logo
ಕನ್ನಡ ಸುದ್ದಿ  /  ಮನರಂಜನೆ  /  Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು; ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ರಾಜಕಾರಣಿ

Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು; ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ರಾಜಕಾರಣಿ

Praveen Chandra B HT Kannada

Feb 22, 2024 06:19 AM IST

google News

Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು

    • ಟಾಲಿವುಡ್‌ ನಟಿ ತ್ರಿಶಾ ಕೃಷ್ಣನ್‌ ಬಗ್ಗೆ "ರೆಸಾರ್ಟ್‌" ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿದ್ದ ರಾಜಕಾರಣಿ ಇದೀಗ ಬಹಿರಂಗವಾಗಿ ನಟಿಯ ಕ್ಷಮೆ ಯಾಚಿಸಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.
Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು
Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು

ತಮಿಳುನಾಡಿನ ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ಇತ್ತೀಚೆಗೆ ತ್ರಿಶಾ ವಿಷಯದಿಂದ ಸುದ್ದಿಯಲ್ಲಿದ್ದಾರೆ. ನಟಿ ತ್ರಿಶಾ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ಕಟು ಟೀಕೆ ಎದುರಾದ ಬಳಿಕ ಇದೀಗ ಎವಿ ರಾಜು ಕ್ಷಮೆ ಕೇಳಿದ್ದಾರೆ. ಮಾಜಿ ರಾಜಕಾರಣಿಯು ಈ ವಿಷಯದ ಕುರಿತು ನನ್ನನ್ನು ಕ್ಷಮಿಸುವಂತೆ ಕೇಳಿದ್ದು, ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವಲತ್ತುಕೊಂಡಿದ್ದಾರೆ.

ವಿಡಿಯೋ ಸಂದೇಶವೊಂದರಲ್ಲಿ ಎವಿ ರಾಜು ಕ್ಷಮೆ ಕೇಳಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಗ್ರಹಿಸಲಾಗಿದೆ. ನಟಿಯನ್ನು ಟಾರ್ಗೆಟ್‌ ಮಾಡುವ ಯಾವ ಉದ್ದೇಶವೂ ನನ್ನಲ್ಲಿ ಇರಲಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ನಿರ್ದೇಶಕ ಚೆರನ್‌, ನಟ ಕರುಣಾಸ್‌ ಮತ್ತು ಇತರರ ಕ್ಷಮೆಯನ್ನೂ ಎವಿ ರಾಜು ಕೇಳಿದ್ದಾರೆ.

ಎವಿ ರಾಜು ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಸೇಲಮ್‌ ವೆಸ್ಟ್‌ನ ಎಂಎಲ್‌ಎ ವೆಂಕಟಚಲಂರಿಂದ ನಟಿ ತ್ರಿಶಾ 25 ಲಕ್ಷ ರೂಪಾಯಿ ಪಡೆದಿದ್ದಾರೆ ಮತ್ತು ಎಂಎಲ್‌ಎ ಇಷ್ಟು ಹಣಕ್ಕೆ ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದರು.

ಈ ರೀತಿಯ ಹೇಳಿಕೆಗೆ ವ್ಯಾಪಕ ಟೀಕೆ ಎದುರಾಗಿತ್ತು. ಕಾನೂನು ಕ್ರಮ ಜರುಗಿಸುವುದಾಗಿ ನಟಿ ತ್ರಿಶಾ ಟ್ವೀಟ್‌ ಮಾಡಿದ್ದರು. ತ್ರಿಶಾ ಮಾತ್ರವಲ್ಲದೆ ಸಾಕಷ್ಟು ಜನರು ಎವಿ ರಾಜು ಹೇಳಿಕೆಯನ್ನು ಖಂಡಿಸಿ ತ್ರಿಶಾರನ್ನು ಬೆಂಬಲಿಸಿದ್ದರು. ತಮಿಳುನಾಡಿನ ಸಿನಿಮಾ ಕೌನ್ಸಿಲ್‌ ಮುಖ್ಯಸ್ಥ ಮತ್ತು ನಟ ವಿಶಾಲ್‌ ಕೂಡ ಎವಿ ರಾಜು ಹೇಳಿಕೆಯನ್ನು ಖಂಡಿಸಿದ್ದರು. ಮಾಜಿ ರಾಜಕಾರಣಿಯ ಕೆಟ್ಟ ಇತಿಹಾಸ ಹೊಂದಿದ್ದಾರೆ ಎಂದು ಹೇಳಿದ್ದರು.

