logo
ಕನ್ನಡ ಸುದ್ದಿ  /  ಮನರಂಜನೆ  /  Poacher Ott: ಕ್ರೈಮ್‌ ಸೀರಿಸ್‌ ಪ್ರಿಯರಿಗೆ ಸಿಹಿ ಸುದ್ದಿ, ರಿಚಿ ಮೆಹ್ತಾ ನಿರ್ದೇಶನದ ಪೋಚರ್‌ ಸರಣಿ ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆ

Poacher OTT: ಕ್ರೈಮ್‌ ಸೀರಿಸ್‌ ಪ್ರಿಯರಿಗೆ ಸಿಹಿ ಸುದ್ದಿ, ರಿಚಿ ಮೆಹ್ತಾ ನಿರ್ದೇಶನದ ಪೋಚರ್‌ ಸರಣಿ ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆ

Praveen Chandra B HT Kannada

Jan 16, 2024 05:33 PM IST

ಪೋಚರ್‌ ವೆಬ್‌ ಸರಣಿ

    • Poacher OTT Release Date: ಕಾಡು ಪ್ರಾಣಿಗಳ ಮೇಲೆ ನಡೆಸುವ ದಾಳಿಯ ಕುರಿತು ತನಿಖೆ ನಡೆಸುವಂತಹ ಕಥಾಹಂದರ ಹೊಂದಿರುವ ಕ್ರೈಮ್‌ ಸರಣಿಯೊಂದನ್ನು ಸದ್ಯದಲ್ಲಿಯೇ ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಸೀರಿಸ್‌ ಫೆಬ್ರವರಿ ತಿಂಗಳಲ್ಲಿ ಸ್ಟ್ರೀಮ್‌ ಆಗಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಪೋಚರ್‌ ವೆಬ್‌ ಸರಣಿ
ಪೋಚರ್‌ ವೆಬ್‌ ಸರಣಿ

ಒಟಿಟಿಯಲ್ಲಿ ಕ್ರೈಮ್‌ ಸರಣಿ ನೋಡುವುದು ಬಹುತೇಕರಿಗೆ ಇಷ್ಟ. ಅಪರಾಧಗಳನ್ನು ತನಿಖೆ ಮಾಡುವ ರೋಚಕ ಕಥೆಗಳನ್ನು ಹೊಂದಿರುವ ಸರಣಿಗೆ ಎದಿರು ನೋಡುತ್ತಿದ್ದರೆ ಮುಂದಿನ ತಿಂಗಳು ಬಿಡುಗಡೆಯಾಗುವ ಪೋಚರ್‌ ಸರಣಿಗಳನ್ನು ವೀಕ್ಷಿಸಬಹುದು. ಆಸ್ಕರ್‌ ಪ್ರಶಸ್ತಿ ವಿಜೇತ ಸಂಸ್ಥೆ ಕ್ಯೂಸಿ ಎಂಟರ್‌ಟೈನ್‌ಮೆಂಟ್ ಈ ಸರಣಿಯನ್ನು ನಿರ್ಮಿಸಿದೆ. ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ವಿಜೇತ ರಿಚಿ ಮೆಹ್ತಾ ಈ ಕ್ರೈಮ್‌ ಸರಣಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಿಷಾ ಸಂಜಯನ್, ರೋಷನ್ ಮ್ಯಾಥ್ಯೂ, ದಿವ್ಯೇಂದ್ರ ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆಜಾನ್‌ ಪ್ರೈಮ್‌ನಲ್ಲಿ ಈ ವೆಬ್‌ ಸೀರಿಸ್‌ ಬಿಡುಗಡೆಯಾಗಲಿದೆ. ಪೋಚರ್‌ ಒಟಿಟಿಯಲ್ಲಿ ಯಾವಾಗ ಪ್ರಸಾರವಾಗಲಿದೆ ಎಂಬ ವಿವರವನ್ನೂ ಅಮೆಜಾನ್‌ ಪ್ರೈಮ್‌ ವಿಡಿಯೋ ಬಹಿರಂಗಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಪೋಚರ್‌ ವೆಬ್‌ ಸರಣಿಯು ಅಮೆಜಾನ್‌ ಪ್ರೈಮ್‌ನಲ್ಲಿ ಫೆಬ್ರವರಿ 23ರಿಂದ ಪ್ರಸಾರವಾಗಲಿದೆ. ಇದು ಒಟ್ಟು ಎಂಟು ಕಂತುಗಳು ಇರುವ ವೆಬ್‌ ಸರಣಿಯಾಗಿದೆ. ಇತ್ತೀಚೆಗೆ ಸುಡಾನ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಈ ವೆಬ್‌ ಸರಣಿಯ ಮೂರು ಕಂತುಗಳನ್ನು ಪ್ರಸಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆಯಿತು. ಅಮೆಜಾನ್‌ ಪ್ರೈಮ್‌ನಲ್ಲಿ ಫೆಬ್ರವರಿ 23ರಿಂದ ಸ್ಟ್ರೀಮ್‌ ಆಗಲಿರುವ ಈ ವೆಬ್‌ ಸರಣಿಯಲ್ಲಿ ರೋಚಕ ಕಥೆ ಇದೆಯಂತೆ. ವಿಶೇಷವಾಗಿ ವನ್ಯಜೀವಿಗಳ ಬೇಟೆಗಾರರ ತನಿಖೆಯ ಸುತ್ತ ಈ ವೆಬ್‌ ಸರಣಿ ಸುತ್ತಲಿದೆ.

