ಅಮೃತಧಾರೆ ಧಾರಾವಾಹಿ: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಅಲ್ಲ ಲೋಕಿ ಕಾರಣವಂತೆ; ಶಕುಂತಲಾ ದೇವಿಯ ಹೊಸ ನಾಟಕ ಶುರು-televison news amruthadhaare serial episode 196 february 20 shakuntala devi new drama malli pregnancy pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಅಲ್ಲ ಲೋಕಿ ಕಾರಣವಂತೆ; ಶಕುಂತಲಾ ದೇವಿಯ ಹೊಸ ನಾಟಕ ಶುರು

ಅಮೃತಧಾರೆ ಧಾರಾವಾಹಿ: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಅಲ್ಲ ಲೋಕಿ ಕಾರಣವಂತೆ; ಶಕುಂತಲಾ ದೇವಿಯ ಹೊಸ ನಾಟಕ ಶುರು

Amruthadhaare Serial Episode 196: ಮಲ್ಲಿ ಮನೆಯಲ್ಲಿ ಇಲ್ಲ ಎಂದು ಎಲ್ಲಾ ಕೆಲಸಗಾರರು ಕೇಳಿದಾಗ ಇಲ್ಲ ಎನ್ನುತ್ತಾರೆ. ಒಬ್ಬಳು ಮಾತ್ರ ಇದ್ಲು ಅಂತಾರೆ. ಮಲ್ಲಿ ಜತೆ ಲೋಕಿ ಎಂಬ ಕೆಲಸಗಾರರನಿಗೆ ಸಂಬಂಧ ಇತ್ತು ಎಂಬ ಕಥೆಯನ್ನೂ ಆಕೆ ಹೇಳುತ್ತಾಳೆ. ಶಕುಂತಲಾದೇವಿ ಹೊಸ ಕಥೆ ಹೆಣೆದಿದ್ದು, ಭೂಮಿಕಾಳಿಗೆ ಸತ್ಯ ಹೇಗೆ ತಿಳಿಯುತ್ತದೆ ಎಂದು ಕಾದುನೋಡಬೇಕಿದೆ.

ಅಮೃತಧಾರೆ ಧಾರಾವಾಹಿ: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಅಲ್ಲ ಲೋಕಿ ಕಾರಣವಂತೆ
ಅಮೃತಧಾರೆ ಧಾರಾವಾಹಿ: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಅಲ್ಲ ಲೋಕಿ ಕಾರಣವಂತೆ

ಝೀ ಕನ್ನಡ ಸೀರಿಯಲ್‌ನ ಮಂಗಳವಾರದ ಸಂಚಿಕೆಯಲ್ಲಿ ಅನಿರೀಕ್ಷಿತ ತಿರುವೊಂದು ಎದುರಾಗಿದೆ. ಮಲ್ಲಿ ಗರ್ಭಿಣಿಯಾಗಲು ಕಾರಣ ಎಂಬ ಹುಡುಕಾಟದಲ್ಲಿ ಭೂಮಿಕಾಳಿಗೆ ಹೊಸ ಸವಾಲು ಎದುರಾಗಿದೆ. ಇನ್ನೊಂದೆಡೆ ಗೌತಮ್‌ ಮದುವೆ ಮನೆಯ ಕಾರ್ಯಕ್ರಮಗಳೂ ಆತಂಭವಾಗಿವೆ. ಮದುವೆ ಹಾಲ್‌ನ ಸೀನ್‌ಗಳು ಕಾಣಿಸಿವೆ. ಅಮೃತಧಾರೆ ಸೀರಿಯಲ್‌ನ ಮುಂದಿನ ಕೆಲವು ಎಪಿಸೋಡ್‌ಗಳು ಕುತೂಹಲ ಹೆಚ್ಚಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ.

