logo
ಕನ್ನಡ ಸುದ್ದಿ  /  ಮನರಂಜನೆ  /  Uma Ramanan: ವಿಷ್ಣುವರ್ಧನ್‌ ಕಥನಾಯಕ ಸಿನಿಮಾಕ್ಕೆ ಧ್ವನಿಯಾಗಿದ್ದ ಜನಪ್ರಿಯ ಗಾಯಕಿ ನಿಧನ, ಅಗಲಿದ ಉಮಾ ರಮಣನ್‌ಗೆ ಅಕ್ಷರ ನಮನ

Uma Ramanan: ವಿಷ್ಣುವರ್ಧನ್‌ ಕಥನಾಯಕ ಸಿನಿಮಾಕ್ಕೆ ಧ್ವನಿಯಾಗಿದ್ದ ಜನಪ್ರಿಯ ಗಾಯಕಿ ನಿಧನ, ಅಗಲಿದ ಉಮಾ ರಮಣನ್‌ಗೆ ಅಕ್ಷರ ನಮನ

Praveen Chandra B HT Kannada

May 02, 2024 11:49 AM IST

google News

Uma Ramanan: ವಿಷ್ಣುವರ್ಧನ್‌ ಕಥನಾಯಕ ಸಿನಿಮಾಕ್ಕೆ ಧ್ವನಿಯಾಗಿದ್ದ ಜನಪ್ರಿಯ ಗಾಯಕಿ ನಿಧನ

    • Uma Ramanan Passed away: ತಮಿಳು ಚಿತ್ರರಂಗದ ಜನಪ್ರಿಯ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ದಿವಂಗತ ಡಾ. ವಿಷ್ಣುವರ್ಧನ್‌ ಮತ್ತು ಸುಮಲತಾ ನಟನೆಯ ಕಥಾನಾಯಕ ಸಿನಿಮಾದ "ನೋಯುತ್ತಿದೆ" ಎಂಬ ಕನ್ನಡ ಹಾಡಿಗೆ ಇವರು ಧ್ವನಿಯಾಗಿದ್ದರು.
Uma Ramanan: ವಿಷ್ಣುವರ್ಧನ್‌ ಕಥನಾಯಕ ಸಿನಿಮಾಕ್ಕೆ ಧ್ವನಿಯಾಗಿದ್ದ ಜನಪ್ರಿಯ ಗಾಯಕಿ ನಿಧನ
Uma Ramanan: ವಿಷ್ಣುವರ್ಧನ್‌ ಕಥನಾಯಕ ಸಿನಿಮಾಕ್ಕೆ ಧ್ವನಿಯಾಗಿದ್ದ ಜನಪ್ರಿಯ ಗಾಯಕಿ ನಿಧನ

ಬೆಂಗಳೂರು: ತಮಿಳು ಚಿತ್ರರಂಗದ ಜನಪ್ರಿಯ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ದಿವಂಗತ ಡಾ. ವಿಷ್ಣುವರ್ಧನ್‌ ಮತ್ತು ಸುಮಲತಾ ನಟನೆಯ ಕಥಾನಾಯಕ ಸಿನಿಮಾದ "ನೋಯುತ್ತಿದೆ" ಎಂಬ ಕನ್ನಡ ಹಾಡಿಗೆ ಇವರು ಧ್ವನಿಯಾಗಿದ್ದರು. ತಮಿಳು ಚಿತ್ರರಂಗದಲ್ಲಿ ಹಲವು ಹಾಡುಗಳ ಮೂಲಕ ಜನಪ್ರಿಯ ಗಾಯಕಿಯಾಗಿ ಹೆಸರು ಮಾಡಿದ್ದಾರೆ.

