logo
ಕನ್ನಡ ಸುದ್ದಿ  /  ಮನರಂಜನೆ  /  Laapataa Ladies Ott: ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಒಟಿಟಿಗೆ; ಮನೆಯಲ್ಲೇ ನೋಡಿ ಅಮಿರ್‌ ಖಾನ್‌ ನಿರ್ಮಾಣದ ಸಿನಿಮಾ

Laapataa Ladies OTT: ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಒಟಿಟಿಗೆ; ಮನೆಯಲ್ಲೇ ನೋಡಿ ಅಮಿರ್‌ ಖಾನ್‌ ನಿರ್ಮಾಣದ ಸಿನಿಮಾ

Praveen Chandra B HT Kannada

Apr 26, 2024 03:06 PM IST

ಕಿರಣ್‌ ರಾವ್‌ ನಿರ್ದೇಶನದ ಲಪಾಟ ಲೇಡಿಸ್‌ ಒಟಿಟಿಗೆ

    • Laapataa Ladies OTT release: ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ಬಳಿಕ ಲಾಪತಾ ಲೇಡಿಸ್‌ ಸಿನಿಮಾ ಒಟಿಟಿಗೆ ಆಗಮಿಸಿದೆ. ಇಂದು ಅಂದರೆ ಏಪ್ರಿಲ್‌ 26ರಿಂದ ಕಿರಣ್‌ ರಾವ್‌ ನಿರ್ದೇಶನದ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.
ಕಿರಣ್‌ ರಾವ್‌ ನಿರ್ದೇಶನದ ಲಪಾಟ ಲೇಡಿಸ್‌ ಒಟಿಟಿಗೆ
ಕಿರಣ್‌ ರಾವ್‌ ನಿರ್ದೇಶನದ ಲಪಾಟ ಲೇಡಿಸ್‌ ಒಟಿಟಿಗೆ

ಬೆಂಗಳೂರು: ಸಿನಿವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆದ ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಇದೀಗ ಒಟಿಟಿಗೆ ಲಗ್ಗೆಯಿಟ್ಟಿದೆ. ಅಮಿರ್‌ ಖಾನ್‌ ಅವರು ಅಮಿರ್‌ ಖಾನ್‌ ಪ್ರೊಡಕ್ಷನ್‌ನಡಿ ನಿರ್ಮಾಣ ಮಾಡಿರುವ ಈ ಕಾಮಿಡಿ ಡ್ರಾಮಾವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಕುರಿತು ನೆಟ್‌ಫ್ಲಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದೆ. "ತಾಝಾ ಖಬರ್‌: ಲಾಪತಾ ಲೇಡಿಸ್‌ ಸಿನಿಮಾವು ಇಂದು ಮಧ್ಯರಾತ್ರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ" ಎಂದು ನಿನ್ನೆ ಟ್ವೀಟ್‌ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಲಾಪತಾ ಲೇಡಿಸ್‌ ಬಾಕ್ಸ್‌ ಆಫೀಸ್‌ ವರದಿ

ಮಾರ್ಚ್‌ 1ರಂದು ಬಿಡುಗಡೆಯಾದ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಮಂದಗತಿಯ ಆರಂಭ ಪಡೆದಿತ್ತು. ಆದರೆ, ಕೆಲವೇ ದಿನಗಳಲ್ಲಿ ಜನರ ಬಾಯ್ಮಾತಿನ ಪ್ರಚಾರ ಮತ್ತು ಉತ್ತಮ ವಿಮರ್ಶೆಗಳ ನೆರವಿನಿಂದ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಹೆಚ್ಚಿಸಿಕೊಂಡಿತ್ತು. ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ಮೊದಲ ದಿನ ಈ ಸಿನಿಮಾ ಕೇವಲ 75 ಲಕ್ಷ ರೂಪಾಯಿ ಗಳಿಸಿತ್ತು. ಆದರೆ, ಮೊದಲ ವೀಕೆಂಡ್‌ನಲ್ಲಿ 4 ಕೋಟಿ ಗಳಿಸಿತ್ತು. ಮೊದಲ ವಾರ 6.05 ಕೋಟಿ ಗಳಿಸಿತ್ತು. 50 ದಿನಗಳಲ್ಲಿ 17.31 ಕೋಟಿ ರೂಪಾಯಿ ಗಳಿಸಿತ್ತು.