ಗೌತಮ್‌ ಮತ್ತು ಸ್ನೇಹಿತ ಆನಂದ್‌ ಕಾರಲ್ಲಿ ಹೋಗುತ್ತಾ ಮಾತನಾಡುತ್ತಾರೆ. ಭೂಮಿಕಾಳಿಗೆ ಕುಡಿಸಿರುವ ಕುರಿತು ಗೌತಮ್‌ ತನ್ನ ಸ್ನೇಹಿತನಿಗೆ ಬಯ್ಯುತ್ತ ಇರುತ್ತಾನೆ. "ಕುಡಿದಾಗ ಅವರು ನಮ್ಮ ರೀತಿ ಅಲ್ಲ. ಕುಡಿದಾಗ ಅವರು ತುಂಬಾ ಡೇಂಜರ್‌" ಎಂದು ಗೌತಮ್‌ ಹೇಳುತ್ತಾರೆ. ಇದಾದ ಬಳಿಕ ಗೌತಮ್‌ ಮೆಲ್ಲಗೆ ಮೊಬೈಲ್‌ನಲ್ಲಿ ಭೂಮಿಕಾ ಕಿಸ್‌ ನೀಡಿರುವ ಫೋಟೋ ನೋಡುತ್ತಾ ಇರುತ್ತಾನೆ.

ಜೈದೇವ್‌ ಅಪೇಕ್ಷಾ ವಿವಾಹ

ಇನ್ನೊಂದೆಡೆ ಜೈದೇವ್‌ ಮತ್ತು ಅಪೇಕ್ಷಾ ವಿವಾಹ ಕಾರ್ಯಕ್ರಮಗಳು ಆರಂಭವಾಗಿವೆ. ಮದುವೆ ಮನೆಗೆ ಮದುಮಗ ಜೈದೇವ್‌ ಕಾರಲ್ಲಿ ಆಗಮಿಸುತ್ತಾನೆ. ಆತನ ಕಾರಲ್ಲಿ ಭೂಮಿಕಾ ಮತ್ತು ಇತರರೂ ಇರುತ್ತಾರೆ. ಭೂಮಿಕಾ ಮನಸ್ಸಿನಲ್ಲಿ "ಮಲ್ಲಿ ನೋವಿನ ಮಾತುಗಳು" ಕಾಡುತ್ತ ಇರುತ್ತವೆ. ಇದೇ ಸಮಯದಲ್ಲಿ ಶಕುಂತಲಾ ದೇವಿ "ಭೂಮಿಕಾ ಟೆನ್ಷನ್‌ ಮಾಡಬೇಡ, ಕೆಲಸದವರನ್ನು ಕರೆಸಿದ್ದೇನೆ. ನಾನು ಎಲ್ಲರನ್ನೂ ವಿಚಾರಿಸಿದ್ದೇನೆ" ಎನ್ನುತ್ತಾಳೆ.

ಇನ್ನೊಂದೆಡೆ ಮದುಮಗನಿಗೆ ಎಲ್ಲರೂ ಆರತಿ ಮಾಡುತ್ತಾಳೆ. ಆರತಿ ಮಾಡುವಾಗಲೂ ಭೂಮಿಕಾಳ ಮನಸ್ಸು ಬೇರೆಯದ್ದೇ ಯೋಚನೆಯಲ್ಲಿ ಇರುತ್ತದೆ. ಇನ್ನೊಂದೆಡೆ ಪಾರ್ಥ ಮತ್ತು ಅಪೇಕ್ಷಾ ವಿರಹದಲ್ಲಿ, ಪ್ರೇಮ ವೈಫಲ್ಯದ ಬೇಗೆಯಲ್ಲಿ ಇರುತ್ತಾರೆ. ಅಪೇಕ್ಷಾ ಮನೆಗೆ ಪಾರ್ಥ ಆಗಮಿಸುತ್ತಾನೆ. ಜುವೆಲ್ಲರಿ ಕೊಡಲು ಆತ ಆಗಮಿಸಿರುತ್ತಾನೆ. ಅಪೇಕ್ಷಾಳ ಕೈಯಲ್ಲಿ ಜುವೆಲ್ಲರಿ ನೀಡಲು ಬರುತ್ತಾನೆ. ಅವರಿಬ್ಬರ ನೋವಿನ ನೋಟಗಳು ಇರುತ್ತವೆ.

