logo
ಕನ್ನಡ ಸುದ್ದಿ  /  Entertainment  /  Fir Filed Against Shah Rukh Khan S Wife Gauri Khan Over A Property Purchase

FIR filed against Gauri Khan: ಆಸ್ತಿ ಖರೀದಿ ವಿಚಾರದಲ್ಲಿ ಮೋಸ; ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

HT Kannada Desk HT Kannada

Mar 02, 2023 12:19 PM IST

ಆಸ್ತಿ ಖರೀದಿ ವಿಚಾರ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

    • ಬಾಲಿವುಡ್‌ ನಟ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಇದೀಗ ಉತ್ತರ ಪ್ರದೇಶದ ಲಖನೌನಲ್ಲಿ ದೂರು ದಾಖಲಾಗಿದೆ. 
ಆಸ್ತಿ ಖರೀದಿ ವಿಚಾರ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು
ಆಸ್ತಿ ಖರೀದಿ ವಿಚಾರ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

FIR filed against Gauri Khan: ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದ ಲಖನೌನಲ್ಲಿ ಎಫ್ಐಆರ್ ದಾಖಲಾಗಿದೆ. ಗೌರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

‘ಬಂಟಿ ನಿನ್ನ ಸೋಪ್‌ ಸ್ಲೋನಾ?’ ಎಂದಿದ್ದ ಪುಟಾಣಿ ಹುಡುಗಿ ಈಗ ಬೋಲ್ಡ್‌ ಬ್ಯೂಟಿ, ಮಾದಕತೆಗೂ ಮತ್ತೊಂದು ಹೆಸರು

‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?

‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌

Janaki Samsara: ‘ಜಾನಕಿ ಸಂಸಾರ’ಕ್ಕೆ ಹುಳಿ ಹಿಂಡಲು ಬಂದ ಕಾವ್ಯಾ ಶಾಸ್ತ್ರಿ! ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾದ ‘ರಾಧಿಕಾ’

ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವರು ಗೌರಿ ಖಾನ್ ವಿರುದ್ಧ ದೂರು ದಾಖಲಿಸಿದ್ದು, ಗೌರಿ ಬ್ರಾಂಡ್ ಅಂಬಾಸಿಡರ್ ಆಗಿರುವ ಕಂಪನಿ 86 ಲಕ್ಷ ರೂಪಾಯಿ ತೆಗೆದುಕೊಂಡರೂ ಫ್ಲಾಟ್ ಹಸ್ತಾಂತರಿಸುವಲ್ಲಿ ವಿಫಲವಾಗಿದೆ ಎಂದು ಶಾ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಗೌರಿ ಖಾನ್ ಮತ್ತು ತುಳಸ್ಯಾನಿ ಕನ್‌ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್ ಲಿಮಿಟೆಡ್‌ ಕಂಪನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸ್ಯಾನಿ ಮತ್ತು ಅದರ ನಿರ್ದೇಶಕ ಮಹೇಶ್ ತುಳಸ್ಯಾನಿ ವಿರುದ್ಧ ದೂರು ದಾಖಲಿಸಲಾಗಿದೆ. ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ಅವರಿಂದ ಪ್ರಭಾವಿತರಾಗಿ ಫ್ಲಾಟ್ ಖರೀದಿಸಿರುವುದಾಗಿ ದೂರುದಾರ ಜಶ್ವಂತ್ ತಿಳಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

2015ರ ಆಗಸ್ಟ್‌ ತಿಂಗಳಲ್ಲಿ ಲಖನೌನಲ್ಲಿನ ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ಕಚೇರಿಗೆ ತೆರಳಿದ್ದ ಜಶ್ವಂತ್‌, ಸಿಎಂಡಿ ಅನಿಲ್ ಕುಮಾರ್ ತುಳಸ್ಯಾನಿ ಹಾಗೂ ತುಳಸ್ಯಾನಿ ಕನ್‌ಸ್ಟ್ರಕ್ಷನ್ ಅಂಡ್ ಡೆವಲಪರ್ಸ್ ಲಿಮಿಟೆಡ್‌ನ ನಿರ್ದೇಶಕ ಮಹೇಶ್ ತುಳಸ್ಯಾನಿ ಅವರನ್ನು ಭೇಟಿ ಮಾಡಿ ಫ್ಲ್ಯಾಟ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಫ್ಲ್ಯಾಟ್ ಬೆಲೆ 86 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. 2016ರ ವೇಳೆಗೆ ಫ್ಲಾಟ್ ನೀಡುವ ಭರವಸೆ ನೀಡಿತ್ತು.

ಇದೆಲ್ಲದಕ್ಕೂ ಒಪ್ಪಂದ ಮಾಡಿಕೊಂಡ ಜಶ್ವಂತ್‌, ಕಂಪನಿಯ ಖಾತೆಗೆ 85.46 ಲಕ್ಷ ರೂ. ಜಮಾ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇತ್ತ ಹಣ ನೀಡಿ ಆರು ವರ್ಷವಾದರೂ ನಿವೇಶನ ನೀಡಿಲ್ಲ ಎಂದು ಜಶ್ವಂತ್‌ ಆರೋಪಿಸಿದ್ದಾರೆ. ಬುಕ್ ಮಾಡಿದ್ದ ಫ್ಲಾಟ್ ಅನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇದೆಲ್ಲದರಿಂದ ರೋಸಿಹೋದ ಜಶ್ವಂತ್‌ ಇದೀಗ ಬ್ರಾಂಡ್‌ ಅಂಬಾಸಿಡರ್‌ ಗೌರಿ ಖಾನ್‌ ಸೇರಿ ಮೂವರ ವಿರುದ್ಧ ದೂರು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ

Tejasswi Prakash on Kantara: ಕನ್ನಡಿಗರ ಮನಗೆದ್ದ ಹಿಂದಿ ನಟಿ; ‘ಕಾಂತಾರ’ ಚಿತ್ರದ ಗೀತೆಯನ್ನು ಕನ್ನಡದಲ್ಲಿಯೇ ಹಾಡಿದ ತೇಜಸ್ವಿ ಪ್ರಕಾಶ್‌

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾದ ಕ್ರೇಜ್‌ ಇನ್ನೂ ಮುಗಿದಂತಿಲ್ಲ. ಈಗಲೂ ಆ ಚಿತ್ರಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿ ಇಂಟರ್‌ನೆಟ್‌ ಅಂಗಳದಲ್ಲಿ ಓಡಾಡುತ್ತಲೇ ಇರುತ್ತದೆ. ದಕ್ಷಿಣದವರ ಜತೆಗೆ ಉತ್ತರ ಭಾರತದವರನ್ನೂ ಸೆಳೆದ ಈ ಸಿನಿಮಾ, ಆ ಭಾಗದಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿದ್ದು ಈ ಚಿತ್ರದ ಹಿರಿಮೆಗೆ ಸಾಕ್ಷಿ. ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಈ ಚಿತ್ರ ನೋಡಿ ಕೊಂಡಾಡಿದ್ದಾರೆ. ಇದೀಗ ಇದೇ ಚಿತ್ರದ ಹಾಡನ್ನು ಕನ್ನಡದಲ್ಲಿಯೇ ಹಾಡಿದ್ದಾರೆ ಹಿಂದಿ ನಟಿ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು