logo
ಕನ್ನಡ ಸುದ್ದಿ  /  ಮನರಂಜನೆ  /  Jio Cinema Ott: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

Jio Cinema OTT: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

May 08, 2024 02:25 PM IST

Jio Cinema: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

    • ಜಿಯೋ ಸಿನಿಮಾ ಇದೀಗ ಕಿರುತೆರೆ ವೀಕ್ಷಕರಿಗೆ ಒಳ್ಳೆಯ ಆಫರ್‌ ನೀಡುತ್ತಿದೆ. ಈ ವರೆಗೂ ಟಿವಿಯಲ್ಲಿ ಬಂದ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಲಭ್ಯವಾಗುತ್ತಿದ್ದವು. ಈಗ ಟಿವಿಗೂ ಮೊದಲೇ ಕಲರ್ಸ್‌ ಕನ್ನಡದ ಸೀರಿಯಲ್‌ಗಳನ್ನು ಜಿಯೋ ಸಿನಿಮಾದಲ್ಲಿ ವೀಕ್ಷಣೆ ಮಾಡಬಹುದು. 
Jio Cinema: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು
Jio Cinema: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

Jio Cinema OTT: ಒಟಿಟಿ ಡಿಜಿಟಲ್‌ ಕ್ಷೇತ್ರದಲ್ಲಿ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿರುವ ಜಿಯೋ ಸಿನಿಮಾ ಇದೀಗ, ತನ್ನ ವೀಕ್ಷಕ ಬಳಗಕ್ಕೆ ಬಂಪರ್‌ ಆಫರ್‌ ಘೋಷಿಸಿದೆ. ಜಿಯೋ ಸಿನಿಮಾದಲ್ಲಿ ಕಲರ್ಸ್‌ ಕನ್ನಡದ ಧಾರಾವಾಹಿಗಳನ್ನು ಮುಂಚಿತವಾಗಿಯೇ ನೋಡುವ ಅವಕಾಶ ನೀಡಿದೆ. ಭಾರತದ ಹೊಸ ಮನರಂಜನೆಯ ಪ್ಲಾನ್ ಅನ್ನು ಘೋಷಿಸಿರುವ ಜಿಯೋ ಸಿನಿಮಾ, ಒಟಿಟಿಯಲ್ಲಿನ ಒಂದಷ್ಟು ಕಂಟೆಂಟ್‌ಗಳನ್ನು ಟಿವಿಯಲ್ಲಿ ಪ್ರಸಾರ ಕಾಣುವುದಕ್ಕೂ ಮುನ್ನ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕಿರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಭಾರತದ ಮುಂಚೂಣಿಯ ಸ್ಟ್ರೀಮಿಂಗ್ ಪ್ಲಾಟ್ ಫಾರಂ ಜಿಯೊಸಿನಿಮಾ ಇತ್ತೀಚೆಗೆ ತನ್ನ ಜಾಹೀರಾತು ಮುಕ್ತ ಪ್ಲಾನ್ ಜಿಯೋ ಸಿನಿಮಾ ಪ್ರೀಮಿಯಂ ಅನ್ನು ಪ್ರಾರಂಭಿಕ ಬೆಲೆಗೆ ಘೋಷಣೆ ಮಾಡಿದೆ. ತಿಂಗಳಿಗೆ ಕೇವಲ 29 ರೂಪಾಯಿಗೆ ಒಂದು ಡಿವೈಸ್‌ಗೆ ಮತ್ತು ಏಕಕಾಲಕ್ಕೆ ನಾಲ್ಕು ಡಿವೈಸ್‌ಗಳಿಗೆ ತಿಂಗಳಿಗೆ 89 ರೂಪಾಯಿಂತೆ ಪ್ರಕಟಿಸಿದೆ.

ಚಂದಾದಾರಿಕೆಯ ಭಾಗವಾಗಿ ಸದಸ್ಯರು ಕಲರ್ಸ್‌ನ ಅವರ ಅಚ್ಚುಮೆಚ್ಚಿನ ಧಾರಾವಾಹಿಗಳಾದ ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ಶ್ರೀಗೌರಿ, ಅಂತರಪಟ ಸೀರಿಯಲ್‌ಗಳನ್ನು ಪ್ರಸಾರದ ಆರು ಗಂಟೆ ಮುಂಚಿತವಾಗಿ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಒಂದು ಡಿವೈಸ್‌ಗೆ ಕೇವಲ 29 ರೂಪಾಯಿಯ ಪ್ಲಾನ್‌ಅನ್ನು ಪರಿಚಯಿಸಿದೆ ಜಿಯೋ ಸಿನಿಮಾ.

ಬರೀ ಸೀರಿಯಲ್‌ ಮಾತ್ರವಲ್ಲದೆ, ಟಿವಿಯಲ್ಲಿ ಪ್ರಸಾರ ಕಾಣುವ ಇತರೆ ಕಾರ್ಯಕ್ರಮಗಳನ್ನು ಹಾಗೂ ವಯಾಕಾಂ18 ನೆಟ್‌ವರ್ಕ್‌ ಚಾನೆಲ್‌ಗಳಾದ ನಿಕಲೊಡಿಯೊನ್, ಎಂಟಿವಿ ಸೇರಿ ಕಲರ್ಸ್‌ನ ಸ್ಥಳೀಯ ಭಾಷೆಯ ಚಾನೆಲ್‌ಗಳ ಕಂಟೆಂಟ್‌ಗಳನ್ನೂ ಸಹ ಮುಂಚಿತವಾಗಿ ಅಥವಾ ಯಾವಾಗ ಬೇಕಾದರೂ ವೀಕ್ಷಣೆ ಮಾಡಬಹುದಾಗಿದೆ.

ಬ್ಲಾಕ್‌ಬಸ್ಟರ್‌ ಸಿನಿಮಾಗಳು

ಕಿರುತೆರೆಯ ಸೀರಿಯಲ್‌ ಮತ್ತು ಕಾರ್ಯಕ್ರಮಗಳ ಜತೆಗೆ ಭಾರತೀಯ ಮಾತ್ರವಲ್ಲದೆ, ವಿದೇಶಿ ಸಿನಿಮಾಗಳನ್ನೂ ಸಹ ಜಿಯೋ ಸಿನಿಮಾದಲ್ಲಿ ವೀಕ್ಷಣೆ ಮಾಡಬಹುದು. ರಣ್ ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್, ಮರ್ಡರ್ ಇನ್ ಮಾಹಿಂ, ಪಿಐಎಲ್ಎಲ್ ಸಿರೀಸ್‌ಗಳನ್ನೂ ನೋಡಬಹುದು. ಇದರ ಜತೆಗೆ ಟಿವಿಯಲ್ಲಿ ಸೀರಿಯಲ್‌ಗಳು ಪ್ರಸಾರವಾಗುವ ಮೊದಲು ಒಟಿಟಿಯಲ್ಲಿ ಕಾಣಲಿವೆ. ವಯಾಕಾಂ 18 ನೆಟ್‌ವರ್ಕ್‌ನ 20+ ಟಿ.ವಿ ಚಾನೆಲ್ ಗಳು ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗಲಿವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