ವನ್ಯಜೀವಿಗಳ ಮೇಲೆ ನಡೆಯುವ ದಾಳಿಗಳ ಕುರಿತು ಈ ಸರಣಿ ಅನೇಕ ಮಾಹಿತಿ ನೀಡಲಿದೆ. ವಿಶೇಷವಾಗಿ ಕಾಡು ಆನೆಗಳ ಮೇಲೆ ದಾಳಿ, ಬೇಟೆಗಾರರ ಪಿತೂರಿ, ಬೇಟೆಗಾರರ ವಿರುದ್ಧ ಅಧಿಕಾರಿಗಳ ಹೋರಾಟ ಇತ್ಯಾದಿ ಹಲವು ವಿಷಯಗಳನ್ನು ಹೊಂದಿರಲಿದೆ. ಈ ವೆಬ್‌ ಸರಣಿಯ ಬಹುತೇಕ ಚಿತ್ರೀಕರಣ ಅರಣ್ಯದಲ್ಲಿಯೇ ನಡೆದಿದೆ. ಕೋರ್ಟ್‌ ರೆಕಾರ್ಡ್‌ಗಳನ್ನು ಆಧರಿಸಿ ಈ ವೆಬ್‌ ಸರಣಿ ನಿರ್ಮಿಸಲಾಗಿದೆ.

ಭಾರತದ ಅರಣ್ಯ ಸೇವಾ ಅಧಿಕಾರಿಗಳು, ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ ಎನ್‌ಜಿಒ ಕಾರ್ಯಕರ್ತರು, ಪೊಲೀಸ್ ಕಾನ್ಸ್‌ಟೇಬಲ್‌ಗಳು ಸೇರಿದಂತೆ ಭಾರತದ ವನ್ಯಜೀವಿಗಳ ರಕ್ಷಣೆಗೆ ಕ್ರಮ ವಹಿಸಿರುವ ಅನೇಕ ಜನರ ಕಥೆಯನ್ನೂ ಈ ಸರಣಿ ಒಳಗೊಂಡಿದೆ. ಮುಖ್ಯವಾಗಿ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಆನೆ ದಂತಗಳ ಜಾಲವನ್ನು ಪತ್ತೆಹಚ್ಚಿರುವ ಘಟನೆಯೇ ಈ ವೆಬ್‌ ಸರಣಿಗೆ ಪ್ರೇರಣೆಯಂತೆ. ಕೇರಳ ಮತ್ತು ದೆಹಲಿಯಲ್ಲೂ ಈ ವೆಬ್‌ ಸರಣಿಯನ್ನು ಶೂಟಿಂಗ್‌ ಮಾಡಲಾಗಿದೆ.

ಪೋಚರ್‌ ವೆಬ್‌ ಸೀರಿಸ್‌ ನಿರ್ಮಾಣಕ್ಕಾಗಿ ಸುಮಾರು ನಾಲ್ಕು ವರ್ಷಗಳ ಕಾಲ ನಿರ್ದೇಶಕರಾದ ರಿಚಿ ಮಹತಾ ಸಂಶೋಧನೆ ನಡೆಸಿದ್ದಾರಂತೆ. ಈ ಸರಣಿಯ ಕಥೆ, ಪಾತ್ರಗಳು, ದಾಖಲೆಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹಿಂದೆ ರಿಚಿ ಮೆಹ್ತಾ ಅವರು ದೆಹಲಿ ಕ್ರೈಮ್‌ ಸರಣಿ ನಿರ್ದೇಶನ ಮಾಡಿದ್ದರು. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಆಧರಿಸಿ ಈ ಕ್ರೈಮ್‌ ಸರಣಿ ನಿರ್ಮಿಸಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡ ಈ ವೆಬ್‌ ಸರಣಿ ಸಾಕಷ್ಟು ಜನಪ್ರಿಯವಾಗಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