Meenakshi Sheshadri: ಮೈಸೂರು ಸೊಸೆ, ಬಾಲಿವುಡ್ ನಟಿ ಮೀನಾಕ್ಷಿ ಶೇಷಾದ್ರಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ..ಇಲ್ಲಿದೆ ನೋಡಿ ಮಾಹಿತಿ
- ಒಂದು ಕಾಲದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಬಹಳಷ್ಟು ನಟಿಯರು ಈಗ ತೆರೆ ಮರೆಗೆ ಸರಿದಿದ್ದಾರೆ. ಅದರಲ್ಲಿ ಕೆಲವರು ಅಪರೂಪಕ್ಕೆ ಒಮ್ಮೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರೆ, ಇನ್ನೂ ಕೆಲವರು ಪ್ರೆಸ್, ಸೋಷಿಯಲ್ ಮೀಡಿಯಾ ಸಂಪರ್ಕದಿಂದ ದೂರವೇ ಉಳಿದಿದ್ದಾರೆ.
- ಒಂದು ಕಾಲದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಬಹಳಷ್ಟು ನಟಿಯರು ಈಗ ತೆರೆ ಮರೆಗೆ ಸರಿದಿದ್ದಾರೆ. ಅದರಲ್ಲಿ ಕೆಲವರು ಅಪರೂಪಕ್ಕೆ ಒಮ್ಮೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರೆ, ಇನ್ನೂ ಕೆಲವರು ಪ್ರೆಸ್, ಸೋಷಿಯಲ್ ಮೀಡಿಯಾ ಸಂಪರ್ಕದಿಂದ ದೂರವೇ ಉಳಿದಿದ್ದಾರೆ.
(1 / 12)
ಬಾಲಿವುಡ್ ಸಿನಿಪ್ರಿಯರಿಗೆ ಈ ಚೆಲುವೆ ಖಂಡಿತ ನೆನಪಿರುತ್ತಾರೆ. ಮೀನಾಕ್ಷಿ ಶೇಷಾದ್ರಿ, 80-90 ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದ ಚೆಲುವೆ. ನಟನೆ ಹೊರತುಪಡಿಸಿ ಮೀನಾಕ್ಷಿ ಶೇಷಾದ್ರಿ ಭರತನಾಟ್ಯ ಕಲಾವಿದೆಯಾಗಿ ಕೂಡಾ ಹೆಸರು ಮಾಡಿದ್ದಾರೆ. (PC: Meenakshi Sheshadri Instagram)
(2 / 12)
ಮದುವೆಯಾದ ನಂತರ ಸಿನಿಮಾರಂಗವನ್ನು ತೊರೆದ ಮೀನಾಕ್ಷಿ ಶೇಷಾದ್ರಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ. ಇದಕ್ಕೆ ಉತ್ತರ, ಮೀನಾಕ್ಷಿ ಶೇಷಾದ್ರಿ ಸದ್ಯಕ್ಕೆ ಪತಿ ಹಾಗೂ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.
(3 / 12)
ತಮಿಳು ಬ್ರಾಹ್ಮಣ ಕುಟುಂಬದಲ್ಲಿ 16 ನವೆಂಬರ್ 1963ರಲ್ಲಿ ಬಿಹಾರದಲ್ಲಿ ಜನಿಸಿದ ಮೀನಾಕ್ಷಿ ಶೇಷಾದ್ರಿ ಮೊದಲ ಹೆಸರು ಶಶಿಕಲಾ ಶೇಷಾದ್ರಿ. 4 ವಯಸ್ಸಿನಲ್ಲಿರುವಾಗಲೇ ಮೀನಾಕ್ಷಿ ಶೇಷಾದ್ರಿ ಭರತನಾಟ್ಯ ಕಲಿಯಲು ಆರಂಭಿಸಿದರು.
(4 / 12)
ಭರತನಾಟ್ಯಂ ಮಾತ್ರವಲ್ಲದೆ, ಕೂಚುಪುಡಿ, ಕಥಕ್, ಒಡಿಸ್ಸಿ ನೃತ್ಯ ಪ್ರಾಕಾರಗಳಲ್ಲಿ ಕೂಡಾ ಮೀನಾಕ್ಷಿ ಶೇಷಾದ್ರಿ ಎತ್ತಿದ ಕೈ.
