾತೃಭಾಷೆ ನಂತರ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ. 1996ರಲ್ಲಿ ತೆರೆ ಕಂಡ 'ಜನುಮದ ಜೋಡಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಶಿಲ್ಪ' ಮೊದಲ ಚಿತ್ರದಲ್ಲೇ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದರು. ಈಕೆ ಕೇರಳಕ್ಕೆ ಸೇರಿದ ನಟಿ ಎಂದು ಯಾರಿಗೂ ತಿಳಿಯದಿರುವಷ್ಟು ನೈಜವಾಗಿ ಅಭಿನಯಿಸಿದ್ದರು. ಶಿಲ್ಪ ಕುರಿತ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

ಮೈಸೂರು ಸೊಸೆ, ಬಾಲಿವುಡ್‌ ನಟಿ ಮೀನಾಕ್ಷಿ ಶೇಷಾದ್ರಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ..ಇಲ್ಲಿದೆ ನೋಡಿ ಮಾಹಿತಿ

ಮದುವೆಯಾದ ನಂತರ ಸಿನಿಮಾರಂಗವನ್ನು ತೊರೆದ ಮೀನಾಕ್ಷಿ ಶೇಷಾದ್ರಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ. ಇದಕ್ಕೆ ಉತ್ತರ, ಮೀನಾಕ್ಷಿ ಶೇಷಾದ್ರಿ ಸದ್ಯಕ್ಕೆ ಪತಿ ಹಾಗೂ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