ಲಾಪತಾ ಲೇಡಿಸ್‌ 2023ರ ಸಿನಿಮಾ. ಇಬ್ಬರು ಮಧುಮಕ್ಕಳು ಅಚಾನಕಾಗಿ ಅದಲುಬದಲಾಗುತ್ತಾರೆ. ರೈಲಿನಲ್ಲಿ ಗ್ರಾಮವೊಂದಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮುಖಕ್ಕೆ ಮುಖಗವಸು ಹಾಕಿಕೊಂಡಿರುವ ಈ ಇಬ್ಬರು ಹೆಣ್ಣು ಮಕ್ಕಳು ಪ್ರತ್ಯೇಕಗೊಳ್ಳುತ್ತಾರೆ. ಇಬ್ಬರು ಬೇರೆಬೇರೆ ಗ್ರಾಮಕ್ಕೆ ವಧುಗಳಾಗಿ ಹೋಗುತ್ತಾರೆ.

ಲಾಪತಾ ಲೇಡಿಸ್‌ ಸಿನಿಮಾಕ್ಕೆ ಕಿರಣ್‌ ರಾವ್‌ ಆಕ್ಷನ್‌ ಕಟ್‌ ಹೇಳಿದ್ದಾರೆ ಅಮಿರ ಖಾನ್‌ ಮತ್ತು ಜ್ಯೋತಿ ದೇಶ್‌ಪಾಂಡೆ ನಿರ್ಮಾಣ ಮಾಡಿದ್ದಾರೆ ಈ ಸಿನಿಮಾದಲ್ಲಿ ರವಿ ಕಿಶನ್ ಜೊತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ನಟಿಸಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದಾರೆ. ಒಂದಿಷ್ಟು ಸಂಭಾಷಣೆಯನ್ನು ದಿವ್ಯನಿಧಿ ಶರ್ಮಾ ಬರೆದಿದ್ದಾರೆ. ಈ ಸಿನಿಮಾ ಸಾಧಾರಣ ಕಲೆಕ್ಷನ್‌ ಮಾಡಿದ್ದರೂ ವೀಕ್ಷಕರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿತ್ತು. ಈ ಸಿನಿಮಾ ಟೊರೊಂಟೊ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತ್ತು,

ಒಟಿಟಿಯಲ್ಲಿದೆ ಹಲವು ಸಿನಿಮಾ

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ಓ ಮೈ ಗಾಡ್‌ 2 ಚಿತ್ರದ ತೆಲುಗು, ತಮಿಳು, ಬಾಂಗ್ಲಾ, ಮರಾಠಿ, ಹಿಂದಿ ಆವೃತ್ತಿಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಅಭಿನಯದ ಸಿನಿಮಾ ಇದಾಗಿದೆ. ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಸಿನಿಮಾ ಮೇ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆ ದೊರಕಿದೆ. ಈ ಸಿನಿಮಾದಲ್ಲಿ ಆಶಿಷ್ ವಿದ್ಯಾರ್ಥಿ ಕೂಡ ನಟಿಸಿದ್ದಾರೆ.

ಗೋಪಿಚಂದ್‌ ನಟನೆಯ "ಭೀಮಾ" ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾವು ಏಪ್ರಿಲ್‌ 25ರಂದು ರಿಲೀಸ್‌ ಆಗಿದೆ.. ಮಾರ್ಚ್‌ 8ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು ಈ ತೆಲುಗು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿತ್ತು. ಇದೀಗ ಈ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಭಾರತದ ಇತರೆ ಕೆಲವು ಭಾಷೆಗಳಲ್ಲಿಯೂ ವೀಕ್ಷಿಸಬಹುದಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