ಶಾಸ್ತ್ರೀಯ ಸಂಗೀತ ಕಲಿತು ಸುಮಾರು 35 ವರ್ಷಗಳ ಕಾಲ ಆರು ಸಾವಿರಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿರುವ ಉಮಾ ರಮಣನ್ ಅವರು ಬಾಲಿವುಡ್‌ನ ಹಾಡುಗಳನ್ನೂ ಹಾಡಿದ್ದಾರೆ. ವಿಶೇಷವಾಗಿ ತಮಿಳು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಿಝಗಳು ಚಿತ್ರದ ಪೊಂಗಾತವೇ ತಾಳತೀರವೈ ಎಂಬ ಜನಪ್ರಿಯ ಹಾಡು ಇವರ ಖ್ಯಾತಿಯನ್ನು ಹೆಚ್ಚಿಸಿತ್ತು. ಬಾಲಿವುಡ್‌ನಲ್ಲಿ ಅವಕಾಶಗಳಿದ್ದರೂ ಕಾಲಿವುಡ್‌ನತ್ತ ಗಮನ ನೀಡಿರುವ ಇವರು ಇಳಯರಾಜ ಜತೆ ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಉಮಾ ರಮಣನ್‌ ಹಾಡುಗಳು

ಸಂಗೀತ ನಿರ್ದೇಶಕ ಇಳಯರಾಜ ಅವರ ಜತೆ ಹಲವು ಪ್ರಸಿದ್ಧ ಹಾಡುಗಳನ್ನು ಉಮಾ ರಮಣನ್‌ ಹಾಡಿದ್ದಾರೆ. 'ತೂರಲ್ ನಿನ್ನ ಪೊಚ್ಚು' ಚಿತ್ರದ 'ಭೂಪಾಲಂ ಇಸೈಕ್ಕುಮ್', 'ಆನಂದ ರಾಗಂ' 'ಪನ್ನರ್ ಪುಷ್ಪಂಗಳ' 'ಕಣ್ಮಣಿ ನೀ ವರ' 'ತೆಂಡ್ರಾಲೆ ಎನ್ನೈ ತೋಡು', 'ಒರು ಕೈದಿಯಿನ್ ದೈರ್ ಕೈದಿ'ಯ 'ಪೊನ್ ಮಾನೇ'. , 'ಅರಂಗೇತ್ರ ವೇಲೈ' ಚಿತ್ರದ 'ಆಗಾಯ ವೆನ್ನಿಲವೆ' ಮತ್ತು 'ಮಹಾನದಿ' ಸಿನಿಮಾದ 'ಶ್ರೀ ರಂಗ ರಂಗನಾಥನಿನ್' ಹಾಡು ಸೇರಿದಂತೆ ಹಲವು ಹಾಡುಗಳು ಹೆಚ್ಚು ಜನಪ್ರಿಯತೆ ಪಡೆದಿವೆ.

ಕೊನೆಯದಾಗಿ ವಿಜಯ್ 'ತಿರುಪಾಚಿ' ಸಿನಿಮಾಕ್ಕೆ 'ಕಣ್ಣುಂ ಕಣ್ಣುಮ್ತನ್ ಕಾಲಂದಾಚು' ಹಾಡಿದ್ದರು. ಉಮಾ ರಮಣನ್‌ ಅವರು 1954/55ರಲ್ಲಿ(ನಿಖರ ಜನ್ಮ ದಿನಾಂಕ ಲಭ್ಯವಿಲ್ಲ) ಜನಿಸಿದರು. 