(5 / 12)
ಮಾಡೆಲಿಂಗ್‌ನಲ್ಲೂ ಗುರುತಿಸಿಕೊಂಡಿದ್ದ ಈ ಚೆಲುವೆ 17ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಮೀನಾಕ್ಷಿ ರಾಂಪ್ ವಾಕ್ ಮಾಡಿದ್ದರು.
(6 / 12)
1983 ರಲ್ಲಿ ಮೀನಾಕ್ಷಿ ಶೇಷಾದ್ರಿ 'ಪೇಂಟರ್ ಬಾಬು' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಹೇಳಿಕೊಳ್ಳುವಂತ ಹೆಸರು ತರಲಿಲ್ಲ. ಆದರೆ ಅದೇ ವರ್ಷ ತೆರೆ ಕಂಡ 'ಹೀರೋ' ಸಿನಿಮಾ ಮೂಲಕ ಆಕೆ ರಾತ್ರೋ ರಾತ್ರಿ ಸ್ಟಾರ್ ಆದರು. ಈ ಚಿತ್ರದಲ್ಲಿ ಮೀನಾಕ್ಷಿ ಜೊತೆ ಜಾಕಿ ಶ್ರಾಫ್ ನಾಯಕನಾಗಿ ನಟಿಸಿದ್ದರು.
(7 / 12)
ರಾಜೇಶ್ ಖನ್ನಾ, ಜಿತೇಂದ್ರ, ಅನಿಲ್ ಕಪೂರ್, ಜಾಕಿಶ್ರಾಫ್, ಮಿಥುನ್ ಚಕ್ರವರ್ತಿ, ರಜನಿಕಾಂತ್ ಸೇರಿ ಅಂದಿನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಮೀನಾಕ್ಷಿ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ.
(8 / 12)
ಇಷ್ಟೆಲ್ಲಾ ಹೆಸರು ಮಾಡಿರುವ ಮೀನಾಕ್ಷಿ ಶೇಷಾದ್ರಿ ವಿವಾದ ಕೂಡಾ ಎದುರಿಸಿದ್ದರು. ಆಗಿನ ಖ್ಯಾತ ಗಾಯಕ ಕುಮಾರ್ ಸಾನು ಜೊತೆ ಮೀನಾಕ್ಷಿ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಮೀನಾಕ್ಷಿ ಶೇಷಾದ್ರಿ ಕಾರಣದಿಂದಲೇ ಕುಮಾರ್ ಸಾನು ಪತ್ನಿ ರೀಟಾ, ಪತಿಯಿಂದ ದೂರಾದರು ಎಂಬ ಆರೋಪ ಎದುರಿಸಿದ್ದರು.
(9 / 12)
ಇಷ್ಟೆಲ್ಲಾ ವಿವಾದದ ನಂತರ ಮೀನಾಕ್ಷಿ, ತಮ್ಮ ತಂದೆ ತಾಯಿ ನೋಡಿದ ಮೈಸೂರು ಮೂಲದ ಹರೀಶ್ ಎಂಬುವವರನ್ನು 1995ರಲ್ಲಿ ಮದುವೆಯಾದರು.
(10 / 12)
ಹರೀಶ್ ಮೈಸೂರು ಹಾಗೂ ಮೀನಾಕ್ಷಿ ಶೇಷಾದ್ರಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ಕೇಂದ್ರ ಮೈಸೂರ್ ಹಾಗೂ ಮಗನ ಹೆಸರು ಜೋಶ್ ಮೈಸೂರ್.
(11 / 12)
1996ರಲ್ಲಿ ತೆರೆ ಕಂಡ 'ಘಾತಕ್' ಚಿತ್ರದ ನಂತರ ಮೀನಾಕ್ಷಿ ಬೇರೆ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ಸದ್ಯಕ್ಕೆ ಮೀನಾಕ್ಷಿ ಶೇಷಾದ್ರಿ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೆರಿಕಾದ ಟೆಕ್ಸಾಸ್‌ನಲ್ಲಿ ಸೆಟಲ್ ಆಗಿದ್ದಾರೆ.
ಇತರ ಗ್ಯಾಲರಿಗಳು