ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shilpa Recent Photos: 'ಜನುಮದ ಜೋಡಿ' ಚಿತ್ರದ ಶಿಲ್ಪ ಅಲಿಯಾಸ್‌ ಚಿಪ್ಪಿ ನೆನಪಿದ್ದಾರಾ..ಇಲ್ಲಿವೆ ನೋಡಿ ಅವರ ಫ್ಯಾಮಿಲಿ ಫೋಟೋಗಳು

Shilpa Recent Photos: 'ಜನುಮದ ಜೋಡಿ' ಚಿತ್ರದ ಶಿಲ್ಪ ಅಲಿಯಾಸ್‌ ಚಿಪ್ಪಿ ನೆನಪಿದ್ದಾರಾ..ಇಲ್ಲಿವೆ ನೋಡಿ ಅವರ ಫ್ಯಾಮಿಲಿ ಫೋಟೋಗಳು

  • ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯದ 'ಜನುಮದ ಜೋಡಿ' , ಚಿತ್ರಕಥೆ ಹಾಗೂ ಹಾಡುಗಳಿಂದ ಗಮನ ಸೆಳೆದ ಸಿನಿಮಾ. ಈ ಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಸೌತ್‌ ಫಿಲ್ಮ್‌ಫೇರ್‌ ಅವಾರ್ಡ್‌ ದೊರೆತಿತ್ತು.

ಶಿವಣ್ಣನ ಜೊತೆ ನಟಿಸಿದ್ದ ನಾಯಕಿ ಶಿಲ್ಪಾಗೆ ಈ ಚಿತ್ರಕ್ಕಾಗಿ ಉತ್ತಮ ನಟಿ ಪ್ರಶಸ್ತಿ ದೊರೆತಿತ್ತು. ಅಸಲಿಗೆ ಶಿಲ್ಪ ಕೇರಳಕ್ಕೆ ಸೇರಿದ ಚೆಲುವೆ. ಇವರಿಗೆ ದಿವ್ಯ, ಚಿಪ್ಪಿ ಎಂದೂ ಹೆಸರಿದೆ. 
icon

(1 / 12)

ಶಿವಣ್ಣನ ಜೊತೆ ನಟಿಸಿದ್ದ ನಾಯಕಿ ಶಿಲ್ಪಾಗೆ ಈ ಚಿತ್ರಕ್ಕಾಗಿ ಉತ್ತಮ ನಟಿ ಪ್ರಶಸ್ತಿ ದೊರೆತಿತ್ತು. ಅಸಲಿಗೆ ಶಿಲ್ಪ ಕೇರಳಕ್ಕೆ ಸೇರಿದ ಚೆಲುವೆ. ಇವರಿಗೆ ದಿವ್ಯ, ಚಿಪ್ಪಿ ಎಂದೂ ಹೆಸರಿದೆ. (PC: Chippy Renjith Instagram)

1993ರಲ್ಲಿ ಮಲಯಾಳಂ ಸೂಪರ್‌ ಸ್ಟಾರ್‌ ಮುಮುಟ್ಟಿ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ಶಿಲ್ಪ ತಮ್ಮ ಮಾತೃಭಾಷೆ ನಂತರ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ.
icon

(2 / 12)

1996ರಲ್ಲಿ ತೆರೆ ಕಂಡ 'ಜನುಮದ ಜೋಡಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಶಿಲ್ಪ' ಮೊದಲ ಚಿತ್ರದಲ್ಲೇ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದರು. ಈಕೆ ಕೇರಳಕ್ಕೆ ಸೇರಿದ ನಟಿ ಎಂದು ಯಾರಿಗೂ ತಿಳಿಯದಿರುವಷ್ಟು ನೈಜವಾಗಿ ಅಭಿನಯಿಸಿದ್ದರು ಶಿಲ್ಪ. 
icon

(3 / 12)

ಇದಾದ ನಂತರ ಶಿಲ್ಪ, ಕಲ್ಯಾಣಿ, ಮುದ್ದಿನ ಕಣ್ಮಣಿ, ಲಕ್ಷ್ಮಿ, ಮಹಾಲಕ್ಷ್ಮಿ, ವಿಮೋಚನೆ, ಮುಂಗಾರಿನ ಮಿಂಚು, ಸುವ್ವಿ ಸುವ್ವಾಲಿ,  ಭೂಮಿ ತಾಯಿಯ ಚೊಚ್ಚಲ ಮಗ, ಇದೆಂಥಾ ಪ್ರೇಮವಯ್ಯಾ, ಪ್ರೇಮಾಚಾರಿ, ಧರ್ಮ ದೇವತೆ, ಪಾಂಡವ ಸೇರಿ 15ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. 
icon

(4 / 12)

ತಮಿಳು ಹಾಗೂ ತೆಲುಗಿನಲ್ಲಿ ತಲಾ ಒಂದೊಂದು ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪ ಸದ್ಯಕ್ಕೆ ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಲ್ಲಿ ಬ್ಯುಸಿ ಇದ್ದಾರೆ. 
icon

(5 / 12)

2004ರಲ್ಲಿ ತೆರೆ ಕಂಡ 'ಪಾಂಡವ' ಚಿತ್ರದ ನಂತರ ಶಿಲ್ಪ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ಆನಂದ್‌ ಪಿ ರಾಜ್‌ ನಟಿಸಿದ್ದ ಈ ಚಿತ್ರದಲ್ಲಿ ಶಿಲ್ಪ ಜೊತೆಗೆ ಚರಣ್‌ ರಾಜ್‌, ವಿನೋದ್‌ ರಾಜ್‌, ವಿನೋದ್‌ ಆಳ್ವ, ಹರ್ಷಿತ, ಬಿ ಜಯಶ್ರೀ, ಮಂಡ್ಯ ರಮೇಶ್‌, ಬಿರಾದಾರ್‌ ಹಾಗೂ ಇನ್ನಿತರರು ನಟಿಸಿದ್ದರು. 
icon

(6 / 12)

2001 ರಲ್ಲಿ ಶಿಲ್ಪ, ಎಂ. ರೆಂಜಿತ್‌ ಅವರನ್ನು ಮದುವೆಯಾದರು. ರೆಂಜಿತ್‌, ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. 
icon

(7 / 12)

ಶಿಲ್ಪ ಹಾಗೂ ರೆಂಜಿತ್‌ ದಂಪತಿಗೆ ಅವಂತಿಕಾ ಎಂಬ ಪುತ್ರಿ ಇದ್ದಾರೆ. 
icon

(8 / 12)

ಶಿಲ್ಪ ಹಾಗೂ ರೆಂಜಿತ್‌ ದಂಪತಿಗೆ ಅವಂತಿಕಾ ಎಂಬ ಪುತ್ರಿ ಇದ್ದಾರೆ. 

ಮದುವೆ ನಂತರ ಶಿಲ್ಪ, ತಾವು ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ ಧಾರಾವಾಹಿಗಳಲ್ಲಿ ಸಕ್ರಿಯರಾದರು. 
icon

(9 / 12)

ರೆಜಪುತ್ರ ವಿಶ್ಯುವಲ್‌ ಮೀಡಿಯಾ ಹಾಗೂ ಮಗಳ ಹೆಸರಿನ ಅವಂತಿಕಾ ಕ್ರಿಯೇಷನ್ಸ್‌ ಎಂಬ ಹೋಂ ಬ್ಯಾನರ್‌ ಹೊಂದಿರುವ ಶಿಲ್ಪ, ತಮ್ಮ ಪತಿ ರೆಂಜಿತ್‌ ಅವರೊಂದಿಗೆ ಸೇರಿ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. 
icon

(10 / 12)

ಸದ್ಯಕ್ಕೆ ಶಿಲ್ಪ, 'ಸಾಂತ್ವಾನಂ' ಎಂಬ ಮಲಯಾಳಂ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಏಷ್ಯಾನೆಟ್‌ ಮಲಯಾಳಂನಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯನ್ನು ಶಿಲ್ಪಾ, ತಮ್ಮ ಬ್ಯಾನರ್‌ ಅಡಿ ನಿರ್ಮಿಸುತ್ತಿದ್ದಾರೆ.  
icon

(11 / 12)

ಶಿಲ್ಪಾಗೆ ಕನ್ನಡದಲ್ಲಿ ಕೂಡಾ ಅನೇಕ ಅಭಿಮಾನಿಗಳಿದ್ದಾರೆ, ಈ ಚೆಲುವೆ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಕನ್ನಡ ಸಿನಿಪ್ರಿಯರ ಆಸೆ. ಆದರೆ ಅದು ಚಿಪ್ಪಿ ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಅಷ್ಟೇ. 
icon

(12 / 12)

IPL_Entry_Point

ಇತರ ಗ್ಯಾಲರಿಗಳು