ಶಾಲಾ ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲೇ ಉಮಾ ರಮಣನ್ ಅವರು ಪಜ್ಜನಿ ವಿಜಯಲಕ್ಷ್ಮಿಯವರಲ್ಲಿ ಶಾಸ್ತ್ರೀಯ ಸಂಗೀತ ತರಬೇತಿ ಪಡೆದರು. ಹಲು ಇಂಟರ್‌ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿದ್ಯಾರ್ಥನಿಯಾಗಿರುವಾಗಲೇ ಹಲವು ಬಹುಮಾನಗಳನ್ನು, ಪುರಸ್ಕಾರಗಳನ್ನು ಪಡೆದರು. ದೂರದರ್ಶನ ನಿರೂಪಕ ನಟ ಎವಿ ರಮಣನ್‌ ಅವರ ಜತೆ ಸ್ಟೇಜ್‌ ಶೋ ನೀಡಲು ಆರಂಭಿಸಿದರು. ಇವರಿಬ್ಬರು ಜೋಡಿ ಕಲಾವಿದರಾಗಿ ಸಾಕಷ್ಟು ಸಂಗೀತ ಕಚೇರಿಗಳನ್ನು ನೀಡಿದರು. ಮುಂದೆ ಇವರನ್ನೇ ವಿವಾಹವಾದರು.

ಉಮಾ ರಮಣನ್‌ ಅವರ ಪ್ರತಿಭೆ ಜನಪ್ರಿಯ ನಿರ್ಮಾಪಕ - ಕ್ಯಾಮೆರಾಮನ್, ಜಾನಕಿರಾಮನ್ ಕಣ್ಣಿಗೆ ಬಿತ್ತು. 1976 ರಲ್ಲಿ ಬಿಡುಗಡೆಯಾದ ತಮ್ಮ ಹಿಂದಿ ಚಲನಚಿತ್ರ ಪ್ಲೇ ಬಾಯ್‌ನಲ್ಲಿ ಹಾಡಲು ಇವರಿಬ್ಬರಿಗೂ ಅವಕಾಶ ನೀಡಿದರು. ಇದೇ ಜೋಡಿ 1977 ರಲ್ಲಿ ಎಪಿ ನಾಗರಾಜನ್‌ ನಿರ್ದೇಶಿಸಿದ ತಮಿಳು ಚಲನಚಿತ್ರ ಶ್ರೀ ಕೃಷ್ಣ ಲೀಲಾ ಸಿನಿಮಾಕ್ಕೆ ಹಾಡಿದರು. ಇಳಯರಾಜಾ ಅವರ ಸಂಗೀತ ಸಂಯೋಜನೆಯ ನಿಜಗಳು ಚಿತ್ರದ "ಪೂಂಗಾತವೇ ತಾಳ ತಿರವ" ಹಾಡಿನಿಂದ ಇವರು ಫೇಮಸ್‌ ಆದರು. ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್‌ ನೀಡಿತು. ಇದಾದ ಬಳಿಕ ಇಳಯರಾಜಾ ಅವರೊಂದಿಗೆ ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದರು. ಇತರ ಸಂಗೀತ ನಿರ್ದೇಶಕರಾದ ವಿದ್ಯಾಸಾಗರ್, ದೇವಾ ಮತ್ತು ಮಣಿ ಶರ್ಮಾ ಅವರೊಂದಿಗೂ ಉಮಾ ರಮಣನ್‌ ಹಾಡಿದ್ದಾರೆ.

ಉಮಾ ರಮಣನ್ ಧ್ವನಿಯಾದ ಕನ್ನಡ ಹಾಡು

ತಮಿಳಿನ ಜನಪ್ರಿಯ ಗಾಯಕಿ ದಿವಂಗತ ಉಮ ರಮಣನ್‌ ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಒಂದು ಕನ್ನಡ ಸಿನಿಮಾ ಹಾಡಿಗೆ ಧ್ವನಿಯಾಗಿದ್ದಾರೆ. ಡಾ. ವಿಷ್ಣುವರ್ಧನ್‌ ಮತ್ತು ಸುಮಲತಾ ನಟನೆಯ ಕಥನಾಯಕ ಸಿನಿಮಾದ "ನೋಯುತ್ತಿದೆ" ಎಂಬ ಹಾಡನ್ನು ಉಮಾ ರಮನಾಥನ್‌ ಹಾಡಿದ್ದಾರೆ. ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