ಮಲ್ಲಿ ಗರ್ಭಿಣಿ ಸ್ಟೋರಿಗೆ ಹೊಸ ಟ್ವಿಸ್ಟ್‌ ನೀಡಿದ ಶಕುಂತಲಾದೇವಿ

ಇನ್ನೊಂದೆಡೆ ಶಕುಂತಲಾದೇವಿ ತನ್ನ ಕೆಲಸಗಾರರನ್ನು ವಿಚಾರಿಸುತ್ತಾಳೆ. ಎಲ್ಲಾ ಕೆಲಸಗರಾರರು ಬಂದಿರುತ್ತಾರೆ. ಒಬ್ಬಳು ಬಂದಿರುವುದಿಲ್ಲ. "ಇದನ್ನು ನನ್ನ ಮನೆ ಮರ್ಯಾದೆ ಪ್ರಶ್ನೆ, ಎಲ್ಲರೂ ಸತ್ಯ ಹೇಳಬೇಕು" ಎಂದು ಶಕುಂತಲಾ ದೇವಿ ಹೇಳುತ್ತಾರೆ. ತಾತಾನ ಬಗ್ಗೆ ಕೇಳುತ್ತಾಳೆ. "ಅವನ ಮನೆಯಲ್ಲಿ ಒಬ್ಬಳು ಹುಡುಗಿ ಇರ್ತಾಳೆ ಅಲ್ವ" ಎಂದಾಗ ಎಲ್ಲರೂ ನಾವು ಯಾರೂ ನೋಡಿಲ್ಲ ಎಂದು ಹೇಳುತ್ತಾರೆ. ನಾವ್ಯಾರು ನೋಡಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇವರಿಗೆಲ್ಲ ಮೊದಲೇ ಹೇಳಿರುವ ಕಾರಣ ಎಲ್ಲರೂ ಸುಳ್ಳು ಹೇಳುತ್ತಾರೆ. ಇದೇ ಸಮಯಕ್ಕೆ ಮತ್ತೊಬ್ಬಳು ಬರುತ್ತಾಳೆ. ಊರಿಗೆ ಹೋಗಿದ್ದ ಕೆಲಸ ಬರುತ್ತಾಳೆ.

ಗಂಗಣ್ಣ ತಾತಾನ ಮನೆಯಲ್ಲಿ ಒಬ್ಬಳು ಹುಡುಗಿ ಇದ್ದಾಳ ಎಂದು ಆ ಕೆಲಸದವಳಲ್ಲಿ ಭೂಮಿಕಾ ಕೇಳುತ್ತಾಳೆ. "ಆ ಮೇಡಂ, ತಾತಾನ ಮನೆಯಲ್ಲಿ ಆ ಹುಡುಗಿ ಇದ್ದಳು" ಎಂದು ಅವಳು ಹೇಳುತ್ತಾಳೆ. ಆ ಹುಡುಗಿ ಗಂಗಣ್ಣನ ಮೊಮ್ಮಗಳು ಎಂದು ಆಕೆ ಹೇಳುತ್ತಾಳೆ. ಮನೆಹಾಳ ಮಾವ ಟೆನ್ಷನ್‌ಗೆ ಒಳಗಾಗುತ್ತಾನೆ. ಹೊಸದಾಗಿ ಸೇರಿರುವ ಲೋಕಿಯ ಕುರಿತು ಆ ಕೆಲಸದವಳು ಮಾತನಾಡುತ್ತಾಳೆ. ಆ ಲೋಕಿಯೇ ಮಲ್ಲಿಯ ಜತೆ ಸಂಬಂಧ ಹೊಂದಿರಬಹುದು ಎಂದು ಹೇಳುತ್ತಾಳೆ. ಈ ಮೂಲಕ ಮಲ್ಲಿ ಗರ್ಭಿಣಿಯಾಗಲು ಲೋಕಿ ಕಾರಣವಾಗಿರಬಹುದು ಎಂದು ಹೊಸ ತಿರುವಿಗೆ ಸೀರಿಯಲ್‌ ತಿರುಗುತ್ತದೆ. ಅವನು ಬೆಳಗ್ಗಿನಿಂದ ಕಾಣಿಸುತ್ತಿಲ್ಲ, ಮಲ್ಲಿ ಮತ್ತು ಲೋಕಿ ಎಲ್ಲೋ ಓಡಿ ಹೋಗಿರ್ತಾರೆ ಎಂದು ಆಕೆ ಹೇಳುತ್ತಾಳೆ. ಇದಾದ ಬಳಿಕ ಸಿಸಿಟಿವಿ ಫೂಟೇಜ್‌ ತಂದು ನೋಡುವ ನಾಟಕವೂ ನಡೆಯುತ್ತದೆ.

