ಕನ್ನಡ ಸುದ್ದಿ  /  ಮನರಂಜನೆ  /  Bhimaa On Ott: ಭೀಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಗೋಪಿಚಂದ್‌ ಆಕ್ಷನ್‌ ಸಿನಿಮಾವನ್ನು ಏಪ್ರಿಲ್‌ 25ರಿಂದ ಮನೆಯಲ್ಲೇ ನೋಡಿ

Bhimaa On OTT: ಭೀಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಗೋಪಿಚಂದ್‌ ಆಕ್ಷನ್‌ ಸಿನಿಮಾವನ್ನು ಏಪ್ರಿಲ್‌ 25ರಿಂದ ಮನೆಯಲ್ಲೇ ನೋಡಿ

Bhimaa On OTT: ಗೋಪಿಚಂದ್‌ ನಟನೆಯ ಆಕ್ಷನ್‌ ಡ್ರಾಮಾ "ಭೀಮಾ" ಒಟಿಟಿಗೆ ಲಗ್ಗೆಯಿಡಲು ಸಿದ್ಧವಾಗಿದೆ. ಈ ತೆಲುಗು ಸಿನಿಮಾವನ್ನು ತಮಿಳು, ಮಲಯಾಳಂ ಭಾಷೆಗಳಲ್ಲೂ ನೋಡಬಹುದು. ಕನ್ನಡ ಆಡಿಯೋದಲ್ಲಿ ಲಭ್ಯವಿರುವ ಕುರಿತು ಸದ್ಯ ಮಾಹಿತಿ ಲಭ್ಯವಿಲ್ಲ.

Bhimaa On OTT: ಭೀಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
Bhimaa On OTT: ಭೀಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ಗೋಪಿಚಂದ್‌ ನಟನೆಯ ರೋಷಾವೇಷದ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ "ಭೀಮಾ" ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾವು ಏಪ್ರಿಲ್‌ 25ರಂದು ರಿಲೀಸ್‌ ಆಗಲಿದೆ. ಮಾರ್ಚ್‌ 8ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ತೆಲುಗು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡಿತ್ತು. ಇದೀಗ ಈ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಭಾರತದ ಇತರೆ ಕೆಲವು ಭಾಷೆಗಳಲ್ಲಿಯೂ ವೀಕ್ಷಿಸಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಭೀಮಾ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ಮಾಳವಿಕಾ ಶರ್ಮಾ, ವೆನ್ನೆಲ ಕಿಶೋರ್, ರಘು ಬಾಬು, ನಾಸರ್, ನರೇಶ್, ಮುಖೇಶ್ ತಿವಾರಿ, ರೋಹಿಣಿ ಮುಂತಾದ ಪ್ರತಿಭಾನ್ವಿತ ತಾರಾಗಣವನ್ನು ಹೊಂದಿದೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗಲಿದೆ.

ಯಾವ ಒಟಿಟಿಯಲ್ಲಿ ರಿಲೀಸ್‌?

ಭೀಮಾ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಈ ಕುರಿತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಅಧಿಕೃತ ಪ್ರಕಟಣೆ ನೀಡಿದೆ. ನಾಳೆ ಅಂದರೆ ಏಪ್ರಿಲ್‌ 25ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ.

ಒಟಿಟಿಯಲ್ಲಿದೆ ಹಲವು ಹೊಸ ಸಿನಿಮಾ

ಆರ್ಟಿಕಲ್‌ 370: ಇತ್ತೀಚೆಗೆ ಆರ್ಟಿಕಲ್‌ 370 ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆರ್ಟಿಕಲ್ 370 (ಹಿಂದಿ) ಜಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಿಯಾಮಣಿ ಮತ್ತು ಯಾಮಿ ಗೌತಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಫೆಬ್ರವರಿ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಇದು ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಚಿತ್ರವನ್ನು ಆದಿತ್ಯ ಸುಹಾಸ್ ಜಂಬುಲ್ ನಿರ್ದೇಶಿಸಿದ್ದಾರೆ.

ಕಾಮ್ ಚಾಲು ಹೈ (ಹಿಂದಿ): ಜೀ 5 ನಲ್ಲಿ ಕ್ರೈಮ್ ಥ್ರಿಲ್ಲರ್ ಕಾಮ್ ಚಾಲು ಹೈ (ಹಿಂದಿ) ಬಿಡುಗಡೆಯಾಗಿದೆ. ಇದು ಪಲಾಶ್ ಮುಚಲ್ ನಿರ್ದೇಶನದ ಸಿನಿಮಾವಾಗಿದೆ. ರಾಜ್‌ಪಾಲ್‌ ಯಾದವ್‌, ಜಿಯಾ ಮಾನೆಕ್ ಮತ್ತು ಕುರಂಗಿ ನಾಗರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ರೆಬೆಲ್ ಮೂನ್ ಪಾರ್ಟ್ 2: ವೈಜ್ಞಾನಿಕ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾವೂ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಏಪ್ರಿಲ್ 19 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಜಾಕ್ ಸ್ನೈಡರ್ ಆಕ್ಷನ್‌ ಕಟ್‌ ಹೇಳಿರುವ ಸಿನಿಮಾವಾಗಿದೆ.

ಸೈರನ್ : ತಮಿಳು ಮತ್ತು ತೆಲುಗು ಮತ್ತು ಇತರ ಭಾಷೆಗಳಲ್ಲಿ ಸೈರನ್‌ ಸಿನಿಮಾವು ಏಪ್ರಿಲ್ 19 ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ ಕೀರ್ತಿ ಸುರೇಶ್, ಜಯಂ ರವಿ, ಅನುಪಮಾ ಪರಮೇಶ್ವರನ್, ಸಮುದ್ರಕಣಿ ಮತ್ತು ಯೋಗಿ ಬಾಬು ನಟಿಸಿದ್ದಾರೆ.

ರಣಂ: ತಮಿಳು ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಚಿತ್ರ ರಣಂ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ತಮಿಳು ಕ್ರೈಮ್ ಥ್ರಿಲ್ಲರ್ ಅನ್ನು ಶರೀಫ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವೈಭವ್ ರೆಡ್ಡಿ, ನಂದಿತಾ ಶ್ವೇತಾ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ನರ್ಸ್ ಕೊಲೆಯ ಹಿನ್ನಲೆಯನ್ನು ಹೊಂದಿದೆ.

IPL_Entry_Point