ತನ್ನ ಬಗ್ಗೆ ರಾಜಕಾರಣಿ ಮಾಡಿರುವ ಆರೋಪಕ್ಕೆ ತ್ರಿಶಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. "ಇತರರ ಗಮನ ಸೆಳೆಯಲು ಯಾವುದೇ ಮಟ್ಟಕ್ಕೆ ಇಳಿಯುವ ಕೀಳು ಮತ್ತು ನಿಕೃಷ್ಟ ಜನರನ್ನು ಮತ್ತೆಮತ್ತೆ ನೋಡಲು ಅಸಹ್ಯವಾಗುತ್ತಿದೆ. ಇವರ ವಿರುದ್ಧ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಕಾನೂನು ಕ್ರಮದ ಮೂಲಕ ಪ್ರತಿಕ್ರಿಯೆ ನೀಡಲಾಗುವುದು" ಎಂದು ತ್ರಿಶಾ ಟ್ವೀಟ್‌ ಮಾಡಿದ್ದಾರೆ. ತ್ರಿಶಾರಿಗೆ ಅವರ ಅಭಿಮಾನಿಗಳು ಬೆಂಬಲ ನೀಡಿದ್ದಾರೆ. "ಇದು ಸೂಕ್ತವಾದ ಉತ್ತರ" "ಕಾನೂನು ಕ್ರಮಕೈಗೊಳ್ಳಿ" ಎಂದೆಲ್ಲ ಫ್ಯಾನ್ಸ್‌ ಪ್ರತಿಕ್ರಿಯೆ ನೀಡಿದ್ದರು.

ತ್ರಿಶಾ ಈ ಹಿಂದೆಯೂ ಆಕ್ಷೇಪಾರ್ಹ ಹೇಳಿಕೆಗಳನ್ನು ಎದುರಿಸಿದ್ದರು. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಮನ್ಸೂರ್‌ ಆಲಿ ಖಾನ್‌ ಕೂಡ ನಟಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಮಾತು ಆಡಿದ್ದರು. ಲಿಯೋ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್‌ ಆಲಿ ಖಾನ್‌ ಅವರು ಕೆಟ್ಟದ್ದಾಗಿ ಹೇಳಿಕೆ ನೀಡಿದ್ದರು. “ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಶಾ ಜೊತೆ ಅತ್ಯಾಚಾರದ ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಶಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿದ್ದೆ" ಎಂದು ಅವರು ಹೇಳಿದ್ದರು. ಅಷ್ಟು ಮಾತ್ರವಲ್ಲದೆ "ನಟಿ ತ್ರಿಶಾ ಜತೆಗೆ ಬೆಡ್‌ರೂಮ್‌ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಶಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ಲಿಯೊ ಸಿನಿಮಾದಲ್ಲಿ ಅಂತಹ ಅವಕಾಶ ದೊರಕಲಿಲ್ಲ" ಎಂದು ಹೇಳಿಕೆ ನೀಡಿದ್ದರು. ಬಳಿಕ ಈ ಕುರಿತು ಪ್ರಕರಣ ದಾಖಲಾಗಿ ಮನ್ಸೂರ್‌ ಆಲಿ ಖಾನ್‌ ವಿಚಾರಣೆ ಎದುರಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