ಮಲ್ಲಿ ನನ್ನತ್ರ ಸುಳ್ಳು ಹೇಳಿದ್ಲ ಎಂದು ಭೂಮಿಕಾ ಯೋಚಿಸಿ ಬರುತ್ತಾಳೆ. ಇದೇ ಸಮಯದಲ್ಲಿ ಪಾರ್ಥ ಅಪೇಕ್ಷಾ ಮನೆಯಲ್ಲಿ ಇರುತ್ತಾನೆ. ಸ್ವಲ್ಪ ಹೊತ್ತು ಅಪೇಕ್ಷಾ ಮತ್ತು ಪಾರ್ಥ ಆ ಮನೆಯಲ್ಲಿ ಇರುತ್ತಾರೆ. ಹಳೆಯ ನೆನಪುಗಳು ಕಾಡುತ್ತವೆ. ಬಳಿಕ ಪಾರ್ಥನಿಗೂ ಮದುವೆ ಮಾಡಬೇಕು ಎಂದೆಲ್ಲ ಅಪೇಕ್ಷಾ ಮನೆಯವರು, ಮಹಿಮಾ ಮಾತನಾಡುತ್ತಾರೆ. "ಅಂದು ಮದುವೆ ಪ್ರಪೋಸಲ್‌ ಬಂದಾಗ ಪಾರ್ಥನಿಗೆ ನಮ್ಮ ಅಪ್ಪಿನ ಕೇಳ್ತಾ ಇದ್ದಾರೆ ಅಂದುಕೊಂಡೆ" ಎಂದು ಅಪೇಕ್ಷಾ ತಾಯಿ ಹೇಳುತ್ತಾರೆ.

ಮಲ್ಲಿ ನನ್ನಲ್ಲಿ ಸುಳ್ಳು ಹೇಳಲು ಹೇಗೆ ಸಾಧ್ಯ ಎಂದು ಯೋಚಿಸುತ್ತ ಇರುವಾಗ ಸಿಟಿ ಟೀವಿ ಕ್ಯಾಮೆರಾ ಫೂಟೇಜ್‌ಬರುತ್ತದೆ. ಅದರಲ್ಲಿ ಕೆಲಸದಾತ ಮಲ್ಲಿಯನ್ನು ಕರೆದುಕೊಂಡು ಮನೆಯಿಂದ ಹೊರಗೆ ಬರುವ ದೃಶ್ಯ ಇರುತ್ತದೆ. "ನೀನು ಸೇರು ಆದರೆ ನಾನು ಸೇವ್ವಾಸೇರು" ಎಂದು ಶಕುಂತಲಾದೇವಿ ಸ್ವಗತದೊಂದಿಗೆ ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)|ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)